/newsfirstlive-kannada/media/media_files/2026/03/01/hormuz-strait-close-by-iran-2026-03-01-17-24-28.jpg)
ಇರಾನ್ ನಲ್ಲಿ ಹಾದು ಹೋಗಿರುವ ಹಾರ್ಮುಜ್ ಜಲಸಂಧಿ
ಖಮೇನಿಯವರ ಸಾವನ್ನು ಇರಾನ್‌ನ ಸರ್ಕಾರಿ ಮಾಧ್ಯಮ ಇಂದು ಮುಂಜಾನೆ ದೃಢಪಡಿಸಿದ್ದು, ಟೆಹ್ರಾನ್‌ನಿಂದ ತೀಕ್ಷ್ಣ ಪ್ರತೀಕಾರದ ಎಚ್ಚರಿಕೆಗಳು ಬಂದವು. ಬೃಹತ್ ಜಂಟಿ ವೈಮಾನಿಕ ದಾಳಿ ಎಂದು ಅವರು ವಿವರಿಸಿದ ಮೊದಲ ದಿನವೇ 86 ವರ್ಷದ ನಾಯಕ ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದರು.
ಪ್ರಮುಖವಾಗಿ, ವಿಶ್ವದ ತೈಲದ 20% ಕ್ಕಿಂತ ಹೆಚ್ಚು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುತ್ತದೆ. ಇದು ಪರ್ಷಿಯನ್ ಕೊಲ್ಲಿಯನ್ನು ಓಮನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದೊಂದಿಗೆ ಸಂಪರ್ಕಿಸುತ್ತದೆ. ಈ ಪ್ರದೇಶದ ಸುತ್ತಲೂ ನಡೆಯುತ್ತಿರುವ ಭಾರೀ ಕ್ಷಿಪಣಿ ದಾಳಿಗಳು ಪೂರೈಕೆ ನಿರ್ಬಂಧಗಳ ಬಗ್ಗೆ ಕಳವಳವನ್ನು ಉಂಟುಮಾಡಿದ್ದು, ತೈಲ ಬೆಲೆಗಳಲ್ಲಿ ಏರಿಕೆಗೆ ಕಾರಣವಾಗಿದೆ.
ಜಗತ್ತಿನಲ್ಲಿ ಕಚ್ಛಾತೈಲದ ಬೆಲೆ ಪ್ರತಿ ಬ್ಯಾರೆಲ್ ಗೆ 80 ರಿಂದ 100 ಡಾಲರ್ ಏರಿಕೆಯಾಗುವ ಸಾಧ್ಯತೆ ಕೂಡ ಇದೆ. ಇರಾನ್ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದರೇ, ಜಗತ್ತಿನಲ್ಲಿ ಕಚ್ಚಾತೈಲದ ಪೂರೈಕೆಗೆ ತೊಂದರೆಯಾಗುತ್ತೆ. ಇದರಿಂದಾಗಿ ಸಹಜವಾಗಿಯೇ ಕಚ್ಚಾತೈಲದ ಬೆಲೆ ಏರಿಕೆಯಾಗುತ್ತೆ.
ಈಗಾಗಲೇ ಇರಾನ್ ದೇಶವು ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಕೆಲ ತೈಲ ಟ್ಯಾಂಕರ್ ಗಳಿಗೆ ತಿಳಿಸಿದೆ.
/filters:format(webp)/newsfirstlive-kannada/media/media_files/2026/01/04/crude-oil-2026-01-04-12-43-27.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us