ಪಾಕಿಸ್ತಾನವನ್ನು ಅಮೆರಿಕಾ ಟಾಯ್ಲೆಟ್‌ ಪೇಪರ್ ನಂತೆ ಬಳಸಿ ಎಸೆದಿದೆ ಎಂದ ಪಾಕಿಸ್ತಾನ : ಪಾಕ್‌ ಗೆ ಕೊನೆಗೂ ಜ್ಞಾನೋದಯ!!

ಪಾಕಿಸ್ತಾನವನ್ನು ಅಮೆರಿಕಾ ಟಾಯ್ಲೆಟ್ ಪೇಪರ್ ನಂತೆ ಬಳಸಿ ಎಸೆದಿದೆೆ ಎಂದು ಖುದ್ದು ಪಾಕಿಸ್ತಾನವೇ ಹೇಳಿದೆ. ಪಾಕಿಸ್ತಾನಕ್ಕೆ ಕೊನೆಗೂ ಜ್ಞಾನೋದಯವಾಗಿದೆ. ಪಾಕಿಸ್ತಾನದ ರಕ್ಷಣಾ ಖಾತೆ ಸಚಿವ ಖ್ವಾಜಾ ಅಸೀಫ್ ಪಾಕ್ ಅಸೆಂಬ್ಲಿಯಲ್ಲಿ ಈ ಸತ್ಯ ಒಪ್ಪಿಕೊಂಡಿದ್ದಾರೆ.

author-image
Chandramohan
USA used pak as toilet paper
Advertisment

ಪಾಕಿಸ್ತಾನ ಯಾವ ಟೈಮ್​ನಲ್ಲಾದ್ರು ಸರಿ.. ಎಲ್ಲಾದ್ರು ಸರಿ ಅಮೆರಿಕದ ಆಜ್ಞೆ ಮಾಡ್ತು ಅಂದ್ರೆ ಸಾಕು ನಿಂತಲ್ಲೇ ತಕತಕ ಅಂತ ಡಾನ್ಸ್‌ ಮಾಡಲು ಶುರು ಮಾಡಿ ಬಿಡುತ್ತೆ. ಪಾಕಿಸ್ತಾನ ಪ್ರಧಾನಿ.. ಅಲ್ಲಿನ ನಾಯಕರು ಇಂದಿಗೂ ಕೂಡ ಡೊನಾಲ್ಡ್ ಟ್ರಂಪ್​ರನ್ನ ಮೆಚ್ಚಿಸಲು ದಿನಕ್ಕೊಂದು ಡ್ರಾಮಾ ಮಾಡ್ತಾನೇ ಇರುತ್ತೆ. ಹೀಗೆ ಮಾಡ್ತಿದ್ದ ಪಾಕಿಸ್ತಾನ ಈಗ ತನನ್ನ ಟಾಯ್ಲೆಟ್​ನಲ್ಲಿ ಒರೆಸಿಕೊಳ್ಳೋ ಪೇಪರ್​ಗೆ ಹೋಲಿಕೆ ಮಾಡ್ಕೊಂಡಿದೆ. 
ಅಮೆರಿಕಾದೊಂದಿಗೆ ನಮ್ಮ ಸಂಬಂಧ ಸಖತ್​ ಕ್ಲೋಸ್​ ಆಗಿದೆ ಅಂತೆಲ್ಲಾ ಪಾಕ್ ನಾಯಕರು ಜಗತ್ತಿನ ಮುಂದೆ ಬಿಂಬಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ರು. ಆದ್ರೆ ಸತ್ಯ ಒಂದಲ್ಲ ಒಂದು ದಿನ ಬಯಲಿಗೆ ಬಂದೇ ಬರುತ್ತದೆ ಅಲ್ವೇ. ಈಗ ಅದು ಹೊರ ಬಂದಿದೆ. ಅಮೆರಿಕಾದ ವಿರುದ್ಧ ಪಾಕ್ ರಕ್ಷಣ ಸಚಿವರೇ ಹಲವು ಆರೋಪಗಳನ್ನ ಮಾಡ್ತಿದ್ದಾರೆ.
ಸತ್ಯ ಬಾಯ್ಬಿಟ್ಟು ಅಮೆರಿಕಾ ವಿರುದ್ಧ ಪಾಕಿಸ್ತಾನ ಆಕ್ರೋಶ!
ಅಮೆರಿಕಾ ಆಜ್ಞೆಯಂತೆ ಕುಣಿಯುತ್ತಿದ್ದ ಪಾಕಿಸ್ತಾನ ಇದೀಗ ಅದೇ ಅಮೆರಿಕಾ ವಿರುದ್ಧ ಆಕ್ರೋಶ ಹೊರಹಾಕಿದೆ. ಒಂದೆಡೆ ಪಾಕಿಸ್ತಾನದ ಪ್ರಧಾನಿ ಮತ್ತು ನಾಯಕರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರನ್ನ ಮೆಚ್ಚಿಸಲು ಸತತ ಪ್ರಯತ್ನ ನಡೆಸುತ್ತಿದ್ರೆ.. ಮತ್ತೊಂದೆ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅಮೆರಿಕಾ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. 
ಇಸ್ಲಾಮಾಬಾದ್‌ನ ಶಿಯಾ ಮಸೀದಿಯಲ್ಲಿ ನಡೆದ ಮಾರಕ ಆತ್ಮಹತ್ಯಾ ಬಾಂಬ್ ದಾಳಿಯ ನಂತರ ಭಯೋತ್ಪಾದನೆಯ ಕುರಿತಾದ ಸಂಸತ್ತಿನ ಚರ್ಚೆಯಲ್ಲಿ ಅಮೆರಿಕವನ್ನ ತೀವ್ರವಾಗಿ ಟೀಕಿಸಿದ್ದಾರೆ. ತಾಲಿಬಾನ್ ಬಗ್ಗೆ ಪ್ರಸ್ತಾಪ ಮಾಡಿ ಅಮೆರಿಕದ ಮೇಲೆ ವಾಗ್ದಾಳಿ ಮಾಡಿದ್ದಾರೆ. ಇಸ್ಲಾಂ ಅನ್ನ ರಕ್ಷಿಸಲು ಅಫ್ಘಾನಿಸ್ತಾನದ ನೆಲದಲ್ಲಿ ನಡೆದ ಎರಡೂ ಯುದ್ಧಗಳಲ್ಲಿ ಪಾಕಿಸ್ತಾನ ಭಾಗವಹಿಸಲಿಲ್ಲ. ಆದರೆ ಈ ಯುದ್ಧಗಳಲ್ಲಿ, ಅಲ್ಲಿನ ಜನರನ್ನ ಜಿಹಾದ್ ಹೆಸರಿನಲ್ಲಿ ಕೊಲ್ಲಲಾಯಿತು, ಆದ್ರೆ ಪಾಕಿಸ್ತಾನ ಯಾವುದೇ ಪಾಠ ಕಲಿತಿಲ್ಲ ಎಂದು ಖವಾಜಾ ಆಸಿಫ್ ತಮ್ಮ ಮುಖಕ್ಕೆ ತಾವೇ ಮಂಗಳಾರತಿ ಮಾಡಿಕೊಂಡಿದ್ದಾರೆ.

(((ಪಾಕಿಸ್ತಾನವನ್ನ US ಟಿಶ್ಯೂ ಪೇಪರ್‌ಗಿಂತ ಕೆಟ್ಟದಾಗಿ ನಡೆಸಿಕೊಂಡಿದೆ.. ಅಂದ್ರೆ ನಮ್ಮನ್ನ ಆ ಟಾಯ್ಲೆಟ್ ಪೇಪರ್‌ನ್ನಂತೆ ತಮ್ಮ ಉದ್ದೇಶಗಳಿಗಾಗಿ ಬಳಸಿಕೊಂಡು ನಂತರ ಪಕ್ಕಕ್ಕೆ ಎಸೆದಿದ್ದಾರೆ.)))
ವಿಪರ್ಯಾಸ ಅಂದ್ರೆ ಅಮೆರಿಕಾದ ಎಫ್‌16 ಅನ್ನ ಪಾಕಿಸ್ತಾನ ಈಗಲೂ ಬಳಸುತ್ತಿದೆ. ಅಫಘಾನಿಸ್ತಾನಲ್ಲಿ ಲಾಡೆನ್‌ ವಿರುದ್ಧದ ಕಾರ್ಯಾಚರಣೆಗೆ ವಾಯುನೆಲೆ ಬಿಟ್ಟುಕೊಟ್ಟಿದ್ದ ಪಾಕಿಸ್ತಾನ. ಇದಕ್ಕೆ ಪ್ರತಿಯಾಗಿ ಅಮೆರಿಕಾ ಎಫ್‌ 16 ಕೊಟ್ಟಿತ್ತು. ಒಂದು ಹಂತದಲ್ಲಿ ಪಾಕಿಸ್ತಾನದ ಪರಮಾಣು ಅಸ್ತ್ರಗಳ ನಿರ್ವಹಣೆಯಲ್ಲೂ ಅಮೆರಿಕಾ ಪಾತ್ರವಿರೋದಾಗಿ ಹೇಳಲಾಗ್ತಿದೆ. ಆಪರೇಷನ್‌ ಸಿಂಧೂರ್‌ ವೇಳೆ ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಿದಾಗ್ಲೂ ಮಧ್ಯ ಪ್ರವೇಶಿಸಿದ್ದ ಟ್ರಂಪ್‌.. ದಾಳಿ ನಿಲ್ಲಿಸುವಂತೆ ಭಾರತವನ್ನೂ ಮನವೊಲಿಸಿದ್ರು. ತೊಟ್ಟಿಲು ತೂಗಿ.. ಮಗವನ್ನೂ ಚಿವುಟಿತ್ತು ಅಮೆರಿಕಾ.
ಹೀಗೆ ಸಂಸತ್ತಿನಲ್ಲಿ ಪಾಕಿಸ್ತಾನದ ರಕ್ಷಣಾ ಸಚಿವರು ಆಡಿದ ಮಾತುಗಳು ಸದ್ಯ ಭಾರಿ ಚರ್ಚೆಯಲ್ಲಿದ್ದೂ, ಕೊನೆಗೂ ಅಮೆರಿಕಾ ಹಾಗೂ ಪಾಕಿಸ್ತಾನದ ನಡುವಿನ ಸಂಬಂಧ ಆಹಾ ಅಮೋಘ.. ಎಂದು ಪಾಕ್‌ ನಾಯಕರು ಬಿಂಬಿಸಿದ್ದ ಆಡಂಬರದ ಗಾಜಿನ ಕೋಟೆ ಜಗತ್ತಿನ ಮುಂದೆ ಹೊಡೆದುಹೋಗಿದೆ. ಹೊಡೆದ ಗಾಜಿನ ಕೋಟೆಯಯಲ್ಲಿರೋದೆಲ್ಲಾ ಬರೀ ಖಾಲಿ ಗಾಳಿಯೇ ಹೊರತು. ಯಾವುದೇ ಸತ್ವವಿಲ್ಲ ಎಂದು ಸ್ವತಃ ಪಾಕ್‌ ನಾಯಕರೇ ಹೇಳುವಂತಹ ಸ್ಥಿತಿಗೆ ತಲುಪಿದ್ದಾರೆ.

USA used pak as toilet paper (1)



ನ್ಯೂಸ್ ಫಸ್ಟ್​ ಬ್ಯುರೋ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

USA USED PAK LIKE TOILET PAPER india vs pakistan pakistan Pakistani forces
Advertisment