/newsfirstlive-kannada/media/media_files/2025/11/17/bangala-ex-pm-sheikh-hasina-convicted-2025-11-17-14-58-26.jpg)
ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಗಲ್ಲುಶಿಕ್ಷೆ
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ. ಕಳೆದ ವರ್ಷ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು. ಆ ವೇಳೆ ಕೆಲವರು ಸಾವನ್ನಪ್ಪಿದ್ದರು. ಇದರ ವಿರುದ್ಧ ಸ್ಪೆಷಲ್ ಟ್ರಿಬ್ಯೂನಲ್ ನಲ್ಲಿ ಶೇಖ್ ಹಸೀನಾ ಹಾಗೂ ಅವರ ಸರ್ಕಾರದ ವಿರುದ್ಧ ಕೇಸ್ ದಾಖಲಾಗಿತ್ತು. ಈ ಕೇಸ್ ನಲ್ಲಿ ಶೇಖ್ ಹಸೀನಾ ಅಪರಾಧಿ ಎಂದು ಸ್ಪೆಷಲ್ ಟ್ರಿಬ್ಯೂನಲ್ ತೀರ್ಪು ನೀಡಿದೆ. ಜೊತೆಗೆ ಶೇಖ್ ಹಸೀನಾ ಅವರಿಗೆ ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ .
ಪ್ರತಿಭಟನೆ ವೇಳೆ 1,400 ಮಂದಿಯನ್ನು ಕೊಲ್ಲಲಾಗಿದೆ ಎಂಬ ಆರೋಪ ಇದೆ. ವಿಶ್ವಸಂಸ್ಥೆಯ ವರದಿಯಲ್ಲೇ ಈ ನರಮೇಧದ ಬಗ್ಗೆ ಉಲ್ಲೇಖ ಇದೆ. ಈ ವೇಳೆ ಬಾಂಗ್ಲಾದ ಭದ್ರತಾ ಪಡೆಗಳು ನಡೆಸಿದ್ದ ಫೈರಿಂಗ್ ನಲ್ಲಿ ಸಾವಿರಾರು ಜನರು ಗಲಭೆಯಲ್ಲಿ ಗಾಯಗೊಂಡಿದ್ದರು. ಜುಲೈ, ಆಗಸ್ಟ್ 2024 ರಲ್ಲಿ ನಡೆದಿದ್ದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಸಾವಿರಾರು ಜನರು ಗಾಯಗೊಂಡು, ಅನೇಕರು ಸಾವನ್ನಪ್ಪಿದ್ದರು. ಈ ನರಮೇಧಕ್ಕೆ ನೇರವಾಗಿ ಶೇಖ್ ಹಸೀನಾ ಕಾರಣ ಎಂದು ಸ್ಪೆಷಲ್ ಟ್ರಿಬ್ಯೂನಲ್ ನಲ್ಲಿ ಕೇಸ್ ದಾಖಲಾಗಿತ್ತು. ಪೊಲೀಸ್, ಮಿಲಿಟರಿ, ಶಸ್ತ್ರಾಸ್ತ್ರ ಬಲವನ್ನು ಬಳಸಿ, ಪ್ರತಿಭಟನೆ ಹತ್ತಿಕ್ಕಿ ಎಂದು ಸರ್ಕಾರಕ ಆದೇಶಿಸಿತ್ತು. ಹೀಗಾಗಿಯೇ ಬಾಂಗ್ಲಾದೇಶದಲ್ಲಿ ನರಮೇಧದಲ್ಲಿ 1,400 ಜನರು ಸಾವನ್ನಪ್ಪಿದ್ದಾರೆ ಎಂಬ ಆರೋಪ ಇದೆ.
ಶೇಖ್ ಹಸೀನಾ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಅಸಾದುಜಮನ್ ಖಾನ್ ಕಮಲ್, ಮಾಜಿ ಪೊಲೀಸ್ ಕಮೀಷನರ್ ಚೌಧರಿ ಅಬ್ದುಲ್ಲಾ ಆಲ್ ಮಾಮುನ್ ವಿರುದ್ಧ ಮಾನವೀಯತೆ ವಿರುದ್ಧ ಅಪರಾಧ ಎಸಗಿದ್ದ ಆರೋಪದಡಿ ಕೇಸ್ ದಾಖಲಾಗಿತ್ತು.
ಸಾಕ್ಷಿಗಳ ಹೇಳಿಕೆ ಹಾಗೂ ವಿವಿಧ ಸ್ಥಳಗಳಲ್ಲಿ ರೆಕಾರ್ಡ್ ಆಗಿದ್ದ ಪೊಲೀಸರು ವಿದ್ಯಾರ್ಥಿಗಳ ಮೇಲೆ ಫೈರಿಂಗ್ ಮಾಡುವವ ವಿಡಿಯೋಗಳನ್ನು ಸ್ಪೆಷಲ್ ಟ್ರಿಬ್ಯುನಲ್ ನಲ್ಲಿ ಸಾಕ್ಷಿಯಾಗಿ ಹಾಜರುಪಡಿಸಲಾಗಿತ್ತು. ಚಿತ್ರಹಿಂಸೆಯ ಕಾರಣದಿಂದ ಅನೇಕರ ತಲೆಬುರುಡೆಯೇ ಹೊಡೆದು ಹೋಗಿತ್ತು. ಗಾಯಾಳುಗಳಿಗೆ ವೈದ್ಯಕೀಯ ಚಿಕಿತ್ಸೆಯೂ ಸಿಗದಂತೆ ಮಾಡಲಾಗಿತ್ತು.
ಇನ್ನೂ ಶೇಖ್ ಹಸೀನಾ 2018ರ ಪಾರ್ಲಿಮೆಂಟ್ ಚುನಾವಣೆಯ ವೇಳೆ ತಮ್ಮ ಅವಾಮಿ ಲೀಗ್ ಪಕ್ಷದ ನಾಯಕರು, ಕಾರ್ಯಕರ್ತರ ಮೂಲಕ ಚುನಾವಣೆ ಹಿಂದಿನ ದಿನವೇ ಬ್ಯಾಲೆಟ್ ಬಾಕ್ಸ್ ಗಳಿಗೆ ವೋಟ್ ಒತ್ತಿಕೊಂಡು ಬ್ಯಾಲೆಟ್ ಪೇಪರ್ ತುಂಬಿದ್ದರು ಎಂಬ ಆರೋಪವನ್ನು ಸ್ಪೆಷಲ್ ಟ್ರಿಬ್ಯುನಲ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
/filters:format(webp)/newsfirstlive-kannada/media/media_files/2025/11/17/bangala-ex-pm-sheikh-hasina-convicted02-2025-11-17-15-00-23.jpg)
ಇನ್ನೂ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಸದ್ಯ ಭಾರತದ ರಾಜಧಾನಿ ದೆಹಲಿಯಲ್ಲಿದ್ದಾರೆ. ಭಾರತವು ಶೇಖ್ ಹಸೀನಾಗೆ ಆಶ್ರಯ ನೀಡಿದೆ. ಈ ಹಿಂದೆ ಅವರ ತಂದೆ ಮುಜೀಬುರ್ ರೆಹಮಾನ್ ರನ್ನು ಅವರ ಮನೆಯಲ್ಲೇ ಗುಂಡಿಕ್ಕಿ ಹತ್ಯೆಗೈದ ಇತಿಹಾಸವೂ ಬಾಂಗ್ಲಾದೇಶದಲ್ಲಿದೆ. ಹೀಗಾಗಿ ಶೇಖ್ ಹಸೀನಾ ಜೀವಕ್ಕೆ ಬಾಂಗ್ಲಾದೇಶದಲ್ಲಿ ಅಪಾಯ ಇರುವ ಕಾರಣದಿಂದ ಭಾರತದಲ್ಲಿ ತಾತ್ಕಾಲಿಕ ಆಶ್ರಯ ನೀಡಲಾಗಿದೆ.
ಶೇಖ್ ಹಸೀನಾರನ್ನು ಭಾರತದಿಂದ ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಬೇಕೇಂದು ಬಾಂಗ್ಲಾದ ಮಧ್ಯಂತರ ಸರ್ಕಾರ ಒತ್ತಾಯ ಮಾಡಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us