Advertisment

ಇರಾನ್ ವಿಚಾರದಲ್ಲಿ ಟ್ರಂಪ್ ಪ್ಲಾನ್ ಏನು? 3ನೇ ಮಹಾಯುದ್ಧಕ್ಕೆ ನಾಂದಿ ಹಾಡಿದ್ವಾ ಅಮೆರಿಕ-ಇಸ್ರೇಲ್?

ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಮತ್ತಷ್ಟು ಬಿಗಡಾಯಿಸಿದೆ. ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರ ಆಡಳಿತವನ್ನು ಅಂತ್ಯಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಸರ್ಕಾರ ಜಂಟಿಯಾಗಿ ಬೃಹತ್ ದಾಳಿಗೆ ಸಿದ್ಧತೆ ನಡೆಸ್ತಿವೆ.

author-image
Ganesh Kerekuli
trump vs iran
Advertisment

ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಮತ್ತಷ್ಟು ಬಿಗಡಾಯಿಸಿದೆ. ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರ ಆಡಳಿತವನ್ನು ಅಂತ್ಯಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಸರ್ಕಾರ ಜಂಟಿಯಾಗಿ ಬೃಹತ್ ದಾಳಿಗೆ ಸಿದ್ಧತೆ ನಡೆಸ್ತಿವೆ. 

Advertisment

ಆಡಳಿತ ಬದಲಾವಣೆಯೇ ಟ್ರಂಪ್ ಗುರಿ

ಕೇವಲ ಇರಾನ್ ಮೇಲೆ ನಿರ್ಬಂಧ ಹೇರುವುದು ಅಥವಾ ಸಣ್ಣಪುಟ್ಟ ದಾಳಿ ಮಾಡುವುದು ಅಮೆರಿಕದ ಉದ್ದೇಶವಲ್ಲ. ಬದಲಾಗಿ, ಇರಾನ್‌ನಲ್ಲಿ ಪ್ರಸ್ತುತ ಇರುವ ಇಸ್ಲಾಮಿಕ್ ಆಡಳಿತವನ್ನು ಪೂರ್ಣವಾಗಿ ಕಿತ್ತುಹಾಕಿ, ಅಲ್ಲಿ 'ಆಡಳಿತ ಬದಲಾವಣೆ' ಮಾಡುವುದು ಟ್ರಂಪ್ ಅವರ ಪ್ರಮುಖ ಅಜೆಂಡಾ ಆಗಿದೆ ಎಂದು ವರದಿಯಾಗಿದೆ. ಇದಕ್ಕಾಗಿ ಇಸ್ರೇಲ್ ಸೇನೆಯೊಂದಿಗೆ (IDF) ಅಮೆರಿಕದ ರಕ್ಷಣಾ ಪಡೆಗಳು ಕೈಜೋಡಿಸಿವೆ.

ಖಮೇನಿ ಟಾರ್ಗೆಟ್

ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರನ್ನೇ ಪ್ರಮುಖ ಟಾರ್ಗೆಟ್ ಮಾಡಲಾಗಿದೆ. ಖಮೇನಿ ಅವರ ಬಂಕ್‌ಗಳು, ಕಮಾಂಡ್ ಸೆಂಟರ್‌ಗಳು ಮತ್ತು ಇರಾನ್ ರೆವಲ್ಯೂಷನರಿ ಗಾರ್ಡ್ ಕೋರ್ (IRGC) ನ ಪ್ರಮುಖ ನೆಲೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲು ಯೋಜನೆ ರೂಪಿಸಲಾಗಿದೆ.

ಇಸ್ರೇಲ್‌ಗೆ ಅಮೆರಿಕ ಫುಲ್ ಸಪೋರ್ಟ್

ಇಸ್ರೇಲ್ ಮೇಲೆ ಇರಾನ್ ಮತ್ತು ಅದರ ಬೆಂಬಲಿತ ಗುಂಪುಗಳು ನಡೆಸುತ್ತಿರುವ ದಾಳಿಗೆ ಪ್ರತ್ಯುತ್ತರವಾಗಿ, ಇಸ್ರೇಲ್ ನಡೆಸುವ ಯಾವುದೇ ದೊಡ್ಡ ಮಟ್ಟದ ಕಾರ್ಯಾಚರಣೆಗೆ ಅಮೆರಿಕ ಸಂಪೂರ್ಣ ಬೆಂಬಲ ನೀಡಲಿದೆ. ಇರಾನ್‌ನ ಅಣ್ವಸ್ತ್ರ ನೆಲೆಗಳನ್ನು ಧ್ವಂಸ ಮಾಡುವುದು ಕೂಡ ಈ ಯೋಜನೆಯ ಭಾಗವಾಗಿದೆ ಎನ್ನಲಾಗಿದೆ.

Advertisment

2026ರ ನಿರ್ಣಾಯಕ ಯುದ್ಧ?

ಅಮೆರಿಕ ಮತ್ತು ಇಸ್ರೇಲ್‌ನ ಈ ನಡೆ ಇರಾನ್ ಅನ್ನು ಕೆರಳಿಸಿದೆ. ಒಂದು ವೇಳೆ ಖಮೇನಿ ಮೇಲೆ ದಾಳಿ ನಡೆದರೆ, ಇರಾನ್ ಕೂಡ ತನ್ನ ಬಳಿಯಿರುವ ಎಲ್ಲಾ ಕ್ಷಿಪಣಿಗಳನ್ನು ಬಳಸಿ ಪ್ರತಿದಾಳಿ ನಡೆಸುವ ಸಾಧ್ಯತೆಯಿದೆ. ಇದು ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡಲಿದೆಯೇ ಎಂಬ ಆತಂಕ ವಿಶ್ವದಾದ್ಯಂತ ಮನೆಮಾಡಿದೆ.

ಒಟ್ಟಿನಲ್ಲಿ, ಟ್ರಂಪ್ ಆಡಳಿತ ಮತ್ತು ನೆತನ್ಯಾಹು ನೇತೃತ್ವದ ಇಸ್ರೇಲ್ ಸರ್ಕಾರ ಇರಾನ್ ವಿಷಯದಲ್ಲಿ 'ಮಾಡು ಇಲ್ಲವೇ ಮಡಿ' ಎಂಬ ಹಂತಕ್ಕೆ ತಲುಪಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಮಧ್ಯಪ್ರಾಚ್ಯದಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಯುಎಇ ಅಬುಧಾಬಿ, ದುಬೈ, ಕತಾರ್‌ನ ದೋಹಾ, ಸೌದಿ ಅರೇಬಿಯಾದ ರಿಯಾದ್‌ ಮೇಲೆ ಇರಾನ್ ಪ್ರತಿ ದಾಳಿ, ಸ್ಪೋಟ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

DONALD TRUMP
Advertisment
Advertisment
Advertisment