Advertisment

ಇರಾನ್ 30 ತೈಲ ಡಿಪೋ ಮೇಲೆ ಇಸ್ರೇಲ್ ದಾಳಿ: ಮೊದಲ ಭಾರಿಗೆ ಇಸ್ರೇಲ್-ಅಮೆರಿಕಾ ಮಧ್ಯೆ ಭಿನ್ನಾಭಿಪ್ರಾಯ

ಇಸ್ರೇಲ್ ಸೇನೆಯು ಇರಾನ್‌ನ 30 ತೈಲ ಡಿಪೋಗಳ ಮೇಲೆ ದಾಳಿ ಮಾಡಿದೆ. ಇದರಿಂದ ತೈಲ ಡಿಪೋಗಳಿಗೆ ಬೆಂಕಿ ಹೊತ್ತಿಕೊಂಡು ಉರಿದಿದೆ. ಇರಾನ್ ರಾಜಧಾನಿ ಟೆಹ್ರಾನ್ ನ 4 ತೈಲ ಡಿಪೋ ಸೇರಿದಂತೆ ವಿವಿಧೆಡೆ ಇರುವ 30 ತೈಲ ಡಿಪೋಗಳು ಹೊತ್ತಿ ಉರಿದಿವೆ. ಇದು ಅಮೆರಿಕಾದ ಅಸಮಾಧಾನಕ್ಕೆ ಕಾರಣವಾಗಿದೆ.

author-image
Chandramohan
Fire at oil depot at iran
Advertisment

ಇಸ್ರೇಲ್ ನಿನ್ನೆ ಮತ್ತು ಇಂದು ಇರಾನ್ ದೇಶದ 30 ಕ್ಕೂ ಹೆಚ್ಚು ತೈಲ ಡಿಪೋಗಳ ಮೇಲೆ ದಾಳಿ ನಡೆಸಿದೆ. ಇದರಿಂದಾಗಿ ರಾಜಧಾನಿ ಟೆಹ್ರಾನ್ ಸೇರಿದಂತೆ ಬೇರೆ ಬೇರೆ ನಗರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ತೈಲ ಡಿಪೋಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ. ರಸ್ತೆಗೆ ಕಚ್ಚಾತೈಲ ಹರಿದು ರಸ್ತೆಗಳಲ್ಲೂ ಬೆಂಕಿ ಹೊತ್ತಿಕೊಂಡು ಉರಿದಿದೆ. ತೈಲ ಡಿಪೋಗಳಿಗೆ ಹೊತ್ತಿಕೊಂಡ ಬೆಂಕಿಯು  ಆಗಸದೆತ್ತರಕ್ಕೆ ವ್ಯಾಪಿಸಿದೆ. ರಾತ್ರಿ ವೇಳೆಯೂ ಹಗಲು ಹೊತ್ತಿನ ಅನುಭವ  ಆಗುತ್ತಿದೆ. ಹಗಲು ಹೊತ್ತಿನಂತೆ ಬೆಳಕು ಕಾಣಿಸಿದೆ ಎಂದು ಟೆಹ್ರಾನ್ ಜನರು ಹೇಳಿದ್ದಾರೆ. 
ಈ ಭಾರಿ ಬೆಂಕಿಯಿಂದ ದಟ್ಟವಾದ ಹೊಗೆ ಆವರಿಸಿತ್ತು. ಈ ಭಾರಿ ಬೆಂಕಿಯು ಇರಾನ್ ನಲ್ಲಿ ನಾಲ್ವರ ಜೀವವನ್ನು ಬಲಿ ತೆಗೆದುಕೊಂಡಿದೆ.  ತೈಲ ಡಿಪೋಗಳಿಗೆ ಬೆಂಕಿ ಹೊತ್ತಿಕೊಂಡ ದೃಶ್ಯ ಇಲ್ಲಿದೆ ನೋಡಿ. 

Advertisment




ಇಸ್ರೇಲ್ ನಿಂದ ಧೀಡೀರನೇ ತೈಲ ಡಿಪೋಗಳನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಿದ್ದು, ಮಿತ್ರ ರಾಷ್ಟ್ರಗಳಾದ ಅಮೆರಿಕಾ, ಇಸ್ರೇಲ್ ಮಧ್ಯೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. 
ಇರಾನ್ ಸೇನೆಯು ತೈಲ ಡಿಪೋಗಳನ್ನು ಬಳಸಿಕೊಂಡು ಮಿಸೈಲ್ ಗಳನ್ನು ಲಾಂಚ್ ಮಾಡಿ ದಾಳಿ ನಡೆಸುತ್ತಿತ್ತು. ಹೀಗಾಗಿ ತೈಲ ಡಿಪೋಗಳ ಮೇಲೆ ದಾಳಿ ನಡೆಸಿದ್ದೇವೆ ಎಂದು ಇಸ್ರೇಲ್, ತನ್ನ ಮಿತ್ರ ರಾಷ್ಟ್ರ ಅಮೆರಿಕಾಗೆ ಹೇಳಿದೆ. 
ಆದರೇ, ತೈಲ ಡಿಪೋಗಳ ಮೇಲಿನ ದಾಳಿಯು ಅಮೆರಿಕಾ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಆಗಿದೆ. 
ದೊಡ್ಡ ಮಟ್ಟದಲ್ಲಿ ತೈಲ ಡಿಪೋಗಳ ಮೇಲಿನ ದಾಳಿಯಿಂದ ಅಮೆರಿಕಾ ಸೇನೆಯು ಅಚ್ಚರಿಗೊಳಗಾಗಿದೆ. ಇದು ಒಳ್ಳೆಯ ಐಡಿಯಾ ಎಂದು ನಮಗೆ ಅನ್ನಿಸುವುದಿಲ್ಲ ಎಂದು ಅಮೆರಿಕಾದ ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ.  ಆದರೇ, ಇದಕ್ಕೆ ಸಂಬಂಧಪಟ್ಟಂತೆ, ಅಮೆರಿಕಾದ ಶ್ವೇತ ಭವನ ಇಲ್ಲವೇ ಇಸ್ರೇಲ್ ರಕ್ಷಣಾ ಇಲಾಖೆಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 
ಇರಾನ್ ರಾಜಧಾನಿ ಟೆಹ್ರಾನ್ ಹಾಗೂ ಸುತ್ತಮುತ್ತ ಇರುವ ಮೂರು ತೈಲ ಡಿಪೋಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ. ಕಂಟ್ರೋಲ್ ಮಾಡಲಾಗದ ಮಟ್ಟಕ್ಕೆ ಬೆಂಕಿಯುಂಡೆಗಳು ವ್ಯಾಪಿಸಿದ್ದವು. 
ಇನ್ನೂ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ  110 ಡಾಲರ್ ನಿಂದ 114 ಡಾಲರ್ ವರೆಗೂ ಏರಿಕೆಯಾಗಿದೆ. ಹೊರ್ಮುಜ್ ಜಲಸಂಧಿಯ ಮೂಲಕ ಕಚ್ಚಾತೈಲ ಸಾಗಾಟಕ್ಕೆ ಇರಾನ್ ಅವಕಾಶ ಕೊಡುತ್ತಿಲ್ಲ. ಇದರಿಂದ ಗಲ್ಪ್ ರಾಷ್ಟ್ರಗಳಿಂದ ವಿದೇಶಗಳಿಗೆ ತೈಲ ರಫ್ತು ಸ್ಥಗಿತವಾಗಿದೆ.  ಹೀಗಾಗಿ ಕಚ್ಚಾತೈಲದ  ಬೆಲೆ  ಏರಿಕೆಯಾಗಿದೆ. 2020ರ ಬಳಿಕ ಇದೇ ಮೊದಲ ಭಾರಿಗೆ  ಪ್ರತಿ ಬ್ಯಾರೆಲ್‌ಗೆ 114 ಡಾಲರ್ ಗೆ ಏರಿಕೆಯಾಗಿದೆ. 
ಕಚ್ಚಾತೈಲದ ಬೆಲೆ ಏರಿಕೆಯಿಂದ ಭಾರತದ ಆರ್ಥಿಕತೆಯ ಬೆಳವಣಿಗೆಗೆ ಹಿನ್ನಡೆಯಾಗುತ್ತದೆ. ಜಿಡಿಪಿ ಬೆಳವಣಿಗೆಯಲ್ಲಿ ಕುಸಿತವಾಗುತ್ತೆ. ವಿತ್ತೀಯ ಕೊರತೆಯು ಹೆಚ್ಚಾಗುತ್ತೆ. ಇದರಿಂದಾಗಿಯೇ ಇಂದು ಷೇರುಪೇಟೆಯಲ್ಲಿ ಭಾರಿ ಕುಸಿತ ಕಂಡು ಬಂದಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

israel and iran war israel attacks iran oil depot
Advertisment
Advertisment
Advertisment