/newsfirstlive-kannada/media/media_files/2025/11/01/jd-vance-and-wife-usha-1-2025-11-01-13-43-14.jpg)
ಅಮೆರಿಕಾದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ , ಪತ್ನಿ ಉಷಾ
ಅಮೆರಿಕಾದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಮೊನ್ನೆಯಷ್ಟೇ ತಮ್ಮ ಪತ್ನಿ ಉಷಾ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುತ್ತಾರೆ. ಉಷಾ ಮತಾಂತರ ಆಗುವುದನ್ನು ನಾನು ಬಯಸುತ್ತಿದ್ದೇನೆ ಎಂದು ಬಹಿರಂಗವಾಗಿ ಹೇಳಿದ್ದರು. ಇದು ಅಮೆರಿಕಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಜೊತೆಗೆ ಜೆ.ಡಿ.ವ್ಯಾನ್ಸ್ ಬಗ್ಗೆ ಟೀಕೆಯೂ ಶುರುವಾಗಿತ್ತು.
ತಮ್ಮ ಹೇಳಿಕೆಯ ಬಗ್ಗೆ ಟೀಕೆ ಶುರುವಾದ ಬಳಿಕ ಜೆ.ಡಿ.ವ್ಯಾನ್ಸ್ ಈಗ ಉಲ್ಟಾ ಹೊಡೆದಿದ್ದಾರೆ. ಪತ್ನಿ ಉಷಾ ಕ್ರಿಶ್ಚಿಯನ್ ಅಲ್ಲ. ಉಷಾಗೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವ ಪ್ಲ್ಯಾನ್ ಇಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಜೆ.ಡಿ.ವ್ಯಾನ್ಸ್ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಹೇಳಿಕೆಗೆ ಟೀಕೆ, ವಿರೋಧ ವ್ಯಕ್ತವಾಗುವುದು ಸರಿಯಲ್ಲ. ಅಂತರ್ ಧರ್ಮೀಯ ಮದುವೆ ಬಗ್ಗೆ ಪ್ರಶ್ನೆ ಎದುರಾಯಿತು. ಅದು ವೈಯಕ್ತಿಕವಾದುದು. ಆದರೇ, ಸಾರ್ವಜನಿಕ ವ್ಯಕ್ತಿಯಾಗಿದ್ದರಿಂದ ಪ್ರಶ್ನೆಯನ್ನು ಉತ್ತರಿಸದೇ ಇರಲು ಸಾಧ್ಯವಿರಲಿಲ್ಲ.
ಇನ್ನೂ ನನ್ನ ಪತ್ನಿಯೇ ಕೆಲ ವರ್ಷಗಳ ಹಿಂದೆ ಕ್ರಿಶ್ಚಿಯನ್ ಧರ್ಮವನ್ನು ಮತ್ತೆ ಪಾಲಿಸಲು, ಅನುಸರಿಸಲು ಹೇಳಿದ್ದರು. ನನ್ನ ಪತ್ನಿ ಕ್ರಿಶ್ಚಿಯನ್ ಅಲ್ಲ. ಆಕೆಗೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವ ಉದ್ದೇಶ ಇಲ್ಲ. ಆದರೇ, ಆಕೆಯನ್ನು ಪ್ರೀತಿಸುವುದನ್ನು, ಬೆಂಬಲಿಸುವುದನ್ನು, ಮಾತನಾಡುವುದನ್ನು ನಾನು ಮುಂದುವರಿಸುತ್ತೇನೆ. ಧರ್ಮ, ನಂಬಿಕೆ ಸೇರಿದಂತೆ ಎಲ್ಲದರ ಬಗ್ಗೆ ನಾನು ಮಾತನಾಡುವುದನ್ನು ಮುಂದುವರಿಸುತ್ತೇನೆ. ಏಕೆಂದರೇ, ಆಕೆ ನನ್ನ ಪತ್ನಿ ಎಂದು ಜೆ.ಡಿ.ವ್ಯಾನ್ಸ್ ಕಳೆದ ರಾತ್ರಿ ಟ್ವೀಟ್ ಮಾಡಿದ್ದಾರೆ.
/filters:format(webp)/newsfirstlive-kannada/media/media_files/2025/11/01/jd-vance-and-wife-usha02-2025-11-01-13-43-42.jpg)
ಇನ್ನೂ ದಿವಂಗತ ಚಾರ್ಲಿ ಕಿರಿಕ್ ಪತ್ನಿ ಎರಿಕಾ, ಜೆ.ಡಿ.ವ್ಯಾನ್ಸ್ ಬಗ್ಗೆ ಆಡಿದ ಮಾತುಗಳು ಕೂಡ ಚರ್ಚೆಗೆ ಕಾರಣವಾಗಿವೆ. ನಾನು ನನ್ನ ಪತಿ ದಿವಂಗತ ಚಾರ್ಲಿ ಕಿರಿಕ್ ರನ್ನು ಬೇರೆಯವರಲ್ಲಿ ನೋಡಲು ಸಾಧ್ಯವಿಲ್ಲ. ಆದರೇ, ಜೆ.ಡಿ.ವ್ಯಾನ್ಸ್ ರಲ್ಲಿ ಚಾರ್ಲಿ ಕಿರಿಕ್ ಅವರ ಸಾಮ್ಯತೆಗಳು ಇವೆ ಎಂದು ಹೇಳಿದ್ದರು. ಇದಾದ ಬಳಿಕ ಜೆ.ಡಿ. ವ್ಯಾನ್ಸ್ ರನ್ನು ಚಾರ್ಲಿ ಕಿರಿಕ್ ಪತ್ನಿ ಎರಿಕಾರನ್ನು ತಬ್ಬಿಕೊಂಡಿದ್ದು ಕೂಡ ಚರ್ಚೆಗೆ ಕಾರಣವಾಗಿತ್ತು. ಜೆ.ಡಿ.ವ್ಯಾನ್ಸ್ , ಉಷಾಗೆ ಡಿವೋರ್ಸ್ ನೀಡುತ್ತಾರೆ. ಪ್ಯಾಕಪ್ ಉಷಾ ಎಂದೆಲ್ಲಾ ಕೆಲವರು ಟ್ವೀಟ್ ಮಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಜೆ.ಡಿ.ವ್ಯಾನ್ಸ್ ಮತ್ತು ಉಷಾ ನಡುವೆ ಡಿವೋರ್ಸ್ ಆಗುತ್ತೆ ಎಂದೆಲ್ಲಾ ಚರ್ಚೆ ಮಾಡಲು ಶುರು ಮಾಡಿದ್ದರು.
/filters:format(webp)/newsfirstlive-kannada/media/media_files/2025/10/31/jd-vance-and-wife-usha-2025-10-31-12-44-14.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us