/newsfirstlive-kannada/media/media_files/2025/10/31/jd-vance-and-wife-usha-2025-10-31-12-44-14.jpg)
ಜೆ.ಡಿ.ವ್ಯಾನ್ಸ್ ಮತ್ತು ಪತ್ನಿ ಉಷಾ
ಅಮೆರಿಕಾದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್, ಹಿಂದೂವಾಗಿ ಹುಟ್ಟಿ ಬೆಳೆದ ತಮ್ಮ ಪತ್ನಿ ಉಷಾ ವ್ಯಾನ್ಸ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಜೆ.ಡಿ.ವ್ಯಾನ್ಸ್ 2019 ರಲ್ಲಿ ಕ್ಯಾಥೋಲಿಕ್ ಧರ್ಮಕ್ಕೆ ಮತಾಂತರವಾಗಿದ್ದಾರೆ. ಜೆ.ಡಿ.ವ್ಯಾನ್ಸ್, ಈ ಹಿಂದೆ ಉಷಾ ಅವರನ್ನು ಭೇಟಿಯಾದಾಗ ತಮ್ಮನ್ನು ತಾವು ನಾಸ್ತಿಕ ಎಂದು ಪರಿಗಣಿಸಿದ್ದಾಗಿ ಜೆ.ಡಿ.ವ್ಯಾನ್ಸ್ ಹೇಳಿದ್ದಾರೆ. ಜೆ.ಡಿ.ವ್ಯಾನ್ಸ್ ಮತ್ತು ಉಷಾ ದಂಪತಿಯ ಮಕ್ಕಳು ಈಗ ಕ್ರಿಶ್ಚಿಯನ್ ಆಗಿ ಬೆಳೆದಿದ್ದಾರೆ. ಕ್ರಿಶ್ಚಿಯನ್ ಶಾಲೆಯಲ್ಲಿ ಓದುತ್ತಿದ್ದಾರೆ.
ತಮ್ಮ ಪತ್ನಿ ಉಷಾ ವ್ಯಾನ್ಸ್ ಒಂದು ದಿನ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸುತ್ತಾರೆ ಎಂದು ಜೆಡಿ ವ್ಯಾನ್ಸ್ ಹೇಳಿದ್ದಾರೆ .
ಮಿಸ್ಸಿಸ್ಸಿಪ್ಪಿಯಲ್ಲಿ ನಡೆದ ಟರ್ನಿಂಗ್ ಪಾಯಿಂಟ್ ಯುಎಸ್ಎ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ತಮ್ಮ ಹಿಂದೂ ಪತ್ನಿ ಉಷಾ ವ್ಯಾನ್ಸ್ ಒಂದು ದಿನ ಕ್ಯಾಥೊಲಿಕ್ ಚರ್ಚ್‌ನಿಂದ "ಪ್ರೇರಿತರಾಗಿ" ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸುತ್ತಾರೆ ಎಂದು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹೇಳಿದ್ದಾರೆ.
"ಈಗ, ಹೆಚ್ಚಿನ ಭಾನುವಾರಗಳಂದು, ಉಷಾ ನನ್ನೊಂದಿಗೆ ಚರ್ಚ್‌ಗೆ ಬರುತ್ತಾರೆ. ನಾನು ಅವಳಿಗೆ ಹೇಳಿದಂತೆ, ನಾನು ಸಾರ್ವಜನಿಕವಾಗಿ ಹೇಳಿದಂತೆ, ಮತ್ತು ಈಗ ನನ್ನ 10,000 ಆಪ್ತ ಸ್ನೇಹಿತರ ಮುಂದೆ ಹೇಳುವಂತೆ, ನಾನು ಚರ್ಚ್‌ನಲ್ಲಿ ಪ್ರೇರೇಪಿಸಲ್ಪಟ್ಟ ಅದೇ ವಿಷಯದಿಂದ ಅವಳು ಹೇಗಾದರೂ ಪ್ರಭಾವಿತಳಾಗುತ್ತಾಳೆ ಎಂದು ನಾನು ಭಾವಿಸುತ್ತೇನೆಯೇ? ಹೌದು, ನಾನು ಪ್ರಾಮಾಣಿಕವಾಗಿ ಬಯಸುತ್ತೇನೆ . ಏಕೆಂದರೆ ನಾನು ಕ್ರಿಶ್ಚಿಯನ್ ಸುವಾರ್ತೆಯನ್ನು ನಂಬುತ್ತೇನೆ . ಅಂತಿಮವಾಗಿ ನನ್ನ ಹೆಂಡತಿಯೂ ಅದನ್ನು ಅದೇ ರೀತಿಯಲ್ಲಿ ನೋಡುತ್ತಾಳೆ ಎಂದು ನಾನು ಭಾವಿಸುತ್ತೇನೆ," ಎಂದು ಉಷಾ ಅಂತಿಮವಾಗಿ "ಕ್ರಿಸ್ತನ ಬಳಿಗೆ ಬರುತ್ತಾಳೆಯೇ" ಎಂದು ಕೇಳಿದಾಗ ವ್ಯಾನ್ಸ್ ಹೇಳಿದರು. ತನ್ನ ಹೆಂಡತಿಯ ನಂಬಿಕೆಯು ತನಗೆ "ಸಮಸ್ಯೆಯನ್ನು ಉಂಟುಮಾಡುವುದಿಲ್ಲ" ಎಂದು ಅವರು ಹೇಳಿದರು.
ಅಮೆರಿಕಾದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅವರ ಪತ್ನಿ ಉಷಾ, ಭಾರತದ ಆಂಧ್ರಪ್ರದೇಶ ಮೂಲದವರು. ಉಷಾ ಅಮೆರಿಕಾದಲ್ಲಿ ಓದಿದ್ದಾರೆ. ಅಮೆರಿಕಾದಲ್ಲಿ ಜೆ.ಡಿ.ವ್ಯಾನ್ಸ್ ರನ್ನು ಪ್ರೀತಿಸಿ ವಿವಾಹವಾಗಿದ್ದಾರೆ.
ಆದರೇ, ಈಗ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಉಷಾ ಮತಾಂತರ ಆಗುತ್ತಾರೆ ಎಂದು ಜೆ.ಡಿ.ವ್ಯಾನ್ಸ್ ಹೇಳಿರುವುದು ಟೀಕೆಗೂ ಕಾರಣವಾಗಿದೆ. ಉಷಾ ಧಾರ್ಮಿಕ ನಂಬಿಕೆಯು ತನಗೆ ಸಮಸ್ಯೆ ಉಂಟು ಮಾಡುವುದಿಲ್ಲ ಎಂದು ಹೇಳಿದ ಮೇಲೆ ಉಷಾಗೆ ಹಿಂದೂ ಧರ್ಮವನ್ನು ಪಾಲಿಸಿಕೊಂಡು ಹೋಗಲು ಬಿಡಬೇಕು. ಆದರೇ, ಪತಿ ಜೆ.ಡಿ.ವ್ಯಾನ್ಸ್, ಪತ್ನಿ ಉಷಾಗೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಬಲವಂತ ಮಾಡಬಾರದು ಎಂದು ಭಾರತದ ಜನರು ಆಗ್ರಹಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us