/newsfirstlive-kannada/media/media_files/2026/03/09/proublem-in-dubai-2026-03-09-13-26-55.jpg)
ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ವಾತಾವರಣದಿಂದ ದುಬೈ ಮೇಲೆ ಪ್ರತಿಕೂಲ ಪರಿಣಾಮ
ಮಧ್ಯಪ್ರಾಚ್ಯದಲ್ಲಿ ಕಳೆದ 10 ದಿನದಿಂದ ಯುದ್ಧ ನಡೆಯುತ್ತಿದೆ. ಯುದ್ಧವೂ ಇಸ್ರೇಲ್- ಇರಾನ್ ಗೆ ಸೀಮಿತವಾಗಿಲ್ಲ. ಗಲ್ಪ್ ರಾಷ್ಟ್ರಗಳ ಮೇಲೂ ಇರಾನ್ ದಾಳಿ ನಡೆಸುತ್ತಿದೆ. ಇದರಿಂದ ಭಾರತೀಯರು ಸುಮಾರು 90 ಲಕ್ಷದಷ್ಟು ಇರುವ ಗಲ್ಪ್ ರಾಷ್ಟ್ರಗಳ ಮೇಲೂ ನೆಗೆಟಿವ್ ಇಂಫ್ಯಾಕ್ ಉಂಟಾಗಿದೆ. ಗಲ್ಪ್ ರಾಷ್ಟ್ರಗಳಿಗೂ ಹತ್ತಾರು ಸಮಸ್ಯೆಗಳು ಸೃಷ್ಟಿಯಾಗಿವೆ. ಯುದ್ಧದಿಂದ ದುಬೈನ ವ್ಯಾಪಾರ, ವಾಣಿಜ್ಯ ಹಾಗೂ ದೈನಂದಿನ ಜೀವನದ ಮೇಲೆ ಭಾರಿ ಹೊಡೆತ ಬಿದ್ದಿದೆ. ಜೊತೆಗೆ ದುಬೈನಲ್ಲಿ ಈಗ ರಿಯಲ್ ಎಸ್ಟೇಟ್, ಚಿನ್ನದ ವ್ಯಾಪಾರಕ್ಕೆ ಭಾರಿ ಹೊಡೆತ ಬಿದ್ದಿದೆ. ರಿಯಲ್ ಎಸ್ಟೇಟ್ ಕ್ಷೇತ್ರ, ಚಿನ್ನದ ಬೆಲೆಯಲ್ಲಿ ಕುಸಿತ ಉಂಟಾಗಿದೆ.
ಇರಾನ್- ಇಸ್ರೇಲ್ ಯುದ್ಧದಿಂದ ದುಬೈನಲ್ಲಿ ಆಗುತ್ತಿರುವ ಸಮಸ್ಯೆಗಳು ಏನೇನು ಅನ್ನೋ ಡೀಟೈಲ್ಸ್ ಇಲ್ಲಿದೆ. ಓದಿ.
1- ದುಬೈನಲ್ಲಿ ಸದ್ಯ 7-8 ದಿನಗಳಿಗಾಗುವಷ್ಟು ಮಾತ್ರ ಆಹಾರ ಇದೆ. ದುಬೈ ಮೊದಲೇ ಮರಳುಗಾಡು ಪ್ರದೇಶ. ದುಬೈಗೆ ಬೇರೆ ದೇಶಗಳಿಂದಲೇ ಆಹಾರ ಪದಾರ್ಥ, ಸಾಮಗ್ರಿ ಪೂರೈಕೆಯಾಗಬೇಕು. ಆದರೇ, ಯುದ್ಧದಿಂದ ಎಲ್ಲವೂ ಸ್ಥಗಿತ.
2-ಯುದ್ಧದಿಂದ ದುಬೈಗೆ ಯಾವುದೇ ಉತ್ಪನ್ನವನ್ನು ಅಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
3-ಯುದ್ಧದಿಂದ ದುಬೈನಲ್ಲಿ ರಿಯಲ್ ಎಸ್ಟೇಟ್ ಆಸ್ತಿಗಳ ಮೌಲ್ಯದಲ್ಲಿ ಭಾರಿ ಕುಸಿತವಾಗಿದೆ. ಶೇ.25 ರಿಂದ ಶೇ.30 ರವರೆಗೆ ಆಸ್ತಿಗಳ ಮೌಲ್ಯದಲ್ಲಿ ಕುಸಿತವಾಗಿದೆ. ಯುದ್ಧ, ಭದ್ರತೆಯ ಕೊರತೆ, ಜೀವಕ್ಕೆ ಅಪಾಯದ ಪರಿಸ್ಥಿತಿಯ ಭಯದಿಂದ ಆಸ್ತಿ ಮೌಲ್ಯ ಕುಸಿತ
4-ದುಬೈನಲ್ಲಿ ಚಿನ್ನದ ಬೆಲೆ ಕೂಡ ಕುಸಿತ. ದುಬೈನಲ್ಲಿ ಚಿನ್ನದ ಬೆಲೆ ಮೊದಲೇ ಕಡಿಮೆ ಇರುತ್ತೆ. ಆದರೇ, ಯುದ್ಧದಿಂದಾಗಿ ಚಿನ್ನವನ್ನು ವ್ಯಾಪಾರಿಗಳು ಗೋಡೌನ್ ನಿಂದ ಸಾಗಾಟ ಮಾಡಲು ಸಾಧ್ಯವಾಗಿಲ್ಲ
ಬೇರೆ ದೇಶಗಳಿಗೆ ಕಳಿಸಲು ಕೂಡ ಆಗುತ್ತಿಲ್ಲ. ಹೀಗಾಗಿ ದುಬೈ ಚಿನ್ನದ ಬೆಲೆ ದುಬೈನಲ್ಲೇ ಕುಸಿತ!
5-ದುಬೈನಲ್ಲಿ ಯುದ್ಧದಿಂದಾಗಿ ಎಲ್ಲವೂ ಬಂದ್ ಆಗಿದೆ. ವ್ಯಾಪಾರ ವಾಣಿಜ್ಯ ಚಟುವಟಿಕೆ ಬಂದ್ ಆಗಿದೆ. ಬ್ಯುಸಿನೆಸ್ ಲಾಸ್ ಪರಿಸ್ಥಿತಿಯನ್ನು ವ್ಯಾಪಾರಿಗಳು, ಉದ್ಯಮಿಗಳು ಎದುರಿಸುತ್ತಿದ್ದಾರೆ.
6- ದುಬೈ ಸೇರಿದಂತೆ ಗಲ್ಪ್ ರಾಷ್ಟ್ರಗಳು ಸಮುದ್ರದ ಉಪ್ಪು ನೀರು ಅನ್ನು ಶುದ್ದೀಕರಿಸಿ, ಕುಡಿಯುವ ನೀರು ಆಗಿ ಬಳಕೆ ಮಾಡ್ತಾವೆ. ಆದರೇ, ಇರಾನ್ ಈಗ ಈ ನೀರು ಶುದ್ದೀಕರಣ ಘಟಕಗಳ ಮೇಲೂ ದಾಳಿ ಮಾಡುತ್ತಿದೆ. ಇದರಿಂದ ದುಬೈನಲ್ಲಿ ಕುಡಿಯುವ ನೀರಿನ ತೊಂದರೆಯ ಭೀತಿ ಇದೆ
7- ದುಬೈನಿಂದ ಅನಿವಾಸಿ ಭಾರತೀಯರು ಭಾರತಕ್ಕೆ ಕಳಿಸುತ್ತಿದ್ದ ರಿಮೇಂಟೇನ್ಸ್ ಹಣ ಕಡಿತವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us