ಶ್ರೀಲಂಕಾದಲ್ಲಿ ದಿತ್ವಾ ಸೈಕ್ಲೋನ್ ಅಬ್ಬರ, 56 ಮಂದಿ ಸಾವು : ದಕ್ಷಿಣ ಭಾರತದ ಮೇಲೂ ಸೈಕ್ಲೋನ್ ನಿಂದ ಭಾರಿ ಮಳೆ ಮುನ್ಸೂಚನೆ

ದಿತ್ವಾ ಸೈಕ್ಲೋನ್ ನಿಂದಾಗಿ ಶ್ರೀಲಂಕಾದಲ್ಲಿ ಭಾರಿ ಅನಾಹುತ ಸಂಭವಿಸಿದೆ. 56 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಅನೇಕರು ನಾಪತ್ತೆಯಾಗಿದ್ದಾರೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇನ್ನೂ ದಕ್ಷಿಣ ಭಾರತದ ಮೇಲೂ ದಿತ್ವಾ ಸೈಕ್ಲೋನ್ ಪ್ರಭಾವ ಇರಲಿದ್ದು, ನವಂಬರ್ 30 ರಂದು ಮಳೆಯಾಗುವ ಮುನ್ಸೂಚನೆ ಇದೆ.

author-image
Chandramohan
ditywah cyclone

ನವಂಬರ್ 30 ರಂದು ಭಾರತದ ಬಂಗಾಳಕೊಲ್ಲಿಯಲ್ಲಿ ಸೈಕ್ಲೋನ್ ಅಬ್ಬರ!

Advertisment
  • ನವಂಬರ್ 30 ರಂದು ಭಾರತದ ಬಂಗಾಳಕೊಲ್ಲಿಯಲ್ಲಿ ಸೈಕ್ಲೋನ್ ಅಬ್ಬರ!
  • ತಮಿಳುನಾಡು, ದಕ್ಷಿಣ ಆಂಧ್ರದಲ್ಲಿ ಮಳೆ ಮುನ್ಸೂಚನೆ
  • ದಿತ್ವಾ ಸೈಕ್ಲೋನ್ ನಿಂದಾಗಿ ಶ್ರೀಲಂಕಾದಲ್ಲಿ 56 ಮಂದಿ ಸಾವು

ರಾವಣನೂರಿನ ಮೇಲೆ ವರುಣದೇವ ಯುದ್ಧ ಸಾರಿದಂತೆ ಕಾಣ್ತಿದೆ.. ಸುತ್ತ ಸಮುದ್ರ.. ಇರೋದೆ ಸಣ್ಣ ಭೂಮಿ.. ಟೂರಿಸ್ಟ್​ಗಳನ್ನೇ ನಂಬಿ ಬದುಕೋ ಲಂಕಾ ವಾಸಿಗಳ ಸ್ಥಳಕ್ಕೆ ಮಳೆರಾಯ ಪ್ರವಾಸ ಬಂದಿದ್ದಾನೆ.. ಜಲೇಶ್ವರನ ರೌದ್ರಾವತಾರಕ್ಕೆ ಅನೇಕರು ಪ್ರಾಣವನ್ನ ಕಳೆದುಕೊಂಡಿದ್ದಾರೆ.. ಪ್ರವಾಹ.. ಭೂಕುಸಿತ ಸಂಭವಿಸಿದೆ. ದಿತ್ವಾ ಸೈಕ್ಲೋನ್ ನಿಂದಾಗಿ ದ್ವೀಪ ರಾಷ್ಟ್ರ ಶ್ರೀಲಂಕಾ ತತ್ತರಿಸಿ ಹೋಗಿದೆ. 

ದ್ವೀಪವಾಸಿಗಳ ಮನೆಗಳಲ್ಲಿ ದೀಪ ಆರಿದೆ.. ಸಂದಿ.. ಗಲ್ಲಿ.. ಯಾವುದನ್ನೂ ಬಿಡದೆ ಮಳೆ ನೀರು ನುಗ್ಗಿ ನಿಂತಿದೆ. ಡ್ಯಾಂಗಳಿಂದ ಹರುಯುತ್ತಿರೋ ನೀರು ಭಯವನ್ನ ಹುಟ್ಟಿಸ್ತಿದೆ.. ವಾಹನಗಳು ಓಡಾಡಬೇಕಿದ್ದ ಬ್ರಿಡ್ಜ್​​ಗಳು ನದಿ ನೀರು ಹರಿಯೋ ಜಾಗವಾಗಿದೆ.. ನೀರಿನ ನರ್ತನವನ್ನ ನೋಡುತ್ತಾ ನಿಲ್ಲೋದನ್ನ ಬಿಟ್ಟು ಏನ್​ ಮಾಡ್ಬೇಕು ಅಂತ ಸ್ಥಳೀಯರು ತಿಳಿಯದಾಗಿದ್ದಾರೆ

ಶ್ರೀಲಂಕಾದಲ್ಲಿ ಧಾರಾಕಾರ ಮಳೆ.. ಪ್ರವಾಹ.. ಭೂಕುಸಿತ..!
56 ಮಂದಿ ಸಾವು.. 600 ಕ್ಕೂ ಹೆಚ್ಚು ಮನೆಗಳು ಸರ್ವನಾಶ!
ವರ್ಷಧಾರೆ ಧೋ ಅಂತ ಸುರಿಯುತ್ತಿದೆ.. ಶ್ರೀಲಂಕದಾದ್ಯಂತ ಭಾರಿ ಮಳೆ.. ಪ್ರವಾಹ ಹಾಗೂ ಭೂಕುಸಿತದಿಂದ ಇಲ್ಲಿಯವರೆಗೆ 56ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 600 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದೆ. 
ಶ್ರೀಲಂಕಾ
ಮಳೆ ಅಬ್ಬರಕ್ಕೆ ಸರ್ಕಾರಿ ಕಚೇರಿಗಳು.. ಶಾಲೆಗಳಿಗೆ ರಜೆ ಘೋಷಣೆ!
ಶ್ರೀಲಂಕಾದಲ್ಲಿ ಕಳೆದ ವಾರವೇ ಮಳೆಯ ಮುನ್ಸೂಚನೆ ಸಿಕ್ಕಿತ್ತು.. ನಿನ್ನೆಯೇ ಹವಾಮಾನ ತೀರಾ ಹದಗೆಟ್ಟಿತ್ತು. ಭಾರಿ ಮಳೆ.. ಮನೆಗಳನ್ನ.. ಹೊಲಗಳನ್ನ.. ರಸ್ತೆಗಳನ್ನ.. ಜಲಾವೃತವಾಗಿಸಿದೆ. ಪರಿಣಾಮ ಇವತ್ತು ಸರ್ಕಾರಿ ಕಚೇರಿಗಳು ಮತ್ತು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.. ಮಳೆಯ ವಾತಾವರಣ ಹೀಗೆ ಮುಂದುವರಿದರೆ ರಜೆ ವಿಸ್ತರಣೆಯಾಗಲಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.  
ಭೂಕುಸಿತದಲ್ಲಿ 25ಕ್ಕೂ ಹೆಚ್ಚು ಮಂದಿ ಬಲಿ, 21 ನಾಪತ್ತೆ!
ಚಹಾ ಬೆಳೆಯುವ ಪ್ರದೇಶಗಳಲ್ಲಿ ಭಾರೀ ಭೂಕುಸಿತ ಉಂಟಾಗಿದೆ. ಶ್ರೀಲಂಕಾ ರಾಜಧಾನಿ ಕೊಲಂಬೊದಿಂದ ಸುಮಾರು 300 ಕಿಲೋ ಮೀಟರ್ ಪೂರ್ವಕ್ಕೆ ಇರುವ ಬದುಲ್ಲಾ ಮತ್ತು ನುವಾರ ಎಲಿಯಾ ಪ್ರದೇಶಗಳಲ್ಲಿ ಉಂಟಾದ ಭೂಕುಸಿತದಲ್ಲಿ 25ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 21 ಜನ ನಾಪತ್ತೆಯಾಗಿದ್ದಾರೆ.. 14 ಮಂದಿ ಗಾಯಗೊಂಡಿದ್ದಾರೆ ಎಂದು ಲಂಕಾ ಸರ್ಕಾರ ಮಾಹಿತಿ ನೀಡಿದೆ.
ಕ್ಯಾಂಡಿ
ಟೂರಿಸ್ಟ್​ಗಳ ಹಾಟ್​ ಸ್ಪಾಟ್​ಗಳಲ್ಲಿ ಒಂದಾದ ಪ್ರವಾಸಿ ನಗರ ಕ್ಯಾಂಡಿಯಲ್ಲೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. 

ditywah cyclone effect in srilanka




ಭಾರತದ ಮೇಲೂ ದಿತ್ವಾ ಸೈಕ್ಲೋನ್ ಎಫೆಕ್ಟ್!
ಇನ್ನೂ ಶ್ರೀಲಂಕಾದಲ್ಲಿ ದಿತ್ವಾ ಸೈಕ್ಲೋನ್ ನಿಂದಾಗಿ ಭಾರಿ ಅನಾಹುತ ಸಂಭವಿಸಿದೆ. 56 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇತ್ತ ಶ್ರೀಲಂಕಾದ ಪಕ್ಕದಲ್ಲೇ ಇರೋ ಭಾರತದ ಮೇಲೂ ದಿತ್ವಾ ಸೈಕ್ಲೋನ್ ಎಫೆಕ್ಟ್ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.  ಬಂಗಾಳಕೊಲ್ಲಿಗೆ ದಿತ್ವಾ ಸೈಕ್ಲೋನ್ ಎಂಟ್ರಿ ಕೊಡಲಿದ್ದು, ಉತ್ತರ ತಮಿಳುನಾಡು, ಪುದುಚೇರಿ, ದಕ್ಷಿಣ ಆಂಧ್ರಪ್ರದೇಶದ ಮೇಲೆ ಪರಿಣಾಮ ಬೀರಲಿದೆ. ನವಂಬರ್‌ 30ರ ಭಾನುವಾರ ದಕ್ಷಿಣ ಭಾರತದ ಕೆಲ ರಾಜ್ಯಗಳ ಮೇಲೆ ದಿತ್ವಾ ಸೈಕ್ಲೋನ್ ಪ್ರಭಾವದ ಕಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಐಎಂಡಿ ನೀಡಿದೆ. 
ನವಂಬರ್‌ 28ರ ಶುಕ್ರವಾರ ದಿತ್ವಾ ಸೈಕ್ಲೋನ್ ಭಾರತದ ಕಾರೈಕಲ್ ನಿಂದ 320 ಕಿಮೀ ದೂರ, ಪುದುಚೇರಿಯ ದಕ್ಷಿಣ ಭಾಗಕ್ಕೆ 430 ಕಿ.ಮೀ. ದೂರ, ದಕ್ಷಿಣ ಚೆನ್ನೈಗೆ 530 ಕಿ.ಮೀ. ದೂರ ಇದ್ದು, ಶ್ರೀಲಂಕಾ ಕರಾವಳಿಯ ಉತ್ತರ ಭಾಗಕ್ಕೆ ಚಲಿಸುತ್ತಿದೆ. ನೈಋತ್ಯ ಬಂಗಾಳಕೊಲ್ಲಿಯನ್ನು ತಲುಪಲಿದ್ದು , ತಮಿಳುನಾಡು ಕರಾವಳಿಯ ಸಮಾನಾಂತರವಾಗಿ ಹಾದು ಹೋಗಲಿದೆ. 
ತಮಿಳುನಾಡಿನ 9 ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ನಾಲ್ಕು ಜಿಲ್ಲೆಗಳಿಗೆ ರೆಡ್ ಆಲರ್ಟ್ ಹಾಗೂ ಐದು ಜಿಲ್ಲೆಗಳಿಗೆ ಆರೇಂಜ್ ಆಲರ್ಟ್ ನೀಡಲಾಗಿದೆ. 
ದಿತ್ವಾ ಸೈಕ್ಲೋನ್ ನಿಂದ ಕರ್ನಾಟಕದ ಕೆಲವೆಡೆ  ಮಳೆಯಾಗುವ ಸಾಧ್ಯತೆಯೂ  ಇದೆ.

ditywah cyclone effect in srilanka (1)

Ditwah cyclone wreaks havoc
Advertisment