/newsfirstlive-kannada/media/media_files/2025/11/05/johran-momdani-mayour-2025-11-05-12-27-24.jpg)
ನ್ಯೂಯಾರ್ಕ್ ಮೇಯರ್ ಆಗಿ ಜೋಹ್ರಾನ್ ಮಮ್ದಾನಿ ಆಯ್ಕೆ
ಪ್ರತಿಷ್ಠಿತ ಅಮೆರಿಕಾದ ನ್ಯೂಯಾರ್ಕ್ ನಗರದ ಮೇಯರ್ ಆಗಿ ಭಾರತೀಯ ಅಮೆರಿಕನ್ ಜೋಹ್ರಾನ್ ಮಮ್ದಾನಿ ಆಯ್ಕೆಯಾಗಿದ್ದಾರೆ. ಜೋಹ್ರಾನ್ ಮಮ್ದಾನಿ ತಾಯಿ ಮೀರಾ ನಾಯರ್ ಭಾರತೀಯರು. ಮೀರಾ ನಾಯರ್ ಅವರು ಸಲಾಮ್ ಬಾಂಬೆ ಎಂಬ ಕ್ಲಾಸಿಕ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಡೆಮಾಕ್ರಟಿಕ್ ಪಕ್ಷದಿಂದ ಜೋಹ್ರಾನ್ ಮಮ್ದಾನಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಜೋಹ್ರಾಮ್ ಮಮ್ದಾನಿ ಮೀರಾ ನಾಯರ್ ಮತ್ತು ಮಹಮೂದ್ ಮಮ್ದಾನಿ ಅವರ ಪುತ್ರ. ಜೋಹ್ರಾನ್ ಮಮ್ದಾನಿ ಉಗಾಂಡದಲ್ಲಿ ಹುಟ್ಟಿ, ಅಮೆರಿಕಾದಲ್ಲಿ ಬೆಳೆದಿದ್ದಾರೆ.
ನ್ಯೂಯಾರ್ಕ್ ನ ಮಾಜಿ ಗರ್ವನರ್ ಆಂಡ್ರ್ಯೂ ಕ್ಯುಮೋ ಮತ್ತು ರಿಪಬ್ಲಿಕನ್ ಪಾರ್ಟಿಯ ಕರ್ಟಿಸ್ ಸ್ಲಿವಾ ಅವರನ್ನು ಸೋಲಿಸಿ ಜೋಹ್ರಾನ್ ಮಮ್ದಾನಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಇನ್ನೂ ತಮ್ಮ ಪುತ್ರ ಜೋಹ್ರಾನ್ ಮಮ್ದಾನಿ ನ್ಯೂಯಾರ್ಕ್ ಮೇಯರ್ ಆಗಿ ಆಯ್ಕೆಯಾದ ಬಳಿಕ ತಾಯಿ ಮೀರಾ ನಾಯರ್ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಜೋಹ್ರಾನ್ ಯೂ ಬ್ಯೂಟಿ ಎಂದು ಹಾರ್ಟ್ ಮತ್ತು ಪಟಾಕಿಗಳ ಎಮೋಜಿಯೊಂದಿಗೆ ಪೋಸ್ಟ್ ಮಾಡಿದ್ದಾರೆ.
/filters:format(webp)/newsfirstlive-kannada/media/media_files/2025/11/05/johran-momdani-mayour-02-2025-11-05-12-29-35.jpg)
ತಾಯಿ ಮೀರಾ ನಾಯರ್ ಮತ್ತು ತಂದೆ ಮೊಹಮ್ಮದ್ ಮಮ್ದಾನಿ ಜೊತೆ ಜೋಹ್ರಾನ್ ಮಮ್ದಾನಿ
ಜೋಹ್ರಾನ್ ಮಮ್ದಾನಿ ಎಡಪಂಥೀಯ ಚಿಂತನೆ ಇರುವ ನಾಯಕ. ನ್ಯೂಯಾರ್ಕ್ ನಗರದಲ್ಲಿರುವ ಶ್ರೀಮಂತರಿಂದ ಹೆಚ್ಚಿನ ತೆರಿಗೆ ವಸೂಲಿ ಸಾರ್ವಜನಿಕ ಉಚಿತ ಸಾರಿಗೆ ಸೌಲಭ್ಯ ನೀಡುವುದಾಗಿ ಚುನಾವಣೆಗೂ ಮುನ್ನ ಘೋಷಿಸಿದ್ದರು. ಇವರ ಈ ಭರವಸೆಯನ್ನು ರಿಪಬ್ಲಿಕನ್ ಪಕ್ಷ ತೀವ್ರವಾಗಿ ಆಕ್ಷೇಪಿಸಿತ್ತು. ಈಗ ಜೋಹ್ರಾನ್ ಮಮ್ದಾನಿ ಅವರಿಗೆ ತಮ್ಮ ಭರವಸೆಯನ್ನು ಈಡೇರಿಸಲು ಬೇಕಾದ ಅಧಿಕಾರವನ್ನು ನ್ಯೂಯಾರ್ಕ್ ಜನರು ನೀಡಿದ್ದಾರೆ.
"ಸಾಂಪ್ರದಾಯಿಕ ಜ್ಞಾನವು ನಾನು ಪರಿಪೂರ್ಣ ಅಭ್ಯರ್ಥಿಯಿಂದ ದೂರವಿದ್ದೇನೆ ಎಂದು ನಿಮಗೆ ಹೇಳುತ್ತದೆ. ವಯಸ್ಸಾಗಲು ನಾನು ಎಷ್ಟು ಪ್ರಯತ್ನಿಸಿದರೂ ನಾನು ಚಿಕ್ಕವನು. ನಾನು ಮುಸ್ಲಿಂ. ನಾನು ಪ್ರಜಾಪ್ರಭುತ್ವವಾದಿ ಸಮಾಜವಾದಿ. ಎಲ್ಲಕ್ಕಿಂತ ಹೆಚ್ಚಾಗಿ, ನಾನು ಇದಕ್ಕೆ ಕ್ಷಮೆಯಾಚಿಸಲು ನಿರಾಕರಿಸುತ್ತೇನೆ" ಎಂದು ಮಮ್ದಾನಿ ತಮ್ಮ ವಿಜಯೋತ್ಸವದ ಪಾರ್ಟಿಯಲ್ಲಿ ಘೋಷಿಸಿದರು.
"ನ್ಯೂಯಾರ್ಕ್, ಇಂದು ರಾತ್ರಿ ನೀವು ಬದಲಾವಣೆಗಾಗಿ ಜನಾದೇಶವನ್ನು ನೀಡಿದ್ದೀರಿ" ಎಂದು ಅವರು ಹೇಳಿದರು, "ಪ್ರತಿದಿನ ಬೆಳಿಗ್ಗೆ ಒಂದೇ ಉದ್ದೇಶದಿಂದ ಎಚ್ಚರಗೊಳ್ಳುತ್ತೇನೆ. ಈ ನಗರವನ್ನು ಹಿಂದಿನ ದಿನಕ್ಕಿಂತ ಉತ್ತಮವಾಗಿಸಲು ಪ್ರಯತ್ನಿಸುತ್ತೇನೆ " ಎಂದು ಜೋಹ್ರಾನ್ ಮಮ್ದಾನಿ ಪ್ರತಿಜ್ಞೆ ಮಾಡಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us