Advertisment

ಟೆಸ್ಲಾ ಕಂಪನಿಯ ಸಿಇಓ ಎಲಾನ್ ಮಸ್ಕ್‌ಗೆ 1 ಟ್ರಿಲಿಯನ್ ಡಾಲರ್ ವೇತನ ನೀಡಿಕೆಗೆ ಒಪ್ಪಿಗೆ : ಟಾಪ್ ಒನ್ ವೇತನ ಪಡೆಯುವ ಸಿಇಓ ಮಸ್ಕ್‌

ಟೆಸ್ಲಾ ಕಂಪನಿಯ ಸಿಇಓ ಎಲಾನ್ ಮಸ್ಕ್‌ ಗೆ 1 ಟ್ರಿಲಿಯನ್ ಡಾಲರ್ ವೇತನ ನೀಡಲು ಟೆಸ್ಲಾ ಷೇರುದಾರರು ಒಪ್ಪಿಗೆ ನೀಡಿದ್ದಾರೆ. ಇದರಿಂದಾಗಿ ಬೇರೆ ಟೆಕ್ ಕಂಪನಿಯ ಸಿಇಓ ಸಂಬಳ ಪ್ಯಾಕೇಜ್‌ಗೆ ಹೋಲಿಸಿದರೇ, ಎಲಾನ್ ಮಸ್ಕ್ ಎಲ್ಲರಿಗಿಂತ ಹೆಚ್ಚಿನ ವೇತನ ಪಡೆಯುವ ಸಿಇಓಗಳ ಸಾಲಿನಲ್ಲಿದ್ದಾರೆ.

author-image
Chandramohan
ಎಲಾನ್ ಮಸ್ಕ್ ಸಂಪತ್ತು ಈಗ ಭಾರತದ ಅರ್ಧ ಬಜೆಟ್‌.. ಡೊನಾಲ್ಡ್​ ಟ್ರಂಪ್​ ಬೆಂಬಲಿಸಿದ್ದಕ್ಕೆ ಖುಲಾಯಿಸಿದ ಅದೃಷ್ಟ!
Advertisment
  • ಎಲಾನ್ ಮಸ್ಕ್ ಗೆ 1 ಟ್ರಿಲಿಯನ್ ಡಾಲರ್ ವೇತನ ನೀಡಲು ಒಪ್ಪಿಗೆ
  • ಟೆಸ್ಲಾ ಕಂಪನಿಯ ಷೇರುದಾರರಿಂದ ವೇತನ ಏರಿಕೆಗೆ ಒಪ್ಪಿಗೆ
  • ಬೇರೆ ಕಂಪನಿಯ ಸಿಇಓಗಳಿಗಿಂತ ಹೆಚ್ಚಿನ ವೇತನ ಪಡೆಯುವ ಎಲಾನ್ ಮಸ್ಕ್


ಟೆಸ್ಲಾ ಕಂಪನಿಯ ಷೇರುದಾರರು, ಕಂಪನಿಯ ಸಿಇಓ ಎಲಾನ್ ಮಸ್ಕ್‌ಗೆ ದಾಖಲೆಯ ವೇತನ ನೀಡಲು ಒಪ್ಪಿಗೆ ನೀಡಿದ್ದಾರೆ. ಎಲಾನ್ ಮಸ್ಕ್‌ಗೆ ಬರೋಬ್ಬರಿ 1 ಟ್ರಿಲಿಯನ್ ಡಾಲರ್  ವೇತನ ನೀಡಲು ಕಂಪನಿಯು ಒಪ್ಪಿಗೆ ಸೂಚಿಸಿದೆ.  ಟೆಸ್ಲಾ ಕಂಪನಿಯು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ರೋಬೋಟಿಕ್ಸ್ ಕಡೆಗೆ ಹೆಜ್ಜೆ ಹಾಕುತ್ತಿರುವಾಗ ಎಲಾನ್ ಮಸ್ಕ್‌ಗೆ ಕಂಪನಿಯು ತನ್ನ ಬೆಂಬಲವನ್ನು ಮುಂದುವರಿಸಿದೆ. 
1 ಟ್ರಿಲಿಯನ್ ಡಾಲರ್ ಅಂದರೇ, ಭಾರತದ ರೂಪಾಯಿ ಲೆಕ್ಕದಲ್ಲಿ 88 ಲಕ್ಷ ಕೋಟಿ ರೂಪಾಯಿ ಆಗುತ್ತೆ. ಇದು ಅನೇಕ ದೇಶಗಳ ಜಿಡಿಪಿ ಗಿಂತ ದೊಡ್ಡ ಮೊತ್ತ. ಭಾರತವು ಈಗ 4.13 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಿದೆ. 

Advertisment

ಟೆಸ್ಲಾ ಕಂಪನಿಯ ಶೇ.75 ರಷ್ಟು ಷೇರುದಾರರು ಎಲಾನ್ ಮಸ್ಕ್ ನಾಯಕತ್ವವನ್ನು ಮುಂದುವರಿಸಲು ವೇತನ ಪ್ಯಾಕೇಜ್ ಹೆಚ್ಚಳದ ಪರವಾಗಿ ಮತ ಚಲಾಯಿಸಿದ್ದಾರೆ.  1 ಟ್ರಿಲಿಯನ್ ಡಾಲರ್ ಅನ್ನು 12 ಕಂತುಗಳ ಸ್ಟಾಕ್ ಆಯ್ಕೆಗಳ ಪ್ಯಾಕೇಜ್ ಅನ್ನು ರಚಿಸಲಾಗಿದೆ.  ಮುಂದಿನ ದಶಕದಲ್ಲಿ ಟೆಸ್ಲಾ ಮಹತ್ವಾಕಾಂಕ್ಷೆಯ ಕಾರ್ಯಾಚರಣೆ ಮತ್ತು ಮಾರುಕಟ್ಟೆ ಬಂಡವಾಳದ ಮೈಲಿಗಲ್ಲು ಸರಣಿ ಪೂರೈಸಿದರೇ, ಎಲಾನ್ ಮಸ್ಕ್ ಗೆ ಭರ್ಜರಿ ವೇತನ ಪ್ಯಾಕೇಜ್ ಸಿಗಲಿದೆ.

ಟೆಸ್ಲಾದಲ್ಲಿ ಮಸ್ಕ್ ಅವರ ಪಾಲು 13% ರಿಂದ 25% ಕ್ಕೆ ಏರುತ್ತದೆ.  ಎಲಾನ್ ಮಸ್ಕ್ ಖಾತೆಗೆ  423 ಮಿಲಿಯನ್ ಷೇರುಗಳನ್ನು ಸೇರ್ಪಡೆ ಆಗುತ್ತದೆ. 
 ಟೆಸ್ಲಾ $8.5 ಟ್ರಿಲಿಯನ್ ಮಾರುಕಟ್ಟೆ ಬಂಡವಾಳೀಕರಣವನ್ನು ಸಾಧಿಸುತ್ತದೆ ಎಂದು ಊಹಿಸಿದರೇ, ಸುಮಾರು $1 ಟ್ರಿಲಿಯನ್ ಮೌಲ್ಯದ ಸಂಭಾವ್ಯ ಅನಿರೀಕ್ಷಿತ ಲಾಭ ಸಿಗುತ್ತೆ. 
ಟೆಸ್ಲಾ ಮಂಡಳಿಯು ಕಂಪನಿಗೆ ಎಲಾನ್ ಮಸ್ಕ್ ನಾಯಕತ್ವ ಅತ್ಯಗತ್ಯ ಎಂದು ವಾದಿಸಿದೆ. 

ಮತದಾನದ ನಂತರ ಮಸ್ಕ್ ಹೂಡಿಕೆದಾರರಿಗೆ ಧನ್ಯವಾದ ಅರ್ಪಿಸಿದರು. "ನಾನು ಅದನ್ನು ತುಂಬಾ ಪ್ರಶಂಸಿಸುತ್ತೇನೆ" ಎಂದು ಅವರು ಷೇರುದಾರರನ್ನು ಉದ್ದೇಶಿಸಿ ಹೇಳಿದರು. 

Advertisment

ಅಮೆರಿಕದಲ್ಲಿ ಹೊಸ ಪಕ್ಷ ಸ್ಥಾಪನೆಗೆ ಭಾರೀ ವಿರೋಧ.. ಡೊನಾಲ್ಡ್​ ಟ್ರಂಪ್ vs ಎಲಾನ್ ಮಸ್ಕ್!



CNN ಪ್ರಕಾರ, ಮಸ್ಕ್ ಎಲ್ಲಾ ಗುರಿಗಳನ್ನು ಸಾಧಿಸಿದರೆ, ಪಾವತಿಯು ದಿನಕ್ಕೆ $275 ಮಿಲಿಯನ್ ಗಳಿಸುವುದಕ್ಕೆ ಸಮನಾಗಿರುತ್ತದೆ . ಕಾರ್ಪೊರೇಟ್ ಇತಿಹಾಸದಲ್ಲಿ ಯಾವುದೇ ಕಾರ್ಯನಿರ್ವಾಹಕ ವೇತನವನ್ನು  ಮೀರಿಸುತ್ತದೆ.
ಬ್ಲೂಮ್‌ಬರ್ಗ್‌ನ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಮಸ್ಕ್ ಅವರ ನಿವ್ವಳ ಮೌಲ್ಯವು ಈಗಾಗಲೇ ಸುಮಾರು $473 ಬಿಲಿಯನ್ ಆಗಿದೆ. 
ಎಲಾನ್  ಮಸ್ಕ್ ಅವರ ವೇತನ ಪ್ಯಾಕೇಜ್ ಅನ್ನು ಹೇಗೆ ಹೋಲಿಸಲಾಗುತ್ತದೆ
ಎಲಾನ್ ಮಸ್ಕ್ ಅವರ ಸಂಭಾವ್ಯ ವೇತನ ಪಾವತಿಯು ವಿಶ್ವದ ದೊಡ್ಡ ಕಂಪನಿಗಳಲ್ಲಿ ವೇತನ ಪ್ಯಾಕೇಜ್ ಗಳಿಗಿಂತ ದೊಡ್ಡದಾಗಿದೆ.  ಮೈಕ್ರೋಸಾಫ್ಟ್ ನ ಸತ್ಯ ನಾಡೆಲ್ಲಾ ವಾರ್ಷಿಕ  79.1 ಮಿಲಿಯನ್ ಡಾಲರ್ ಗಳಿಸಿದರೇ, ಆ್ಯಪಲ್ ಕಂಪನಿಯ ಟೀಮ್ ಕುಕ್‌ 74.6 ಮಿಲಿಯನ್ ಡಾಲರ್ ಮತ್ತು ಎನ್‌ವಿಡಿಯಾದ ಜೆನ್ಸನ್ ಹುವಾಂಗ್  49.9 ಮಿಲಿಯನ್ ಡಾಲರ್ ಗಳಿಸುತ್ತಿದ್ದಾರೆ.

ಕಂಪನಿಗಳ  ಸಿಇಒ ಗಳ ವಾರ್ಷಿಕ  ವೇತನ ರ‍್ಯಾಂಕ್


1 ಮೈಕ್ರೋಸಾಫ್ಟ್ ಸತ್ಯ ನಾಡೆಲ್ಲಾ $79.1 ಮಿಲಿಯನ್
2 ಆಪಲ್ ಟಿಮ್ ಕುಕ್ $74.6 ಮಿಲಿಯನ್
3 ಎನ್ವಿಡಿಯಾ ಜೆನ್ಸನ್ ಹುವಾಂಗ್ $49.9 ಮಿಲಿಯನ್
4 ಎಲಿ ಲಿಲ್ಲಿ ಡೇವಿಡ್ ರಿಕ್ಸ್ $29.2 ಮಿಲಿಯನ್
5 ಮೆಟಾ ಪ್ಲಾಟ್‌ಫಾರ್ಮ್‌ಗಳು ಮಾರ್ಕ್ ಜುಕರ್‌ಬರ್ಗ್ $27.2 ಮಿಲಿಯನ್
6 ವೀಸಾ ರಯಾನ್ ಮ್ಯಾಕ್‌ಇನೆರ್ನಿ $26.0 ಮಿಲಿಯನ್
7 ಆಲ್ಫಾಬೆಟ್ ಸುಂದರ್ ಪಿಚೈ $10.7 ಮಿಲಿಯನ್
8 ಬ್ರಾಡ್‌ಕಾಮ್ ಹಾಕ್ ಟಾನ್ $2.6 ಮಿಲಿಯನ್
9 ಅಮೆಜಾನ್ ಆಂಡಿ ಜಾಸ್ಸಿ $1.6 ಮಿಲಿಯನ್
10 ಬರ್ಕ್‌ಷೈರ್ ಹ್ಯಾಥ್‌ವೇ ವಾರೆನ್ ಬಫೆಟ್ $0.4 ಮಿಲಿಯನ್


(ಡೇಟಾ ಮೂಲ- ರಾಯಿಟರ್ಸ್)

ELON MUSK SALARY HIKE TO 1 TRILLION DOLLAR
Advertisment
Advertisment
Advertisment