/newsfirstlive-kannada/media/media_files/2025/11/19/indian-lady-dies-in-accident-in-sydney-2025-11-19-14-06-09.jpg)
ಕಾರ್ ಡಿಕ್ಕಿ ಹೊಡೆದಿದ್ದರಿಂದ ಮೃತಪಟ್ಟ ಸಮನ್ವಿತಾ ಧರೇಶ್ವರ್
ಎಂಟು ತಿಂಗಳ ತುಂಬು ಗರ್ಭಿಣಿ ರಸ್ತೆಯ ಪಕ್ಕ ಗಂಡನ ಜೊತೆ ವಾಕಿಂಗ್ ಮಾಡುವಾಗ ಬಿಎಂಡಬ್ಲ್ಯು ಕಾರ್ ಗುದ್ದಿ ಸಾವನ್ನಪ್ಪಿದ್ದಾರೆ. ಭಾರತದ 33 ವರ್ಷದ ಗರ್ಭೀಣಿ ಸಾವಿಗೀಡಾಗಿದ್ದು, ಇನ್ನೂ ಕೆಲವೇ ವಾರಗಳಲ್ಲಿ ಮಗುವಿಗೆ ಜನ್ಮ ನೀಡುವವರಿದ್ದರು. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಭೀಕರ ಕಾರ್ ಅಪಘಾತದಲ್ಲಿ ಗರ್ಭಿಣಿ ಪ್ರಾಣ ಕಳೆದುಕೊಂಡಿದ್ದಾರೆ.
ಸಮನ್ವಿತಾ ಧರೇಶ್ವರ್ ಸಾವನ್ನಪ್ಪಿದ ನತದೃಷ್ಟೆ. ಕಿಯಾ ಕಾರ್ನಿವಲ್ ಕಾರ್ ಸಮನ್ವಿತಾ ಧರೇಶ್ವರ್ ಫುಟ್ ಪಾತ್ ಕ್ರಾಸ್ ಮಾಡಲೆಂದು ನಿಧಾನವಾಗಿ ಬಂದಿದೆ. ಆದರೇ, ಹಿಂಭಾಗದಲ್ಲಿ ಬಂದ ಬಿಎಂಡಬ್ಲ್ಯು ಕಾರ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಇದರಿಂದ ಕಿಯಾ ಕಾರ್ನಿವಲ್ ಕಾರ್, ಸಮನ್ವಿತಾ ಧರೇಶ್ವರ್ ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಸಮನ್ವಿತಾಗೆ ಗಂಭೀರ ಗಾಯವಾಗಿತ್ತು.
ತಕ್ಷಣವೇ ಸಮನ್ವಿತಾರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ, ಸಮನ್ವಿತಾರನ್ನು ಆಗಲಿ, ಹೊಟ್ಟೆಯಲ್ಲಿದ್ದ ಮಗುವನ್ನಾಗಲೀ ಉಳಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ವೇಗವಾಗಿ ಬಂದ ಬಿಎಂಡಬ್ಲ್ಯು ಕಾರ್ ಅನ್ನು 19 ವರ್ಷದ ಯುವಕ ಡ್ರೈವ್ ಮಾಡುತ್ತಿದ್ದ. ಆತನಿಗೆ ಲರ್ನಿಂಗ್ ಕಾರ್ ಡ್ರೈವಿಂಗ್ ಲೈಸೆನ್ಸ್ ನೀಡಲಾಗಿತ್ತು. ಕಾರ್ ಚಾಲನೆ ಮಾಡುತ್ತಿದ್ದ ಆರೂನ್ ಪಪಗೋಲು ನನ್ನು ಪೊಲೀಸರು ಬಂಧಿಸಿದ್ದಾರೆ. ಹೊಟ್ಟೆಯಲ್ಲಿದ್ದ ಭ್ರೂಣದ ಸಾವಿಗೂ ಬಿಎಂಡಬ್ಲ್ಯು ಕಾರ್ ಚಾಲಕನಿಗೆ 3 ವರ್ಷ ಹೆಚ್ಚುವರಿ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
ಮೃತ ಸಮನ್ವಿತಾ ಆಸ್ಟ್ರೇಲಿಯಾದಲ್ಲಿ ಐಟಿ ಸಿಸ್ಟಮ್ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಆಲಾಸ್ಕೋ ಯೂನಿಫಾರಂ ಕಂಪನಿಯಲ್ಲಿ ಟೆಸ್ಟ್ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಅವರ ಲಿಂಕ್ಡ್ ಇನ್ ಪ್ರೊಫೈಲ್ ನಲ್ಲಿ ಉಲ್ಲೇಖಿಸಿದ್ದಾರೆ.
/filters:format(webp)/newsfirstlive-kannada/media/media_files/2025/11/19/indian-lady-dies-in-accident-in-sydney02-2025-11-19-14-10-12.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us