Advertisment

ಇವತ್ತು ಆತ ಇದ್ದಿದ್ರೆ ಇರಾನ್‌ ನೋಡುತ್ತಿದ್ದ ನರಕವೇ ಬೇರೆ! ಇವನು ಕಿಂಗ್‌ ಆಫ್ ಶಾಡೋಸ್‌!

ಇಸ್ರೇಲ್ ದೇಶದ ಗುಪ್ತಚರ ಸಂಸ್ಥೆ ಮೋಸಾದ್ ವಿದೇಶಗಳಲ್ಲಿ ತನ್ನ ವೈರಿಗಳನ್ನು ಯಶಸ್ವಿಯಾಗಿ ಹೊಡೆದುರುಳಿಸುವುದರಲ್ಲಿ ಎಕ್ಸ್ ಫರ್ಟ್. ವಿಶ್ವದಲ್ಲೇ ಅತ್ಯಂತ ಯಶಸ್ವಿ ಗುಪ್ತಚರ ಸಂಸ್ಥೆ ಮೋಸಾದ್‌. ಇದರ ಮುಖ್ಯಸ್ಥರಾಗಿದ್ದ ಮೀರ್ ಡಗಾನ್ ಇರಾನ್ ಹುಟ್ಟಡಗಿಸಿದ್ದ ರೀತಿ ಶಾಕಿಂಗ್‌. ಮೋಸಾದ್ ಅನ್ನು ಯಶಸ್ವಿಯಾಗಿ ಮುನ್ನಡೆಸಿದ್ದು ಮೀರ್ ಡಗಾನ್.

author-image
Chandramohan
MEIR DAGON MOSSAD EX CHIEF

ಮೋಸಾದ್ ಮುಖ್ಯಸ್ಥರಾಗಿದ್ದ ಮೀರ್ ಡಗಾನ್

Advertisment

ಆ ಒಂದು ಹೆಸರು ಮಧ್ಯಪ್ರಾಚ್ಯದ ಹಲವು ಉಗ್ರರಲ್ಲಿ ಭೀತಿ ಹುಟ್ಟಿಸಿತ್ತು.. ಇಸ್ರೇಲ್​​ನ ದೇಶವನ್ನ ಭೂಪಟದಿಂದ ತೊಳೆಯೋ ಹುಸಿ ಕನಸು ಕಂಡವರಿಗೆ ಕಂಟಕವಾಗಿ ಆತ ಕಾಡಿದ್ದ.. ಯುಹೂದಿ ಮಣ್ಣಿನಲ್ಲಿ ರಕ್ತದೋಕುಳಿಗೈದವರಿಗೆ ಯಮಪಾಶವಾಗಿದ್ದ ಆ ದೈತ್ಯ. ರೆಡ್​​ ಸೆಪ್ಟೆಂಬರ್​​​​​, ಹಮಾಸ್​​ ಹಾಗೂ ಸಿರಿಯಾ ಜನ್ಮತೆತ್ತ ಐಸಿಸ್‌ನಂತಹ ಭಯೋತ್ಪಾದಕ ಸಂಘಟನೆಗಳಿಗೆ ಮಾರಕವಾಗಿದ್ದ ಆ ಯಹೂದಿಯ ಹೆಸರು ಮೀರ್​​ ಡಗಾನ್ !! ಈತನಿಗೆ ಇನ್ನೊಂದು ಹೆಸರು ಇದೆ.. ಅದುವೇ ‘ಕಿಂಗ್​​ ಆಫ್​​​​​​ ಶಾಡೋಸ್​​’
ಪ್ರಸ್ತುತ ಮಧ್ಯಪ್ರಾಚ್ಯದಲ್ಲಿನ ವಿದ್ಯಮಾನಕ್ಕೆ ಇಡಿ ಭೂಮಂಡಲವೇ ಸಾಕ್ಷಿಯಾಗ್ತಿದೆ.. ಈ ಯುದ್ಧಕ್ಕೆ ಮೂಲ ಕಾರಣದಂತೆ ಗೋಚರವಾಗ್ತಿರೋದು ಅಣ್ವಸ್ತ್ರವೆಂಬ ದೈತ್ಯ ಶಕ್ತಿ.. ಇರಾನ್​​ ನಿನ್ನೆ ಮೊನ್ನೆ ಇಂದ ಅಣ್ವಸ್ತ್ರ ಹೊಂದುವ ಕನಸು ಕಾಣ್ತಿಲ್ಲ, ಆ ಶಕ್ತಿಯನ್ನ ತನ್ನದಾಗಿಸಿಕೊಳ್ಳೋದಕ್ಕೆ ಇರಾನ್​​ ದಶಕಗಳಿಂದ ವಿಜ್ಞಾನ ಮಂಥನವನ್ನೇ ನಡೆಸ್ತಿದೆ. ಆದ್ರೆ ಇರಾನಿನ ಅಣ್ವಸ್ತ್ರದ ಮಹದಾಸೆಗೆ ತಣ್ಣೀರಿನ ಯಾಗ ಮಾಡಿದ್ದು ಇದೇ ಭಗೀರಥ... ವರ್ಲ್ಡ್ಸ್​​​ ಟಾಪ್​​​ ಮೋಸ್ಟ್​​ ಇಂಟೆಲಿಜೆನ್ಸ್​​ ಅನ್ನೋ ಕೀರ್ತೀ ದಕ್ಕಿಸಿಕೊಂಡಿದ್ದ ಮೊಸಾದ್​​ ಕೂಡ ಒಂದು ಗ್ರಹಣಕಾಲವನ್ನ ನೋಡ್ತಿದ್ದಾಗ ಅದರ ಪುನರುತ್ಥಾನಕ್ಕೆ ಕಾರಣನಾದವನೇ ಈ  ಮೀರ್  ಡಗಾನ್​. 
ಅನೇಕ ವರ್ಷಗಳ ಕಾಲ ಜಗತ್ತಿನಲ್ಲೇ ಅತ್ಯಂತ ಸಮರ್ಥ, ಚಾಣಾಕ್ಷ, ರಾಕ್ಷಸ ಕಾರ್ಯಾಚರಣೆಗೆ ಹೆಸರಾದ ಇಸ್ರೇಲ್​​ನ ಗುಪ್ತಚರ ಸಂಸ್ಥೆ ಮೊಸಾದ್​​ ಅನ್ನ ಯಶಸ್ವಿಯಾಗಿ ಮುನ್ನಡೆಸಿದ್ದ ಕ್ರೆಡಿಟ್​​ ಈತನಿಗೆ ಸಲ್ಲುತ್ತೆ. ಅದೇ ಕಾಲಘಟ್ಟದಲ್ಲಿ ಇರಾನ್​​​​ ಅಣ್ವಸ್ತ್ರ ಪರೀಕ್ಷೆಯ ಕೇಂದ್ರಗಳು ಧ್ವಂಸಗೊಂಡಿದ್ವು, ಇರಾನಿನ ನ್ಯೂಕ್ಲಿಯರ್​​​​​ ಸೈಂಟಿಸ್ಟ್​​ಗಳ ಮರಣಮೃದಂಗ ಬಾರಿಸಿತ್ತು.. ಡಬಲ್​​ ಏಜೆಂಟ್‌ಗಳು ಕೊಟ್ಟ ಆಘಾತಕ್ಕೆ ಇರಾನ್​​​ ತತ್ತರಿಸಿ ಹೋಗಿತ್ತು. ಪ್ರಪಂಚದ ದಿ ಬೆಸ್ಟ್​​ ಸೈಂಟಿಸ್ಟ್​​ಗಳು ಸಿದ್ಧಪಡಿಸಿದ್ದ ಲ್ಯಾಬ್​​ಗಳಲ್ಲಿ ವೈರಸ್​​ ಹಬ್ಬಿತ್ತು. ಇರಾನಿನ ಈ ಅಧ್ವಾನಕ್ಕೆ ಕಾರಣೀಭೂತನೇ ಈ ಮೀರ್​​ ಡಗಾನ್​. 

Advertisment

MEIR DAGON MOSSAD EX CHIEF (1)




ಈಗ ‘ನೆರಳಿನ ರಾಜ’ ನೆನಪಾಗ್ತಿರೋದೇಕೆ?
ಅದು 1945.. ಎರಡನೇ ಮಹಾಯುದ್ಧದ ಸಮಯ.. ಯೂರೋಪ್​​​ನಲ್ಲಿ ಹಿಟ್ಲರ್​​ನ ನಾಝಿಗಳು ಶುರುಮಾಡಿದ್ದ ಯಹೂದಿಗಳ ಹತ್ಯಾಕಾಂಡಕ್ಕೆ ಇಡೀ ಸಮುದಾಯ ಜಗತ್ತಿನ ಉದ್ದಗಲಕ್ಕೂ ಹರಿದು ಹಂಚಿತ್ತು. ಅದೇ ಸಮಯದಲ್ಲಿ ಡಗಾನ್​​​ನ ತಂದೆ ತಾಯಿ ನಾಝಿಗಳಿಂದ ಜೀವವನ್ನ ಉಳಿಸಿಕೊಳ್ಳಲು ಹೋಗ್ತಿದ್ದಾಗಲೇ ರೈಲಿನಲ್ಲೆ ಮೀರ್​​ ಡಗಾನ್​ ಜನ್ಮವಾಗುತ್ತೆ. ಬಳಿಕ ಇಡೀ ಕುಟುಂಬ ತಮ್ಮ ಮೂಲವಾದ ಇಸ್ರೇಲ್​​ಗೆ ಬಂದು ಸೇರ್ತಾರೆ. ಹುಟ್ಟಿನಿಂದಲೇ ತನ್ನ ಸಮುದಾಯದ ಮೇಲಿನ ಅಸಹಿಷ್ಣುತೆಯನ್ನ ನೋಡಿಕೊಂಡೇ ಬೆಳೆದಿದ್ದ ಡಗಾನ್​​​ ತನ್ನ ಯೌವನದಲ್ಲಿ ಇಸ್ರೇಲ್​​ ಡಿಫೆನ್ಸ್​​ ಫೋರ್ಸ್​​ IDFಗೆ ಸೇರಿಕೊಳ್ಳುತ್ತಾನೆ. ಮುಂದೆ 50 ವರ್ಷಗಳ ಕಾಲ ಇಸ್ರೇಲಿನ ಅಖಂಡತೆ ಹಾಗೂ ರಾಷ್ಟ್ರದ ಭದ್ರತೆಗಾಗಿ ದುಡಿಯುತ್ತಾನೆ. 1947ರಲ್ಲಿ ಇಸ್ರೇಲ್​ ತನ್ನನ್ನ ಯಹೂದಿ ರಾಷ್ಟ್ರವನ್ನಾಗಿ ಘೋಷಿಸಿಕೊಳ್ತು. ನಂತರ ಒಂದೊಂದೇ ದೇಶಗಳು ಆ ಪುಟ್ಟ ರಾಷ್ಟ್ರಕ್ಕೆ ದೇಶದ ಸ್ಥಾನಮಾನವನ್ನ ನೀಡ್ತಾ ಹೋದ್ವು. ಮೀರ್​ ಡಗಾನ್​​ ತನ್ನ IDF ದಿನಗಳಲ್ಲಿ ತನ್ನ ದೈರ್ಯಕ್ಕೆ ಹೆಸರುವಾಸಿಯಾಗಿದ್ದಂಥ ಸೈನಿಕ. 1950 & 60 ರ ಕಾಲಮಾನದಲ್ಲಿ ಸಿರಿಯಾ ಲೆಬೆನಾನ್​​ನಲ್ಲಂತೂ ದಿನಕ್ಕೊಂದು ಉಗ್ರ ಸಂಘಟನೆಗಳು ಜನ್ಮ ತಾಳುತ್ತಿದ್ದವು.. ಅಂತಹ ಸೂಕ್ಷ ಗಡಿ ಭಾಗದಲ್ಲಿ ಡಗಾನ್​​​ ಕೆಲಸ ಮಾಡ್ತಾನೆ.. ಪ್ಯಾಲೆಸ್ತೀನ್​​, ಗಾಝಾ ಸಂಘರ್ಷ ಹಾಗೂ ಇಸ್ರೇಲ್​​ ಅಸ್ಥಿತ್ವವನ್ನ ಅಳಿಸೋ ಪ್ರಯತ್ನದಲ್ಲಿದ್ದ ಇನ್ನಷ್ಟು ಎಕ್ಸ್‌ಟ್ರಿಮಿಸ್ಟ್​​​ ಸಂಘಟನೆಗಳನ್ನೆಲ್ಲ ಎದುರು ಹಾಕಿಕೊಂಡು ತನ್ನ ದೇಶಕ್ಕಾಗಿ ಡಗಾನ್​​​ ಬದುಕಿದ್ದ.. 

ಡಗಾನ್ ಚಾಣಾಕ್ಷ ‘ಮೊಸಾದ್’ ಮುಖ್ಯಸ್ಥನಾಗಿದ್ದು ಹೇಗೆ? 
ಮೀರ್​​ ಡಗಾನ್​​ ಅಲಿಯಾಸ್​​ ‘ಕಿಂಗ್​​ ಆಫ್​​ ಶಾಡೋಸ್​​’ ತನ್ನ ಜೀವನದ ಒಂದು ಕಥೆಯನ್ನ ಎಂದಿಗೂ ನೆನಪಿಸಿಕೊಳ್ತಿದ್ರು. 2002ರ ಸಮಯ ಅದು.. ದಿಡೀರ್​​​ ಮಧ್ಯರಾತ್ರಿಯಲ್ಲಿ ಡಗಾನ್​​ ಫೋನ್‌ ರಿಂಗ್ ಆಗಿತ್ತು. ಆ ಕಡೆಯಿಂದ ‘ಹೆಲೋ ಮೈ ಫ್ರೆಂಡ್’​​ ಅನ್ನೋ ಮಾತು ಡಗಾನ್​​ರನ್ನ ಮತ್ತೆ ತನ್ನ IDF ದಿನಗಳಿಗೆ ಕರೆದೊಯ್ಯುತ್ತೆ.. ಆ ಧ್ವನಿಯ ಹೆಸರೇ ಏರಿಯಲ್​​ ಶೆರಾನ್..​​​ ಇಸ್ರೇಲ್​​​ನ 11ನೇ ಪ್ರಧಾನಿ.. ಡಗಾನ್​​​ ಹಾಗೂ ಶೆರಾನ್​​ ಇಬ್ಬರೂ ಸಹ IDFನಲ್ಲಿದ್ದಾಗ ಆತ್ಮೀಯರು.. ಒಟ್ಟಿಗೆ ಸೈನಿಕರಾಗಿದ್ದವರು.. ಆದ್ರೆ ಆ ರಾತ್ರಿ ಬಂದಿದ್ದ ಕರೆಯ ಉದ್ದೇಶವೇ ಬೇರೆ ಇತ್ತು.. ಆ ಕಡೆಯಿಂದ ಶೆರಾನ್​​, I WANT YOU TO BE  CHIEF OF MOSSAD (ನೀನು ಮೊಸಾದ್ ಮುಖ್ಯಸ್ಥನಾಗಬೇಕೆಂದು ನಾನು ಬಯಸುತ್ತೇನೆ) ಅಂತ ಹೇಳಿದ್ರು. ಆ ಅನಿರೀಕ್ಷಿತ ಪ್ರಶ್ನೆಗೆ ಡಗಾನ್​​ ಉತ್ತರಿಸಿದ್ದು WHY ME? (ನಾನೇ ಯಾಕೆ?) ಅಂತ.. ಆಗ ಪ್ರಧಾನಿ ಏರಿಯಲ್​​ ಶೆರಾನ್​​, I WANT A MOSSAD CHIEF WHO KEEPS DRAGGER BETWEEN HIS TEETH (ಹಲ್ಲುಗಳ ಮಧ್ಯೆ ಡ್ರ್ಯಾಗರ್‌ ಇಟ್ಟುಕೊಳ್ಳೋನು ಮೊಸಾದ್‌ ಮುಖ್ಯಸ್ಥನಾಗಬೇಕು ಎಂದು ನಾನು ಬಯಸ್ತೀನಿ) ಅಂತ ಹೇಳ್ತಾರೆ.. ಅಂದ್ರೆ ಡಗಾನ್​ ತನ್ನ IDF ದಿನಗಳಲ್ಲಿದ್ದಾಗ ತನ್ನ ಹಲ್ಲುಗಳ ಮಧ್ಯದಲ್ಲಿ ಡ್ರ್ಯಾಗರ್​ ಅನ್ನ ಇಟ್ಟು ಎದುರಾಳಿಗಳ ಎದೆ ಸೀಳುತ್ತಿದ್ದನ್ನ ಶೆರಾನ್​​ ನೆನಪಿಸಿಕೊಂಡಿದ್ರು. 2002 ರಿಂದ 2011ರ ವರೆಗೂ ಡಗಾನ್,​​ ಗುಪ್ತಚರ ಸಂಸ್ಥೆ ಮೊಸಾದ್​​ನ ಡೈರೆಕ್ಟರ್​​​ ಆಗಿ ಕೆಲಸ ನಿರ್ವಹಿಸುತ್ತಾರೆ. ಆ ಕಾಲಮಾನದಲ್ಲಿ ಘಟಿಸಿದ ಎಲ್ಲವೂ ಇಂದು ಗತಕಾಲದ ಇತಿಹಾಸ. ಆ ಸಮಯದಲ್ಲೇ Funerals at Tehran ನಡೆದಿದ್ದು. 
ಡಗಾನ್​​​ 2011ರಲ್ಲಿ ಇರಾನ್​​ನಲ್ಲಿ ನಡೆಸಿದ ಆಪರೇಷನ್​​ಗಳು ಇಂದಿಗೂ ಸ್ಮರಣೀಯ ಹಾಗೂ ಶ್ಲಾಘನೀಯ.. ಬಳಿಕ ಡಗಾನ್​​ ಇಸ್ರೇಲ್​​ನ ಪ್ರಧಾನಿ ಬೆಂಜಮಿನ್​ ನೆತನ್ಯಾಹೂವಿನ ಬಹಳ ದೊಡ್ಡ ಟೀಕಾಕಾರನಾಗಿದ್ರು ಅನ್ನೋದು ಗಮನಾರ್ಹ. 2016ರಲ್ಲಿ ಮೀರ್​​ ಡಗಾನ್​​​ ವಯೋಸಹಜ ಕಾಯಿಲೆಯಿಂದ ತೀರಿಕೊಂಡಾಗ ಇಡೀ ಇಸ್ರೇಲ್​​ ಕಂಬನಿ ಮಿಡಿದಿತ್ತು. ಇಂದಿಗೂ ಆ ಮೀರ್​​ ಡಗಾನ್ ಎಂಬ ಹೆಸರು ಪ್ರಸ್ತುತ.

ಅನುಶ್‌, ನ್ಯೂಸ್‌ಫಸ್ಟ್‌ ಡೆಸ್ಕ್‌

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

MOSSAD EX CHIEF MEIR DAGAN
Advertisment
Advertisment
Advertisment