/newsfirstlive-kannada/media/media_files/2025/12/10/eye-winking-pakistan-army-spox-2025-12-10-17-49-34.jpg)
ಪತ್ರಕರ್ತೆಗೆ ಸಾರ್ವಜನಿಕವಾಗಿ ಕಣ್ಣು ಹೊಡೆದ ಪಾಕ್ ಸೇನಾ ವಕ್ತಾರ!
ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್‌ನ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಪತ್ರಿಕಾಗೋಷ್ಠಿಯ ಸಮಯದಲ್ಲಿ ಮಹಿಳಾ ಪತ್ರಕರ್ತೆಯೊಬ್ಬರ ಕಡೆಗೆ ಕಣ್ಣು ಮಿಟುಕಿಸುತ್ತಿರುವ ವೀಡಿಯೊ ವೈರಲ್ ಆಗಿದೆ. ವಿಡಿಯೋ ವೈರಲ್ ಆಗ ನಂತರ ಟೀಕೆಗೆ ಗುರಿಯಾಗಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾದ ಈ ಕ್ಲಿಪ್‌ನಲ್ಲಿ, ಪತ್ರಕರ್ತೆ ಅಬ್ಸಾ ಕೋಮಲ್, ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಆರೋಪಗಳ ಕುರಿತು ಚೌಧರಿ ಅವರನ್ನು ಪ್ರಶ್ನಿಸುತ್ತಿರುವುದನ್ನು ತೋರಿಸಲಾಗಿದೆ . ಅವರು "ರಾಷ್ಟ್ರೀಯ ಭದ್ರತಾ ಬೆದರಿಕೆ", "ದೇಶ ವಿರೋಧಿ" ಮತ್ತು "ದೆಹಲಿಯ ಕೈಯಲ್ಲಿ ವರ್ತಿಸುತ್ತಿದ್ದಾರೆ" ಎಂಬ ಆರೋಪ ಇದೆ ಎಂದು ಹೇಳುತ್ತಾರೆ.
ಆಗ ಸೇನಾ ವಕ್ತಾರ ಜನರಲ್ ಅಹ್ಮದ್ ಷರೀಫ್ ಚೌಧರಿ, ನಾಲ್ಕನೇ ಪಾಯಿಂಟ್ ಸೇರಿಸಿ, ಅವರು ಮಾನಸಿಕ ಅಸ್ವಸ್ಥರು ಎಂದು ಹೇಳುತ್ತಾರೆ. ಇದಾದ ಬಳಿಕ ಜನರಲ್ ಅಹ್ಮದ್ ಚೌಧರಿ ನಗುತ್ತಾ, ಅಬ್ಸಾ ಕೋಮಲ್ ಕಡೆಗೆ ನೋಡುತ್ತಾ, ಕಣ್ಣು ಹೊಡೆದಿದ್ದಾರೆ.
ಹೀಗೆ ಮಹಿಳಾ ಪತ್ರಕರ್ತೆಗೆ ಸೇನಾ ವಕ್ತಾರ ಕಣ್ಣು ಹೊಡೆದಿದ್ದು ಟೀಕೆಗೆ ಗುರಿಯಾಗಿದೆ. ಅಹ್ಮದ್ ಚೌಧರಿ ವರ್ತನೆಯು ತೀವ್ರ ಆಕ್ರೋಶಕ್ಕೂ ಕಾರಣವಾಗಿದೆ. ಅಹ್ಮದ್ ಚೌಧರಿ ವೃತ್ತಿಪರ ಸೈನಿಕನಲ್ಲ ಎಂದು ವ್ಯಕ್ತಿಯೊಬ್ಬರು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದು ಪಾಕ್ ಸೇನೆಯು ಎಷ್ಟೊಂದು ವೃತ್ತಿಪರವಾಗಿಲ್ಲ ಎಂಬುದನ್ನು ತೋರಿಸುತ್ತೆ. .ಯೂನಿಫಾರಂನಲ್ಲಿರುವವರು ಸಾರ್ವಜನಿಕವಾಗಿ ಹೇಗೆ ಕಣ್ಣು ಹೊಡೆಯುತ್ತಾರೆ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
/filters:format(webp)/newsfirstlive-kannada/media/media_files/2025/12/10/eye-winking-pakistan-army-spox02-2025-12-10-17-50-53.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us