/newsfirstlive-kannada/media/media_files/2026/03/01/ayothollaha-ali-khameinini-2026-03-01-19-21-05.jpg)
ಆಯತೊಲ್ಲಾ ಅಲಿ ಖಮೇನಿ ಹತ್ಯೆಗೈದ್ದಿದ್ದು ಹೇಗೆ ಗೊತ್ತಾ?
ಇರಾನ್​ ಸರ್ವಾಧಿಕಾರಿಯ ಯುಗಾಂತ್ಯವಾಗಿದೆ. ಹಲವು ಸಮಯದಿಂದ ಅಮೆರಿಕ, ಇಸ್ರೇಲ್ ವರ್ಸಸ್​ ಇರಾನ್ ನಡುವೆ ನಡೆಯುತ್ತಿದ್ದ ಶೀತಲ ಸಮರ ಯುದ್ಧ ಸ್ವರೂಪ ಪಡೆದಿದೆ. ಇಸ್ರೇಲ್​, ಅಮೆರಿಕ ಜಂಟಿ ಕ್ಷಿಪಣಿ ದಾಳಿಗೆ ಇರಾನ್​ ಪರಮೋಚ್ಛ ನಾಯಕ ಖಮೇನಿ ಮಾತ್ರವಲ್ಲದೇ ಆತನ ಕುಟುಂಬ ಹಾಗೂ ಸೇನಾಧಿಕಾರಿಗಳು ಹತ್ಯೆಯಾಗಿದ್ದಾರೆ.
ಅಯತೊಲ್ಲಾ ಅಲಿ ಖಮೇನಿ.. ಇರಾನ್​ನ ಪರಮೋಚ್ಛ ನಾಯಕ.. 30 ವರ್ಷಗಳಿಗೂ ಅಧಿಕ ಕಾಲ ಇರಾನ್​ನನ್ನು ತನ್ನ ಬಿಗಿಮುಷ್ಟಿಯಲ್ಲಿದ್ದ ಖಮೇನಿಯ ಯುಗಾಂತ್ಯವಾಗಿದೆ. ಇಸ್ರೇಲ್​ ಹಾಗೂ ಅಮೆರಿಕ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಇರಾನ್​ನ ಖಮೇನಿ ಸಾವನ್ನಪ್ಪಿದ್ದಾರೆ.
ಖಮೇನಿಯನ್ನ ಏರ್ ಸ್ಟ್ರೈಕ್ ಮೂಲಕ ಹತ್ಯೆಗೈದ ಇಸ್ರೇಲ್!
ಕುಟುಂಬ ಹಾಗೂ ಸೇನಾಧಿಕಾರಿಗಳ ಜೊತೆ ಸಾವನ್ನಪ್ಪಿದ ಖಮೇನಿ
ಮಧ್ಯಪ್ರಾಚ್ಯ ತಲ್ಲಣಗೊಂಡಿದೆ.. ಷಿಯಾ ದೇಶ ಇರಾನ್​ ಮತ್ತೊಂದು ಸ್ಥಿತ್ಯಂತರ ಅಂದ್ರೆ ಮಗ್ಗುಲ ಬದಲಾಯಿಸುವ ಸುಳಿವು ನೀಡಿದೆ. ಸುದೀರ್ಘ 36 ವರ್ಷಗಳ ಕಾಲ ಇರಾನ್​ನ್ನ ತನ್ನ ಬಿಗಿಮುಷ್ಟಿಯಲ್ಲಿದ್ದ ಪರಮೋಚ್ಛ ನಾಯಕ ಖಮೇನಿಯನ್ನ ಇಸ್ರೇಲ್ ಏರ್ ಸ್ಟ್ರೈಕ್ ಮೂಲಕ ಹತ್ಯೆ ಮಾಡಿದೆ. ಎರಡು ದೇಶಗಳ ಜಂಟಿ ಕ್ಷಿಪಣಿ ದಾಳಿಯಲ್ಲಿ ಖಮೇನಿ ಮಾತ್ರವಲ್ಲದೇ ಅವರ ಮಗಳು, ಮೊಮ್ಮಕ್ಕಳ ಜೊತೆ ಸೇನೆಯ ಉನ್ನತ ಅಧಿಕಾರಿಗಳು ಕೂಡ ಸಾವನ್ನಪ್ಪಿದ್ದಾರೆ.
ನಿನ್ನೆ ಬೆಳಗ್ಗೆ ಇಸ್ರೇಲ್ ದಾಳಿ ಬಳಿಕ ರಾಜಧಾನಿ ತೆಹ್ರಾನ್​ನಲ್ಲಿ ಮುಂದಿನ ಭದ್ರತಾ ಕ್ರಮಗಳ ಬಗ್ಗೆ ಖಮೇನಿ ಸಭೆಗೆ ಮುಂದಾಗಿದ್ರು. ಇದರಲ್ಲಿ ಭಾಗಿಯಾಗಲು ರಕ್ಷಣಾ ಸಚಿವ, ಸೇನಾ ಮುಖ್ಯಸ್ಥರೂ ಆಗಮಿಸಿದ್ದರು. ಮೊದಲೇ ಗುಪ್ತಚರ ಮಾಹಿತಿ ಅರಿತಿದ್ದ ಅಮೆರಿಕ, ಇಸ್ರೇಲ್​ ಇದೇ ತೆಹ್ರಾನ್​ನ ಸೆಂಟ್ರಲ್ ಲೀಡರ್​ಶಿಪ್ ಕಾಂಪೌಂಡ್​ನಲ್ಲಿದ್ದಾಗ ಟಾರ್ಗೆಟ್​ ಮಾಡಿ ಸರಣಿ ಕ್ಷಿಪಣಿ ಉಡಾಯಿಸಿತ್ತು. ಮೇಲಿಂದ ಮೇಲೆ 30ಕ್ಕೂ ಅಧಿಕ ಕ್ಷಿಪಣಿ ಬ್ಲಾಸ್ಟ್​ ಆದ ಪರಿಣಾಮ ಖಮೇನಿ ಜೊತೆಗೆ ನೆರೆದಿದ್ದ ಎಲ್ಲರೂ ಏನಾಗುತ್ತಿದೆ ಅಂತ ತಿಳಿಯುವಷ್ಟರಲ್ಲೇ ಸಾವನ್ನಪ್ಪಿದ್ದಾರೆ. ಖಮೇನಿ ಹಾಗೂ ಅವರ ಕುಟುಂಬ ಮತ್ತು ಇರಾನ್​ನ ವಾಯುಸೇನೆ, ನೌಕಾ ಸೇನೆ, ಭೂ ಸೇನೆಯ ಮೂರೂ ಕಮಾಂಡರ್‌ಗಳು ಹತ್ಯೆಯಾಗಿದ್ದಾರೆ.
ಇಲ್ಲಿ ಮುಖ್ಯವಾದ ವಿಚಾರ ಏನಂದ್ರೆ ಒಂದ್ವೇಳೆ ಖಮೇನಿಯ ಸಭೆ ನಡೆಯಲು ಅವಕಾಶ ನೀಡಿದ್ದರೆ ಸಭೆ ಬಳಿಕ ಆತ ಅಡಗುದಾಣ ಸೇರಲು ಮುಂದಾಗಿರ್ತಿದ್ದ. ಇದನ್ನ ಅರಿತೇ ದಾಳಿ ಮಾಡಿ ಹೊಡೆದುರುಳಿಸಿದ್ದಾರೆ. ಇನ್ನು ಖಮೇನಿಯನ್ನ ಹೊಡೆದುರುಳಿಸಲು ಅಮೆರಿಕ ಪಕ್ಕಾ ಪ್ಲಾನ್ ಮಾಡಿಯೇ ಅಖಾಡಕ್ಕಿಳಿದಿತ್ತು.
ಪಕ್ಕಾ ಪ್ಲಾನ್​.. ಖಮೇನಿ ಖತಂ!
1. ಖಮೇನಿಯನ್ನ ಕೊಲ್ಲೋದಕ್ಕೆ ಬೆಳಗ್ಗೆ 9.45ಕ್ಕೆ ನಡೆದ ದಾಳಿ
2. ಸೆಂಟ್ರಲ್ ತೆಹ್ರಾನ್​ನಲ್ಲಿರೋ ಮನೆ, ಕಚೇರಿ ಮೇಲೆ ಅಟ್ಯಾಕ್
3. ಖಮೇನಿ ಕಾಂಪೌಂಡ್ ಒಳನುಗ್ಗಿದ್ದು ಒಟ್ಟು 7 ಮಿಸೈಲ್​ಗಳು
4. ಈ ವೇಳೆ ತಮ್ಮ ಕಚೇರಿಯಲ್ಲಿ ನಿತ್ಯ ಕೆಲಸದಲ್ಲಿದ್ದ ಖಮೇನಿ
5. ಪ್ರಮುಖ ಹಾಗೂ ಮಹತ್ವದ ಸಭೆ ಕರೆದಿದ್ದ ಅಲಿ ಖಮೇನಿ
6. ಸಭೆಯಲ್ಲಿ ಭಾಗಿಯಾಗೋದಕ್ಕೆ ಬಂದಿದ್ದ ಹಲವು ಅಧಿಕಾರಿಗಳು
7. ಈ ಸಭೆಯ ಮಾಹಿತಿ ಅಮೆರಿಕಾದ ಗುಪ್ತಚರ ದಳಕ್ಕೆ ಸಿಕ್ಕಿತ್ತು
8. ಹೈ ಲೆವೆಲ್ ಮೀಟಿಂಗ್​ನ್ನೇ ಟಾರ್ಗೆಟ್ ಮಾಡಿ ನಡೆದ ಅಟ್ಯಾಕ್
9. ಈ ದಾಳಿಯಲ್ಲಿ ಖಮೇನಿಯ ಜೊತೆಗೆ 40 ಅಧಿಕಾರಿಗಳೂ ಸಾವು
10. ಖಮೇನಿ ಹತ್ಯೆಗೈಯ್ಯುವ ಅಮೆರಿಕ, ಇಸ್ರೇಲ್​ನ ಟಾರ್ಗೆಟ್ ಸಕ್ಸಸ್
ಖಮೇನಿಯನ್ನ ಕೊಲ್ಲೋದಕ್ಕೆ ನಿನ್ನೆ ಬೆಳಗ್ಗೆ 9.45ಕ್ಕೆ ಇಸ್ರೇಲ್ ಅಮೆರಿಕ ಜೊತೆ ದಾಳಿ ನಡೆಸಿತ್ತು. ಸೆಂಟ್ರಲ್ ತೆಹ್ರಾನ್​ನಲ್ಲಿರೋ ಖಮೇನಿ ಮನೆ, ಕಚೇರಿ ಮೇಲೆ ಅಟ್ಯಾಕ್ ಮಾಡಿತ್ತು. ಖಮೇನಿ ಕಾಂಪೌಂಡ್ ಒಳಗೆ ಒಟ್ಟು 7 ಮಿಸೈಲ್​ಗಳು ನುಗ್ಗಿದ್ದವು. ಈ ವೇಳೆ ತಮ್ಮ ಕಚೇರಿಯಲ್ಲಿ ನಿತ್ಯ ಕೆಲಸದಲ್ಲಿದ್ದ ಖಮೇನಿ, ಪ್ರಮುಖ ಹಾಗೂ ಮಹತ್ವದ ಸಭೆ ಕರೆದಿದ್ದರು. ಸಭೆಯಲ್ಲಿ ಭಾಗಿಯಾಗಲು ಹಲವು ಅಧಿಕಾರಿಗಳು ಬಂದಿದ್ದರು. ಈ ಸಭೆಯ ಮಾಹಿತಿ ಅಮೆರಿಕದ ಗುಪ್ತಚರ ದಳಕ್ಕೆ ಸಿಕ್ಕಿತ್ತು. ಹೈ ಲೆವೆಲ್ ಮೀಟಿಂಗ್​ನ್ನೇ ಟಾರ್ಗೆಟ್ ಮಾಡಿ ಅಟ್ಯಾಕ್ ನಡೆಸಲಾಗಿದೆ. ಈ ದಾಳಿಯಲ್ಲಿ ಖಮೇನಿಯ ಜೊತಗೆ 40 ಅಧಿಕಾರಿಗಳೂ ಸಾವನ್ನಪ್ಪಿದ್ದಾರೆ. ಖಮೇನಿ ಹತ್ಯೆಗೈಯ್ಯುವ ಮೂಲಕ ಅಮೆರಿಕ, ಇಸ್ರೇಲ್​ಕೊನೆಗೂ ಟಾರ್ಗೆಟ್ ರೀಚ್​ ಆಗಿದೆ.
ಖಮೇನಿ ಸತ್ತಿಲ್ಲ ಎಂದೇ ವಾದಿಸಿ ಕೊನೆಗೆ ಸತ್ಯ ಒಪ್ಪಿಕೊಂಡ ಇರಾನ್​
ಇನ್ನು ಖಮೇನಿ ಹತ್ಯೆಯನ್ನ ಇರಾನ್ ಮಾಧ್ಯಮಗಳೇ ದೃಢಪಡಿಸಿವೆ. ಮೊದಲು ಖಮೇನಿ ಸತ್ತಿಲ್ಲ ಅಂತಾನೇ ಇರಾನ್ ವಿದೇಶಾಂಗ ಸಚಿವ ವಾದಿಸಿದ್ರು. ಆದರೆ ಮಾಧ್ಯಮಗಳು ಹತ್ಯೆಯಾಗಿರೋದನ್ನ ದೃಢಪಡಿಸಿದ್ದವು. ಖಮೇನಿಯ ಪುತ್ರಿ, ಅಳಿಯ, ಮೊಮ್ಮಗಳು ಕೂಡ ದಾಳಿಯಲ್ಲಿ ಸಾವಿಗೀಡಾಗಿದ್ದು ದೃಢಪಟ್ಟಿತ್ತು. ಮಾತ್ರವಲ್ಲದೇ ಖಮೇನಿಯ ಉನ್ನತ ಸಲಹೆಗಾರ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಕಮಾಂಡರ್ ಮೊಹಮ್ಮದ್ ಪಕ್‌ಪೌರ್ ಸೇರಿ 40ಕ್ಕೂ ಹೆಚ್ಚು ಅಧಿಕಾರಿಗಳು ಕೂಡ ಹತ್ಯೆಯಾಗಿದ್ದಾರೆ.
ಖಮೇನಿ ಹತ್ಯೆ ಮೂಲಕ ಇರಾನ್​ ಮಗ್ಗುಲು ಬದಲಾಯಿಸಿದೆ. 1978 ರಿಂದ 1979 ರಲ್ಲಿ ಅಧಿಕಾರ ಹಿಡಿದು ಬರೋಬ್ಬರಿ 36 ವರ್ಷಗಳ ಕಾಲ ಇರಾನ್ ಆಳಿದ ಪರಮೋಚ್ಛ ನಾಯಕ ಖಮೇನಿ ದುರಂತ ಅಂತ್ಯ ಕಂಡಿದ್ದಾನೆ.
/filters:format(webp)/newsfirstlive-kannada/media/media_files/2026/02/28/iran-supreme-leader-aytholla-ali-khameni-in-bunker-2026-02-28-18-55-40.jpg)
ನ್ಯೂಸ್​ ಫಸ್ಟ್​ ಬ್ಯೂರೋ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us