/newsfirstlive-kannada/media/media_files/2025/11/27/hong-kong-fire-2025-11-27-09-38-02.jpg)
/newsfirstlive-kannada/media/media_files/2025/11/27/hong-kong-fire-7-2025-11-27-09-38-13.jpg)
ಸಂತ್ರಸ್ತರಿಗೆ ಆಶ್ರಯ ತಾಣ
ಮಧ್ಯಾಹ್ನ ಹೊತ್ತಿಕೊಂಡ ಬೆಂಕಿಯನ್ನ ರಾತ್ರಿಯಾದ್ರೂ ನಂದಿಸಲಾಗದೇ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಎಲ್ಲವನ್ನೂ ಕಳೆದುಕೊಂಡು ನಿವಾಸಿಗಳು ಬೀದಿಗೆ ಬಂದಿದ್ದಾರೆ. ಸಂತ್ರಸ್ತರಿಗೆ ಆಶ್ರಯ ತಾಣಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ.
/newsfirstlive-kannada/media/media_files/2025/11/27/hong-kong-fire-6-2025-11-27-09-38-45.jpg)
279ಕ್ಕೂ ಹೆಚ್ಚು ಮಂದಿ ನಾಪತ್ತೆ
ಹಾಂಗ್ಕಾಂಗ್ನಲ್ಲಿ ರಣಭೀಕರ ಅಗ್ನಿ ಅವಘಡ ಸಂಭವಿಸಿದೆ. ಹಾಂಗ್ಕಾಂಗ್ನ ತೈಪೋ ಜಿಲ್ಲೆಯ ವಸತಿ ಸಮುಚ್ಛಯದ ಬಹುಮಹಡಿ ಅಪಾರ್ಟ್ಮೆಂಟ್ ಸಂಕೀರ್ಣದ 7 ಕಟ್ಟಡಗಳಲ್ಲಿ ಸಂಭವಿಸಿರೋ ಅಗ್ನಿ ಅನಾಹುತ ಸಿಕ್ಕಿದ್ದೆನ್ನೆಲ್ಲಾ ಆಹುತಿ ಪಡೆದಿದೆ. ದುರಂತದಲ್ಲಿ 44ಕ್ಕೂ ಹೆಚ್ಚು ಮಂದಿ ಸಜೀವ ದಹನ ಆಗಿರುವ ಮಾಹಿತಿ ಲಭ್ಯವಾಗಿದ್ದು, 279ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
/newsfirstlive-kannada/media/media_files/2025/11/27/hong-kong-fire-5-2025-11-27-09-39-32.jpg)
4,600 ಫ್ಲ್ಯಾಟ್ಗಳಿಗೆ ಬೆಂಕಿ
ತೈಪೋ ಜಿಲ್ಲೆಯ ನ್ಯೂ ಟೆರಿಟರಿಸ್ ಅಪಾರ್ಟ್ಮೆಂಟ್ ಸಂಕೀರ್ಣದ ಹೊರಭಾಗದಲ್ಲಿ ಸ್ಥಾಪಿಸಲಾಗಿದ್ದ ಬಿದಿರಿನ ಸ್ಕ್ಯಾಫೋಲ್ಡಿಂಗ್ನಲ್ಲಿ ದಟ್ಟ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಬಿದಿರು ಹೊತ್ತಿ ಉರಿದ ಪರಿಣಾಮ ಬೆಂಕಿಯ ಜ್ವಾಲೆ ಆವರಿಸಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಒಟ್ಟು 7 ಕಟ್ಟಡಗಳಲ್ಲಿದ್ದ 4,600 ಫ್ಲ್ಯಾಟ್ಗಳಿಗೆ ಬೆಂಕಿ ಹೊತ್ತಿಕೊಂಡಿದ್ದು ಎಲ್ಲವೂ ಸುಟ್ಟು ಭಸ್ಮವಾಗಿದೆ.
/newsfirstlive-kannada/media/media_files/2025/11/27/hong-kong-fire-3-2025-11-27-09-40-00.jpg)
ನಿಯಂತ್ರಣಕ್ಕೆ ಬಂದ ಬೆಂಕಿ
ನಿನ್ನೆ ಮಧ್ಯಾಹ್ನ 1 ಗಂಟೆ ವೇಳೆಗೆ ಕಾಣಿಕೊಂಡಿದ್ದ ಬೆಂಕಿ ಕ್ಷಣಮಾತ್ರದಲ್ಲಿ ಇಡೀ ಅಪಾರ್ಟ್ಮೆಂಟ್ಗಳಿಗೆ ವ್ಯಾಪಿಸಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ 800ಕ್ಕೂ ಹೆಚ್ಚು ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಶುರು ಮಾಡಿದ್ರು. 400 ಪೊಲೀಸ್ ಸಿಬ್ಬಂದಿಯೂ ಕೈ ಜೋಡಿಸಿದ್ರು. ಸತತ ಕಾರ್ಯಾಚರಣೆ ಬಳಿಕ ರಾತ್ರಿಯಾದ್ರೂ ಬೆಂಕಿ ಉರಿಯುತ್ತಲೇ ಇದ್ದು ಬೆಳಗಿನ ಜಾವದ ಹೊತ್ತಿಗೆ ಬೆಂಕಿ ಕೊಂಚ ನಿಯಂತ್ರಣಕ್ಕೆ ಬಂದಿದೆ ಎನ್ನಲಾಗ್ತಿದೆ.
/newsfirstlive-kannada/media/media_files/2025/11/27/hong-kong-fire-1-2025-11-27-09-40-28.jpg)
ಆಸ್ಪತ್ರೆಯಲ್ಲಿ ಚಿಕಿತ್ಸೆ
ದುರಂತದಲ್ಲಿ ಗಾಯಗೊಂಡಿದ್ದ 29 ಜನರನ್ನು ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗ್ತಿದೆ. ಆಸ್ಪತ್ರೆಗೆ ಕಳುಹಿಸಲಾಗಿದ್ದ ನಾಲ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. 13 ಮಂದಿ ಸ್ಥಿತಿ ಗಂಭೀರ ಎನ್ನಲಾಗಿದೆ.. ಮೃತಪಟ್ಟವರಲ್ಲಿ ಓರ್ವ ಅಗ್ನಿಶಾಮಕ ಸಿಬ್ಬಂದಿಯೂ ಸೇರಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
/newsfirstlive-kannada/media/media_files/2025/11/27/hong-kong-fire-2-2025-11-27-09-40-54.jpg)
900 ಜನರಿಗೆ ಆಶ್ರಯ
8 ತಾತ್ಕಾಲಿಕ ಆಶ್ರಯಗಳಲ್ಲಿ 900 ಜನರು ಆಶ್ರಯ ಪಡೆದಿದ್ದಾರೆ. ನೆರೆಯ ಶಾ ಟಿನ್ ಜಿಲ್ಲೆಯ ಜೊತೆಗೆ ತೈ ಪೊ ಜಿಲ್ಲೆಯ ಎಲ್ಲಾ ಆರೈಕೆ ತಂಡಗಳನ್ನು ಪೀಡಿತ ನಿವಾಸಿಗಳಿಗೆ ಸಹಾಯ ಮಾಡಲು ಸಜ್ಜುಗೊಳಿಸಲಾಗಿದೆ, ನಾಗರಿಕ ನೆರವು ಸೇವೆ ಹಾಗೂ ತೈ ಪೋ ಮತ್ತು ಶಾ ಟಿನ್ ಜಿಲ್ಲಾ ಕಚೇರಿಗಳು ಸಹ ನಿವಾಸಿಗಳಿಗೆ ಸಹಾಯ ಮಾಡುವ ಪ್ರಯತ್ನಗಳಲ್ಲಿ ಕೈಜೋಡಿಸಿವೆ. ಸಂತ್ರಸ್ಥರಿಗೆ ಅಗತ್ಯವಸ್ತುಗಳನ್ನು ಪೂರೈಸುವ ಕಾರ್ಯ ಸಾಗಿದೆ.
/newsfirstlive-kannada/media/media_files/2025/11/27/hong-kong-fire-4-2025-11-27-09-41-19.jpg)
ಬೆಂಕಿ ಅವಘಡಕ್ಕೆ ಕಾರಣ ಕಂಡುಹಿಡಿಯಲು ಹಾಂಗ್ಕಾಂಗ್ ಸರ್ಕಾರ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಬೆಂಕಿ ಅವಘಡಕ್ಕೆ ಸಂಬಂಧ ನರಹತ್ಯೆ ಆರೋಪದ ಮೇಲೆ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.. ಬೆಂಕಿ ದುರಂತಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಸಂತಾಪ ಸೂಚಿಸಿದ್ದಾರೆ..
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us