/newsfirstlive-kannada/media/media_files/2026/03/04/usa-military-weapons-2-2026-03-04-14-59-23.jpg)
ಇರಾನ್ ವಿರುದ್ಧದ ಯುದ್ಧಕ್ಕೆ ಅಮೆರಿಕಾ ವೆಚ್ಚ ಮಾಡುತ್ತಿರುವುದೆಷ್ಟು?
ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಇರಾನ್ ವಿರುದ್ಧ ಅಪರೇಷನ್ ಎಪಿಕ್ ಪ್ಯೂರಿ ಹೆಸರಿನ ಮಿಲಿಟರಿ ಕಾರ್ಯಾಚರಣೆ ಘೋಷಿಸಿದ್ದಾರೆ. ಆದರೇ, ಈ ಮಿಲಿಟರಿ ಕಾರ್ಯಾಚರಣೆಗೆ ಅಮೆರಿಕಾ ಎಷ್ಟು ವೆಚ್ಚ ಮಾಡುತ್ತಿದೆ ಎಂಬ ಇಂಟರೆಸ್ಟಿಂಗ್ ಸಂಗತಿ ಇಲ್ಲಿದೆ ಓದಿ.
ಅಮೆರಿಕಾ ದಾಳಿಗೆ ಇರಾನ್ ತೀವ್ರ ಪ್ರತಿರೋಧ ತೋರುತ್ತಿದೆ. ಇರಾನ್ , ಗಲ್ಪ್ ರಾಷ್ಟ್ರಗಳಲ್ಲಿರುವ ಅಮೆರಿಕಾದ ವಾಯುನೆಲೆಗಳ ಮೇಲೆ ಪ್ರತಿ ದಾಳಿ ನಡೆಸುತ್ತಿದೆ. ಆದರೇ, ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕನಿಷ್ಠ ನಾಲ್ಕು ವಾರಗಳವರೆಗೂ ಈ ಸಂಘರ್ಷ ಮುಂದುವರಿಯುವ ಮುನ್ಸೂಚನೆ ನೀಡಿದ್ದಾರೆ. ಆದರೇ, ಇರಾನ್ ವಿರುದ್ಧದ ಸಂಘರ್ಷದಿಂದ ಅಮೆರಿಕಾವು 210 ಬಿಲಿಯನ್ ಡಾಲರ್ ವೆಚ್ಚ ಮಾಡುವ ಸಾಧ್ಯತೆ ಇದೆ. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೇ, 17.4 ಲಕ್ಷ ಕೋಟಿ ರೂಪಾಯಿ ಹಣವನ್ನು ಅಮೆರಿಕಾವು ಇರಾನ್ ವಿರುದ್ಧ ಸಂಘರ್ಷಕ್ಕೆ ವೆಚ್ಚ ಮಾಡಲಿದೆ ಎಂದು ಅಮೆರಿಕಾದ ಟಾಪ್ ಎಕನಾಮಿಕ್ ಎಕ್ಸ್ ಫರ್ಟ್ಸ್, ಕೆಂಟ್ ಸಮ್ಮಿಟರ್ಸ್ ಅಂದಾಜಿಸಿದ್ದಾರೆ.
ಅಮೆರಿಕಾ ವೆಚ್ಚ ಮಾಡುತ್ತಿರುವ 17.4 ಲಕ್ಷ ಕೋಟಿ ರೂಪಾಯಿ ಹಣವು ಭಾರತದ ವಾರ್ಷಿಕ ರಕ್ಷಣಾ ಇಲಾಖೆಯ ಬಜೆಟ್‌ನ ಮೂರು ಪಟ್ಟು ಹಣವಾಗುತ್ತೆ. 2025 ರ ಬಜೆಟ್ ನಲ್ಲಿ ಭಾರತವು ರಕ್ಷಣಾ ಇಲಾಖೆಗೆ 6.81 ಲಕ್ಷ ಕೋಟಿ ರೂಪಾಯಿ ಹಣ ಹಂಚಿಕೆ ಮಾಡಿತ್ತು. ಇದು ಭಾರತದ ಜಿಡಿಪಿಯ ಶೇ.6 ರಷ್ಟಾಗುತ್ತೆ.
ಇರಾನ್ - ಅಮೆರಿಕಾ ಯುದ್ಧದ ವೆಚ್ಚ ಎಷ್ಟು?
ಈ ಸಂಘರ್ಷದಲ್ಲಿ ಯುದ್ಧ ಸಾಮಗ್ರಿ ನಷ್ಟ, ಯುದ್ಧ ಸಾಮಗ್ರಿ ಬದಲಾವಣೆಗೆ 5.4 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಇದು ಭಾರತದ ಆರೋಗ್ಯ ಇಲಾಖೆಯ ಬಜೆಟ್‌ನ ನಾಲ್ಕು ಪಟ್ಟು ಹಣ. ಯುದ್ಧ ಸಾಮಗ್ರಿ ನಷ್ಟ, ಯುದ್ಧ ಸಾಮಗ್ರಿ ಬದಲಾವಣೆ ವೆಚ್ಚವೇ 65 ಬಿಲಿಯನ್ ಡಾಲರ್ ನಿಂದ 95 ಬಿಲಿಯನ್ ಡಾಲರ್ ವರೆಗೂ ಏರಿಕೆಯಾಗಬಹುದು. ಇದು ಯುದ್ಧ ಎಷ್ಟು ದಿನಗಳವರೆಗೂ ನಡೆಯುತ್ತೆ ಎಂಬುದನ್ನು ಅವಲಂಬಿಸಿದೆ ಎಂದು ಅಮೆರಿಕಾದ ಆರ್ಥಿಕ ತಜ್ಞ ಕೆಂಟ್ ಸಮ್ಮಿಟರ್ಸ್ ಹೇಳಿದ್ದಾರೆ.
ಅಮೆರಿಕಾವು ಈಗಾಗಲೇ ಮೂರು ಎಫ್-15 ಇ ಫೈಟರ್ ಜೆಟ್ ಗಳನ್ನು ಕುವೈತ್ ನಲ್ಲಿ ಕಳೆದುಕೊಂಡಿದೆ. ಇದರಿಂದ ಅಮೆರಿಕಾಗೆ 3 ಸಾವಿರ ಕೋಟಿ ರೂಪಾಯಿ ನಷ್ಟ ಸಂಭವಿಸಿದೆ.
ಅಮೆರಿಕಾ- ಇರಾನ್ ಸಂಘರ್ಷವು ಎರಡು ತಿಂಗಳಿಗೂ ಹೆಚ್ಚಿನ ಕಾಲ ನಡೆದರೇ, ಅಮೆರಿಕಾ ಮಾಡಬೇಕಾದ ವೆಚ್ಚ ಹೆಚ್ಚಾಗುತ್ತೆ. ಇನ್ನೂ ಡೋನಾಲ್ಡ್ ಟ್ರಂಪ್, ಅಮೆರಿಕಾದ ಸೈನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸುವ ಸಾಧ್ಯತೆಯ ಬಗ್ಗೆಯೂ ಮಾತನಾಡಿದ್ದಾರೆ. ಇದರಿಂದ ಅಮೆರಿಕಾದ ಯುದ್ಧ ವೆಚ್ಚ ಮತ್ತಷ್ಟು ಹೆಚ್ಚಾಗುತ್ತೆ.
/filters:format(webp)/newsfirstlive-kannada/media/media_files/2026/03/04/usa-military-weapons-1-2026-03-04-15-00-35.jpg)
ಅಮೆರಿಕಾದ ಮೇಲೆ ಆರ್ಥಿಕ ಪರಿಣಾಮ
ಯುದ್ಧ, ಸಂಘರ್ಷದಲ್ಲಿ ವೆಚ್ಚದ ಜೊತೆಗೆ ಅಮೆರಿಕಾದ ಆರ್ಥಿಕತೆಯ ಮೇಲಾಗುವ ಪರಿಣಾಮ ದೊಡ್ಡದು. ಈಗಾಗಲೇ ಸಂಘರ್ಷವು ಕೇವಲ ಮೂರು ದೇಶಗಳಿಗೆ ಸೀಮಿತವಾಗದೇ, ಗಲ್ಪ್ ರಾಷ್ಟ್ರಗಳಿಗೂ ವಿಸ್ತರಣೆಯಾಗಿದೆ. ವ್ಯಾಪಾರ, ಎನರ್ಜಿ ಮಾರುಕಟ್ಟೆಯಲ್ಲಿ ಆಗುತ್ತಿರುವ ತೊಂದರೆಗಳಿಂದ ಅಮೆರಿಕಾದ ಆರ್ಥಿಕತೆಗೆ 115 ಬಿಲಿಯನ್ ಡಾಲರ್ ನಷ್ಟವಾಗುವ ಅಂದಾಜಿದೆ. ಈಗಾಗಲೇ ಕಚ್ಚಾತೈಲ, ಗ್ಯಾಸ್ ಬೆಲೆ ಏರಿಕೆಯಾಗಿದೆ.
ಕಳೆದ ಶನಿವಾರ ಅಮೆರಿಕಾ ಮೊದಲ ಮಿಸೈಲ್ ಫೈರಿಂಗ್ ಮಾಡಿತ್ತು. ಅದಕ್ಕೂ ಮುನ್ನ ಅಮೆರಿಕಾ ಮಿಲಿಟರಿಯನ್ನು, ಶಸ್ತ್ರಾಸ್ತ್ರಗಳನ್ನು ಗಲ್ಪ್ ರಾಷ್ಟ್ರಗಳಿಗೆ ಸಾಗಿಸಲು, ಸಿದ್ದತೆ ಮಾಡಿಕೊಳ್ಳಲು 5,230 ಕೋಟಿ ರೂಪಾಯಿ ವೆಚ್ಚವಾಗಿದೆ. ಅಮೆರಿಕಾ ಡಜನ್ ಗೂ ಹೆಚ್ಚು ನೌಕಾಪಡೆಯ ಹಡಗುಗಳು ಹಾಗೂ ಗಲ್ಪ್ ರಾಷ್ಟ್ರಗಳಿಗೆ 100 ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ನಿಯೋಜಿಸಿದೆ.
ಇರಾನ್ ವಿರುದ್ಧದ ಅಮೆರಿಕಾದ ಯುದ್ಧದ ಮೊದಲ 24 ಗಂಟೆಯಲ್ಲಿ ಅಮೆರಿಕಾವು 6,466 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಇದು ಅಮೆರಿಕಾದ 2026ರ ರಕ್ಷಣಾ ಬಜೆಟ್‌ನ ಶೇ.0.1 ರಷ್ಟು ಮಾತ್ರ ಆಗುತ್ತೆ.
/filters:format(webp)/newsfirstlive-kannada/media/media_files/2026/03/04/usa-military-weapons-2026-03-04-14-59-57.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us