/newsfirstlive-kannada/media/media_files/2026/03/01/usa-used-anthropic-ai-to-attack-iran-2026-03-01-20-52-33.jpg)
ನಿಗದಿತ ಪ್ಲಾನಂತೆ ಅಮೆರಿಕಾ, ಇಸ್ರೇಲ್​ ತನ್ನ ಟಾರ್ಗೆಟ್ ಅನ್ನು ಫಿನೀಶ್ ಮಾಡಿದೆ. ಪಕ್ಕಾ ಪ್ಲಾನ್ ಮಾಡಿ ಇರಾನ್​​ನ ಸರ್ವೋಚ್ಛ ನಾಯಕ ಖಮೇನಿಯನ್ನ ಅಮೆರಿಕಾ ಬೇಟೆಯಾಡಿದೆ. ರಾತ್ರಿ ದಾಳಿ ಮಾಡದೇ ಬೆಳಗ್ಗಿನ ಹೊತ್ತು.. ಖಮೇನಿ ಕಚೇರಿಯಲ್ಲಿ ಇರೋ ಸಮಯದಲ್ಲೇ ನಿಕರವಾಗಿ ದಾಳಿ ಮಾಡಿದ್ದೇಗೆ ಅನ್ನೋದ ರೋಚಕ.. ಆದ್ರೆ ಎಐ ತಂತ್ರಜ್ಞಾನ ಬಳಸಿಕೊಂಡು ಅಮೆರಿಕಾ ಖಮೇನಿಯನ್ನ ಖತಂ ಮಾಡಿದೆ ಅನ್ನೋದ ವರದಿ ಬಹಿರಂಗವಾಗಿದೆ.
200 ಫೈಟರ್​ ಜೆಟ್ಸ್​.. 30 ಬಾಂಬ್​ಗಳ ಮಳೆ.. ಖಮೇನಿ ಖತಂ!
ತಿಂಗಳುಗಳಿಂದ ಯೋಜನೆ​! ಆಂಥ್ರೋಪಿಕ್ ಕ್ಲೌಡ್ AI ಬಳಸಿ ಪ್ಲಾನ್​
ಅಯತೊಲ್ಲಾ ಅಲಿ ಖಮೇನೀ.. ಇರಾನ್​ ಸರ್ವೋಚ್ಛ ನಾಯಕ.. ಇತಿಹಾಸದ ದುಷ್ಟ ಶಕ್ತಿಯನ್ನ ಸಂಹಾರ ಮಾಡಿರೋದಾಗಿ ಅಮೆರಿಕಾ ಘೋಷಿಸಿದೆ. ಪಕ್ಕಾ ಪ್ಲಾನ್ ಮಾಡಿ ಖಮೇನಿಯನ್ನ ಕೊಲೆಗೈದ ಅಮೆರಿಕಾ, ರಾತ್ರಿ ದಾಳಿ ಮಾಡದೇ ಬೇಕಂತಲೇ ಬೆಳಗ್ಗಿನ ಹೊತ್ತು ದಾಳಿ ಮಾಡಿದೆ. 30 ಬಾಂಬ್​ಗಳ ಸುರಿಮಳೆಗೈದು ಖಮೇನಿಯ ಕಥೆ ಮುಗಿಸಿದೆ. ಆಪರೇಷನ್ ಎಪಿಕ್ ಫ್ಯೂರಿ ಹೆಸರಲ್ಲಿ ಅಖಾಡಕ್ಕಿಳಿದ ಡೊನಾಲ್ಡ್​​ ಟ್ರಂಪ್​ ಸೇನೆ ನೀರು ಕುಡಿದಷ್ಟು ಸುಲಭವಾಗಿ ಬೇಟೆಯಾಡಿದ್ದೇಗೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಆದ್ರೆ.. ಖಮೇನಿಯ ಕಥೆ ಮುಗಿಸಲು ಅಮೆರಿಕಾ.. ಆಂಥ್ರೋಪಿಕ್​ ಕ್ಲೌಡ್​​ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡಿದೆ ಅನ್ನೋದ ಸ್ಫೋಟಕ ವರದಿಯೊಂದು ಬಹಿರಂಗವಾಗಿದೆ.
ಕಳೆದೊಂದಿಷ್ಟು ದಿನದಿಂದ ಜಗತ್ತಲ್ಲಿ ಎಐ ತಂತ್ರಜ್ಞಾನದ ಬಗ್ಗೆಯೇ ಭಾರೀ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಆಂಥ್ರೋಪಿಕ್‌ನ ಕ್ಲಾಡ್ ಎಬ್ಬಿಸಿದ ಬಿರುಗಾಳಿ ಬಗ್ಗೆ ಹೇಳೋದೇ ಬೇಕಾಗಿಲ್ಲ.. ಟೆಕ್ ಜಗತ್ತನ್ನೇ ಅಲುಗಾಡಿಸಿತ್ತು ಈ ಎಐ ಆಂಥ್ರೋಪಿಕ್.. ಇದನ್ನೇ ಬಳಸಿಕೊಂಡು ಅಮೆರಿಕಾ ಸೇನೆ ಇರಾನ್​ನ ಸರ್ವೋಚ್ಛ ನಾಯಕನನ್ನು ಬೇಟೆಯಾಡಿದೆ ಅನ್ನೋ ವರದಿ ಹರಿದಾಡ್ತಿದೆ.
ಅಮೆರಿಕದ ಮಿಲಿಟರಿ ಉದ್ದೇಶಕ್ಕೆ ಆ್ಯಂಥ್ರೋಪಿಕ್‌ನ ಎಐ ತಂತ್ರಜ್ಞಾನ ಬಳಕೆ
ಅನಿಯಂತ್ರಿತವಾಗಿ ಬಳಕೆಗೆ ಅವಕಾಶ ನೀಡಬೇಕೆಂದಿದ್ದ ಅಮೆರಿಕಾ ಅಧ್ಯಕ್ಷ
ಆ್ಯಂಥ್ರೋಪಿಕ್‌ಗೆ 24 ಗಂಟೆ ಗಡುವು ನೀಡಿದ್ದ ಅಮೆರಿಕ ರಕ್ಷಣಾ ಸಚಿವಾಲಯ
ನೈತಿಕವಾಗಿ ಈ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಆ್ಯಂಥ್ರೋಪಿಕ್ ಸಂಸ್ಥೆ ಸಿಇಒ
ಗಡುವು ಮುಗಿದ ಬೆನ್ನಲ್ಲೇ ಆ್ಯಂಥ್ರೋಪಿಕ್​​ ಬಳಕೆಗೆ ಟ್ರಂಪ್ ಸರ್ಕಾರ ನಿರ್ಬಂಧ
ಅಮೆರಿಕದ ರಕ್ಷಣಾ ಸಂಸ್ಥೆಗಳು ಆ್ಯಂಥ್ರೋಪಿಕ್ ಟೆಕ್ನಾಲಜಿ ಬಳಸದಂತೆ ಆದೇಶ
ಆ್ಯಂಥ್ರೋಪಿಕ್ ನಿಷೇಧಿಸಿದ ಕೆಲವೇ ಗಂಟೆಗಳಲ್ಲಿ ಇರಾನ್​ ಮೇಲೆ ಡೆಡ್ಲಿ ಅಟ್ಯಾಕ್
ಮಧ್ಯಪ್ರಾಚ್ಯದಲ್ಲಿರುವ US ಸೆಂಟ್ರಲ್ ಕಮಾಂಡ್ ಗುಪ್ತಚರ ಮೌಲ್ಯಮಾಪನಗಳು
ಗುರಿ ಗುರುತಿಸುವಿಕೆ, ಯುದ್ಧದ ಸನ್ನಿವೇಶ ಅನುಕರಿಸಲು ಆಂಥ್ರೊಪಿಕ್ ಬಳಕೆ ಶಂಕೆ
ಈ ಹಿಂದೆ ವೆನುಜುವೆಲಾ ಅಧ್ಯಕ್ಷನನ್ನು ಸೆರೆ ಹಿಡಿಯುವಾಗಲೇ ಆಂಥ್ರೊಪಿಕ್​ ಬಳಕೆ
ಅಮೆರಿಕದ ಮಿಲಿಟರಿ ಉದ್ದೇಶಕ್ಕೆ ಆ್ಯಂಥ್ರೋಪಿಕ್‌ನ ಎಐ ತಂತ್ರಜ್ಞಾನವನ್ನು ಅನಿಯಂತ್ರಿತವಾಗಿ ಬಳಕೆಗೆ ಅವಕಾಶ ನೀಡಬೇಕೆಂದಿದ್ದ ಅಮೆರಿಕಾ ಆಂಥ್ರೋಪಿಕ್​ ಸಂಸ್ಥೆಗೆ ಹೇಳಿತ್ತು. ಇದಕ್ಕಾಗಿ ಆ್ಯಂಥ್ರೋಪಿಕ್‌ಗೆ ಅಮೆರಿಕ ರಕ್ಷಣಾ ಸಚಿವಾಲಯ 24 ಗಂಟೆ ಗಡುವು ನೀಡಿತ್ತು. ಆದ್ರೆ ನೈತಿಕವಾಗಿ ಈ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಆ್ಯಂಥ್ರೋಪಿಕ್ ಸಂಸ್ಥೆ ಸಿಇಒ ತಿರಸ್ಕರಿಸಿದ್ದರು.. ಗಡುವು ಮುಗಿದ ಬೆನ್ನಲ್ಲೇ ಆ್ಯಂಥ್ರೋಪಿಕ್​​ ಬಳಕೆಗೆ ಟ್ರಂಪ್ ಸರ್ಕಾರ ನಿರ್ಬಂಧ ಹೇರಿ, ಅಮೆರಿಕದ ರಕ್ಷಣಾ ಸಂಸ್ಥೆಗಳು ಆ್ಯಂಥ್ರೋಪಿಕ್ ಟೆಕ್ನಾಲಜಿ ಬಳಸದಂತೆ ಆದೇಶ ಹೊರಡಿಸಿದ್ದರು. ಹೀಗೆ ಆ್ಯಂಥ್ರೋಪಿಕ್ ನಿಷೇಧಿಸಿದ ಕೆಲವೇ ಗಂಟೆಗಳಲ್ಲಿ ಇರಾನ್​ ಮೇಲೆ ಅಮೆರಿಕಾ ಡೆಡ್ಲಿ ಅಟ್ಯಾಕ್ ಮಾಡಿದೆ. ಮಧ್ಯಪ್ರಾಚ್ಯದಲ್ಲಿರುವ US ಸೆಂಟ್ರಲ್ ಕಮಾಂಡ್ ಗುಪ್ತಚರ ಮೌಲ್ಯಮಾಪನಗಳು, ಗುರಿ ಗುರುತಿಸುವಿಕೆ ಮತ್ತು ಯುದ್ಧದ ಸನ್ನಿವೇಶ ಅನುಕರಿಸಲು ಈ ಆಂಥ್ರೊಪಿಕ್ ತಂತ್ರಜ್ಞಾನ ಬಳಸಿಕೊಂಡೇ ಖಮೇನಿಯ ಕಥೆ ಮುಗಿಸಿರುವ ಶಂಕೆ ವ್ಯಕ್ತವಾಗಿದೆ. ಈ ಈ ಹಿಂದೆ ವೆನುಜುವೆಲಾ ಅಧ್ಯಕ್ಷನನ್ನು ಸೆರೆ ಹಿಡಿಯುವಾಗಲೂ ಅಮೆರಿಕಾ ಈ ಆಂಥ್ರೊಪಿಕ್​ ತಂತ್ರಜ್ಞಾನ ಬಳಸಿಕೊಂಡಿತ್ತು ಎನ್ನಲಾಗಿದೆ.
ಈ ನಡುವೆ ಖಮೇನಿ ಹತ್ಯೆಗೆ ಪ್ರತೀಕಾರ ತೆಗೆದುಕೊಳ್ಳಲು ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಮುಂದಾಗಿದೆ. ಉಗ್ರ ರೂಪದ ದಾಳಿ ನಡೆಸುವ ಬಗ್ಗೆ ಎಚ್ಚರಿಕೆ ಸಂದೇಶ ರವಾಸಿದ್ದು, ಅಮೆರಿಕಾದ ಸೇನಾ ನೆಲೆಗಳನ್ನು ಟಾರ್ಗೆಟ್ ಮಾಡುವ ಪ್ಲಾನ್ ಮಾಡಿದೆ. ಈ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ ನೇರವಾಗಿ ಇರಾನ್ ಸರ್ವೋಚ್ಛ ನಾಯಕ ಖಮೇನಿಗೆ ರಿಪೋರ್ಟ್ ಮಾಡುತ್ತಿತ್ತು. ಇದರ ಬೆನ್ನಲ್ಲೇ ಟ್ರಂಪ್​​.. ಇರಾನ್​ಗೆ ಖಡಕ್​ ಎಚ್ಚರಿಕೆ ಕೊಟ್ಟಿದ್ದಾರೆ. ಪ್ರತಿದಾಳಿಯ ಬಗ್ಗೆ ಯೋಚಿಸುವುದೂ ಬೇಡ. ಹಾಗೇನಾದ್ರೂ ಪ್ರತಿದಾಳಿಗೆ ಮುಂದಾದ್ರೆ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಪೂರ್ಣ ಪ್ರಮಾಣದ ದಾಳಿ ನಡೆಸಬೇಕಾಗುತ್ತೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಅಣ್ವಸ್ತ್ರದ ಹಪಾಹಪಿ ಇಡೀ ಇರಾನ್​​ನ ಬಲಿ ಪಡೆಯಿತಾ?
ಕಳೆದ ಗುರುವಾರ ಟ್ರಂಪ್ ಸರ್ಕಾರದ ಪ್ರತಿನಿಧಿಗಳು ಇರಾನ್‌ನ ವಿದೇಶಾಂಗ ಸಚಿವರ ಜೊತೆ ಮಾತುಕತೆ ನಡೆಸಿತ್ತು. ಈ ವೇಳೆ ಉದ್ದೇಶಿತ ಪರಮಾಣು ಯೋಜನೆಯಿಂದ ಹಿಂದೆ ಸರಿಯಲು ಇರಾನ್ ನಿರಾಕರಿಸಿತ್ತೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ಮತ್ತು ಅಮೆರಿಕಾ ದಾಳಿ ನಡೆಸಿದೆ. ಸದ್ಯ ಇರಾನ್ ಮೇಲಿನ ದಾಳಿ ಪರಮಾಣು ಯೋಜನೆಯನ್ನ ತಡೆಯುವಷ್ಟಕ್ಕೆ ಸೀಮಿತವಾಗಿಲ್ಲ. ಬದಲಾಗಿ ಸಂಪೂರ್ಣ ಸರ್ಕಾರ ಕಿತ್ತೊಗೆಯುವ ಉದ್ದೇಶ ಹೊಂದಲಾಗಿದೆ ಎಂದು ಟ್ರಂಪ್ ಸುಳಿವು ಕೊಟ್ಟಿದ್ದರು.
ಒಟ್ಟಾರೆ.. ಇರಾನ್​ನ ಸರ್ವೋಚ್ಛ ನಾಯಕ ಖಮೇನಿ ಹತ್ಯೆಗೈಯ್ಯುವ ಅಮೆರಿಕಾ, ಇಸ್ರೇಲ್​ನ ಟಾರ್ಗೆಟ್ ಸಕ್ಸಸ್ ಆಗಿದೆ. ಈ ದಾಳಿಯಲ್ಲಿ ಖಮೇನಿಯ ಜೊತಗೆ 40 ಅಧಿಕಾರಿಗಳೂ ಮೃತಪಟ್ಟಿದ್ದಾರೆ. ಖಮೇನಿ ಹತ್ಯೆಯಿಂದ ಇರಾನ್​​ನಲ್ಲಿ ಮುಂದಿನ ಉತ್ತರಾಧಿಕಾರಿ ಆಯ್ಕೆಗೂ ಬಿರುಸುಗೊಂಡಿದೆ.
ನ್ಯೂಸ್​ಫಸ್ಟ್​ ಬ್ಯೂರೋ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us