/newsfirstlive-kannada/media/media_files/2025/11/05/usa-cargo-plane-crash02-2025-11-05-12-46-30.jpg)
ಅಮೆರಿಕಾದ ಕೆಂಟುಕಿ ರಾಜ್ಯದಲ್ಲಿ ಕಾರ್ಗೋ ವಿಮಾನ ಪತನ
ಅಮೆರಿಕಾದ ಕೆಂಟುಕಿಯಲ್ಲಿ ಕಾರ್ಗೋ ವಿಮಾನವೊಂದು ಟೇಕಾಫ್ ಆದ ಕೆಲವೇ ಕ್ಷಣದಲ್ಲಿ ಪತನವಾಗಿದೆ. ಟೇಕಾಫ್ ಆಗುತ್ತಿದ್ದಂತೆ, ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಪತನವಾಗಿದೆ. ಬೆಂಕಿ ಉಂಡೆಗಳೊಂದಿಗೆ ವಿಮಾನ ಸ್ಪೋಟವಾಗಿದೆ. ಈ ಕಾರ್ಗೋ ವಿಮಾನ ಪತನದಿಂದಾಗಿ 7 ಮಂದಿ ಸಾವನ್ನಪ್ಪಿದ್ದಾರೆ. 11 ಮಂದಿ ಗಾಯಗೊಂಡಿದ್ದಾರೆ.
ಕೆಂಟುಕಿ ರಾಜ್ಯದ ಲೂಸಿವಿಲ್ಲೆ ಮೊಹಮ್ಮದ್ ಅಲಿ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಿಂದ ವಿಮಾನ ಟೇಕಾಫ್ ಆಗಿತ್ತು. ಹೋನೋಲುಲುಗೆ ವಿಮಾನ ಹೊರಟಿತ್ತು.
ವಿಮಾನದ ಎಡಭಾಗದ ರೆಕ್ಕೆ, ವಿಮಾನದ ಹಿಂಭಾಗಕ್ಕೆ ಬೆಂಕಿ ಬಿದ್ದಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ವಿಮಾನ ಟೇಕಾಫ್ ಆದ ಬಳಿಕ ಬೆಂಕಿ ಹೊತ್ತಿಕೊಂಡು ಸ್ಪೋಟವಾಗಿದೆ. ಕಳೆದ ರಾತ್ರಿ ಸಾವಿನ ಸಂಖ್ಯೆ 7ಕ್ಕೇರಿಕೆಯಾಗಿದೆ. ಸಾವನ್ನಪ್ಪಿದವರಲ್ಲಿ ನಾಲ್ಕು ಮಂದಿ ವಿಮಾನದಲ್ಲಿ ಇರಲಿಲ್ಲ. ವಿಮಾನ ಪತನದ ಸ್ಥಳದಲ್ಲಿದ್ದವರು ಸಾವನ್ನಪ್ಪಿದ್ದಾರೆ.
/filters:format(webp)/newsfirstlive-kannada/media/media_files/2025/11/05/usa-cargo-plane-crash-2025-11-05-12-46-49.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us