/newsfirstlive-kannada/media/media_files/2025/11/20/indian-murdered-in-usa-2025-11-20-18-41-32.jpg)
ಹತ್ಯೆಯಾದ ಶಶಿಕಲಾ ಹಾಗೂ ಆರೋಪಿ ನಜೀರ್ ಹಮೀದ್
ವಿಜಯವಾಡದ 38 ವರ್ಷದ ಟೆಕ್ಕಿ ಶಶಿಕಲಾ ನರ ಮತ್ತು ಅವರ ಆರು ವರ್ಷದ ಮಗ ಅನೀಶ್ ನನ್ನು ನ್ಯೂಜೆರ್ಸಿಯ ಅಪಾರ್ಟ್‌ಮೆಂಟ್‌ನಲ್ಲಿ ಇರಿದು ಕೊಂದ ಎಂಟು ವರ್ಷಗಳ ನಂತರ, ಅಮೆರಿಕದ ಅಧಿಕಾರಿಗಳು ಭಾರತೀಯ ಪ್ರಜೆ ನಜೀರ್ ಹಮೀದ್ ವಿರುದ್ಧ ಆರೋಪಗಳನ್ನು ದಾಖಲಿಸಿದ್ದಾರೆ. ಡಬಲ್ ಮರ್ಡರ್ ಮಾಡಿದ ಆರೋಪದ ಮೇಲೆ ಭಾರತಕ್ಕೆ ಪಲಾಯನ ಮಾಡಿದ ಹಮೀದ್‌ನನ್ನು ಹಸ್ತಾಂತರಿಸುವಂತೆ ನ್ಯೂಜೆರ್ಸಿಯ ಬರ್ಲಿಂಗ್ಟನ್ ಕೌಂಟಿ ಪ್ರಾಸಿಕ್ಯೂಟರ್ ಹಾಗೂ ಟ್ರಂಪ್ ಆಡಳಿತವು ಭಾರತ ಸರ್ಕಾರವನ್ನು ಕೋರಿದ್ದಾರೆ.
ಚೆನ್ನೈನಲ್ಲಿ ಕಾಗ್ನಿಜೆಂಟ್ ಟೆಕ್ನಾಲಜೀಸ್ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಹಮೀದ್ ಬಳಸಿದ್ದ ಕೆಲಸದ ಲ್ಯಾಪ್‌ಟಾಪ್‌ನ ಡಿಎನ್‌ಎ, ಅಪರಾಧ ಸ್ಥಳದಲ್ಲಿ ದೊರೆತ ರಕ್ತಕ್ಕೆ ಹೊಂದಿಕೆಯಾಗಿದೆ.
ಕೆಲಸದ ವೀಸಾದ ಮೇಲೆ ಅಮೆರಿಕದಲ್ಲಿದ್ದ ಹಮೀದ್, ನ್ಯೂಜೆರ್ಸಿ ಮೂಲದ ಕಂಪನಿಯಾದ ಕಾಗ್ನಿಜೆಂಟ್ ಟೆಕ್ನಾಲಜೀಸ್ ನಲ್ಲಿ ಶಶಿಕಲಾ ಪತಿಯ ಸಹೋದ್ಯೋಗಿಯಾಗಿದ್ದ. ಅದೇ ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ವಾಸಿಸುತ್ತಿದ್ದರು ಎಂದು ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ.
ಅಮೆರಿಕಾದ ಪ್ರಾಸಿಕ್ಯೂಟರ್ ಕಚೇರಿಯು ನಜೀರ್ ಹಮೀದ್‌ನ ಡಿಎನ್ಎ ಸ್ಯಾಂಪಲ್ ಅನ್ನು ನೀಡುವಂತೆ ಕೇಳಿದ್ದರು. ಆದರೇ, ನಜೀರ್ ಹಮೀದ್ ತನ್ನ ಡಿಎನ್‌ಎ ಸ್ಯಾಂಪಲ್ ನೀಡಲು ನಿರಾಕರಿಸಿದ್ದ.
/filters:format(webp)/newsfirstlive-kannada/media/media_files/2025/11/20/indian-murdered-in-usa-02-2025-11-20-18-43-35.jpg)
"ಡಿಎನ್‌ಎ ಮಾದರಿಯನ್ನು ನೀಡುವ ಬಗ್ಗೆ ನಜೀರ್ ಅವರನ್ನು ಸಂಪರ್ಕಿಸಲು ನಾವು ಭಾರತದಲ್ಲಿನ ನಮ್ಮ ಫೆಡರಲ್ ಪಾಲುದಾರರು ಮತ್ತು ಅಧಿಕಾರಿಗಳೊಂದಿಗೆ ಕೆಲಸ ಮಾಡಿದ್ದೇವೆ. ನಜೀರ್ ಹಮೀದ್ ಆ ವಿನಂತಿಯನ್ನು ನಿರಾಕರಿಸಿದ್ದರು" ಎಂದು ಬರ್ಲಿಂಗ್ಟನ್ ಕೌಂಟಿ ಪ್ರಾಸಿಕ್ಯೂಟರ್ ಕಚೇರಿಯ ಲೆಫ್ಟಿನೆಂಟ್ ಬ್ರಿಯಾನ್ ಕನ್ನಿಂಗ್ಹ್ಯಾಮ್ ಹೇಳಿರುವುದಾಗಿ ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
ಆದಾಗ್ಯೂ, ತನಿಖಾಧಿಕಾರಿಗಳು ಡಿಎನ್‌ಎ ಮಾದರಿಯನ್ನು ಪಡೆಯಲು ನಿರ್ಧರಿಸಿದ್ದರು ಎಂದು ಹೇಳಿದರು.
2024 ರಲ್ಲಿ ಹಮೀದ್ ಭಾರತದಲ್ಲಿ ಕೆಲಸ ಮಾಡುತ್ತಿದ್ದ ಕಂಪನಿಯು ಡಿಎನ್‌ಎ ಪುರಾವೆಗಳನ್ನು ಸಂಗ್ರಹಿಸಲು ತನ್ನ ಕಂಪನಿ ನೀಡಿದ ಲ್ಯಾಪ್‌ಟಾಪ್ ಅನ್ನು ಕಳುಹಿಸುವಂತೆ ಕೋರಿ ನ್ಯಾಯಾಲಯದ ಆದೇಶವನ್ನು ಪಡೆದರು ಎಂದು ಸಿಬಿಎಸ್ ವರದಿ ಮಾಡಿದೆ.
ಬಳಿಕ ನಜೀರ್ ಹಮೀದ್ ಕೆಲಸ ಮಾಡುತ್ತಿದ್ದ ಕಾಗ್ನಿಜೆಂಟ್ ಟೆಕ್ನಾಲಜೀಸ್ ಕಂಪನಿಯು ನಜೀರ್ ಹಮೀದ್ ಬಳಸುತ್ತಿದ್ದ ಕಂಪನಿಯ ಲ್ಯಾಪ್ ಟಾಪ್ ಅನ್ನು ಆತನಿಂದ ವಾಪಸ್ ಪಡೆದು , ಅಮೆರಿಕಾದ ಪೊಲೀಸ್ ಅಧಿಕಾರಿಗಳಿಗೆ ನೀಡಿದೆ. ಆ ಲ್ಯಾಪ್ ಟಾಪ್ ಅನ್ನು ಪರಿಶೀಲಿಸಿದಾಗ, ಅದರಲ್ಲಿ ನಜೀರ್ ಹಮೀದ್ ಡಿಎನ್‌ಎ ಸ್ಯಾಂಪಲ್ ಸಂಗ್ರಹಿಸಲು ಸಾಧ್ಯವಾಗಿದೆ. ಲ್ಯಾಪ್ ಟಾಪ್ ನಿಂದ ಸಂಗ್ರಹಿಸಿದ ಡಿಎನ್ಎ ಸ್ಯಾಂಪಲ್ ಗೂ ಅಮೆರಿಕಾದಲ್ಲಿ ಡಬಲ್ ಮರ್ಡರ್ ನಡೆದ ಸ್ಥಳದಲ್ಲಿ ಪತ್ತೆಯಾಗಿದ್ದ ಬೇರೆ ರಕ್ತದ ಡಿಎನ್‌ಎ ಸ್ಯಾಂಪಲ್ ಗೂ ಹೊಂದಾಣಿಕೆಯಾಗಿದೆ. ಹೀಗಾಗಿ ನಜೀರ್ ಹಮೀದ್ ನೇ ಕೊಲೆಗಾರ ಎಂಬ ತೀರ್ಮಾನಕ್ಕೆ ಅಮೆರಿಕಾದ ಪೊಲೀಸ್ ಅಧಿಕಾರಿಗಳು ಬಂದಿದ್ದಾರೆ.
ಈಗ ಭಾರತದಲ್ಲಿರುವ ನಜೀರ್ ಹಮೀದ್ ನನ್ನು ಅಮೆರಿಕಾಕ್ಕೆ ಗಡೀಪಾರು ಮಾಡುವಂತೆ ಅಮೆರಿಕಾವು, ಭಾರತ ಸರ್ಕಾರವನ್ನು ಒತ್ತಾಯಿಸಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us