/newsfirstlive-kannada/media/media_files/2026/03/06/iran-using-cluster-bomb-against-israel-1-2026-03-06-17-42-00.jpg)
ಸ್ವಾಭಿಮಾನಕ್ಕೆ ಧಕ್ಕೆಯಾದಾಗ... ಇಲ್ಲವೇ ತನ್ನ ದೇಶದ ಮೇಲೆ ವೈರಿಗಳು ಅಟ್ಯಾಕ್ ಮಾಡಿದಾಗ ಯುದ್ಧ ಘೋಷಣೆ ಮಾಡೋದು ಅನಿವಾರ್ಯ ಆಗುತ್ತೆ. ಹಾಗೇ ಶತ್ರು ಕೋಟೆಗೆ ಮಿಸೈಲ್ ನುಗ್ಗಿಸೋದು, ಬಾಂಬ್ ಮಳೆ ಸುರಿಸೋದು ಕಾಮನ್. ಆದ್ರೆ, ಇಸ್ರೇಲ್ ಮೇಲೆ ಇರಾನ್ ಸುರಿಸುತ್ತಿರೋ ಕ್ಲಸ್ಟರ್ ಬಾಂಬ್‌ಗಳು ಭೀತಿ ಹುಟ್ಟಿಸುತ್ತಿದೆ. ಹಾಗಾದ್ರೆ ಕ್ಲಸ್ಟರ್ ಬಾಂಬ್‌ಗಳು ಅದೆಷ್ಟು ಅಪಾಯಕಾರಿ? ಅವುಗಳು ಹೇಗೆ ಇಸ್ರೇಲ್‌ಗೆ ಮಾರಕವಾಗಿವೆ ಅನ್ನೋದನ್ನ ವಿವರಿಸುತ್ತೇವೆ.
ಅಮೆರಿಕಾ, ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡಿದ್ದು... ಇರಾನ್‌ನ ಸುಪ್ರೀಂ ಲೀಡರ್ ಕಥೆಯನ್ನೇ ಮುಗಿಸಿ ಬಿಟ್ಟಿದ್ದು. ಜಗತ್ತಿಗೇ ಪರಮಾಶ್ಚರ್ಯವಾಗಿ ಕಾಣಿಸುತ್ತಿಲ್ಲ. ಕಾರಣ, ಅಮೆರಿಕಾ, ಇಸ್ರೇಲ್ ಸ್ಪೈಗಳ ಪವರ್, ಮಿಲಿಟರಿಗಳ ಶಕ್ತಿ ಸಾಮರ್ಥ್ಯ ಏನು ಅನ್ನೋದು ಇಡೀ ಜಗತ್ತಿಗೆ ಗೊತ್ತು. ಇನ್ನು ಜಂಟಿ ದಾಳಿಯಲ್ಲಿ ಖಮೇನಿಯನ್ನ ಹತ್ಯೆ ಮಾಡೋದಕ್ಕೂ ಮುನ್ನ ಸಿಸಿ ಕ್ಯಾಮರಾಗಳನ್ನ ಹ್ಯಾಕ್ ಮಾಡಿ, ಮೊಬೈಲ್ ನೆಟ್‌ವರ್ಕ್‌ಗಳನ್ನ ಜಾಮ್ ಮಾಡಿ ಬಿ2 ಬಾಂಬರ್ ನುಗಿಸಿ ಅಟ್ಯಾಕ್ ಮಾಡಿದ್ದು ಕುತೂಹಲವಾಗಿತ್ತು. ಆದ್ರೆ, ಅಮೆರಿಕಾ, ಇಸ್ರೇಲ್ ಶಕ್ತಿ ಬಗ್ಗೆ ಗೊತ್ತಿದ್ದವರಿಗೆ ಖಂಡಿತ ಅದೂ ಪರಮಾಶ್ಚರ್ಯವಾಗಿಲ್ಲ. ಆದರೇ, ಖಮೇನಿ ಕಳೆದುಕೊಂಡ ಮೇಲೆ ಇರಾನ್ ತಿರುಗಿ ಬಿದ್ದಿರೋದು ಖಂಡಿತವಾಗಿಯೂ ಅಚ್ಚರಿಯಾಗಿ ಕಾಣಿಸ್ತಿದೆ. ಇಡೀ ಜಗತ್ತಿಗೆ ಶಾಕ್ ಕೊಡ್ತಿದೆ. ಹಾಗಾದ್ರೆ, ಇರಾನ್ ಸಕ್ಸಸ್ ಆಗ್ತಾ ಇರೋದು ಹೇಗೆ ಅಂತ ನೋಡ್ತಾ ಹೋದ್ರೆ ಕಾಣಿಸುವುದು ಅದರ ಯುಕ್ತಿ. ಹೌದು, ಮೊದಲು ಕಡಿಮೆ ಬೆಲೆಯ ಮಿಸೈಲ್‌ಗಳನ್ನ, ಡ್ರೋನ್‌ಗಳನ್ನ ಹಾರಿಸಿ ಶತ್ರುಗಳ ರಾಡರ್ ನಾಶ ಮಾಡೋದು. ಆಮೇಲೆ ಕ್ರೂಸ್, ಬ್ಯಾಲಿಸ್ಟಿಕ್ ಮಿಸೈಲ್‌ಗಳನ್ನ ಹಾರಿಸಿ ದಾಳಿ ಮಾಡೋದು. ಇದೊಂದು ರೀತಿಯಲ್ಲಿ ವೈರಿಯ ಕಣ್ಣನ್ನ ಕುರುಡಾಗಿಸಿ ಆಮೇಲೆ ಅಟ್ಯಾಕ್ ಮಾಡಿದಂತೆ. ಆದರೇ, ಈ ಸಂದರ್ಭದಲ್ಲಿ ಇರಾನ್ ಮೇಲೆ ಇನ್ನೊಂದು ಗಂಭೀರ ಆರೋಪ ಕೇಳಿಬರುತ್ತಿದೆ. ಅದೇನು ಅಂದ್ರೆ, ಇಸ್ರೇಲ್ ಮೇಲೆ ಭಾರೀ ಅಪಾಯಕಾರಿ ಬಾಂಬ್‌ಗಳಾಗಿರೋ ಕ್ಲಸ್ಟರ್ ಬಾಂಬ್‌ಗಳನ್ನ ಬಳಕೆ ಮಾಡ್ತಿದೆ ಅನ್ನೋದು.
ಕ್ಲಸ್ಟರ್ ಬಾಂಬ್ ಅಟ್ಯಾಕ್ ಕನ್ಫರ್ಮ್ ಮಾಡಿದ ಇಸ್ರೇಲ್!
ಇರಾನ್ ಆ ಬಾಂಬ್ ಬಳಕೆ ಮಾಡಿದ್ದು ಯಾಕಾಗಿ?
ಯುದ್ಧ ಶುರುವಾಯ್ತು ಅಂದ್ರೆ ಶತ್ರುಗಳ ಮೇಲೆ ಮಿಸೈಲ್‌ಗಳು, ಬಾಂಬ್‌ಗಳ ಅಟ್ಯಾಕ್ ನಡೆಯೋದು ಕಾಮನ್. ಆದ್ರೆ, ಮಾಡು ಇಲ್ಲವೇ ಮಡಿ ಹೋರಾಟ ಏನಾದ್ರೂ ಶುರುವಾಯ್ತು ಅಂದ್ರೆ ಬತ್ತಳಿಕೆಯಲ್ಲಿರೋ ಅಪಾಯಕಾರಿ ಯುದ್ಧಾಸ್ತ್ರಗಳು ಹೊರಬಂದು ಬಿಡ್ತಾವೆ. ಯಾವುದೇ ದೇಶ ಆದ್ರೂ ವಿನಾಶಕಾರಿ ಅಸ್ತ್ರಗಳನ್ನ ತನ್ನ ಒಡಲಲ್ಲಿ ಖಂಡಿತ ಇಟ್ಟಿಕೊಂಡಿರುತ್ತೆ. ಆದ್ರೆ, ಅದನ್ನ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿರಲ್ಲ. ಇದೀಗ ಇರಾನ್ ಮಾಡ್ತಾ ಇರೋದು ಅದೇ ಕೆಲಸ ಅನ್ನೋದು ನೇರವಾಗಿ ಕಾಣಿಸ್ತಿದೆ. ಹೌದು, ಇಸ್ರೇಲ್ ಮೇಲೆ ಅಟ್ಯಾಕ್ ಮಾಡ್ತಿರೋ ಇರಾನ್ ಮೊದಲು ಡಮ್ಮಿ ಮಿಸೈಲ್‌ಗಳನ್ನ ಹಾರಿಸಿ ರಾಡರ್‌ಗಳನ್ನ ಪತ್ತೆ ಮಾಡಿಕೊಂಡಿತ್ತು. ಆಮೇಲೆ ರಾಡರ್‌ಗಳನ್ನ ನಾಶ ಮಾಡಿ ಖಂಡಾಂತರ ಕ್ಷಿಪಣಿಯನ್ನ ಹಾರಿಸ್ತಿದೆ. ಆ ಕ್ಷಿಪಣಿಗಳ ಮೂಲಕ ಕ್ಲಸ್ಟರ್ ಬಾಂಬ್‌ಗಳನ್ನ ಸಿಡಿಸುತ್ತಿದೆ. ಇದನ್ನ ಇಸ್ರೇಲ್ ಕನ್ಫರ್ಮ್ ಮಾಡಿದೆ. ತಮ್ಮ ದೇಶದ ಮೇಲೆ ಇರಾನ್ ಅಪಾಯಕಾರಿ ಕ್ಲಸ್ಟರ್ ಬಾಂಬ್‌ಗಳನ್ನ ಹಾಕ್ತಾ ಇದೆ ಅನ್ನೋದನ್ನ ಸ್ಪಷ್ಟಪಡಿಸಿದೆ. ಇದ್ರಿಂದ ಇಸ್ರೇಲ್‌ನ ಸಾವು ನೋವುಗಳ ಪ್ರಮಾಣ ಏರಿಕೆಯಾಗಿದೆ.
ಕ್ಲಸ್ಟರ್ ಬಾಂಬ್!
ಕ್ಲಸ್ಟರ್ ಬಾಂಬ್ ಹೊಂದಿರೋ ಬ್ಯಾಲಿಸ್ಟಿಕ್ ಕ್ಷಿಪಣಿ ಹಾರಿಸಿದೆ!
ಆರೇಳು ಕಿ.ಮೀ. ಮೇಲೆ ಬಾಂಬ್ ಗುಚ್ಚ ತೆರೆದುಕೊಂಡಿದೆ!
ಸುಮಾರು 20ಕ್ಕೂ ಹೆಚ್ಚಿನ ಬಾಂಬ್‌ಗಳನ್ನ ಅದು ಚದುರಿಸಿದೆ!
ಸುಮಾರು 8 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಬಿದ್ದ ಬಾಂಬ್!
ಮನೆ ಮೇಲೆ, ಸಾರ್ವಜನಿಕ ಸ್ಥಳದಲ್ಲಿ ಸ್ಫೋಟಗೊಂಡ ಬಾಂಬ್!
ಬಾಂಬ್‌ನಿಂದ 11ಕ್ಕೂ ಹೆಚ್ಚು ಸಾವು, 1000 ಕ್ಕೂ ಹೆಚ್ಚು ಗಾಯ!
ಇಸ್ರೇಲ್‌ನ ತಲೆನೋವು ತಂದ ಕ್ಲಸ್ಟರ್ ಬಾಂಬ್ ಅಟ್ಯಾಕ್!
ಕ್ಲಸ್ಟರ್ ಬಾಂಬ್‌ಗಳನ್ನ ವಿಮಾನ, ರಾಕೆಟ್, ಮಿಸೈಲ್‌ಗಳಿಂದ ಹಾರಿಸಬಹುದು. ಅದ್ರೆ, ಇಸ್ರೇಲ್ ಮೇಲೆ ಅಟ್ಯಾಕ್ ಮಾಡೋದಕ್ಕೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೂಲಕ ಹಾರಿಸಿತ್ತು. ಭೂಮಿಗಿಂತ ಸುಮಾರು ಆರೇಳು ಕಿಲೋ ಮೀಟರ್‌ಗೆ ಮೇಲೆ ಆಗಸದಲ್ಲಿ ಕ್ಲಸ್ಟರ್ ಬಾಂಬ್ ಗುಚ್ಚ ತೆರೆದುಕೊಂಡಿದೆ. ಹಾಗೇ ತೆರೆದುಕೊಂಡ ಗುಚ್ಚ 20ಕ್ಕೂ ಹೆಚ್ಚಿನ ಬಾಂಬ್‌ಗಳನ್ನ ಚದುರಿಸಿ ಬೀಳಿಸಿದೆ. ಹಾಗೇ ಚದುರಿದ ಬಾಂಬ್‌ಗಳು ಸುಮಾರು 8 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಬಿದ್ದಿವೆ. ಮನೆ ಮೇಲೆ, ಸಾರ್ವಜನಿಕ ಸ್ಥಳದಲ್ಲಿ ಬಿದ್ದಿರೋ ಬಾಂಬ್‌ಗಳು ಸ್ಫೋಟಗೊಂಡಿವೆ. ಇದರಿಂದ ಇಸ್ರೇಲ್‌ನಲ್ಲಿ 11ಕ್ಕೂ ಹೆಚ್ಚಿನ ಜನ ಸಾವನ್ನಪ್ಪಿದ್ದಾರೆ. 1000 ಕ್ಕೂ ಹೆಚ್ಚಿನ ಜನ ಗಂಭೀರ ಗಾಯಗೊಂಡಿದ್ದಾರೆ. ಇರಾನ್ ನಡೆಸ್ತಿರೋ ಕ್ಲಸ್ಟರ್ ಬಾಂಬ್ ಅಟ್ಯಾಕ್ ಇಸ್ರೇಲ್ ಪಾಲಿಗೆ ತಲೆನೋವು ತಂದಿದೆ.
ಕೆಲವು ಪಟಾಕಿಗಳನ್ನ ಹಚ್ಚಿದಾಗ ಅವು ಹೇಗೆ ಮೇಲೆ ಹೋದ್ಮೇಲೆ ಚದುರಿ ಸ್ಫೋಟವಾಗ್ತಾವೋ? ಸೇಮ್ ಅದೇ ರೀತಿಯಲ್ಲಿ ಕ್ಲಸ್ಟರ್ ಬಾಂಬ್‌ಗಳು ಸಣ್ಣ ಸ್ಫೋಟವಾಗಿ ಚದುರಿ ಭೂಮಿ ಮೇಲೆ ಬೀಳುತ್ತವೆ. ಭೂಮಿಗೆ ಬಿದ್ಮೇಲೆ ಅವು ಸ್ಫೋಟವಾದ್ರೂ ಆಗಬಹುದು. ಆಗದೇನೂ ಇರ್ಬಹುದು. ಹೌದು, ಇದೇ ಕ್ವಸ್ಟರ್ ಬಾಂಬ್‌ನ ದೊಡ್ಡ ಅಪಾಯಕಾರಿ.
ಕ್ಲಸ್ಟರ್ ಬಾಂಬ್ ಸ್ಫೋಟ, ದುಷ್ಪರಿಣಾಮ ಏನು?
ಅಣು ಬಾಂಬ್ ಆಗಿರಲಿ... ಸಣ್ಣ ಬಾಂಬ್ ಆಗಿರಲಿ... ಯಾವುದೇ ಬಾಂಬ್ ಆಗಿದ್ರೂ ಅದು ಮಾನವ ಕುಲಕ್ಕೆ ಖಂಡಿತವಾಗಿಯೂ ಅಪಾಯಕಾರಿ. ಅಣು ಬಾಂಬ್ ದುಷ್ಪರಿಣಾಮ ದೊಡ್ಡ ಪ್ರಮಾಣದಲ್ಲಿ ಇದ್ರೆ, ಸಣ್ಣ ಬಾಂಬ್‌ಗಳ ದುಷ್ಪರಿಣಾಮ ಸ್ವಲ್ಪ ಕಡಿಮೆ ಪ್ರಮಾಣದಲ್ಲಿರುತ್ತೆ. ಆದ್ರೆ, ಈ ಕ್ಲಸ್ಟರ್ ಬಾಂಬ್‌ಗಳ ದುಷ್ಪರಿಣಾಮ ತುಂಬಾ ಅಪಾಯಕಾರಿ.
ದುಷ್ಪರಿಣಾಮ!
ಯುದ್ಧದಲ್ಲಿ ಸ್ಫೋಟಿಸದೇ ಹಾಗೇ ಭೂಮಿ ಮೇಲೆ ಇರ್ತಾವೆ!
ನೆಲದ ಮೇಲೆ ಬಿದ್ದವು ಯಾವಾಗ ಬೇಕಾದ್ರೂ ಸ್ಫೋಟ!
ಆಟಿಕೆ ರೂಪದಲ್ಲಿ ಕಾಣುವುದರಿಂದ ಮಕ್ಕಳಿಗೆ ಅಪಾಯ!
ಹೊಲಗಳು ಮತ್ತು ಗ್ರಾಮ ಪ್ರದೇಶಗಳಲ್ಲಿ ಸ್ಫೋಟಕಗಳು!
ಗಾಯಗೊಂಡವರಿಗೆ ಜೀವನಪೂರ್ತಿ ಅಂಗವೈಕಲ್ಯ ಭೀತಿ!
ಭೂಮಿ ಮೇಲೆ, ಮನೆಗಳ ಮೇಲೆ ಬೀಳೋ ಕ್ಲಸ್ಟರ್ ಬಾಂಬ್‌ಗಳಲ್ಲಿ ಕೆಲವು ಸ್ಫೋಟಗೊಂಡಿದ್ರೆ ಇನ್ನು ಕೆಲವು ಸ್ಫೋಟವಾಗದೇ ಹಾಗೇ ಇರ್ತಾವೆ. ಹಾಗೇ ನೆಲದ ಮೇಲೆ ಬಿದ್ದಿರೋ ಬಾಂಬ್‌ಗಳು ಯಾವಾಗ ಬೇಕಾದ್ರೂ ಸ್ಫೋಟವಾಗುವ ಸಾಧ್ಯತೆ ಇರುತ್ತೆ. ಇನ್ನು ಬಾಂಬ್‌ಗಳು ಆಟಿಕೆ ರೂಪದಲ್ಲಿ ಕಾಣಿಸುವುದರಿಂದ ಮಕ್ಕಳಿಗೆ ತುಂಬಾ ಅಪಾಯಕಾರಿ ಆಗಿರುತ್ತಾವೆ. ಹೊಲಗಳು ಮತ್ತು ಗ್ರಾಮ ಪ್ರದೇಶಗಳಲ್ಲಿ ಬಾಂಬ್‌ಗಳು ಬೀಳುವುದರಿಂದ ರೈತರ ಜೀವನಕ್ಕೂ ಅಪಾಯಕಾರಿ ಆಗಿರುತ್ತಾವೆ. ಇನ್ನು ಈ ಬಾಂಬ್‌ಗಳಿಂದ ಗಾಯಗೊಂಡವ್ರು ಜೀವನ ಪೂರ್ಣ ಅಂಗವೈಕಲ್ಯಕ್ಕೆ ತುತ್ತಾಗುತ್ತಾರೆ.
ಕ್ಲಸ್ಟರ್ ಬಾಂಬ್‌ಗಳ ಅಪಾಯ ಇರೋದೇ ಇಲ್ಲಿ ನೋಡಿ. ಇಸ್ರೇಲ್‌ನಲ್ಲಿ ಯುದ್ಧ ಶುರುವಾಯ್ತು ಅಂದ್ರೆ ಜನ ಬಂಕರ್‌ಗಳಿಗೆ ಹೋಗಿ ಸೇಫ್ ಆಗ್ತಾರೆ. ಹೀಗಾಗಿ ಇಸ್ರೇಲ್‌ನಲ್ಲಿ ಸಾವು ನೋವುಗಳ ಸಂಖ್ಯೆ ತೀರಾ ಕಡಿಮೆ. ಆದರೇ, ಈ ಕ್ಲಸ್ಟರ್ ಬಾಂಬ್‌ಗಳು ಭೂಮಿ ಮೇಲೆ ಬಿದ್ಮೇಲೆ ಕೆಲವು ಸ್ಫೋಟವಾಗದೇ ಹಾಗೇ ಇರುತ್ತಾವೆ. ಇನ್ನು ಯುದ್ಧ ಮುಗಿದ್ಮೇಲೆ ಜನ ಬಂಕರ್‌ನಿಂದ ಹೊರಬಂದು ಓಡಾಡೋಕೆ ಶುರು ಮಾಡ್ತಾರೆ. ಕ್ಲಸ್ಟರ್ ಬಾಂಬ್‌ಗಳನ್ನ ಮುಟ್ಟಿದಾಗ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತೆ. ಇದೇ ಕಾರಣಕ್ಕೆ ಇರಾನ್ ಮಾಡ್ತಿರೋ ಕ್ಲಸ್ಟರ್ ಬಾಂಬ್ ಅಟ್ಯಾಕ್ ಇಸ್ರೇಲ್‌ಗೆ ತಲೆನೋವು ತಂದಿದೆ.
/filters:format(webp)/newsfirstlive-kannada/media/media_files/2026/03/06/iran-using-cluster-bomb-against-israel-2026-03-06-17-43-34.jpg)
ಕ್ಲಸ್ಟರ್ ಬಾಂಬ್ ಸ್ಫೋಟ, ಚೀನಾ-ರಷ್ಯಾ ಮೇಲೆ ಅನುಮಾನ!
ಅಮೆರಿಕಾ ಸೇನಾ ನೆಲೆಗಳ ಮೇಲೆ ಇರಾನ್ ಭೀಕರ ಅಟ್ಯಾಕ್!
ಕ್ಲಸ್ಟರ್ ಬಾಂಬ್‌ಗಳನ್ನ ಉತ್ಪಾದಿಸೋದು ಸುಲಭದ ಕೆಲಸ ಅಲ್ಲ. ವಿಜ್ಞಾನ ತಂತ್ರಜ್ಞಾನದಲ್ಲಿ ಮುಂದುವರಿದ ರಾಷ್ಟ್ರಗಳಿಂದ ಮಾತ್ರ ಸಾಧ್ಯ. ಆದ್ರೆ, ಇರಾನ್‌ಗೆ ಹೇಗೆ ಸಾಧ್ಯವಾಯ್ತು ಅನ್ನೋ ಅನುಮಾನ ಖಂಡಿತವಾಗಿಯೂ ಇದೆ.
ಇರಾನ್ ದಾಳಿಯನ್ನ ಮುಂದುವರಿಸಿದೆ. ಆದರೇ, ಈ ನಡುವೆ ಕ್ಲಸ್ಟರ್ ಬಾಂಬ್‌ಗೆ ಸಂಬಂಧ ಪಟ್ಟಂತೆ ಇಸ್ರೇಲ್‌ಗೆ ಇರೋ ಅನುಮಾನ ಏನು ಅಂದ್ರೆ, ರಷ್ಯಾ ಮತ್ತು ಚೀನಾ ಏನಾದ್ರೂ ಇರಾನ್‌ಗೆ ಸಪೋಟ್ ಮಾಡಿದ್ದಾವಾ ಅನ್ನೋದು. ಯಾಕಂದ್ರೆ, ಇರಾನ್‌ಗೆ ಸಪೋರ್ಟ್ ಆಗಿ ಮಾತಾಡಿರೋ ದೊಡ್ಡ ರಾಷ್ಟ್ರಗಳು ಅಂದ್ರೆ ಚೀನಾ ಮತ್ತು ರಷ್ಯಾ ಮಾತ್ರ. ಆದ್ರೆ, ಎರಡೂ ರಾಷ್ಟ್ಪಗಳು ಬಹಿರಂಗವಾಗಿ ಯುದ್ಧಕ್ಕೆ ಇಳಿದು ಸಪೋರ್ಟ್ ಮಾಡದೇ ಇದ್ರೂ ಕ್ಲಸ್ಟರ್ ಬಾಂಬ್ ತಯಾರಿಕೆಯಲ್ಲಿ ಸಪೋರ್ಟ್ ಮಾಡಿರಬಹುದು ಅನ್ನೋ ಶಂಕೆ ಇದೆ.
ಇರಾನ್ ಎಲ್ಲಿಯವರೆಗೆ ದಾಳಿ ಮಾಡುತ್ತೋ ಅಲ್ಲಿಯವರೆಗೂ ಅಮೆರಿಕಾ, ಇಸ್ರೇಲ್ ಜಂಟಿಯಾಗಿ ಕೌಂಟರ್ ಮಾಡೋದು ಗ್ಯಾರಂಟಿ. ಆದ್ರೆ, ಸಾರ್ವಜನಿಕ ಸ್ಥಳಗಳ ಮೇಲೂ ದಾಳಿಯಾಗುತ್ತಾ ಇರೋದು ಜನ ಸಾಮಾನ್ಯರ ರಕ್ತವೂ ಹರಿತಾ ಇರೋದು ದುರಾದೃಷ್ಟಕರ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us