Advertisment

ಬೆಂಕಿ ಕೆಂಡವಾದ ನೇಪಾಳ; ರಕ್ತ ಬರುವಂತೆ ಹಲ್ಲೆ.. ಮಾಜಿ ಪ್ರಧಾನಿಯ ಹೆಂಡತಿ ಸಜೀವ ದಹನ

ಎರಡನೇ ದಿನವೂ ಮುಂದುವರಿದ ಭ್ರಷ್ಟಾಚಾರ ವಿರೋಧಿ ಪ್ರತಿಭಟನೆಯಲ್ಲಿ ಮಾಜಿ ಪ್ರಧಾನಿ ಜಲನಾಥ್ ಖಾನಲ್ ಅವರ ಪತ್ನಿ ರಾಜಲಕ್ಷ್ಮಿ ಚಿತ್ರಾಕರ್ ಅವರನ್ನು ಪ್ರತಿಭಟನಾಕಾರರು ಸಜೀವವಾಗಿ ದಹನ ಮಾಡಿದ್ದಾರೆ. ರಾಷ್ಟ್ರಪತಿಗಳ ಮನೆ ಮೇಲೆ ದಾಳಿ ಮಾಡಲಾಗಿದೆ.

author-image
Bhimappa
NEPAL (1)
Advertisment

ನೇಪಾಳದಲ್ಲಿ ಸರ್ಕಾರದ ವಿರುದ್ಧ ಅಲ್ಲಿನ ಜನರು ಭುಗಿಲೆದ್ದಿದ್ದು ಈಗಾಗಲೇ ಪ್ರಧಾನಮಂತ್ರಿ ಕೆ.ಪಿ ಶರ್ಮಾ ಒಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೆ ದೇಶಕ್ಕೆ ಪರಾರಿಯಾಗಿದ್ದಾರೆ. ಎರಡನೇ ದಿನವೂ ಮುಂದುವರಿದ ಭ್ರಷ್ಟಾಚಾರ ವಿರೋಧಿ ಪ್ರತಿಭಟನೆಯಲ್ಲಿ ಮಾಜಿ ಪ್ರಧಾನಿ ಜಲನಾಥ್ ಖಾನಲ್ ಅವರ ಪತ್ನಿ ರಾಜಲಕ್ಷ್ಮಿ ಚಿತ್ರಾಕರ್ ಅವರನ್ನು ಪ್ರತಿಭಟನಾಕಾರರು ಸಜೀವವಾಗಿ ದಹನ ಮಾಡಿದ್ದಾರೆ. ರಾಷ್ಟ್ರಪತಿಗಳ ಮನೆ ಮೇಲೆ ದಾಳಿ ಮಾಡಲಾಗಿದೆ.  

Advertisment

NEPAL_Protest_Wife

ಪ್ರತಿಭಟನೆಗಳು ಸಂಘರ್ಷವಾಗಿ ಬಲದಾಗಿದ್ದು, ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ತಿರುಗಿ ಬಿದ್ದಿದ್ದು  ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಮಾಜಿ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಮತ್ತು ಅವರ ಪತ್ನಿ ವಿದೇಶಾಂಗ ಸಚಿವೆ ಅರ್ಜು ರಾಣಾ ದೇವುಬಾ ಅವರ ಮೇಲೆ ರಕ್ತ ಬರುವ ರೀತಿಯಲ್ಲಿ ಪ್ರತಿಭಟನಾಕಾರರು ಹಲ್ಲೆ ಮಾಡಿದ್ದಾರೆ. ಪ್ರತಿಭಟನಾಕಾರರು ರಾಜಧಾನಿ ಕಠ್ಮಂಡುವಿನ ಹಲವು ಭಾಗಗಳಲ್ಲಿ ಭ್ರಷ್ಟ ನಾಯಕರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಘೋಷಣೆ ಕೂಗುತ್ತಿದ್ದಾರೆ. 

ಪ್ರಧಾನಮಂತ್ರಿ ಕೆ.ಪಿ ಶರ್ಮಾ ಒಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಬೆನ್ನಲ್ಲೆ ನೇಪಾಳದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಇನ್ಮುಂದೆ ದೇಶದಲ್ಲಿ ಸೇನಾ ಆಡಳಿತ ನಡೆಯಲಿದೆ. 
ನೇಪಾಳದಲ್ಲಿ ಮಿಲಿಟರಿ ಆಡಳಿತದ ಬಗ್ಗೆ ಪ್ರಧಾನಿ ಚರ್ಚೆ ನಡೆದಿದ್ದು ಕ್ಷಣಕ್ಷಣಕ್ಕೂ ಪ್ರತಿಭಟನೆ ಕಿಚ್ಚು ಹೆಚ್ಚಾಗುತ್ತಿದೆ. ಇಲ್ಲಿಯವರೆಗೆ ಉಪಪ್ರಧಾನಿ ಸೇರಿ 9 ಸಚಿವರು ರಾಜಿನಾಮೆ ನೀಡಿ ತಮ್ಮ ತಮ್ಮ ಮನೆಯನ್ನು ಖಾಲಿ ಮಾಡಿದ್ದಾರೆ. ಕೆಲವರು ದೇಶ ಬಿಟ್ಟು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಭಾರತದಿಂದ ನೇಪಾಳಕ್ಕೆ ಹೊರಡುವ ಎಲ್ಲ ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ. ಅಲ್ಲಿನ ಮಿಲಿಟರಿ ಪಡೆ ಇಡೀ ಕಠ್ಮಂಡು ವಿಮಾನ ನಿಲ್ದಾಣವನ್ನ ಸುಪರ್ದಿಗೆ ಪಡೆದುಕೊಂಡ ಕಾರಣ ಲ್ಯಾಂಡಿಂಗ್​ಗೆ ಅವಕಾಶ ಇಲ್ಲ. ಸಾವಿರಾರು ಸಂಖ್ಯೆಯಲ್ಲಿ ಯೋಧರು ವಿಮಾನ ನಿಲ್ದಾಣವನ್ನ ಸುತ್ತುವರೆದಿದ್ದಾರೆ. ಈಗಾಗಲೇ ಯಾರು ಏರ್​​ಪೋರ್ಟ್​ನತ್ತ ಬರದಂತೆ ಆದೇಶ ಹೊರಡಿಸಲಾಗಿದೆ. ಭಾರತದ ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನದ ಲ್ಯಾಂಡಿಂಗ್​ಗೆ ಅವಕಾಶ ನಿರಾಕರಣೆ ಮಾಡಲಾಗಿದೆ. ಹೀಗಾಗಿ ವಿಮಾನ ಹಾರಟ ರದ್ದು ಮಾಡಲಾಗಿದೆ. 

Advertisment

ಇದನ್ನೂ ಓದಿ:BREAKING; ಉಪರಾಷ್ಟ್ರಪತಿ ಚುನಾವಣೆ.. NDA ಅಭ್ಯರ್ಥಿ ಸಿ.ಪಿ ರಾಧಕೃಷ್ಣನ್​ಗೆ ಭರ್ಜರಿ ಗೆಲುವು

NEPAL_Protest (1)

ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪ್ರಧಾನಿ ಕೆ.ಪಿ ಶರ್ಮಾ ನೇಪಾಳದಿಂದ ದುಬೈಗೆ ಹೋಗಿದ್ದಾರೆ ಎನ್ನುವ ಮಾಹಿತಿ ಎಲ್ಲ ಕಡೆ ಹಬ್ಬಿದೆ. ಪ್ರತಿಭಟನೆ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿರುವುದರಿಂದ ಎಲ್ಲಾ ವಿಮಾನ ಹಾರಾಟ ರದ್ದು ಮಾಡಲಾಗಿದೆ. ಎಲ್ಲಾ ವಿಮಾನ ಹಾರಾಟ ರದ್ದು ಮಾಡಿದ ಕಾರಣ ವಿಮಾನ ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ವಿಮಾನ ಸಂಚಾರ ರದ್ದು ಆದರೂ ಹೆಲಿಕ್ಯಾಪ್ಟರ್ ಮೂಲಕ ಸಚಿವರು ಕಠ್ಮಂಡುವನ್ನ ತೊರೆದಿದ್ದಾರೆ. ನೇಪಾಳದ ಸರ್ಕಾರದಲ್ಲಿದ್ದ ಸಚಿವರು ಬೇರೆ.. ಬೇರೆ ಕಡೆಗೆ ಪರಾರಿ ಆಗುತ್ತಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Nepal
Advertisment
Advertisment
Advertisment