/newsfirstlive-kannada/media/media_files/2025/11/24/lakshmi-mittal-leaving-britan-2025-11-24-14-30-16.jpg)
ಬ್ರಿಟನ್ ತೊರೆಯಲು ಲಕ್ಷ್ಮಿ ಮಿತ್ತಲ್ ನಿರ್ಧಾರ!
ಭಾರತದ ರಾಜಸ್ಥಾನ ಮೂಲದ ಸ್ಟೀಲ್ ಕಂಪನಿಯ ಮಾಲೀಕ ಲಕ್ಷ್ಮಿ ಮಿತ್ತಲ್ ಬ್ರಿಟನ್ ನಲ್ಲಿ ವಾಸಿಸುತ್ತಿದ್ದರು. ಆದರೇ, ಈಗ ಬ್ರಿಟನ್ ದೇಶವನ್ನು ತೊರೆಯಲು ಲಕ್ಷ್ಮಿ ಮಿತ್ತಲ್ ನಿರ್ಧರಿಸಿದ್ದಾರೆ. ಏಕೆಂದರೇ, ಬ್ರಿಟನ್ ಲೇಬರ್ ಪಾರ್ಟಿಯ ಸರ್ಕಾರ ಸೂಪರ್ ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆ ವಿಧಿಸಲು ನಿರ್ಧರಿಸಿದೆ. ಪಿತ್ರಾರ್ಜಿತ ಆಸ್ತಿಯ ಮೇಲೆ ತೆರಿಗೆ ವಿಧಿಸಲು ನಿರ್ಧರಿಸಿದೆ. ಈ ತೆರಿಗೆಯು ಹೊರೆಯಾಗುತ್ತೆ ಎಂಬ ಉದ್ದೇಶದಿಂದ ಬ್ರಿಟನ್ ದೇಶವನ್ನು ಬಿಟ್ಟು ಬೇರೆ ತೆರಿಗೆ ಸುರಕ್ಷಿತ ದೇಶಕ್ಕೆ ಹೋಗಲು ಲಕ್ಷ್ಮಿ ಮಿತ್ತಲ್ ನಿರ್ಧರಿಸಿದ್ದಾರೆ.
ರಾಜಸ್ಥಾನದಲ್ಲಿ ಹುಟ್ಟಿದ ಲಕ್ಷ್ಮಿ ಮಿತ್ತಲ್ ಈಗ ಲಕ್ಷ್ಮಿ ಪುತ್ರ ಅನ್ನೋದರಲ್ಲಿ ಎರಡು ಮಾತಿಲ್ಲ. ತೆರಿಗೆ ರಕ್ಷಣೆಗಾಗಿ ಸ್ವಿಟರ್ಜಲ್ಯಾಂಡ್ ನಲ್ಲೂ ಲಕ್ಷ್ಮಿ ಮಿತ್ತಲ್ ವಾಸ ಇರುತ್ತಾರೆ. ಜೊತೆಗೆ ಹೆಚ್ಚಿನ ಸಮಯವನ್ನು ದುಬೈನಲ್ಲಿ ಕಳೆಯಲು ನಿರ್ಧರಿಸಿದ್ದಾರೆ ಎಂದು ದಿ ಸಂಡೇ ಟೈಮ್ಸ್ ವರದಿ ಮಾಡಿದೆ.
ಅರ್ಸೆಲರ್ ಮಿತ್ತಲ್ ಕಂಪನಿಯನ್ನು ಸ್ಥಾಪಿಸಿರುವ ಲಕ್ಷ್ಮಿ ಮಿತ್ತಲ್ ಸದ್ಯ 15.4 ಬಿಲಿಯನ್ ಪೌಂಡ್ ಸಂಪತ್ತಿನ ಒಡೆಯರಾಗಿದ್ದಾರೆ ಎಂು 2025ರ ಸಂಡೇ ಟೈಮ್ಸ್ ಶ್ರೀಮಂತರ ಪಟ್ಟಿ ಹೇಳುತ್ತೆ. ಬ್ರಿಟನ್ ನ 8ನೇ ಶ್ರೀಮಂತ ವ್ಯಕ್ತಿ ಲಕ್ಷ್ಮಿ ಮಿತ್ತಲ್ ಆಗಿದ್ದರು.
ಇದೇ ಬುಧವಾರ ಲೇಬರ್ ಪಾರ್ಟಿಯು ಬಜೆಟ್ ಮಂಡಿಸಲಿದೆ. ಈ ಬಜೆಟ್ ನಲ್ಲಿ ಪಿತ್ರಾರ್ಜಿತ ಆಸ್ತಿಯನ್ನು ಮಗನಿಗೆ ವರ್ಗಾಯಿಸುವಾಗ ಶೇ.50 ರಷ್ಟು ಆಸ್ತಿಯು ಸರ್ಕಾರಕ್ಕೆ ಸೇರುತ್ತೆ ಎಂಬ ಕಾನೂನು ಜಾರಿಗೆ ತರುವ ಸಾಧ್ಯತೆ ಇದೆ. ಹೀಗಾಗಿ ಅದಕ್ಕೂ ಮೊದಲೇ ಬ್ರಿಟನ್ ದೇಶವನ್ನು ಬಿಟ್ಟು ದುಬೈನಲ್ಲಿ ವಾಸಿಸಲು ಲಕ್ಷ್ಮಿ ಮಿತ್ತಲ್ ನಿರ್ಧರಿಸಿದ್ದಾರೆ.
ದುಬೈನಲ್ಲಿ ಈಗಾಗಲೇ ಲಕ್ಷ್ಮಿ ಮಿತ್ತಲ್ ದೊಡ್ಡ ಅರಮನೆಯಂಥ ಬಂಗಲೆಯನ್ನು ಖರೀದಿಸಿದ್ದಾರೆ.
ಕಳೆದ ವರ್ಷ ಲೇಬರ್ ಪಾರ್ಟಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ನು ಏರಿಕೆ ಮಾಡಲಾಗಿತ್ತು. ಫ್ಯಾಮಿಲಿ ಕಂಪನಿಗಳನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವುದರ ಮೇಲೂ ಹೊಸ ತೆರಿಗೆ ವಿಧಿಸಲಾಗಿತ್ತು. ಜೊತೆಗೆ ಬ್ರಿಟನ್ ಬಿಟ್ಟು ಹೋಗುವವರ ಮೇಲೂ ಶೇ.20 ರಷ್ಟು ಎಕ್ಸಿಟ್ ತೆರಿಗೆ ವಿಧಿಸಲಾಗುತ್ತೆ ಎಂಬ ವದಂತಿಯೂ ಇದೆ. ಇದು ಬ್ರಿಟನ್ ದೇಶದ ಶ್ರೀಮಂತರಲ್ಲಿ ಅಸಮಾಧಾನ ಮೂಢಿಸಿದೆ.
ಲಕ್ಷ್ಮಿ ಮಿತ್ತಲ್ ಗೆ ಆದಾಯದ ಮೇಲಿನ ತೆರಿಗೆ ( ಕ್ಯಾಪಿಟಲ್ ಗೇನ್ ಟ್ಯಾಕ್ಸ್) ವಿಷಯವೇ ಅಲ್ಲ ಎಂದು ಲಕ್ಷ್ಮಿ ಮಿತ್ತಲ್ ಸಲಹೆಗಾರರೊಬ್ಬರು ಹೇಳಿದ್ದಾರೆ.
ಪಿತ್ರಾರ್ಜಿತ ಆಸ್ತಿ ಮೇಲಿನ ತೆರಿಗೆಯೇ ಪ್ರಮುಖ ವಿಷಯ. ವಿಶ್ವದಲ್ಲಿ ಎಲ್ಲೇ ಆಸ್ತಿ ಇದ್ದರೂ, ಶ್ರೀಮಂತರ ಆಸ್ತಿಗಳ ಮೇಲೆಲ್ಲಾ ಪಿತ್ರಾರ್ಜಿತ ಆಸ್ತಿ ತೆರಿಗೆಯನ್ನು ಹಾಕಲಾಗುತ್ತಿರುವುದು ಏಕೆ ಎಂಬುದನ್ನು ಶ್ರೀಮಂತ ವ್ಯಕ್ತಿಗಳು ಅರ್ಥ ಮಾಡಿಕೊಳ್ಳಲು ಆಗಿಲ್ಲ ಎಂದು ಲಕ್ಷ್ಮಿ ಮಿತ್ತಲ್ ಸಲಹೆಗಾರರೊಬ್ಬರು ಹೇಳಿದ್ದಾರೆ.
ಇಂಥ ಪರಿಸ್ಥಿತಿಯಲ್ಲಿ ಜನರಿಗೆ ಬ್ರಿಟನ್ ಬಿಟ್ಟು ಹೋಗದೇ ಬೇರೆ ಆಯ್ಕೆಗಳಿಲ್ಲ. ದುಃಖ ಅಥವಾ ಕೋಪದಿಂದ ಬಿಟ್ಟು ಹೋಗಬೇಕಾಗಿದೆ .
ಸಾವಿನ ತೆರಿಗೆಗಳನ್ನು ಶೇ.40 ರಷ್ಟುವರೆಗೂ ಬ್ರಿಟನ್ ನಲ್ಲಿ ವಿಧಿಸಲಾಗುತ್ತಿದೆಯಂತೆ. ದುಬೈ ಮತ್ತು ಸ್ವಿಟ್ಜರ್ ಲ್ಯಾಂಡ್ ದೇಶಗಳಲ್ಲಿ ಯಾವುದೇ ಪಿತ್ರಾರ್ಜಿತ ಆಸ್ತಿ ಮೇಲೆ ತೆರಿಗೆ ವಿಧಿಸುತ್ತಿಲ್ಲ.
/filters:format(webp)/newsfirstlive-kannada/media/media_files/2025/11/24/lakshmi-mittal-leaving-britan-1-2025-11-24-14-32-16.jpg)
ಲಕ್ಷ್ಮಿ ಮಿತ್ತಲ್ ರೀತಿಯೇ ಬೇರೆ ಉದ್ಯಮಿಗಳು ಬ್ರಿಟನ್ ತೊರೆದು ಬೇರೆ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.
ಭಾರತ ಮೂಲಕ ಟೆಕ್ ಉದ್ಯಮಿ , ಹೂಡಿಕೆದಾರ ಹೆರಮನ್ ನರೂಲಾ ಕೂಡ ಬ್ರಿಟನ್ ತೆೊರೆಯಲು ನಿರ್ಧರಿಸಿದ್ದಾರೆ.
ಪಿತ್ರಾರ್ಜಿತ ಆಸ್ತಿ ಮೇಲಿನ ತೆರಿಗೆ ಅಂದರೇ, ತಂದೆ ಸಾವನ್ನಪ್ಪಿದ ಬಳಿಕ ಆ ಆಸ್ತಿಯ ಮೇಲೆ ಆಸ್ತಿ ಮೌಲ್ಯದ ಶೇ.40 ರಿಂದ ಶೇ.50 ರಷ್ಟುರವರೆಗೂ ತೆರಿಗೆ ವಿಧಿಸಲಾಗುತ್ತೆ. ಇಷ್ಟೊಂದು ದೊಡ್ಡ ಮೊತ್ತದ ತೆರಿಗೆ ಪಾವತಿಸಿದರೇ, ಮಾತ್ರವೇ ಆ ಆಸ್ತಿ ಮಕ್ಕಳಿಗೆ ಸೇರುತ್ತೆ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಅರ್ಧದಷ್ಟು ಆಸ್ತಿಯನ್ನೇ ಮಾರಬೇಕಾದ ಪರಿಸ್ಥಿತಿ ಮಕ್ಕಳಿಗೆ ಬರುತ್ತೆ. ಇಂಥ ಸ್ಥಿತಿಯೇ ಬೇಡ ಎಂದು ಈಗಲೇ ಉದ್ಯಮಿಗಳು ಬ್ರಿಟನ್ ತೊರೆಯಲು ನಿರ್ಧರಿಸಿದ್ದಾರೆ.
ಭಾರತದಲ್ಲಿ ಪಿತ್ರಾರ್ಜಿತ ಆಸ್ತಿ ಮೇಲೆ ಯಾವುದೇ ತೆರಿಗೆ ವಿಧಿಸಲ್ಲ. ಬ್ರಿಟನ್ ನಂಥ ಕೆಲವೇ ದೇಶಗಳಲ್ಲಿ ಪಿತ್ರಾರ್ಜಿತ ಆಸ್ತಿ ಮೇಲೆ ಭಾರಿ ಪ್ರಮಾಣದ ತೆರಿಗೆ ವಿಧಿಸಲಾಗುತ್ತೆ. ಇದರಿಂದ ಸರ್ಕಾರಕ್ಕೆ ದೊಡ್ಡ ಮೊತ್ತದ ತೆರಿಗೆ ಸಂಗ್ರಹವಾಗುತ್ತೆ. ಆದರೇ, ಆಸ್ತಿ ಮಾಲೀಕರು ಅರ್ಧದಷ್ಟು ಆಸ್ತಿಯನ್ನು ಕಳೆದುಕೊಳ್ಳಬೇಕಾಗುತ್ತೆ. 100 ಎಕರೆ ಜಮೀನು ಇರುವ ಮಾಲೀಕ ಸಾವನ್ನಪ್ಪಿದ ಬಳಿಕ ಆ ಆಸ್ತಿಯನ್ನು ಮಕ್ಕಳಿಗೆ ವರ್ಗಾಯಿಸಲು ಆಸ್ತಿ ಮೌಲ್ಯದ ಶೇ.40 ರಿಂದ 50 ರಷ್ಟು ಮೌಲ್ಯವನ್ನು ತೆರಿಗೆ ಆಗಿ ಸರ್ಕಾರಕ್ಕೆ ಪಾವತಿಸಬೇಕು. ಅಂದರೇ, 100 ಎಕರೆ ಆಸ್ತಿಯನ್ನು 50 ಎಕರೆ ಆಸ್ತಿಯನ್ನು ಮಾರಬೇಕಾಗುತ್ತೆ. ಇನ್ನೂ ಮಕ್ಕಳಿಗೆ ಬಳಿಕ 50 ಎಕರೆ ಆಸ್ತಿ ಮಾತ್ರವೇ ಉಳಿಯುತ್ತೆ . ಅರ್ಧದಷ್ಟು ಆಸ್ತಿ, ಸಂಪತ್ತು ಮಾತ್ರವೇ ಮಕ್ಕಳಿಗೆ ಉಳಿಯುತ್ತೆ. ಇದು ನ್ಯಾಯನಾ ಎಂದು ಬ್ರಿಟನ್ ಸರ್ಕಾರವೇ ಹೇಳಬೇಕು.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us