/newsfirstlive-kannada/media/media_files/2026/03/03/israel-hacks-iran-traffic-camera-to-kill-khamenini-2026-03-03-12-33-51.jpg)
ಇರಾನ್ ನ ಟ್ರಾಫಿಕ್ ಕ್ಯಾಮರಾ, ಪೋನ್ ಟವರ್ ಹ್ಯಾಕ್ ಮಾಡಿದ್ದ ಇಸ್ರೇಲ್!
ಇರಾನ್ ಸುಪ್ರೀಂ ಲೀಡರ್ ಆಯತೋಲ್ಲಾ ಅಲಿ ಖಮೇನಿ ಮತ್ತು ಅವರ ಅಂತರಿಕ ಭದ್ರತಾ ವಲಯವನ್ನು ಕೆಲವೇ ಸೆಕೆಂಡ್ ಗಳಲ್ಲಿ ಅಮೆರಿಕಾ ಹಾಗೂ ಇಸ್ರೇಲ್ ಹತ್ಯೆ ಮಾಡಿವೆ. ಇರಾನ್ ನೊಳಗೆ ಮಿಸೈಲ್ ನುಗ್ಗಿಸಿ ಹತ್ಯೆಗೈದ್ದಿದ್ದು ಇಡೀ ವಿಶ್ವನೇ ದಿಗ್ಭ್ರಮೆ ಆಗುವಂತೆ ಮಾಡಿದೆ. ತಮ್ಮದೇ ಆದ ಭದ್ರಕೋಟೆ ಕಟ್ಟಿಕೊಂಡು ಇದ್ದ ಆಯತೊಲ್ಲಾ ಅಲಿ ಖಮೇನಿಯನ್ನು ಹತ್ಯೆ ಮಾಡುವುದು ಸುಲಭದ ವಿಷಯವಲ್ಲ. ಆದರೇ, ಇದನ್ನು ನಿಖರವಾಗಿ ಗುರಿ ತಲುಪಿ ಹತ್ಯೆ ಮಾಡುವಲ್ಲಿ ಅಮೆರಿಕಾ, ಇಸ್ರೇಲ್ ಯಶಸ್ವಿಯಾಗಿದ್ದೇ ದೊಡ್ಡ ರೋಚಕ ಕಥೆ.
ಇದಕ್ಕಾಗಿ ವರ್ಷಗಳಿಂದ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೋಸಾದ್ ಸಿದ್ದತೆಗಳನ್ನು ನಡೆಸಿದೆ. ಪ್ಲ್ಯಾನಿಂಗ್ ಮಾಡಿದೆ. ಇರಾನ್ ನ ರಹಸ್ಯ ಕೋಟೆಯನ್ನು ಭೇದಿಸಲು ಇಸ್ರೇಲ್ ಯಶಸ್ವಿಯಾಗಿದೆ. ಕೇವಲ 60 ಸೆಕೆಂಡ್ ಗಳ ಕಾರ್ಯಾಚರಣೆಯಲ್ಲಿ ಆಯತೊಲ್ಲಾ ಅಲಿ ಖಮೇನಿಯನ್ನು ಹತ್ಯೆ ಮಾಡಲಾಗಿದೆ ಎಂಬುದು ಅಶ್ಚರ್ಯವಾದರೂ ಸತ್ಯ.
ಇಸ್ರೇಲ್ ತನ್ನ ಗುರಿಯನ್ನು ಸಾಧಿಸಿದ್ದು ಹೇಗೆ ಎಂಬ ಇನ್ ಸೈಡ್ ಡೀಟೈಲ್ಸ್ ಈಗ ಸಿಕ್ಕಿದೆ.
ಇಸ್ರೇಲ್ ಗುಪ್ತಚರ ಸಂಸ್ಥೆ, ಮೋಸಾದ್ ವರ್ಷದ ಮೊದಲೇ ಇರಾನ್ ಭದ್ರತಾ ವಲಯವನ್ನು ಮೇಲ್ವಿಚಾರಣೆ ಮಾಡುವ ಕಣ್ಗಾವಲು ಮತ್ತು ಸಂವಹನ ಜಾಲಗಳನ್ನೇ ಹ್ಯಾಕ್ ಮಾಡಿಬಿಟ್ಟಿತ್ತು.
ಹಲವಾರು ವರ್ಷಗಳ ಕಣ್ಗಾವಲು ಮತ್ತು ಇರಾನ್‌ನ ಭದ್ರತಾ ವ್ಯವಸ್ಥೆಗಳಿಗೆ ರಹಸ್ಯ ಪ್ರವೇಶವು ಖಮೇನಿಯನ್ನು ಕೊಂದ 60-ಸೆಕೆಂಡ್ ಕಾರ್ಯಾಚರಣೆಗೆ ದಾರಿ ಮಾಡಿಕೊಟ್ಟಿದೆ.
ಇರಾನ್‌ನ ಟ್ರಾಫಿಕ್ ಕ್ಯಾಮರಾ ಹ್ಯಾಕ್ ಮಾಡಿದ ಇಸ್ರೇಲ್
ಇರಾನ್ ನ ಮೇಲೆ ಮೋಸಾದ್ ಸೈಬರ್ ದಾಳಿ ನಡೆಸಿದೆ. ಮೊಬೈಲ್ ಸಿಗ್ನಲ್ ಇಂಟರ್ ಸೆಪ್ಟ್ ಮಾಡಿದೆ. ಇದು ದೀರ್ಘಕಾಲದ ಗುಪ್ತಚರ ಪ್ಲ್ಯಾನಿಂಗ್.
ಇರಾನ್ ರಾಜಧಾನಿ ತೆಹ್ರಾನ್‌ನ ಬಹುತೇಕ ಎಲ್ಲ ಟ್ರಾಫಿಕ್ ಕ್ಯಾಮರಾಗಳನ್ನು ಇಸ್ರೇಲ್‌ನ ಮೋಸಾದ್ ಹ್ಯಾಕ್ ಮಾಡಿಬಿಟ್ಟಿತ್ತು. ಟ್ರಾಫಿಕ್ ಕ್ಯಾಮರಾ ವಿಡಿಯೋಗಳನ್ನು ಎನ್ ಕ್ರಿಪ್ಟ್ ಮಾಡಿ ಇಸ್ರೇಲ್ ನ ಸರ್ವರ್ ಗಳಿಗೆ ರವಾನಿಸಲಾಗಿದೆ. ಇದರಿಂದ ಇಸ್ರೇಲ್ ಸೇನೆಗೆ ಇಸ್ರೇಲ್ ನ ಟೆಲ್ ಅವೀನ್ ನಲ್ಲಿ ಕುಳಿತುಕೊಂಡೇ ಇರಾನ್ ನ ಪ್ರಮುಖ ರಸ್ತೆ, ಆಯತೋಲ್ಲಾ ಅಲಿ ಖಮೇನಿ ಮನೆ, ಕಚೇರಿಯ ಚಲನವಲನವನ್ನು ಮಾನಿಟರ್ ಮಾಡಲು ಅವಕಾಶ ಸಿಕ್ಕಿತ್ತು.
ಟ್ರಾಫಿಕ್ ಕ್ಯಾಮರಾ ವಿಡಿಯೋ ಮೂಲಕ ಆಯತೋಲ್ಲಾ ಅಲಿ ಖಮೇನಿಯ ಚಲನವಲನವನ್ನು ಟ್ರ್ಯಾಕ್ ಮಾಡಲು ಇಸ್ರೇಲ್ ಗೆ ಸಾಧ್ಯವಾಯಿತು. ಇದರಿಂದಾಗಿಯೇ ಕಳೆದ ಶನಿವಾರ ನಿಖರವಾಗಿ ಗುರಿ ಇಟ್ಟು ಖಮೇನಿ ಇದ್ದ ಸ್ಥಳದ ಮೇಲೆಯೇ 30 ಕ್ಷಿಪಣಿ, ಬಾಂಬ್ ಹಾಕಿ ಹತ್ಯೆ ಮಾಡಲಾಗಿದೆ.
ಪ್ರಮುಖ ಸರ್ಕಾರಿ ಕಚೇರಿಗಳ ನೆಲೆಯಾಗಿರುವ ಪಾಶ್ಚರ್ ಸ್ಟ್ರೀಟ್ ಬಳಿಯ ಒಂದು ಕ್ಯಾಮೆರಾ, ಭದ್ರತಾ ಸಿಬ್ಬಂದಿ ಎಲ್ಲಿ ವಾಹನ ನಿಲುಗಡೆ ಮಾಡಿದ್ದಾರೆ ಮತ್ತು ಪ್ರತಿ ನಿತ್ಯ ಕಾಂಪೌಂಡ್ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಪತ್ತೆಹಚ್ಚುವಲ್ಲಿ ವಿಶೇಷವಾಗಿ ನೆರವು ನೀಡಿತ್ತು.
ಇಸ್ರೇಲ್ ಗುಪ್ತಚರ ಇಲಾಖೆಯು ಈ ಪ್ರದೇಶದಲ್ಲಿ ಮೊಬೈಲ್ ಫೋನ್ ಟವರ್ ಗಳನ್ನು ಹ್ಯಾಕ್ ಮಾಡಿತ್ತು. ದಾಳಿಗೆ ಮುನ್ನ, ಆಯ್ದ ಪೋನ್ ಟವರ್ ಗಳನ್ನು ಹ್ಯಾಕ್ ಮಾಡಿ ನಿಷ್ಕ್ರಿಯಗೊಳಿಸಲಾಗಿತ್ತು ಎಂದು ವರದಿಯಾಗಿದೆ, ಇದು ರಕ್ಷಣಾ ವಿವರಗಳೊಳಗಿನ ಸಂವಹನವನ್ನು ಸೀಮಿತಗೊಳಿಸಿತು.
"ನಮಗೆ ಜೆರುಸಲೆಮ್ ತಿಳಿದಿರುವಂತೆಯೇ ನಮಗೆ ಟೆಹ್ರಾನ್ ತಿಳಿದಿತ್ತು" ಎಂದು ಪ್ರಸ್ತುತ ಇಸ್ರೇಲಿ ಗುಪ್ತಚರ ಅಧಿಕಾರಿಯೊಬ್ಬರು ಹೇಳಿದರು. ಇರಾನ್ ನೀವು ಬೆಳೆದ ಬೀದಿಯಂತೆಯೇ ತಿಳಿದಿರುವುಾಗ ನೀವು ದಾಳಿ ನಡೆಸುವುದು ಸುಲಭವಾಯಿತು ಎಂದು ಇಸ್ರೇಲ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇರಾನ್ ನಾಯಕತ್ವದ ಏಣಿಶ್ರೇಣಿ ಹಾಗೂ ನಿರ್ಧಾರ ತೆಗೆದುಕೊಳ್ಳುವ ವ್ಯಕ್ತಿಗಳ ಗುಂಪು ಅನ್ನು ಗುರುತಿಸಲು ಸಾಮಾಜಿಕ ನೆಟ್ ವರ್ಕ್ ವಿಶ್ಲೇಷಣೆಯನ್ನು ಇಸ್ರೇಲ್ ನಡೆಸಿದೆ. ಈ ವಿಶ್ಲೇಷಣೆ ಬಳಸಿಕೊಂಡು ಗೂಢಚಾರಿಕೆ ನಡೆಸಿದೆ.
ಕಣ್ಗಾವಲು ಮತ್ತು ಸಂಭಾವ್ಯ ಗುರಿಗಾಗಿ ಹೊಸ ವ್ಯಕ್ತಿಗಳನ್ನು ಗುರುತಿಸಲು ಶತಕೋಟಿ ಡೇಟಾ ಪಾಯಿಂಟ್‌ಗಳನ್ನು ವಿಶ್ಲೇಷಿಸಲಾಗಿದೆ.
/filters:format(webp)/newsfirstlive-kannada/media/media_files/2026/03/03/israel-hacks-iran-traffic-camera-to-kill-khamenini-1-2026-03-03-12-39-38.jpg)
"ಇಸ್ರೇಲಿ ಗುಪ್ತಚರ ಸಂಸ್ಕೃತಿಯಲ್ಲಿ, ಇಂಟಲಿಜೆನ್ಸ್ ಗುರಿಯಾಗಿಸಿಕೊಳ್ಳುವುದು ಅತ್ಯಂತ ಅಗತ್ಯವಾದ ಯುದ್ಧತಂತ್ರದ ಸಮಸ್ಯೆಯಾಗಿದೆ. ಇದನ್ನು ಕಾರ್ಯತಂತ್ರವನ್ನು ಸಕ್ರಿಯಗೊಳಿಸಲು ವಿನ್ಯಾಸಗೊಳಿಸಲಾಗಿದೆ" ಎಂದು ಇಸ್ರೇಲಿ ಮಿಲಿಟರಿ ಮೀಸಲುಗಳಲ್ಲಿ ಬ್ರಿಗೇಡಿಯರ್ ಜನರಲ್ ಮತ್ತು ಅದರ ಗುಪ್ತಚರ ನಿರ್ದೇಶನಾಲಯದ 25 ವರ್ಷಗಳ ಅನುಭವಿ ಇಟೈ ಶಪಿರಾ ಹೇಳಿದರು.
"ಯಾರನ್ನಾದರೂ ಹತ್ಯೆ ಮಾಡಬೇಕು ಎಂದು ನಿರ್ಧಾರ ತೆಗೆದುಕೊಳ್ಳುವವರು ನಿರ್ಧರಿಸಿದರೆ, ಇಸ್ರೇಲ್‌ನಲ್ಲಿ 'ನಾವು ಗುರಿಯಿಡುವ ಗುಪ್ತಚರವನ್ನು ಒದಗಿಸುತ್ತೇವೆ' ಎಂಬ ಸಂಸ್ಕೃತಿ ಇದೆ." ಎಂದು ಇಟೈ ಶಪಿರಾ ಹೇಳಿದರು.
ಇಸ್ರೇಲ್ ವಿದೇಶಿ ನೆಲಗಳಲ್ಲಿ ನೂರಾರು ಮಂದಿಯನ್ನು ಹತ್ಯೆ ಮಾಡಿದೆ. ಉಗ್ರಗಾಮಿ ನಾಯಕರು, ಪರಮಾಣ ವಿಜ್ಞಾನಿಗಳು, ಇಂಜಿನಿಯರ್ ಗಳು ಹಾಗೂ ಮುಗ್ಧ ಜನರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಿದ ಇತಿಹಾಸ ಇದೆ. ಕಳೆದ ಜೂನ್ ನಲ್ಲಿ ನಡೆದ ಇಸ್ರೇಲ್-- ಇರಾನ್ ಸಂಘರ್ಷದ ವೇಳೆ ಒಂದು ಡಜನ್ ಗಿಂತಲೂ ಹೆಚ್ಚು ಇರಾನ್ ಪರಮಾಣ ವಿಜ್ಞಾನಿಗಳು, ಮಿಲಿಟರಿ ಹಿರಿಯ ಅಧಿಕಾರಿಗಳನ್ನು ನಿಮಿಷಗಳಲ್ಲಿ ಕೊಲ್ಲಲಾಗಿತ್ತು.
ಮೋಸಾದ್, ಇರಾನ್ ನಲ್ಲಿ ತನ್ನ ಏಜೆಂಟ್ ರುಗಳನ್ನು ನೇಮಕ ಮಾಡಿಕೊಂಡು ಪ್ರತಿ ನಿತ್ಯ ಮಾಹಿತಿ ಸಂಗ್ರಹಿಸಿದೆ. ವ್ಯಾಪಾಕವಾಗಿ ಇರಾನ್ ಮಿಲಿಟರಿ ಡಾಟಾ ವಿಶ್ಲೇಷಣೆ ನಡೆಸಿದೆ. ವರ್ಷಗಳಿಂದ ಇಂಟಲಿಜೆನ್ಸ್ ಮಾಹಿತಿಯನ್ನು ಸಂಗ್ರಹಿಸಿ ಕಳೆದ ಶನಿವಾರ ಧೀಡೀರನೇ ಆಯತೊಲ್ಲಾ ಅಲಿ ಖಮೇನಿ ಇದ್ದ ಸ್ಥಳದ ಮೇಲೆ ಕ್ಷಿಪಣಿ, ಬಾಂಬ್ ದಾಳಿ ನಡೆಸಿ ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿದೆ. ಇದು ಇಸ್ರೇಲ್‌ನ ತಾಕತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us