/newsfirstlive-kannada/media/media_files/2025/08/01/usa-prez-donald-trump-2025-08-01-12-58-18.jpg)
ಅಮೆರಿಕಾದ ವೈಟ್ ಹೌಸ್‌ನಲ್ಲಿ ಶೂಟೌಟ್ ಬಳಿಕ ವಲಸೆ ನೀತಿ ವಿಚಾರದಲ್ಲಿ ಕಠಿಣ ಕ್ರಮಕ್ಕೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ. ಮೂರನೇ ಜಗತ್ತಿನ ರಾಷ್ಟ್ರಗಳಿಂದ ವಲಸೆಯನ್ನು ಸಂಪೂರ್ಣ ಸ್ಥಗಿತಗೊಳಿಸಲು ಆದೇಶಿಸಿದ್ದಾರೆ. ಮುಖ್ಯವಾಗಿ ಹಿಂದುಳಿದ ರಾಷ್ಟ್ರಗಳು, ಹಿಂಸಾಚಾರ ಪೀಡಿತ ದೇಶಗಳು ಈ ವಿಭಾಗದಲ್ಲಿ ಬರುತ್ತವೆ. ಭಾರತಕ್ಕೆ ಇದರಿಂದ ಯಾವುದೇ ಪರಿಣಾಮ ಇರಲಾರದು. ಆದರೂ ವಲಸೆ ನಿಯಂತ್ರಣಕ್ಕೆ ಕಠಿಣ ಕ್ರಮಕ್ಕೆ ಮುಂದಾಗಿರುವುದು ಅಮೆರಿಕಾದಲ್ಲಿನ ವಿದೇಶೀಯರಲ್ಲಿ ಆತಂಕ ಸೃಷ್ಟಿಸುವಂತೆ ಮಾಡಿದೆ.
ನವೆಂಬರ್ 26ರಂದು ವೈಟ್ ಹೌಸ್‌ನಲ್ಲಿ ಅಫ್ಗಾನಿಸ್ತಾನದ ಪ್ರಜೆ ನಡೆಸಿದ ಶೂಟೌಟ್‌ನಲ್ಲಿ ಅಮೆರಿಕಾದ ನ್ಯಾಷನಲ್ ಗಾರ್ಡ್‌ನ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಈ ಪೈಕಿ ಮಹಿಳಾ ಗಾರ್ಡ್ ಸರಾ ಬೆಕ್‌ಸ್ಟಾರ್ಮ್ ಸಾವನ್ನಪ್ಪಿದ್ದರು. ಮತ್ತೊಬ್ಬ ಆಂಡ್ರ್ಯೂ ವೋಲ್ಫ್ ಗಂಭೀರ ಸ್ಥಿತಿಯಲ್ಲಿದ್ದು ಚಿಕಿತ್ಸೆ ಮುಂದುವರಿದಿದೆ.
2021ರಲ್ಲಿ ಅಮೆರಿಕಾವು ಅಫ್ಘಾನಿಸ್ತಾನದಿಂದ ಸೇನೆ ವಾಪಸ್ ಸಂದರ್ಭದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದ ಅಫ್ಗಾನಿಸ್ತಾನದ ಪ್ರಜೆ ರೆಹಮಾನುಲ್ಲಾ ಲಕನ್‌ವಾಲ್ ಕೂಡ ಸೇನೆ ಜೊತೆ ಅಮೆರಿಕಾಕ್ಕೆ ಶಿಫ್ಟ್ ಆಗಿದ್ದ. ಆತನನ್ನ ವೈಟ್ ಹೌಸ್‌ನಲ್ಲಿ ಕೆಲಸಕ್ಕೆ ನಿಯೋಜಿಸಲಾಗಿತ್ತು. ಆದರೆ ಕಳೆದೆರಡು ದಿನದ ಹಿಂದೆ ವೈಟ್ ಹೌಸ್‌ನಲ್ಲಿಯೇ ಆತ ನ್ಯಾಷನಲ್ ಗಾರ್ಡ್‌ಗಳ ಮೇಲೆ ಗುಂಡಿನ ಮಳೆಗೆರೆದಿದ್ದ. ಆರೋಪಿ ಸದ್ಯ ಪೊಲೀಸರ ವಶದಲ್ಲಿದ್ದಾನೆ.
ಅಫ್ಘನಿಸ್ತಾನ, ಬರ್ಮಾ, ಚಡ್, ರಿಪಬ್ಲಿಕ್ ಆಫ್ ಕಾಂಗೋ, ಗಿನಿಯಾ, ಹೈಟಿ, ಇರಾನ್, ಲಿಬಿಯಾ, ಸೋಮಾಲಿಯಾ, ಸೂಡಾನ್, ಯೆಮೆನ್, ಬುರಾಂಡಿ, ಕ್ಯೂಬಾ, ಲಾವೋಸ್, ಸಿಯಾರಾ ಲಿಯೋನೆ, ಟಾಂಗೋ, ಟರ್ಕಮೆನಿಸ್ತಾನ್, ವೆನಿಜುವೆಲಾ ಹೀಗೆ 19 ದೇಶಗಳನ್ನು ಮೂರನೇ ಜಗತ್ತಿನ ದೇಶಗಳೆಂದು ಅಮೆರಿಕಾ ಪಟ್ಟಿ ಮಾಡಿದ್ದು, ಈ ದೇಶಗಳ ವಿಚಾರದಲ್ಲಿ ಕಠಿಣ ವಲಸೆ ನೀತಿ ಜಾರಿಮಾಡಲಾಗುತ್ತಿದೆ.
ಮೂರನೇ ಜಗತ್ತಿನ ದೇಶಗಳ ಅಂದರೇ, ಬಡ ರಾಷ್ಟ್ರಗಳು ಹಾಗೂ ಆರ್ಥಿಕವಾಗಿ ಅಸ್ಥಿರವಾಗಿರುವ ದೇಶಗಳು ಎಂದರ್ಥ . ಕಡಿಮೆ ಆದಾಯ ಇರುವ ರಾಷ್ಟ್ಸಗಳನ್ನು ಮೂರನೇ ಜಗತ್ತಿನ ರಾಷ್ಟ್ರಗಳು ಎಂದು ಕರೆಯಲಾಗುತ್ತೆ.
ಮೂರನೇ ರಾಷ್ಟ್ರಗಳ ಸಾಲಿನಲ್ಲಿ ಈಗ ಭಾರತ ಇಲ್ಲ. ಭಾರತ ಈಗ ವಿಶ್ವದ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us