/newsfirstlive-kannada/media/media_files/2025/12/24/himanmshi-khuranna-murder-in-canada-2025-12-24-12-44-33.jpg)
ಕೆನಡಾದಲ್ಲಿ ಹಿಮಾಂಶಿ ಖುರಾನಾ ಹತ್ಯೆಗೈದ ಅಬ್ದುಲ್ ಗಫೂರಿ
ಕೆನಡಾದ ಟೋರೊಂಟೋದಲ್ಲಿ 30 ವರ್ಷದ ಭಾರತೀಯ ಮಹಿಳೆಯನ್ನು ಹತ್ಯೆ ಮಾಡಲಾಗಿದೆ. ಹಿಮಾಂಶಿ ಖುರಾನಾ ಎಂಬಾಕೆಯನ್ನು ಟೊರೊಂಟೋದಲ್ಲಿ ಹತ್ಯೆ ಮಾಡಲಾಗಿದೆ. ಹಿಮಾಂಶಿ ಖುರಾನಾಳನ್ನು ಆಕೆಯ ಆಪ್ತನಾಗಿದ್ದ 32 ವರ್ಷದ ಅಬ್ದುಲ್ ಗಫೂರಿ ಎಂಬಾತನೇ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಕೆನಡಾದ ಪೊಲೀಸರು ಆರೋಪಿ ಅಬ್ದುಲ್ ಗಫೂರಿಗಾಗಿ ಹುಡುಕಾಟ ನಡೆಸಿದ್ದಾರೆ. ಅಬ್ದುಲ್ ಗಪೂರಿ ಬಂಧನಕ್ಕಾಗಿ ದೇಶಾದ್ಯಂತ ಪೊಲೀಸರು ವಾರಂಟ್ ಹೊರಡಿಸಿದ್ದಾರೆ.
ಶುಕ್ರವಾರ ರಾತ್ರಿ ಸುಮಾರು 10:40 ರ ಸುಮಾರಿಗೆ ಸ್ಟ್ರಾಚನ್ ಅವೆನ್ಯೂ ಮತ್ತು ವೆಲ್ಲಿಂಗ್ಟನ್ ಸ್ಟ್ರೀಟ್ W ಪ್ರದೇಶದಲ್ಲಿ ಕಾಣೆಯಾದ ವ್ಯಕ್ತಿ ಅಬ್ದುಲ್ ಗಫೂರಿಯ ವರದಿಗೆ ಪ್ರತಿಕ್ರಿಯಿಸಿ ತನಿಖೆ ಆರಂಭಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ, ಬೆಳಿಗ್ಗೆ 6:30 ರ ಸುಮಾರಿಗೆ, "ಅಧಿಕಾರಿಗಳು ಕಾಣೆಯಾದ ಮಹಿಳೆಯ ಮೃತ ದೇಹವನ್ನು ಮನೆಯೊಳಗೆ ಪತ್ತೆ ಮಾಡಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ. ಸಾವನ್ನು ಕೊಲೆ ಎಂದು ವರ್ಗೀಕರಿಸಲಾಗಿದೆ.
‘ಪರಿಣಾಮವಾಗಿ, ಪೊಲೀಸರ ನರಹತ್ಯೆ ಘಟಕವು ತನಿಖೆಯ ಉಸ್ತುವಾರಿ ವಹಿಸಿಕೊಂಡಿತು. ಕೊಲೆಯಾದ ಮಹಿಳೆ ಹಾಗೂ ಶಂಕಿತ ಆರೋಪಿ ಪರಸ್ಪರ ಪರಿಚಿತರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಕೆನಡಾ ಪೊಲೀಸರು ಅಬ್ದುಲ್ ಗಫೂರಿ ಮತ್ತು ಹಿಮಾಂಶಿ ಖುರಾನಾ ಪೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಬೇರೆ ಯಾವುದೇ ವಿವರಗಳನ್ನು ನೀಡಲಾಗಿಲ್ಲ. CP24 ಸುದ್ದಿಯ ಪ್ರಕಾರ, ಗಫೂರಿ ಮತ್ತು ಖುರಾನಾ "ಆತ್ಮೀಯ ಸಂಗಾತಿ ಸಂಬಂಧ"ದಲ್ಲಿದ್ದರು.
"ನಾವು ಶಂಕಿತ ವ್ಯಕ್ತಿಯ ಚಿತ್ರವನ್ನು ಬಿಡುಗಡೆ ಮಾಡಿದ್ದೇವೆ, ಮತ್ತು ಅದು ಹೊರಗೆ ಇದೆ ಮತ್ತು ನಾವು ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದೇವೆ; ಈ ವ್ಯಕ್ತಿ ಎಲ್ಲಿದ್ದಾನೆಂದು ಯಾರಿಗಾದರೂ ತಿಳಿದಿದ್ದರೆ, ದಯವಿಟ್ಟು ಪೊಲೀಸರಿಗೆ ಕರೆ ಮಾಡಿ" ಎಂದು ಪೊಲೀಸ್ ವಕ್ತಾರರನ್ನು ಉಲ್ಲೇಖಿಸಿ ವರದಿ ತಿಳಿಸಿದೆ.
/filters:format(webp)/newsfirstlive-kannada/media/media_files/2025/12/24/himanmshi-khuranna-murder-in-canada-2-2025-12-24-12-47-56.jpg)
ಭಾರತೀಯ ರಾಯಭಾರ ಕಚೇರಿಯ ಪ್ರತಿಕ್ರಿಯೆಗಳು
ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಹಿಮಾಂಶಿ ಖುರಾನಾ ಅವರ ಸಾವಿನ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ ಎಂದು ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us