/newsfirstlive-kannada/media/media_files/2025/10/09/mongolian-falcon-2025-10-09-15-13-11.jpg)
/newsfirstlive-kannada/media/media_files/2025/10/09/mongolian-falcon-1-2025-10-09-15-13-27.jpg)
ರಿಯಾದ್ನಲ್ಲಿ (Riyadh) ನಡೆದ ಅಂತರರಾಷ್ಟ್ರೀಯ ಸೌದಿ ಫಾಲ್ಕನ್ ಮತ್ತು ಬೇಟೆ ಪ್ರದರ್ಶನ 2025 (International Saudi Falcons and Hunting Exhibition 2025) ನಲ್ಲಿ 1.53 ಕೆಜಿ ಚಿನ್ನದ ಬೆಲೆಗೆ (1.53 ಕೋಟಿ ರೂಪಾಯಿಗೆ) ಮಂಗೋಲಿಯನ್ ಫಾಲ್ಕನ್ ಮಾರಾಟವಾಗಿದೆ. ಇಲ್ಲಿಯವರೆಗೆ ಅತ್ಯಂತ ದುಬಾರಿ ಬೆಲೆಗೆ ಸೇಲ್ ಆದ ಮಂಗೋಲಿಯನ್ ಗಿಡುಗ ಇದಾಗಿದೆ.
/newsfirstlive-kannada/media/media_files/2025/10/09/mongolian-falcon-2-2025-10-09-15-13-47.jpg)
ಮಂಗೋಲಿಯನ್ ಫಾಲ್ಕನ್ 6,50,000 ಸೌದಿ ರಿಯಾಲ್ಗಳಿಗೆ (saudi riyal) ಅಂದರೆ ಸುಮಾರು 1.53 ಕೋಟಿ ರೂ.ಗಳಿಗೆ ಮಾರಾಟವಾಗಿದೆ. ಮಂಗೋಲಿಯನ್ ಹದ್ದಿನಲ್ಲಿ 2,000 ಕ್ಕೂ ಹೆಚ್ಚು ಗರಿಗಳಿವೆ. ಅವುಗಳಲ್ಲಿ ಚಿಕ್ಕದಾದ, ಮೃದುವಾದ ರೆಕ್ಕೆಗಳು ಗಾಳಿಯಲ್ಲಿ ಹಾರಾಡುವಾಗ ಹಕ್ಕಿಯ ದೇಹವನ್ನು ಬೆಚ್ಚಗಿಡುತ್ತವೆ.
/newsfirstlive-kannada/media/media_files/2025/10/09/mongolian-falcon-3-2025-10-09-15-14-02.jpg)
ಈ ‘ಐತಿಹಾಸಿಕ ಹರಾಜು’ ಅರಬ್ ಜಗತ್ತಿನ ಗಿಡುಗಗಳ ಮೇಲಿನ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ. ಇದು ಅಲ್ಲಿನ ಸಂಪ್ರದಾಯ ಮತ್ತು ಐಷಾರಾಮಿ ಸಂಗಮದ ಸಂಕೇತವಾಗಿದೆ.
/newsfirstlive-kannada/media/media_files/2025/10/09/mongolian-falcon-4-2025-10-09-15-14-22.jpg)
ಈ ವರ್ಷದ ಪ್ರದರ್ಶನದಲ್ಲಿ ಒಟ್ಟು 2 ಮಂಗೋಲಿಯನ್ ಗಿಡುಗಗಳನ್ನ ಹರಾಜಿಗೆ ಇಡಲಾಗಿತ್ತು. ಮೊದಲನೆಯದು 128,000 ರಿಯಾಲ್ಗಳಿಗೆ ಮಾರಾಟವಾಗಿದೆ. ಎರಡನೆಯದು 650,000 ರಿಯಾಲ್ಗಳಿಗೆ ಮಾರಾಟವಾಗಿದೆ.
/newsfirstlive-kannada/media/media_files/2025/10/09/mongolian-falcon-5-2025-10-09-15-14-41.jpg)
ಈ ವರ್ಷದ ಪ್ರದರ್ಶನವು ಮೊದಲ ಬಾರಿಗೆ ‘ಮಂಗೋಲಿಯನ್ ಫಾಲ್ಕನ್’ ಝೋನ್ ಒಳಗೊಂಡಿತ್ತು, ಇದು ಪೂರ್ವ ಏಷ್ಯಾದ ಅಪರೂಪದ ಫಾಲ್ಕನ್ ಪ್ರಭೇದಗಳನ್ನು ಪ್ರದರ್ಶಿಸಿದೆ.
/newsfirstlive-kannada/media/media_files/2025/10/09/mongolian-falcon-6-2025-10-09-15-14-57.jpg)
ಮಂಗೋಲಿಯನ್ ಫಾಲ್ಕನ್ಗಳು ತಮ್ಮ ಶಕ್ತಿ, ಸಹಿಷ್ಣುತೆ (Hardiness) ಮತ್ತು ತೀಕ್ಷ್ಣ ಬೇಟೆಯಾಡುವ ಸಾಮರ್ಥ್ಯಗಳಿಗೆ ಹೆಸರುವಾಸಿ. ಅವು ಸಾಮಾನ್ಯ ಫಾಲ್ಕನ್ಗಳಿಗಿಂತ ದೊಡ್ಡದಾಗಿರುತ್ತವೆ. ಜೊತೆಗೆ ಭಾರವಾಗಿರುತ್ತವೆ. ಉದ್ದವಾದ, ಬಲವಾದ ರೆಕ್ಕೆಗಳನ್ನು ಹೊಂದಿರುತ್ತವೆ. ಶೀತವಾಗಿರುವ ಮಂಗೋಲಿಯನ್ ಹವಾಮಾನ, ಮರುಭೂಮಿ ಮತ್ತು ಹೆಚ್ಚು ಉಷ್ಣವಿರುವ ಪ್ರದೇಶಗಳಿಗೂ ಹೊಂದಿಕೊಳ್ಳುವ ಗುಣ ಹೊಂದಿವೆ.
/newsfirstlive-kannada/media/media_files/2025/10/09/mongolian-falcon-7-2025-10-09-15-15-11.jpg)
ಬೇಟೆಯಾಡುವಾಗ ಮಂಗೋಲಿಯನ್ ಗಿಡುಗಗಳು ಗಂಟೆಗೆ 240 ಕಿಲೋ ಮೀಟರ್ ವೇಗದಲ್ಲಿ ಅಟ್ಯಾಕ್ ಮಾಡ್ತವೆ. ಬೇಟೆಯ ವಿಚಾರದಲ್ಲಿ ಹೆಚ್ಚು ಪರಿಣಿತಿ ಹೊಂದಿರುತ್ತವೆ. ಮಾನವ ಸಂಕೇತಗಳನ್ನು ತ್ವರಿತವಾಗಿ ಗ್ರಹಿಸುತ್ತವೆ. ಅವು ಬಿಳಿ ಬಣ್ಣದಿಂದ ಗಾಢ ಕಂದು ಬಣ್ಣಕ್ಕೆ ಬದಲಾಗುತ್ತವೆ. ಇದು ಅವುಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ.
/newsfirstlive-kannada/media/media_files/2025/10/09/mongolian-falcon-8-2025-10-09-15-15-26.jpg)
ಅವುಗಳ ವಿಶಿಷ್ಟ ಗುಣಗಳಿಂದಾಗಿ ಮಂಗೋಲಿಯನ್ ಗಿಡುಗಗಳು ಅರಬ್ನಲ್ಲಿ ಪ್ರತಿಷ್ಠೆಯ ಸಂಕೇತ ಮತ್ತು ಹವ್ಯಾಸ ಎರಡೂ ಆಗಿವೆ. ಗಿಡುಗಗಳೊಂದಿಗೆ ಬೇಟೆಯಾಡುವುದು ಅಥವಾ ಗಿಡುಗಗಳನ್ನು ಬೇಟೆಯಾಡುವುದು ಅರಬ್ ದೇಶಗಳಲ್ಲಿ ಶತಮಾನಗಳಷ್ಟು ಹಳೆಯ ಸಂಪ್ರದಾಯ. ಇದು ಕೇವಲ ಕ್ರೀಡೆಯಲ್ಲ, ಗೌರವ ಮತ್ತು ಸಾಮಾಜಿಕ ಸ್ಥಾನಮಾನದ ಸಂಕೇತವೂ ಆಗಿದೆ.
/newsfirstlive-kannada/media/media_files/2025/10/09/mongolian-falcon-11-2025-10-09-15-15-42.jpg)
ಸೌದಿ ಅರೇಬಿಯಾ, ಕತಾರ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ನಂತಹ ದೇಶಗಳಲ್ಲಿ, ತರಬೇತಿ ಪಡೆದ ಗಿಡುಗಗಳು ಸಂಪತ್ತು ಮತ್ತು ಧೈರ್ಯದ ಸಂಕೇತವಾಗಿದೆ. ಅವುಗಳನ್ನು ಇತರೆ ಪ್ರಾಣಿಗಳನ್ನು ಬೇಟೆಯಾಡಲು ಬಳಸಲಾಗುತ್ತದೆ. ರಿಯಾದ್, ಅಬುಧಾಬಿ ಮತ್ತು ದೋಹಾದಂತಹ ನಗರಗಳಲ್ಲಿ ವಾರ್ಷಿಕವಾಗಿ ಗಿಡುಗ ಸ್ಪರ್ಧೆಗಳು ಮತ್ತು ಗಿಡುಗ ಸೌಂದರ್ಯ ಸ್ಪರ್ಧೆಗಳನ್ನು ನಡೆಸಲಾಗುತ್ತದೆ.
/newsfirstlive-kannada/media/media_files/2025/10/09/mongolian-falcon-10-2025-10-09-15-15-58.jpg)
ರಿಯಾದ್ನಲ್ಲಿ ನಡೆದ ಈ ಪ್ರದರ್ಶನದಲ್ಲಿ 30 ಕ್ಕೂ ಹೆಚ್ಚು ದೇಶಗಳು ಭಾಗವಹಿಸಿದ್ದವು. ಇದನ್ನು ಸೌದಿ ಫಾಲ್ಕನ್ ಕ್ಲಬ್ ಆಯೋಜಿಸಿತ್ತು. ಹರಾಜಿನ ಜೊತೆಗೆ, ಡ್ರೋನ್ ಫಾಲ್ಕನ್ರಿ ಪ್ರದರ್ಶನ, ಫಾಲ್ಕನ್ ತರಬೇತಿ ಪ್ರದರ್ಶನ ಮತ್ತು ಪರಿಸರ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಮಳಿಗೆಗಳನ್ನು ಮೇಳದಲ್ಲಿ ಸ್ಥಾಪಿಸಲಾಗಿತ್ತು.