/newsfirstlive-kannada/media/media_files/2026/01/02/iran-protest-7-death-2026-01-02-18-09-36.jpg)
ಇರಾನ್‌ನಲ್ಲಿ ಇಸ್ಲಾಮಿಕ್ ಗಣರಾಜ್ಯದ ವಿರುದ್ಧ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇರಾನ್ ನಲ್ಲಿ ಆಯತುಲ್ಲಾ ಅಲಿ ಖಮಿನೇನಿ ಆಳ್ವಿಕೆಯ ವಿರುದ್ಧ ಜನರು ಬಂಡಾಯ ಸಾರಿದ್ದಾರೆ. ಇರಾನ್ ನಲ್ಲಿ ಆರ್ಥಿಕತೆಯು ಕುಸಿಯುತ್ತಿದೆ, ಜನರಿಗೆ ಜೀವನ ವೆಚ್ಚ ಏರಿಕೆಯಾಗುತ್ತಿದೆ. ಇದರಿಂದಾಗಿ ತೀವ್ರ ಆಕ್ರೋಶಗೊಂಡಿರುವ ಜನರು ಮುಲ್ಲಾಗಳೇ, ಇರಾನ್ ಖಾಲಿ ಮಾಡಿ ಎಂದು ಘೋಷಣೆ ಕೂಗುತ್ತಾ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಯನ್ನು ಇರಾನ್ ಸರ್ವಾಧಿಕಾರಿ ಸರ್ಕಾರ ಭದ್ರತಾ ಪಡೆಗಳ ಮೂಲಕ ದಮನಗೊಳಿಸಲು ಯತ್ನಿಸಿದೆ. ಇದರಿಂದ ಘರ್ಷಣೆ ನಡೆದು ಕನಿಷ್ಠ 7 ಮಂದಿ ಸಾವಿಗೀಡಾಗಿದ್ದಾರೆ.
ಇರಾನ್ ರಾಜಧಾನಿ ತೆಹ್ರಾನ್ ನಲ್ಲಿ ಏರುತ್ತಿರುವ ಬೆಲೆಗಳು, ಜೀವನ ವೆಚ್ಚ ಏರಿಕೆಯ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನೆ ನಡೆಸಿದ 30 ಮಂದಿಯನ್ನು ಇರಾನ್ ಸರ್ಕಾರ ಬಂಧಿಸಿದೆ.
ಮುಲ್ಲಾಗಳು ಇರಾನ್ ತೊರೆಯಬೇಕು ಎಂಬ ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗಿದ್ದಾರೆ. ಇರಾನ್ ಜೊತೆಗೆ ಸದ್ಯ ಚೀನಾ ಮತ್ತು ಭಾರತ ಹೊರತುಪಡಿಸಿ ಬೇರೆ ಯಾವುದೇ ದೇಶಗಳು ವ್ಯಾಪಾರ, ವಾಣಿಜ್ಯ ಚಟುವಟಿಕೆ ನಡೆಸುತ್ತಿಲ್ಲ. ಇರಾನ್ ನಲ್ಲಿ ತೈಲ ಸಂಪತ್ತು ಸಂಪದ್ಭರಿತವಾಗಿದ್ದರೂ, ದೇಶ ಆರ್ಥಿಕ ಸಂಕಷ್ಟಕ್ಕೀಡಾಗಿದೆ. ಇಸ್ರೇಲ್ ಜೊತೆಗಿನ ಸಂಘರ್ಷ, ಮುಸ್ಲಿಂ ಮೂಲಭೂತವಾದಿ ಸಂಘಟನೆಗಳಿಗೆ ಇರಾನ್ ಆರ್ಥಿಕ ಬೆಂಬಲವನ್ನು ನೀಡುತ್ತಾ ಬಂದಿದೆ. ಇದರಿಂದಾಗಿ ಇರಾನ್ ಈಗ ತನ್ನ ದೇಶದೊಳಗೆ ವಿರೋಧ, ಪ್ರತಿಭಟನೆಯನ್ನು ಎದುರಿಸಬೇಕಾಗಿದೆ. ಕಳೆದ ವರ್ಷದ ಜೂನ್ ನಲ್ಲಿ ಇರಾನ್ ಮೇಲೆ ಅಮೆರಿಕಾ ಕೂಡ ಬಾಂಬ್ ದಾಳಿಯನ್ನು ನಡೆಸಿದೆ. ಇರಾನ್ ದೇಶ, ಬೆಟ್ಟಗಳಲ್ಲಿ ರಹಸ್ಯವಾಗಿ ಅಣ್ವಸ್ತ್ರ ಬಾಂಬ್ ಗಳನ್ನು ತಯಾರಿಸುವುದನ್ನು ತಡೆಯಲು ಅಮೆರಿಕಾ ವಾಯು ದಾಳಿ ನಡೆಸಿತ್ತು
/filters:format(webp)/newsfirstlive-kannada/media/media_files/2026/01/02/iran-protest-7-death-1-2026-01-02-18-10-00.jpg)
.
ಭಾನುವಾರ (ಡಿಸೆಂಬರ್ 27, 2025) ಟೆಹ್ರಾನ್‌ನಲ್ಲಿ ಪ್ರತಿಭಟನೆಗಳು ಪ್ರಾರಂಭವಾದವು, ಅಲ್ಲಿ ಅಂಗಡಿ ವ್ಯಾಪಾರಿಗಳು ಹೆಚ್ಚಿನ ಬೆಲೆಗಳು ಮತ್ತು ಆರ್ಥಿಕ ಕುಸಿತದ ವಿರುದ್ಧ ಮುಷ್ಕರ ನಡೆಸಿದರು . ನಂತರ ದೇಶದ ಇತರ ಭಾಗಗಳಿಗೆ ಪ್ರತಿಭಟನೆ ವ್ಯಾಪಿಸಿದೆ. ಅಸೋಸಿಯೇಟೆಡ್ ಪ್ರೆಸ್‌ನ ವರದಿಯ ಪ್ರಕಾರ, ಬುಧವಾರ ಇಬ್ಬರು ಮತ್ತು ಗುರುವಾರ ಐದು ಮಂದಿ ಸಾವನ್ನಪ್ಪಿದರು, ಇರಾನ್‌ನ ಲುರ್ ಜನಾಂಗೀಯ ಗುಂಪಿಗೆ ನೆಲೆಯಾಗಿರುವ ನಾಲ್ಕು ನಗರಗಳಲ್ಲಿ ಪ್ರತಿಭಟನೆ ನಡೆದಿದೆ.
ಟೆಹ್ರಾನ್‌ನಿಂದ ನೈಋತ್ಯಕ್ಕೆ ಸುಮಾರು 300 ಕಿಲೋಮೀಟರ್ (185 ಮೈಲುಗಳು) ದೂರದಲ್ಲಿರುವ ಇರಾನ್‌ನ ಲೊರೆಸ್ತಾನ್ ಪ್ರಾಂತ್ಯದ ಅಜ್ನಾ ನಗರದಲ್ಲಿ ಅತ್ಯಂತ ತೀವ್ರವಾದ ಹಿಂಸಾಚಾರ ಸಂಭವಿಸಿದೆ. ಅಲ್ಲಿ, ಬೀದಿಯಲ್ಲಿರುವ ವಸ್ತುಗಳು ಉರಿಯುತ್ತಿರುವುದನ್ನು ಮತ್ತು ಜನರು "ನಾಚಿಕೆಯಿಲ್ಲ! ನಾಚಿಕೆಯಿಲ್ಲ!" ಎಂದು ಕೂಗುತ್ತಿದ್ದಂತೆ ಗುಂಡು ಹಾರಿಸುತ್ತಿರುವುದನ್ನು ಆನ್‌ಲೈನ್ ವೀಡಿಯೊಗಳಲ್ಲಿ ಕಾಣಬಹುದು.
/filters:format(webp)/newsfirstlive-kannada/media/media_files/2026/01/02/iran-protest-7-death-2-2026-01-02-18-10-27.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us