Advertisment

ಇಸ್ರೇಲ್ ನಿಂದ ಟೆಹ್ರಾನ್ ಮೇಲೆ ಮತ್ತೆ ಏರ್ ಸ್ಟ್ರೈಕ್‌: ತನ್ನ ನಿಯಂತ್ರಣದ ಇರಾನ್‌ ಸರ್ಕಾರ ಪ್ರತಿಷ್ಠಾಪನೆಗೆ ಟ್ರಂಪ್ ಪಟ್ಟು

ಇಸ್ರೇಲ್ ಇಂದು ಕೂಡ ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಮತ್ತೆ ಏರ್ ಸ್ಟ್ರೈಕ್ ಮುಂದುವರಿಸಿದೆ. ಕಳೆದ 36 ಗಂಟೆಯಲ್ಲಿ 3 ಸಾವಿರಕ್ಕೂ ಹೆಚ್ಚು ಟಾರ್ಗೆಟ್ ಮೇಲೆ ದಾಳಿ ಮಾಡಿ ಇರಾನ್ ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿವೆ. ಅಮೆರಿಕಾ ಕೂಡ ಅತ್ಯಾಧುನಿಕ ಶಸ್ತ್ರಾಸ್ತ್ರ ಬಳಕೆ ಮಾಡುತ್ತಿದೆ.

author-image
Chandramohan
israel attacks iran capital city tehran
Advertisment


ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಂಡಿದೆ. ಇಸ್ರೇಲ್​, ಅಮೆರಿಕ ಸೇರಿ ಅಕ್ಷರಶಃ ಇರಾನ್​​ನ್ನ ಧ್ವಂಸ ಮಾಡ್ತಿವೆ. 36 ಗಂಟೆಯಲ್ಲಿ 3,000ಕ್ಕೂ ಹೆಚ್ಚು ಟಾರ್ಗೆಟ್ ಮೇಲೆ ದಾಳಿ ಮಾಡಿ ಅಲ್ಲೋಲ-ಕಲ್ಲೋಲವನ್ನೇ ಸೃಷ್ಟಿಸಿವೆ. ಎರಡೂ ದೇಶಗಳು ಅತ್ಯಾಧುನಿಕ ಶಸ್ತ್ರಾಸ್ತ್ರ ಬಳಸಿ ಬೃಹತ್ ವಾಯುದಾಳಿ ಮಾಡಿವೆ. ಇದು ಮತ್ತೊಂದು ಮಹಾಯುದ್ಧದ ಭೀತಿ ಸೃಷ್ಟಿಸಿದೆ. 
ಧಗ ಧಗ.. ಇಸ್ರೇಲ್, ಅಮೆರಿಕ ವರ್ಸಸ್​ ಇರಾನ್ ಯುದ್ಧದಿಂದ ಮಧ್ಯಪ್ರಾಚ್ಯ ಧಗಧಗಿಸುತ್ತಿದೆ. ಎಲ್ಲಿ ನೋಡಿದ್ರೂ ಮದ್ದುಗುಂಡುಗಳ ಮಳೆಯಾಗ್ತಿದ್ದು ನಗರಗಳೇ ಉಡೀಸ್ ಆಗ್ತಿವೆ. ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ ಬಳಿಕ ಇಸ್ರೇಲ್ ದಾಳಿಯನ್ನು ಕಡಿಮೆ ಮಾಡುತ್ತೆ ಅನ್ನೋವಾಗ್ಲೇ ಯಹೂದಿ ರಾಷ್ಟ್ರ ಎಲ್ಲರಿಗೂ ಶಾಕ್ ಕೊಟ್ಟಿದೆ. ಇಡೀ ಇರಾನ್​ನ್ನೇ ಭೂಪಟದಿಂದ ಕಣ್ಮರೆ ಮಾಡುವಂತೆ ದಾಳಿ ಮಾಡ್ತಿದೆ.
ಇಸ್ರೇಲ್​ನಿಂದ ತೆಹ್ರಾನ್ ಮೇಲೆ ದೊಡ್ಡ ಮಟ್ಟದ ಏರ್​ಸ್ಟ್ರೈಕ್
ಇರಾನ್​ ವಿರುದ್ಧ ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ನಡೆಸುತ್ತಿರುವ ಯುದ್ಧ ದಿನೇ ದಿನೆ ತೀವ್ರಗೊಳ್ಳುತ್ತಿದೆ. ಸದ್ಯ ಕದನ 8ನೇ ದಿನಕ್ಕೆ ಕಾಲಿಟ್ಟಿದ್ದು ಇದುವರೆಗೆ 1,300ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಎರಡೂ ಕಡೆಯಲ್ಲೂ ಅಪಾರ ನಷ್ಟಕ್ಕೆ ಯುದ್ಧ ಕಾರಣವಾಗಿದ್ದರೂ ತೀವ್ರತೆ ಮಾತ್ರ ಎಳ್ಳಷ್ಟೂ ಕಮ್ಮಿಯಾಗಿಲ್ಲ. ಇರಾನ್ ರಾಜಧಾನಿ ತೆಹ್ರಾನ್​ ಮೇಲೆ ಇಸ್ರೇಲ್ ದೊಡ್ಡಮಟ್ಟದಲ್ಲಿ ವಾಯುದಾಳಿ ಮಾಡಿದೆ. ಸೇನಾ ನೆಲೆಗಳು, ಸರ್ಕಾರಿ ಕಚೇರಿಗಳನ್ನು ಗುರಿಯಾಗಿಸಿ ದಾಳಿ ಮಾಡಿದ ಪರಿಣಾಮ ಕಟ್ಟಡಗಳು ಧಗ ಧಗ ಹೊತ್ತಿ ಉರಿಯುತ್ತಿವೆ. ತೆಹ್ರಾನ್‌ನ ಮೆಹ್ರಾಬಾದ್ ವಿಮಾನ ನಿಲ್ದಾಣದ ಮೇಲೂ ದಾಳಿಯಾಗಿದ್ದು, ಕೆಲ ವಿಮಾನಗಳಿಗೆ ಹಾನಿಯಾಗಿದೆ. ಅಲ್ಲದೇ ಇರಾನ್ ಮೇಲಿನ ದಾಳಿಗಳು ಇಲ್ಲಿಗೆ ನಿಲ್ಲದೇ ಮತ್ತಷ್ಟು ತೀವ್ರವಾಗಲಿವೆ ಅಂತ ಇಸ್ರೇಲ್ ಹಾಗೂ ಅಮೆರಿಕ ಗುಟುರು ಹಾಕಿವೆ.

Advertisment

ಯುದ್ಧದಲ್ಲಿ ಇಸ್ರೇಲ್​ ಹಾಗೂ ಅಮೆರಿಕ ಇರಾನ್​​ನ್ನ ಅಕ್ಷರಶಃ ಧ್ವಂಸ ಮಾಡ್ತಿವೆ. 36 ಗಂಟೆಯಲ್ಲಿ 3,000ಕ್ಕೂ ಹೆಚ್ಚು ಟಾರ್ಗೆಟ್ ಉಡಾಯಿಸಿ ಅಲ್ಲೋಲ-ಕಲ್ಲೋಲವನ್ನೇ ಸೃಷ್ಟಿಸಿವೆ. ಆಪರೇಷನ್ ಎಪಿಕ್ ಫ್ಯೂರಿ ಕಾರ್ಯಚರಣೆಯಲ್ಲಿ ಇರಾನ್​ನ ಹಲವು ನಗರಗಳ ಮೇಲೆ ದಾಳಿಯಾಗ್ತಿದ್ದು ನಗರಗಳು ಹೊತ್ತಿ ಉರಿಯುತ್ತಿವೆ. ಇನ್ನು ಇಆರಾನ್ ಮೇಲೆ ಅತ್ಯಾಧುನಿಕ ಶಸ್ತ್ರಗಳನ್ನ ಬಳಸಿ ಇಸ್ರೇಲ್ ಹಾಗೂ ಅಮೆರಿಕ ದಾಳಿ ಮಾಡ್ತಿರೋದ್ರಿಂದ ಸಾವು-ನೋವು ಹಾಗೂ ಹಾನಿ ಜಾಸ್ತಿಯಾಗಿದೆ.
ಅತ್ಯಾಧುನಿಕ ಶಸ್ತ್ರಗಳ ಬಳಕೆ!
ಅಮೆರಿಕ ಬಳಸಿದ್ದೇನು?
01. 250 GBU-31/32/38 JDAM ಕ್ಷಿಪಣಿಗಳು  
02. 120 ಟೊಮಾಹಾಕ್ ಕ್ಷಿಪಣಿಗಳು
03. 60 AGM-114 ಹೆಲ್‌ಫೈರ್ ಕ್ಷಿಪಣಿಗಳು 
04. 10 GBU-57 ಬೃಹತ್ ಆರ್ಡನೆನ್ಸ್ ಪೆನೆಟ್ರೇಟರ್‌ ಬಳಕೆ
05. 90 ಪ್ಯಾಟ್ರಿಯಾಟ್ PAC-2/PAC-3 ಕ್ಷಿಪಣಿಗಳು
06. PrSMs ಕ್ಷಿಪಣಿಗಳ ಬಳಕೆ​
07. ಟಾಮ್​ಹಾಕ್, ಪ್ಯಾಟ್ರಿಯಾಟ್ಸ್, ಎಫ್ ಸೀರೀಸ್​ ಜೆಟ್​ಗಳು
08. ತಹಾಡ್ ಇಂಟರ್​ಸೆಪ್ಟರ್ಸ್, ಲೂಕಾಸ್ ಡ್ರೋಣ್​ಗಳು
09. B1, B2 ಸ್ಟೆಲ್ತ್​ ಬಾಂಬರ್ಸ್


(250 GBU-31/32/38 JDAM ಕ್ಷಿಪಣಿಗಳನ್ನು ಅಮೆರಿಕ ಇರಾನ್​ ವಿರುದ್ಧ ಬಳಸಿದೆ. 120 ಟೊಮಾಹಾಕ್ ಕ್ಷಿಪಣಿಗಳು, 60 AGM-114 ಹೆಲ್‌ಫೈರ್ ಕ್ಷಿಪಣಿಗಳನ್ನೂ ಕೂಡ ಬಳಸಿ ದಾಳಿ ಮಾಡಿದೆ.  10 GBU-57 ಬೃಹತ್ ಆರ್ಡನೆನ್ಸ್ ಪೆನೆಟ್ರೇಟರ್‌, 90 ಪ್ಯಾಟ್ರಿಯಾಟ್ ಕ್ಷಿಪಣಿಗಳ ಜೊತೆಗೆ ಇದೇ ಮೊದಲ ಬಾರಿಗೆ PrSMs ಕ್ಷಿಪಣಿಗಳನ್ನು ಬಳಸಲಾಗಿದೆ. ಜೊತೆಗೆ ಟಾಮ್​ಹಾಕ್, ಎಫ್ ಸೀರೀಸ್​ ಜೆಟ್​ಗಳು, ತಹಾಡ್ ಇಂಟರ್​ಸೆಪ್ಟರ್ಸ್, ಲೂಕಾಸ್ ಡ್ರೋಣ್​ಗಳು ಮತ್ತು B1, B2 ಸ್ಟೆಲ್ತ್​ ಬಾಂಬರ್ಸ್​ ಸೇರಿ ಅತ್ಯಾಧುನಿಕ ಅಸ್ತ್ರಗಳನ್ನು ಅಮೆರಿಕ ಬಳಸಿ ಇರಾನ್​ನ್ನ ಧ್ವಂಸ ಮಾಡ್ತಿದೆ.)

ಇನ್ನು ನಾವೇನು ಕಮ್ಮಿ ಇಲ್ಲ ಅಂತ ಇಸ್ರೇಲ್ ಕೂಡ ನಾನಾ ಅಸ್ತ್ರಗಳನ್ನು ಬಳಸಿ ಯುದ್ಧ ಮಾಡ್ತಿದೆ. 

Advertisment


ಇಸ್ರೇಲ್​​​ ಬಳಸಿದ್ದೇನು?
01.  280 ಸ್ಪೈಸ್-1000/2000 ಮಾರ್ಗದರ್ಶಿ ಬಾಂಬ್‌ಗಳು
02. ​ 70 ರಾಂಪೇಜ್ ಸೂಪರ್‌ಸಾನಿಕ್ ಕ್ಷಿಪಣಿಗಳು
03. 140 JDAM/ಸ್ಮಾರ್ಟ್ ಬಾಂಬ್ ಕಿಟ್‌ಗಳು
04. 50 ಡೆಲಿಲಾ ಕ್ರೂಸ್/ಲೋಟರಿಂಗ್ ಕ್ಷಿಪಣಿ
05. ಪೇಟ್ರಿಯಾಟ್ PAC-3 ಬಳಕೆ
   280 ಸ್ಪೈಸ್-1000/2000 ಮಾರ್ಗದರ್ಶಿ ಬಾಂಬ್‌ಗಳು,​ 70 ರಾಂಪೇಜ್ ಸೂಪರ್‌ಸಾನಿಕ್ ಕ್ಷಿಪಣಿಗಳನ್ನು ಇಸ್ರೇಲ್ ಸೇನೆ ಇರಾನ್ ವಿರುದ್ಧ ಬಳಸಿದೆ. 140 ಸ್ಮಾರ್ಟ್ ಬಾಂಬ್ ಕಿಟ್‌ಗಳು, 50 ಡೆಲಿಲಾ ಕ್ರೂಸ್ ಅಥವಾ ಲೋಟರಿಂಗ್ ಕ್ಷಿಪಣಿ ಜೊತೆಗೆ ರಕ್ಷಣಾತ್ಮಕ ಉದ್ದೇಶಕ್ಕೆ ಪೇಟ್ರಿಯಾಟ್ PAC-3 ಕೂಡ ಬಳಕೆ ಮಾಡ್ತಿದೆ.)

ಇನ್ನು ಇಸ್ರೇಲ್ ಹಾಗೂ ಅಮೆರಿಕ ದಾಳಿಗೆ ಇರಾನ್ ಕೂಡ ತನ್ನ ಅತ್ಯಾಧುನಿಕ ಅಸ್ತ್ರಗಳನ್ನು ಬಳಸಿ ತಿರುಗೇಟು ಕೊಡ್ತಿದೆ. ಆದ್ರೆ ಯುದ್ಧದ ದಾಹದಲ್ಲಿರುವ ಅಮೆರಿಕ ತನ್ನ ಶಸ್ತ್ರಾಸ್ತ್ರ ಉತ್ಪಾದನೆ ಹೆಚ್ಚಳಕ್ಕೆ ಮುಂದಾಗಿದೆ. ಯುದ್ಧ ಹಿನ್ನೆಲೆ ಅತ್ಯುನ್ನತ ದರ್ಜೆಯ ಶಸ್ತ್ರಾಸ್ತ್ರಗಳ ಉತ್ಪಾದನೆಯನ್ನು 4 ಪಟ್ಟು ಹೆಚ್ಚಿಸುವಂತೆ ಕಂಪನಿಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶಿಸಿದ್ದಾರೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನ ಸಿದ್ದ ಪಡಿಸುತ್ತಿದ್ದು ಹೊಸ ಉತ್ಪಾದನಾ ಘಟಕಗಳನ್ನೂ ನಿರ್ಮಾಣ ಮಾಡ್ತಿದ್ದೇವೆ ಅಂತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು ಯುದ್ಧದ ತೀವ್ರತೆ ಹೆಚ್ಚಾಗುವ ಸುಳಿವು ನೀಡಿದೆ.
ಇನ್ನೂ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಇರಾನ್ ನಲ್ಲಿ ತಮ್ಮ ನಿಯಂತ್ರಣದ ಸರ್ಕಾರ ಪ್ರತಿಷ್ಠಾಪನೆ ಮಾಡುವ ಉದ್ದೇಶ ಹೊಂದಿದ್ದಾರೆ. ವೆನಿಜುವೆಲಾದಲ್ಲಿ ತಮ್ಮ ನಿಯಂತ್ರಣದ ಸರ್ಕಾರ ಪ್ರತಿಷ್ಠಾಪನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ತಂತ್ರವನ್ನು ಈಗ ಇರಾನ್ ನಲ್ಲೂ ಅನುಸರಿಸುವ ಉದ್ದೇಶ ಹೊಂದಿದ್ದಾರೆ. ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ಶ್ವೇತ ಭವನದ ವಕ್ತಾರೆ ಕರೋಲಿನಾ ವೆಲೆಟ್ ಹೇಳಿದ್ದಾರೆ.

israel attacks iran capital city tehran (1)




ಒಟ್ಟಾರೆ ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿರುವ ಯುದ್ಧ ದಿನೇ ದಿನೆ ತೀವ್ರವಾಗ್ತಿದೆ. ಸದ್ಯ ಏನಿದ್ರೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಯುದ್ಧ ಮಾಡಲಾಗ್ತಿದ್ದು ಇದು ಮುಂದುವರೆದ್ರೆ ಯುದ್ಧ ಮತ್ತಷ್ಟು ಗಂಭೀರವಾಗುವುದರಲ್ಲಿ ಸಂಶಯವಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Advertisment
israel attacks iran USA AND IRAN WAR FOR FOUR WEEKS IRAN AND ISRALE WAR
Advertisment
Advertisment
Advertisment