Advertisment

ದೊಡ್ಡಣ್ಣ ಅಮೆರಿಕಾದ ಡೂಮ್ಸ್‌ ಡೇ ಮಿಸೈಲ್ ಟೆಸ್ಟ್ ರಹಸ್ಯ ಏನು? ಈ ಮಿಸೈಲ್ ಶಕ್ತಿ ಸಾಮರ್ಥ್ಯ ಎಂಥದ್ದು ಗೊತ್ತಾ?

ವಿಶ್ವದ ದೊಡ್ಡಣ್ಣ ಅಮೆರಿಕಾ ಮೊನ್ನೆ ಡೂಮ್ಸ್ ಡೇ ಮಿಸೈಲ್ ಟೆಸ್ಟ್ ನಡೆಸಿದೆ. ಇದ್ದಕ್ಕಿದ್ದಂತೆ ಅಮೆರಿಕಾವು ಡೂಮ್ಸ್ ಡೇ ಮಿಸೈಲ್ ಟೆಸ್ಟ್ ನಡೆಸಿದ್ದು ಏಕೆ? ಈ ಡೂಮ್ಸ್ ಡೇ ಮಿಸೈಲ್ ವಿಶೇಷತೆಗಳೇನು? ಅನ್ನೋದರ ಫುಲ್ ಡೀಟೈಲ್ಸ್ ಇಲ್ಲಿದೆ ಓದಿ.

author-image
Chandramohan
DOOMS DAY MISSILLES TEST (1)

ಡೂಮ್ಸ್ ಡೇ ಮಿಸೈಲ್ ಟೆಸ್ಟ್ ನಡೆಸಿದ ಅಮೆರಿಕಾ

Advertisment
  • ಡೂಮ್ಸ್ ಡೇ ಮಿಸೈಲ್ ಟೆಸ್ಟ್ ನಡೆಸಿದ ಅಮೆರಿಕಾ

ದೊಡ್ಡಣ್ಣನ 'ಮಿನಿಟ್‌ಮ್ಯಾನ್' ಟೆಸ್ಟ್‌, ಇರಾನ್‌ಗೆ ಸ್ಕೆಚ್‌ ಹಾಕಿದ್ರಾ? ಈ ಪರಾಕ್ರಮಿ ನುಗ್ಗಿದ್ರೆ ಆ ದೇಶ ಭೂಪಟದಿಂದಲೇ ಸರ್ವನಾಶ! ಹಾಗಾದರೇ, ಡೂಮ್ಸ್ ಡೇ ಮಿಸೈಲ್ ಟೆಸ್ಟ್ ರಹಸ್ಯ ಏನು? 

Advertisment

ಅಮೆರಿಕಾ, ಇಸ್ರೇಲ್‌, ಇರಾನ್‌ ನಡುವಿನ ಯುದ್ಧ ಅಪಾಯದ ಮಟ್ಟವನ್ನ ಮೀರಿ ಹೋಗೋ ಲಕ್ಷಣ ಕಾಣಿಸುತ್ತಿದೆ.  ಕಾರಣ ಇರಾನ್‌ ಯಾವುದಕ್ಕೂ ಜಗ್ಗದೇ ಬಗ್ಗದೇ ದಾಳಿ ಮಾಡುತ್ತಿದೆ. ಅದಕ್ಕೆ ಪ್ರತಿಯಾಗಿ ಅಮೆರಿಕಾ-ಇಸ್ರೇಲ್‌ ದಾಳಿಯನ್ನೂ ಮುಂದುವರಿಸಿವೆ. ಈ ನಡುವೆ ಅಣ್ವಸ್ತ್ರ ದಾಳಿಯ ಅಪಾಯವೂ ತಾಂಡವ ಆಡ್ತಿದೆ. ಕಾರಣ, ಅಮೆರಿಕಾ ನಡೆಸಿರುವ ಡೂಮ್ಸ್‌ ಡೇ ಮಿಸೈಲ್‌ ಟೆಸ್ಟ್‌. ಹಾಗಾದ್ರೆ, ಏನದು ಡೂಮ್ಸ್‌ ಡೇ ಟೆಸ್ಟ್‌? ಇದು ಶತ್ರುಕೋಟೆಗೆ ನುಗ್ಗಿ ಹೋದ್ರೆ ಆ ದೇಶವನ್ನ ಭೂಪಟದಿಂದಲೇ ನಾಶ ಮಾಡೋದು ಹೇಗೆ? ಆ ಬಗ್ಗೆ ಹೇಳ್ತೀವಿ ಈ ರಿಪೋರ್ಟ್‌ನಲ್ಲಿ.  ಸಂಪೂರ್ಣವಾಗಿ ಓದಿ.  
ಸುಪ್ರೀಂ ಲೀಡರ್‌ ಖಮೇನಿ ಹತ್ಯೆಯಿಂದ ಕೆರಳಿ ಕೆಂಡವಾಗಿರೋ ಇರಾನ್‌ ತನ್ನಲ್ಲಿರೋ ಎಲ್ಲಾ ಶಕ್ತಿಯನ್ನೂ ಉಪಯೋಗಿಸಿಕೊಂಡು  ಇಸ್ರೇಲ್‌ ಮೇಲೆ ಮತ್ತು ಮಧ್ಯಪ್ರಾಚ್ಯದಲ್ಲಿರೋ ಅಮೆರಿಕಾದ ವಾಯುನೆಲೆ, ರಾಯಭಾರ ಕಚೇರಿಗಳ ಮೇಲೆ ರಣಭೀಕರ ದಾಳಿ ನಡೆಸ್ತಿದೆ. ಏಕಾಂಗಿಯಾಗಿ 11 ಕ್ಕೂ ಹೆಚ್ಚು ರಾಷ್ಟ್ರಗಳ ಮೇಲೆ ಇರಾನ್‌ ದಾಳಿ ನಡೆಸ್ತಿರೋದನ್ನ ನೋಡಿ ಇಡೀ ಜಗತ್ತೇ ಶಾಕ್‌ ಆಗಿ ಹೋಗಿದೆ. ಆದ್ರೆ, ಅಮೆರಿಕಾ, ಇಸ್ರೇಲ್‌ ಪಡೆಗಳೇನು ಕೈಕಟ್ಟಿ ಕುಳಿತುಕೊಂಡಿಲ್ಲ. 
ಅವು ಇರಾನ್‌ ಮೇಲೆ ಮಿಸೈಲ್‌, ಬಾಂಬ್‌ಗಳ ಮಳೆ ಸುರಿಸ್ತಿದ್ದಾರೆ. ಪರಿಣಾಮ ಭಾರೀ ಪ್ರಮಾಣದಲ್ಲಿ ಯುದ್ಧಾಸ್ತ್ರಗಳ ನಾಶ, ಸಾರ್ವಜನಿಕರ ಸಾವು ನೋವು ತಾಂಡವ ಆಡ್ತಿದೆ. ಆದ್ರೆ, ಇರಾನ್‌ಗೆ ದಾಳಿ ನಿಲ್ಲಿಸಿ, ಇಲ್ಲದೇ ಇದ್ರೆ ಪರಿಣಾಮ ನೆಟ್ಟಗಿರಲ್ಲ ಅಂತ ಅಮೆರಿಕಾ ಹಲವಾರು ಬಾರಿ ಖಡಕ್‌ ವಾರ್ನಿಂಗ್ ಮಾಡಿದೆ. ಆದ್ರೂ ಇರಾನ್‌ ರೋಷಾವೇಷದಲ್ಲಿ ಅಟ್ಯಾಕ್‌ ಮಾಡ್ತಾನೆ ಇದೆ. ಆದರೇ,  ಯುದ್ಧದಲ್ಲಿ ಇರಾನ್‌ ನುಗ್ಗಿ ಹೋಗ್ತಾ ಇರೋ ವೇಗವನ್ನ ನೋಡಿದ್ರೆ ಅಮೆರಿಕಾ ಮತ್ತು ಇಸ್ರೇಲ್‌ಗೆ ಇನ್ನಷ್ಟು ಗುದ್ದು ನೀಡುವುದು  ಪಕ್ಕಾ ಆಗಿತ್ತು. ಆದ್ರೆ, ಈ ನಡುವೆ ಅಮೆರಿಕಾ ಸೈಲೆಂಟ್‌ ಆಗಿಯೇ ಅದೊಂದು ಭಯಾನಕ ಮಿಸೈಲ್‌ ಟೆಸ್ಟ್‌ ನಡೆಸಿದೆ. ಅದರ ಪರಾಕ್ರಮ ಕೇಳಿದ್ರೆ ಯಾರೇ ಆದ್ರೂ ಬೆಚ್ಚಿ ಬೀಳೋದ್‌ ಗ್ಯಾರಂಟಿ. 
ದೊಡ್ಡಣ್ಣನ 'ಮಿನಿಟ್‌ಮ್ಯಾನ್' ಟೆಸ್ಟ್‌, ಈಗೇಕೆ ಮಾಡಿದ್ರು?
ಈ ಪರಾಕ್ರಮಿ ನುಗ್ಗಿದ್ರೆ ಆ ದೇಶ ಭೂಪಟದಿಂದಲೇ ಸರ್ವನಾಶ!
ಅಮೆರಿಕಾ ನಡೆಸಿರೋ ಮಿಸೈಟ್‌ ಟೆಸ್ಟ್‌. ಇದೊಂದು ಅಸಾಮಾನ್ಯ ಮಿಸೈಲ್‌. ಇದರ ಹೆಸ್ರು ಮಿನಿಟ್‌ಮ್ಯಾನ್‌ 3 ಅಂತ. ಇದು ಡೂಮ್ಸ್‌ ಡೇ ಮಿಸೈಲ್ ಆಗಿದ್ದು, ಇದರ ಪರೀಕ್ಷೆಯನ್ನ ಅಮೆರಿಕಾ ಮಂಗಳವಾರ ರಾತ್ರಿ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ನಡೆಸಿದೆ. ಸಾಂಟಾ ಬಾರ್ಬರಾ ಬಳಿಯ ವ್ಯಾಂಡೆನ್‌ಬರ್ಗ್ ಬಾಹ್ಯಾಕಾಶ ಪಡೆ ನೆಲೆಯಿಂದ ರಾತ್ರಿ 11 ಗಂಟೆಗೆ ಉಡಾಯಿಸಲಾಯಿತು. ಯಾವ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲಾಗಿತ್ತೋ ಅದ್ರಲ್ಲಿ ಸಕ್ಸಸ್‌ ಆಗಿದೆ. ಆದ್ರೆ, ಈಗ ಇರಾನ್‌ ವಿರುದ್ಧ ಯುದ್ಧ ನಡೀತಾ ಇರೋ ಸಂದರ್ಭದಲ್ಲಿ ಅಮೆರಿಕಾ ಈ ಮಾರಕ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನ ಪರೀಕ್ಷೆ ನಡೆಸಿದ್ದು ಯಾಕೆ? ಅನ್ನೋದು ಪ್ರಮುಖವಾಗಿ ಇರುವ ಪ್ರಶ್ನೆ. ಅದರ ಸುತ್ತಮುತ್ತ ಅನುಮಾನದ ಹುತ್ತವೇ ಬೆಳೆದುಕೊಂಡಿದೆ. ಅಷ್ಟಕ್ಕೂ ಆ ಅನುಮಾನ ಏನು ಅನ್ನೋದನ್ನ ಹೇಳ್ತೀವಿ. ಡೂಮ್ಸ್‌ ಡೇ ಮಿಸೈಲ್‌ನ ಶಕ್ತಿ ಸಾಮರ್ಥ್ಯ ಏನು ಈಗ ವಿವರಿಸುತ್ತೇವೆ. 

ಡೂಮ್ಸ್‌ ಡೇ!
ಒಂದೇ ಒಂದ್‌ ನಿಮಿಷದಲ್ಲಿ ರೆಡಿ, ಅದ್ಕೆ ಮಿನಿಟ್‌ಮ್ಯಾನ್‌ ಹೆಸ್ರು!
ಪರಮಾಣು ಸಿಡಿತಲೆಗಳನ್ನ ಹೊತ್ತು ಗುರಿಯತ್ತ ನುಗ್ಗಿ ಹೋಗುತ್ತೆ!
ಹಿರೋಷಿಮಾ ಮೇಲೆ ಬೀಳಿಸಿದ್ದ ಬಾಂಬ್‌ಗಿಂತ 20 ಪಟ್ಟು ಹೆಚ್ಚು!
ಶತ್ರು ದೇಶಕ್ಕೆ ನುಗ್ಗಿದ್ರೆ ಭೂಪಟದಿಂದಲೇ ಸರ್ವನಾಶ ಗ್ಯಾರಂಟಿ!
ಭೂಮಿ, ಸಮುದ್ರ, ಗಾಳಿ... ಎಲ್ಲಾ ಕಡೆಯಿಂದಲೂ ಉಡಾವಣೆ!
ಪರಮಾಣು ಯುದ್ಧವನ್ನ ತಡೆಯೋದಕ್ಕೂ ಈ ಮಿಸೈಲ್‌ ರೆಡಿ!
ಅಮೆರಿಕಾದ ಬತ್ತಳಿಕೆಯಲ್ಲಿ 400 ಕ್ಕೂ ಹೆಚ್ಚು ಡೂಮ್ಸ್‌ ಡೇ! 


ಈ ಡೂಮ್ಸ್‌ ಡೇ ಕ್ಷಿಪಣಿ ಒಂದೇ ಒಂದು ನಿಮಿಷದಲ್ಲಿ ದಾಳಿಗೆ ರೆಡಿಯಾಗುತ್ತೆ. ಹೀಗಾಗಿ ಈ ಮಿಸೈಲ್‌ ಮಿನಿಟ್‌ಮ್ಯಾನ್‌ ಅಂತಾನೇ ನೇಮುಫೇಮು ಹೊಂದಿದೆ. ಇದು ಅಣ್ವಸ್ತ್ರದ ಸಿಡಿತಲೆಗಳನ್ನ ಹೊತ್ತು ಶತ್ರುದೇಶದ ಮೇಲೆ ನುಗ್ಗಿ ಹೋಗುತ್ತೆ. ಹಿರೋಷಿಮಾದಲ್ಲಿ ಬೀಳಿಸಿದ್ದ ಬಾಂಬ್‌ಗಿಂತ 20 ಪಟ್ಟು ಹೆಚ್ಚಿನ ಅಣ್ವಸ್ತ್ರ ಸಿಡಿತಲೆಗಳನ್ನ ಹೊತ್ತು ಸಾಗುವ ಶಕ್ತಿ ಸಾಮರ್ಥ್ಯ ಈ ಪರಾಕ್ರಮಿಗಿದೆ. ಒಂದು ವೇಳೆ ಶತ್ರುದೇಶದ ಮೇಲೆ ದಾಳಿ ಮಾಡಿತು ಅಂದ್ರೆ ಆ ದೇಶ ಭೂಪಟದಿಂದಲೇ ಸರ್ವನಾಶ ಆಗೋದು ಗ್ಯಾರಂಟಿ ಅಂತಾನೇ ಅರ್ಥ. ಇದನ್ನ ಭೂಮಿಯಿಂದ ಉಡಾವಣೆ ಮಾಡಬಹುದು, ಫೈಟರ್‌ ಜೆಟ್‌ಗಳನ್ನ ಬಳಕ್ಕೆ ಮಾಡಿಕೊಂಡು  ಗಾಳಿಯಿಂದಲೂ ಸಿಡಿಸಬಹುದು. ಇನ್ನು ಸಮುದ್ರದಲ್ಲಿ ನೌಕೆಗಳನ್ನ ಬಳಕೆ ಮಾಡಿಕೊಂಡು ಹಾರಿಸಬಹುದು. ವಿಶೇಷ ಅಂದ್ರೆ, ಇದನ್ನ ಪರಮಾಣು ಯುದ್ಧವನ್ನ ತಡೆಯೋದಕ್ಕಾಗಿಯೇ ವಿನ್ಯಾಸ ಮಾಡಲಾಗಿದೆ. ಆದ್ರೆ, ದಾಳಿ ಮಾಡೋದಕ್ಕೂ ರೆಡಿಯಾಗಿದೆ. ಈಗಾಗಲೇ ಅಮೆರಿಕಾದ ಸೇನಾ ಬತ್ತಳಿಕೆಯಲ್ಲಿ 400 ಕ್ಕೂ ಹೆಚ್ಚಿನ ಡೂಮ್ಸ್‌ ಡೇ ಮಿಸೈಲ್‌ಗಳಿವೆ.
ಈ ಬ್ಯಾಲಿಸ್ಟಿಕ್‌ ಕ್ಷಿಪಣಿ... ಒಂದು ಖಂಡದಿಂದ ಇನ್ನೊಂದು ಖಂಡಕ್ಕೆ ಗುರಿ ಇಟ್ಟು ನುಗ್ಗಿ ಹೋಗುವ ಸಾಮರ್ಥ್ಯವನ್ನ ಹೊಂದಿದೆ. ಅಮೆರಿಕಾ ಈ ಕ್ಷಿಪಣಿಯನ್ನ 1970 ರಲ್ಲಿಯೇ ರೆಡಿ ಮಾಡಿದೆ. ಇದೀಗ ಪರೀಕ್ಷೆ ನಡೆಸಿದರೂ,  ಕ್ಷಿಪಣಿ ಅಪ್‌ಡೇಟ್‌ ವರ್ಸನ್‌ ಆಗಿದೆ. ಇನ್ನು ಅಮೆರಿಕಾ ಈ ಡೂಮ್ಸ್‌ಡೇ ಕ್ಷಿಪಣಿಯನ್ನ ಉತ್ಪಾದಿಸೋದಕ್ಕೆ ಮೂಲ ಕಾರಣ ರಷ್ಯಾ ಮತ್ತು ಚೀನಾ ಜೊತೆಗಿನ ವೈರತ್ವ. ಹೌದು, ಅಮೆರಿಕಾಗೂ ಚೀನಾಗೂ  ಶತ್ರುತ್ವ ಇದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಹಾಗೇ ಅಮೆರಿಕಾಗೂ ರಷ್ಯಾಗೂ ವೈರತ್ವ ಹಳೆಯದು. ರಷ್ಯಾ ಮತ್ತು ಚೀನಾ ಜೊತೆ ಏನಾದ್ರೂ ಯುದ್ಧ ಶುರುವಾದ್ರೆ ಅಂತಹ ಸಂದರ್ಭದಲ್ಲಿ ಖಂಡಾಂತರ ಕ್ಷಿಪಣಿ ಬೇಕಾಗುತ್ತೆ. ಹಾಗೇ ಅಣ್ವಸ್ತ್ರ ದಾಳಿಯನ್ನ ತಡೆಯೋದಕ್ಕೆ ಮತ್ತು ದಾಳಿ ಮಾಡೋದಕ್ಕೆ ಕ್ಷಿಪಣಿ ಬೇಕಾಗುತ್ತೆ ಅನ್ನೋ ಹಿನ್ನೆಲೆಯಲ್ಲಿ ಅಮೆರಿಕಾ ಡೂಮ್ಸ್‌ ಡೇ ಕ್ಷಿಪಣಿಯನ್ನ ಉತ್ಪಾದನೆ ಮಾಡಿಕೊಂಡಿದೆ.  ಆದ್ರೆ, ಈಗ ಇರಾನ್‌ ವಿರುದ್ಧ ನಡೆಯುತ್ತಿರುವ ಯುದ್ಧದ ಸಂದರ್ಭದಲ್ಲಿ ಟೆಸ್ಟ್‌ ನಡೆಸಿದ್ದು ಅನುಮಾನ ಹೆಚ್ಚಿಸಿದೆ.

DOOMS DAY MISSILLES TEST




ಇರಾನ್‌ ಮೇಲಿನ ದಾಳಿಗೆ 'ಡೂಮ್ಸ್‌ ಡೇ' ಸ್ಕೆಚ್‌ ಹಾಕಿತಾ?
ಕೆರಳಿದ್ದ ಇರಾನ್‌ನ ಬೆದರಿಸೋ ತಂತ್ರ ಮಾಡ್ತಾ ದೊಡ್ಡಣ್ಣ?
ಕಳೆದ ಶನಿವಾರ ಅಮೆರಿಕಾ ಮತ್ತು ಇಸ್ರೇಲ್‌ ಪಕ್ಕಾ ಪ್ಲ್ಯಾನ್ ಮಾಡ್ಕೊಂಡ್ ಇರಾನ್‌ ಮೇಲೆ ಅಟ್ಯಾಕ್‌ ಮಾಡಿರುತ್ತಾರೆ. ಆ ಅಟ್ಯಾಕ್‌ನಲ್ಲಿ ಇರಾನ್‌ನ ಸರ್ಪೋಚ್ಚ ನಾಯಕ ಖಮೇನಿ, ಸುಮಾರು 48ಕ್ಕೂ ಹೆಚ್ಚು ನಾಯಕರು, 40 ಕ್ಕೂ ಹೆಚ್ಚು ಟಾಪ್‌ ಲೆವೆಲ್‌ ಕಮಾಂಡರ್‌ಗಳು ಸಾವನ್ನಪ್ಪಿದ್ದಾರೆ. ಬಹುಶಃ ಇರಾನ್‌ ಜಾಗದಲ್ಲಿ ಬೇರೆ ಯಾವುದಾದ್ರೂ ದೇಶ ಇದ್ರಿದ್ರೆ ಏನ್‌ ಮಾಡೋದಪ್ಪಾ ಅಂತ ಕೈ ಕಟ್ಟಿಕೊಂಡು ಕುಳಿತುಕೊಳ್ಳಬೇಕಾಗಿತ್ತು.  ಯಾಕಂದ್ರೆ, ಸುಪ್ರೀಂ ಲೀಡರ್‌ ಇಲ್ಲ ಅಂದ್ರೆ ರಾಜಕೀಯ ಅರಾಜಕತೆ ಸೃಷ್ಟಿಯಾಗುತ್ತೆ. ಆ ಸಂದರ್ಭದಲ್ಲಿ ಶತ್ರು ದೇಶದ ವಿರುದ್ಧ ಯುದ್ಧ ಮಾಡುವುದು ಇರಲಿ... ದೇಶದಲ್ಲಿ ಶಾಂತಿ ಕಾಪಾಡಿಕೊಳ್ಳುವುದೇ ದೊಡ್ಡ ಚಾಲೆಂಜ್‌ ಆಗಿರುತ್ತೆ. ಆದ್ರೆ, ಇರಾನ್‌ ಆ ಕ್ಷಣವೇ ತಿರುಗಿ ಬೀಳುತ್ತೆ. ತನ್ನ ಮೇಲೆ ಜಂಟಿ ದಾಳಿ ಮಾಡಿದ್ದು ಸೂಪರ್‌ ಪವರ್‌ ಅಮೆರಿಕಾ, ಯುದ್ಧ ನಿಪುಣ ಇಸ್ರೇಲ್‌ ಅನ್ನುವುದು  ಗೊತ್ತಿದ್ರೂ ಕೆಚ್ಚೆದೆಯ ಹೋರಾಟಕ್ಕಿಳಿಯುತ್ತೆ.
ಬಡವನ ಕೋಪ ದವಡೆಗೆ ಮೂಲ ಅನ್ನೋ ಹಾಗೇ ಇರಾನ್‌ ಕೋಪ ಒಂದೆಡು ಮಿಸೈಲ್‌ಗಳನ್ನ ಹಾರಿಸಿ, ಡ್ರೋನ್‌ಗಳನ್ನ ಸಿಡಿಸಿ ಮುಗಿದು ಹೋಗುತ್ತೆ ಅಂತ ಜಗತ್ತು ಅಂದುಕೊಂಡಿತ್ತು. ಆದ್ರೆ, ಜಗತ್ತು ಅಂದುಕೊಂಡಿದ್ದೇ  ಒಂದು ಆಗಿದ್ದೇ ಇನ್ನೊಂದು. ಮೊದಲು ಇಸ್ರೇಲ್‌ ಮೇಲೆ ದಾಳಿಯನ್ನ ಇರಾನ್‌ ಶುರು ಮಾಡುತ್ತೆ. ಕ್ರೂಸ್‌ ಕ್ಷಿಪಣಿಗಳನ್ನ, ಬ್ಯಾಲಿಸ್ಟಿಕ್‌ ಕ್ಷಿಪಣಿಗಳನ್ನ ಹಾರಿಸಿ ಇಸ್ರೇಲ್‌ಗೆ ಶಾಕ್‌ ನೀಡುತ್ತೆ. ಇಸ್ರೇಲ್‌ನ ಪ್ರಧಾನಿ ಕಚೇರಿಗೂ ಮಿಸೈಲ್ ಅಟ್ಯಾಕ್‌ ಮಾಡಿತ್ತು. ಇನ್ನು ಅಮೆರಿಕಾದ ಮೇಲೆ ದಾಳಿ ಮಾಡೋದಕ್ಕೆ ಇರಾನ್‌ಗೂ  ಅಮೆರಿಕಾಗೂ ಇರೋ ದೂರ ಸುಮಾರು 11- 12 ಸಾವಿರ ಕಿಲೋ ಮೀಟರ್‌ಗೂ ಜಾಸ್ತಿ. ಇದೇ ಕಾರಣಕ್ಕೆ ಇರಾನ್‌ ಅಮೆರಿಕಾ ಭೂಮಿಯನ್ನ ಟಾರ್ಗೆಟ್ ಮಾಡೋದಿಲ್ಲ. ಆದ್ರೆ, ಅಮೆರಿಕಾದ ಸೇನಾ ನೆಲೆ ಮತ್ತು ರಾಯಭಾರಿ ಕಚೇರಿ ಇರೋ ಮಧ್ಯಪ್ರಾಚ್ಯದ ದೇಶಗಳನ್ನ ಟಾರ್ಗೆಟ್ ಮಾಡಿದೆ. ಅದು ಯಾವ ಪರಿ, ಪ್ರಮಾಣದಲ್ಲಿ ಟಾರ್ಗೆಟ್‌ ಮಾಡುತ್ತೆ ಅಂದ್ರೆ, ಸೌದಿ ಅರೇಬಿಯಾ, ಕುವೈತ್‌, ಕತಾರ್‌, ಜೋರ್ಡಾನ್‌, ಯುಎಇ, ಇರಾಕ್‌ ಸೇರಿದಂತೆ ಮಧ್ಯಪ್ರಾಚ್ಯದ ಯಾವ ರಾಷ್ಟ್ರವನ್ನೂ ಬಿಟ್ಟಿಲ್ಲ. ಅಲ್ಲಿರೋ ಅಮೆರಿಕಾದ ರಾಡರ್‌ಗಳನ್ನ ಉಡೀಸ್‌ ಮಾಡಿ... ಸೇನಾ ನೆಲೆಗಳನ್ನ ನಾಶ ಮಾಡಿದೆ. ಅದನ್ನ ನೋಡಿ ಅಮೆರಿಕಾವೂ ಶಾಕ್‌ ಆಗಿದೆ. ಹೀಗಾಗಿಯೇ ಇದೀಗ ಡೂಮ್ಸ್‌ ಡೇ ಟೆಸ್ಟ್ ಮಾಡ್ತಾ ಅನ್ನೋ ಅನುಮಾನ ಶುರುವಾಗಿದೆ.
ಡೂಮ್ಸ್‌ ಡೇ ಟೆಸ್ಟ್‌ನಲ್ಲಿ ಎರಡು ಅನುಮಾನ ಕಾಣಿಸ್ತಿದೆ. ಒಂದು ಯುದ್ಧ ಏನಾದ್ರೂ ಇನ್ನು ತೀವ್ರ ರೂಪಕ್ಕೆ ಹೋಯ್ತು ಅಂದರೇ,   ಇಸ್ರೇಲ್ ಮತ್ತು ಅಮೆರಿಕಾದ ಸೇನಾ ನೆಲೆಗಳನ್ನ ಮೇಲೆ ಇರಾನ್‌ ಇನ್ನಷ್ಟು ಮಾರಕ ಕ್ಷಿಪಣಿಗಳನ್ನ ಸಿಡಿಸಿ ಹಾನಿ ಮಾಡ್ತು ಅಂದ್ರೆ,  ಅಂತಹ ಸಂದರ್ಭದಲ್ಲಿ ಇರಾನ್‌ ಮೇಲಿನ ದಾಳಿಗೆ ಅಮೆರಿಕಾ ಡೂಮ್ಸ್‌ ಡೇ ಮೂಲಕ ದಾಳಿ ಮಾಡೋದಕ್ಕೆ ಪ್ಲ್ಯಾನ್‌ ಮಾಡಿದ್ರೂ ಮಾಡಿರಬಹುದು. ಅದ್ರೆ, ಅದು ಯುದ್ಧದ ಅಂತಿಮ ಹಂತ ಅಂತ ಹೇಳಲಾಗ್ತಿದೆ. ಮತ್ತೊಂದು  ಅಂದ್ರೆ, ಇತ್ತೀಚಿಗೆ ಟ್ರಂಪ್‌ ನಾವು ದೊಡ್ಡ ದಾಳಿಗೆ ಸಿದ್ಧವಾಗ್ತಾ ಇದ್ದೀವಿ ಅನ್ನೋದನ್ನ ಹೇಳಿಕೊಂಡಿದ್ದರು.   ಹೀಗಾಗಿ ಅಣ್ವಸ್ತ್ರ ದಾಳಿಯನ್ನ ಅಲ್ಲಗೆಳೆಯೋ ಹಾಗೇ ಇಲ್ಲವೇ ಇಲ್ಲ.  ಹಾಗೇ ಡೂಮ್ಸ್‌ ಡೇ ಟೆಸ್ಟ್‌ ಹಿಂದೆ ಇರೋ ಇನ್ನೊಂದು  ಅನುಮಾನ ಅಂದ್ರೆ, ಇರಾನ್ ಅನ್ನ ಹೆದರಿಸೋದು. ಹೌದು, ಯುದ್ಧದ ಸಂದರ್ಭದಲ್ಲಿ ಶತ್ರು ದೇಶವನ್ನ ಯುದ್ಧದಿಂದ ಹಿಂದೆ ಸರಿಯುವಂತೆ ಮಾಡೋದಕ್ಕೆ, ಶಾಂತಿ ಒಪ್ಪಂದಕ್ಕೆ ಬರುವಂತೆ ಮಾಡೋದಕ್ಕೆ ಕೆಲವು ಬಾರಿ ಅಪಾಯಕಾರಿ ಯುದ್ಧಾಸ್ತ್ರಗಳ ಪರೀಕ್ಷೆ ನಡೆಸ್ತಾವೆ. ಅಮೆರಿಕಾ ನಡೆಸಿರುವ ಡೂಮ್ಸ್‌ ಡೇ ಟೆಸ್ಟ್‌ನ ಹಿಂದೆ ಆ ಕಾರಣವೂ ಇರಬಹುದು ಅನ್ನೋ ಅನುಮಾನ ಖಂಡಿತವಾಗಿಯೂ ಇದೆ. ಆದ್ರೆ, ಯುದ್ಧದಲ್ಲಿ ಅಣ್ವಸ್ತ್ರದ ಕಾರ್ಮೋಡ ಇರೋದು ಮಾತ್ರ ಸತ್ಯ. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Doomsday missille test by USA
Advertisment
Advertisment
Advertisment