/newsfirstlive-kannada/media/media_files/2026/03/03/kannadiga-return-from-abu-dhabhi-1-2026-03-03-13-21-42.jpg)
ಅಬುಧಾಬಿಯಿಂದ ಬೆಂಗಳೂರಿಗೆ ಬಂದ 213 ಮಂದಿ ಕನ್ನಡಿಗರು
ಕೊನೆಗೂ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಪ್ರವಾಸಕ್ಕೆ ಹೋಗಿ ಸಿಲುಕಿಕೊಂಡಿದ್ದ ಭಾರತೀಯರು ತಾಯ್ನಾಡಿಗೆ ವಾಪಸಾಗಿದ್ದಾರೆ. ಕಳೆದ ರಾತ್ರಿ ಹಾಗೂ ಇಂದು ಬೆಳಿಗ್ಗೆ ಇಂಡಿಗೋ, ಏರ್ ಇಂಡಿಯಾ, ಸ್ಪೈಸ್ ಜೆಟ್ ವಿಮಾನಗಳಲ್ಲಿ ದುಬೈನಿಂದ ಭಾರತೀಯರು ವಾಪಾಸಾಗಿದ್ದಾರೆ. ಭಾರತದ ವಿಮಾನಯಾನ ಸಂಸ್ಥೆಗಳ ವಿಮಾನಗಳು, ಮಧ್ಯಪ್ರಾಚ್ಯ ಹೊರತುಪಡಿಸಿ ಪರ್ಯಾಯ ವಾಯು ಮಾರ್ಗಗಳ ಮೂಲಕ ದೀರ್ಘ ಪ್ರಯಾಣದ ಮಾರ್ಗದ ಮೂಲಕ ಭಾರತಕ್ಕೆ ಬಂದಿವೆ. ನಿರ್ಬಂಧದ ವಾಯುಪ್ರದೇಶ ಹೊರತುಪಡಿಸಿ ಬೇರೆ ಪರ್ಯಾಣ ಮಾರ್ಗಗಳ ಮೂಲಕ ವಿಮಾನ ಹಾರಾಟ ನಡೆಸಿವೆ. ಕಳೆದ ರಾತ್ರಿ ಹಾಗೂ ಇಂದು ಬೆಳಿಗ್ಗೆ ಗಲ್ಪ್ ರಾಷ್ಟ್ರಗಳಿಂದ ಚೆನ್ನೈ, ದೆಹಲಿ ಹಾಗೂ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನಗಳು ಬಂದಿವೆ.
ಭಾರತದ ನಾಗರಿಕ ವಿಮಾನಯಾನ ಇಲಾಖೆಯೂ ಮಧ್ಯಪ್ರಾಚ್ಯದಲ್ಲಿ ಬದಲಾಗುತ್ತಿರುವ ವಾಯುಪ್ರದೇಶದ ನಿರ್ಬಂಧದ ಸ್ಥಿತಿಯನ್ನು ಮಾನಿಟರ್ ಮಾಡುತ್ತಿದೆ. ನಿರ್ಬಂಧದದಿಂದ ಅಂತಾರಾಷ್ಟ್ರೀಯ ವಿಮಾನ ಹಾರಾಟದ ಮೇಲೆ ಆಗಿರುವ ಇಂಪ್ಯಾಕ್ಟ್ ಅನ್ನು ಅಸೆಸ್ ಮಾಡುತ್ತಿದೆ.
ಭಾರತದ ಸರ್ಕಾರವು ಕೂಡ ಸಂಕಷ್ಟದಲ್ಲಿರುವ ಭಾರತೀಯ ಪ್ರಯಾಣಿಕರಿಗಾಗಿ ವಿಶೇಷ ಸೌಲಭ್ಯ, ವ್ಯವಸ್ಥೆಗಳನ್ನು ಮಾಡುತ್ತಿದೆ. ಏರ್ ಲೈನ್ಸ್ ಗಳು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಹೊತ್ತು ಭಾರತದತ್ತ ಬರುತ್ತಿವೆ. ಕೇಂದ್ರದ ನಾಗರಿಕ ವಿಮಾನಯಾನ ಇಲಾಖೆಯು ವಿದೇಶಿ ನಾಗರಿಕ ವಿಮಾನಯಾನ ಇಲಾಖೆ, ಭಾರತದ ರಾಯಭಾರ ಕಚೇರಿಗಳ ಜೊತೆ ಸಮನ್ವಯ ಸಾಧಿಸಿ ಕೆಲಸ ಮಾಡುತ್ತಿದೆ. ಈ ಮೂಲಕ ಭಾರತೀಯರ ಸುರಕ್ಷಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡುತ್ತಿದೆ.
ಇಂಡಿಗೋ ಇಂದು ಜೆಡ್ಡಾದಿಂದ 10 ವಿಶೇಷ ವಿಮಾನಗಳನ್ನು ಭಾರತದತ್ತ ಹಾರಾಟ ನಡೆಸಲಿದೆ. ಸಂಕಷ್ಟದಲ್ಲಿರುವ ಭಾರತೀಯ ಪ್ರಯಾಣಿಕರನ್ನು ಭಾರತಕ್ಕೆ ಕರೆ ತರಲಿದೆ. ಜೆಡ್ಡಾದ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಜೊತೆ ಸಮನ್ವಯ ಸಾಧಿಸಿಕೊಂಡು ಪ್ರಯಾಣಿಕರನ್ನು ಭಾರತಕ್ಕೆ ಕರೆ ತರಲಿದೆ.
ಇನ್ನೂ ವಿದೇಶಿ ಏರ್ ಲೈನ್ಸ್ ಗಳು ಕೂಡ ಭಾರತ ಹಾಗೂ ಗಲ್ಪ್ ರಾಷ್ಟ್ರಗಳ ಮಧ್ಯೆ ಸೀಮಿತ ವಿಮಾನ ಹಾರಾಟ ನಡೆಸುತ್ತಿವೆ.
ಏರ್ ಇಂಡಿಯಾ ಇಂದು ಮಸ್ಕತ್ ನಿಂದ ಭಾರತಕ್ಕೆ ವಿಮಾನ ಹಾರಾಟ ನಡೆಸಲಿದೆ. ಇನ್ನೂ ಆಕಾಶ್ ಏರ್ ಕೂಡ ಇಂದು ಮತ್ತು ನಾಳೆ ಗಲ್ಪ್ ರಾಷ್ಟ್ರದಿಂದ ಭಾರತಕ್ಕೆ ವಿಮಾನ ಹಾರಾಟ ನಡೆಸಲಿದೆ.
/filters:format(webp)/newsfirstlive-kannada/media/media_files/2026/03/03/kannadiga-return-from-abu-dhabhi-2026-03-03-13-19-16.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us