/newsfirstlive-kannada/media/media_files/2025/11/20/jeffrey-epstiene-files-release-2025-11-20-12-48-40.jpg)
ಮಾಡೆಲ್ ಗಳ ಜೊತೆ ಡೋನಾಲ್ಡ್ ಟ್ರಂಪ್ , ಜೆಫ್ರಿ ಎಪಸ್ಟೈನ್
ವಿಶ್ವದ ಅತಿ ದೊಡ್ಡ ಲೈಂಗಿಕ ಹಗರಣದ ರಹಸ್ಯ ಫೈಲ್ ಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲು ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಲೈಂಗಿಕ ಹಗರಣದಲ್ಲಿ ಅಪರಾಧಿ ಎಂದು ಕೋರ್ಟ್ ನಿಂದ ಶಿಕ್ಷೆಗೆ ಗುರಿಯಾಗಿದ್ದ ದಿವಂಗತ ಜೆಫ್ರಿ ಎಪಸ್ಟೈನ್ ಗೆ ಸಂಬಂಧಿಸಿದ ಎಲ್ಲ ಫೈಲ್ ಗಳನ್ನು ಬಿಡುಗಡೆ ಮಾಡಲು ಮಸೂದೆಗೆ ಸಹಿ ಹಾಕಿದ್ದಾರೆ. ಈ ಮಸೂದೆಗೆ ಎಪಸ್ಟೈನ್ ಫೈಲ್ಸ್ ಟ್ರಾನ್ಸಫಾರೆನ್ಸಿ ಆ್ಯಕ್ಟ್ ಎಂದು ಹೆಸರಿಡಲಾಗಿದೆ. ನ್ಯಾಯ ಇಲಾಖೆಯು ಈಗ ಎಪಸ್ಟೈನ್ ಕೇಸ್ ಗೆ ಸಂಬಂಧಿಸಿದಂತೆ ನಡೆದ ತನಿಖೆ,ಸಿಕ್ಕ ಸಾಕ್ಷ್ಯಗಳು ಸೇರಿದಂತೆ ಎಲ್ಲವನ್ನೂ ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕಾಗುತ್ತೆ. ಮುಂದಿನ 30 ದಿನಗಳೊಳಗಾಗಿ ಡೌನ್ ಲೋಡ್ ಮಾಡಿಕೊಳ್ಳುವ ಫಾರ್ಮ್ಯಾಟ್ ನಲ್ಲಿ ಫೈಲ್ ಗಳನ್ನು ಬಿಡುಗಡೆ ಮಾಡಬೇಕಾಗುತ್ತೆ.
ಜೆಫ್ತಿ ಎಪಸ್ಟೈನ್ ಫೈಲ್ ಗಳನ್ನು ಬಿಡುಗಡೆ ಮಾಡಲು ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸಿದ್ದರಿರಲಿಲ್ಲ. ಆದರೇ, ಜೆಫ್ರಿ ಎಪಸ್ಟೈನ್ ಲೈಂಗಿಕ ಹಗರಣದ ಸಂಸ್ತಸ್ತರು ಮತ್ತು ತಮ್ಮದೇ ರಿಪಬ್ಲಿಕನ್ ಪಕ್ಷದ ನಾಯಕರು, ಸದಸ್ಯರ ಒತ್ತಡದಿಂದಾಗಿ ತಮ್ಮ ನಿಲುವು ಬದಲಾಯಿಸಿಕೊಂಡಿದ್ದಾರೆ. ಡೆಮಾಕ್ರಟಿಕ್ ಪಕ್ಷದ ನಾಯಕರು ತಮ್ಮ ಸರ್ಕಾರದ ಸಾಧನೆಯ ಕಡೆ ಗಮನಕೊಡದೇ, ಬೇರೆಡೆ ಗಮನ ಸೆಳೆಯುವ ವಿಷಯಗಳ ಚಾಂಪಿಯನ್ ಆಗಿದ್ದಾರೆ ಎಂದು ಟೀಕಿಸಿದ್ದಾರೆ.
ಈ ಡೆಮಾಕ್ರಟ್ಸ್ ಗಳು ಬಗೆಗಿನ ಸತ್ಯ ಮತ್ತು ಜೆಫ್ರಿ ಎಪಸ್ಟೈನ್ ಜೊತೆ ಇವರ ಭಾಂಧವ್ಯ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಏಕೆಂದರೇ, ನಾನು ಈಗಷ್ಟೇ ಎಪಸ್ಟೈನ್ ಫೈಲ್ಸ್ ಗಳನ್ನು ಬಿಡುಗಡೆ ಮಾಡಲು ಸಹಿ ಹಾಕಿದ್ದೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಡೋನಾಲ್ಡ್ ಟ್ರಂಪ್ ಪೋಸ್ಟ್ ಮಾಡಿದ್ದಾರೆ.
ಎಪಸ್ಟೈನ್ ಎಸ್ಟೇಟ್ ನಿಂದ ವಶಪಡಿಸಿಕೊಳ್ಳಲಾದ 20 ಸಾವಿರ ಪುಟಗಳ ದಾಖಲೆಗಲ್ಲಿ ಕೆಲವೆಡೆ ನೇರವಾಗಿ ಡೋನಾಲ್ಡ್ ಟ್ರಂಪ್ ಹೆಸರಿದೆ. ಈ ದಾಖಲೆಗಳನ್ನು ಕಳೆದ ವಾರವೇ ಬಿಡುಗಡೆ ಮಾಡಲಾಗಿದೆ. 2018ರಲ್ಲಿ ಜೆಫ್ರಿ ಎಪಸ್ಟೈನ್ ಮಾಡಿದ ಮೇಸೇಜ್ ನಲ್ಲಿರುವ ವಿವರವೂ ಬಿಡುಗಡೆಯಾಗಿದೆ. ಇದರಲ್ಲಿ ನಾನು ಡೋನಾಲ್ಡ್ ಟ್ರಂಪ್ ರನ್ನು ಕೆಳಕ್ಕೆ ಕುಸಿಯುವಂತೆ ಮಾಡಬಲ್ಲೆ. ನನಗೆ ಡೋನಾಲ್ಡ್ ಎಷ್ಟು ಕೊಳಕ ಎಂಬುದು ಗೊತ್ತು ಎಂದು ಜೆಫ್ರಿ ಎಪಸ್ಟೈನ್ ಹೇಳಿದ್ದಾರೆ.
ಜೆಫ್ರಿ ಎಪಸ್ಟೈನ್ ಶ್ರೀಮಂತ ಫೈನಾನ್ಸಿಯರ್ ಆಗಿದ್ದರು. ಅಮೆರಿಕಾದಲ್ಲಿ ಶ್ರೀಮಂತರ ಸರ್ಕಲ್ ನಲ್ಲಿ ಬಹಳಷ್ಟು ವರ್ಷಗಳ ಕಾಲ ಇದ್ದರು. ಬ್ಯುಸಿನೆಸ್ ಮೆನ್ ಗಳು, ರಾಜಕಾರಣಿಗಳು, ಅಕಾಡೆಮಿಕ್ಸ್ ಮತ್ತು ಸೆಲೆಬ್ರೆಟಿಗಳ ಜೊತೆ ಆಪ್ತ ಸಂಬಂಧ ಹೊಂದಿದ್ದರು. ಈ ವೇಳೆ ಹುಡುಗಿಯರು, ಯುವತಿಯರನ್ನು ಸೆಕ್ಸ್ ಗಾಗಿ ತಮ್ಮ ನಿಗೂಢ ಸ್ಥಳಗಳಿಗೆ ಕರೆದೊಯ್ದು, ಲೈಂಗಿಕವಾಗಿ ಶೋಷಿಸಿದ, ಲೈಂಗಿಕವಾಗಿ ಬಳಸಿಕೊಂಡ ಆರೋಪ ಜೆಫ್ರಿ ಎಪಸ್ಟೈನ್ ಮೇಲಿತ್ತು. ಈ ಲೈಂಗಿಕ ಹಗರಣದ ಕೇಸ್ ನಲ್ಲಿ ಜೆಫ್ರಿ ಎಪಸ್ಟೈನ್ ಅಪರಾಧಿ ಎಂದು ಕೋರ್ಟ್ ತೀರ್ಪು ಕೂಡ ನೀಡಿತ್ತು. ಶಿಕ್ಷೆ ಅನುಭವಿಸುವಾಗ ಅಮೆರಿಕಾದ ಜೈಲಿನಲ್ಲೇ ಜೆಫ್ರಿ ಎಪಸ್ಟೈನ್ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ.
ಈಗ ಅವರಿಗೆ ಸಂಬಂಧಿಸಿದ ಲೈಂಗಿಕ ಹಗರಣದ ಕೇಸ್ ನ ಎಲ್ಲ ಫೈಲ್ ಗಳನ್ನು ಬಿಡುಗಡೆ ಮಾಡಲು ಖುದ್ದು ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಸೂದೆಗೆ ಸಹಿ ಹಾಕಿದ್ದಾರೆ. ಜೆಫ್ರಿ ಎಪಸ್ಟೈನ್ ಜೊತೆ ಡೋನಾಲ್ಡ್ ಟ್ರಂಪ್‌ಗೂ ಆಪ್ತ ಸಂಬಂಧ ಇತ್ತು. ಜೆಫ್ರಿ ಎಪಸ್ಟೈನ್ ನ ಸೀಕ್ರೆಟ್ ಸ್ಥಳಗಳಿಗೆ ಡೋನಾಲ್ಡ್ ಟ್ರಂಪ್ ಕೂಡ ಸಾಕಷ್ಟು ಭಾರಿ ಹೋಗಿದ್ದಾರೆ. ಹೀಗಾಗಿ ಡೋನಾಲ್ಡ್ ಟ್ರಂಪ್ ಕೂಡ ಲೈಂಗಿಕ ಹಗರಣದಲ್ಲಿ ಭಾಗಿಯಾಗಿರುವ ದಾಖಲೆ, ಅಂಶಗಳು ಬಿಡುಗಡೆಯಾಗಬಹುದೇ ಎಂಬ ಕುತೂಹಲ ಅಮೆರಿಕಾ ಮಾತ್ರವಲ್ಲದೇ, ವಿಶ್ವದಾದ್ಯಂತ ಕುತೂಹಲ ಮೂಢಿಸಿದೆ.
/filters:format(webp)/newsfirstlive-kannada/media/media_files/2025/11/20/jeffrey-epstiene-files-release02-2025-11-20-12-52-18.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us