/newsfirstlive-kannada/media/media_files/2025/10/01/philippines-2025-10-01-15-21-52.jpg)
ಸೆಂಟ್ರಲ್​ ಫಿಲಿಪೈನ್ಸ್​ನಲ್ಲಿ ಸಂಭವಿಸಿದ ಪ್ರಬಲ ಭೂಕಪಂದಿಂದ ಮೃತಪಟ್ಟವರ ಸಂಖ್ಯೆ 69ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಫಿಲಿಪೈನ್ಸ್​ನ ಸೀಬು ನಗರದಲ್ಲಿ ಇರುವ ಆಸ್ಪತ್ರೆಯ ಹೊರಗೆ ನೀಲಿ ಟೆಂಟ್​ಗಳು ಹಾಕಲಾಗಿದ್ದು ಅದರೊಳಗೆ ಮಕ್ಕಳಿಗೆ, ಮಹಿಳೆಯರಿಗೆ, ವಯಸ್ಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನೋವಿನಿಂದ ಮಕ್ಕಳು ಜೋರಾಗಿ ಅಳುತ್ತಿರುವುದು ನೋಡುಗರ ಮನ ಕದಡುತ್ತದೆ. ರಾತ್ರಿ ವೇಳೆ ನಿದ್ದೆಯಲ್ಲಿರುವಾಗ ಭೂಕಂಪ ಸಂಭವಿಸಿದ್ದು ಸಾಕಷ್ಟು ಜನರು ಗಂಭೀರವಾಗಿಯೇ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಸಿಬು ಪ್ರದೇಶದಲ್ಲಿ 6.9 ತೀವ್ರತೆಯ ಭೂಕಂಪವಾಗಿದೆ ಎಂದು ಅಮೆರಿಕದ ಜಿಯೋಲಾಜಿಕಲ್​ ಸರ್ವೆ ಹೇಳಿದೆ. 90,000 ಜನರು ವಾಸವಿರುವ ಸ್ಥಳದಲ್ಲಿ ಇದು ಸಂಭವಿಸಿದ್ದು ಹಲವು ಕಟ್ಟಡಗಳು ಧರೆಗುರುಳಿವೆ. 69 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸುನಾಮಿ ಎಚ್ಚರಿಕೆಯನ್ನೂ ಕೂಡ ನೀಡಲಾಗಿದೆ. ಭೂಕಂಪದ ಹಲವು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಭೂಕಂಪದಿಂದ ಬಿಲ್ಡಿಂಗ್​ಗಳು ಧರೆಗೆ ಉರುಳಿದ್ದು ಅವಶೇಷಗಳಡಿ ಜನರು ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ರಕ್ಷಣಾ ಇಲಾಖೆ ಸಿಬ್ಬಂದಿ ಹುಟುಕಾಟ ನಡೆಸುತ್ತಿದ್ದಾರೆ. ಕೆಲವೊಂದು ಕಡೆ ವಾಹನಗಳ ಸಂಪರ್ಕ ಕಡಿತವಾಗಿದೆ. ಇದರಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಪೊಲೀಸರು, ಶ್ವಾನದಳ, ನಾಗರಿಕತು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ