/newsfirstlive-kannada/media/media_files/2026/01/05/nikitha-godishala-murder-in-usa-1-2026-01-05-12-24-02.jpg)
ಅಮೆರಿಕಾದಲ್ಲಿ ಹತ್ಯೆಯಾದ ಭಾರತದ ನಿಕಿತಾ ಗೋಡಿಶಾಲ
ಹೊಸ ವರ್ಷದ ಮುನ್ನಾದಿನದಂದು ಮೇರಿಲ್ಯಾಂಡ್‌ನ ತನ್ನ ಮಾಜಿ ಗೆಳೆಯನಿಂದಲೇ ಯುವತಿಯ ಹತ್ಯೆಯಾಗಿದೆ. ಹೊಸ ವರ್ಷ 2026 ರ ಮೊದಲ ಸೂರ್ಯೋದಯವನ್ನು ನೋಡುವ ಮುನ್ನವೇ ಆಕೆಯ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಅಮೆರಿಕಾದ ಮೇರಿ ಲ್ಯಾಂಡ್ ನಲ್ಲಿ ಭಾರತ ಮೂಲದ ಯುವತಿಯ ಹತ್ಯೆಯಾಗಿದೆ. 27 ವರ್ಷದ ನಿಕಿತಾ ಗೋಡಿಶಾಲ ಹತ್ಯೆಯಾದವರು. ಡಿಸೆಂಬರ್ 31 ರಂದು ತನ್ನ ಮಾಜಿ ಗೆಳೆಯನ ಅಪಾರ್ಟ್ ಮೆಂಟ್‌ಗೆ ಹೋದಾಗ, ನಿಕಿತಾ ಗೋಡಿಶಾಲಾ ಹತ್ಯೆಯಾಗಿದೆ. ಅಮೆರಿಕಾದ ಎಲ್ಲಿಕಾಟ್ ನಗರದಲ್ಲಿ ನಿಕಿತಾ ಡೇಟಾ ಮತ್ತು ಸ್ಟ್ರಾಟಜಿ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಮಾಜಿ ಗೆಳೆಯ ಅರ್ಜುನ್ ಶರ್ಮಾ ಅಪಾರ್ಟ್ ಮೆಂಟ್ ನಲ್ಲಿ ನಿಕಿತಾ ಗೋಡಿಶಾಲ ಶವ ಪತ್ತೆಯಾಗಿದೆ. ಮಾಜಿ ಗೆಳೆಯ ಅರ್ಜುನ್ ಶರ್ಮಾನೇ ನಿಕಿತಾ ಗೋಡಿಶಾಲಳನ್ನು ಹತ್ಯೆ ಮಾಡಿ ಪರಾರಿಯಾಗಿರುವ ಶಂಕೆ ಇದೆ. ಅರ್ಜುನ್ ಶರ್ಮಾ ವಿರುದ್ಧ ಹೋವಾರ್ಡ್ ಕೌಂಟಿ ಪೊಲೀಸರು ಕೊಲೆ ಆರೋಪ ಹೊರಿಸಿದ್ದು, ಬಂಧನದ ವಾರಂಟ್ ಪಡೆದಿದ್ದಾರೆ.
/filters:format(webp)/newsfirstlive-kannada/media/media_files/2026/01/05/nikitha-godishala-murder-in-usa-2026-01-05-12-26-38.jpg)
ಅರ್ಜುನ್ ಶರ್ಮಾನೇ ನಿಕಿತಾ ಗೋಡಿಶಾಲ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರಿಗೆ ಜನವರಿ 2 ರಂದು ದೂರು ನೀಡಿದ್ದ. ಡಿಸೆಂಬರ್ 31 ರಂದು ಮೇರಿಲ್ಯಾಂಡ್ ನಗರದ ನನ್ನ ಅಪಾರ್ಟ್ ಮೆಂಟ್ ನಲ್ಲಿ ಕೊನೆಯ ಭಾರಿಗೆ ನಿಕಿತಾ ಗೋಡಿಶಾಲಳನ್ನು ನೋಡಿದ್ದಾಗಿ ಅರ್ಜುನ್ ಶರ್ಮಾ ಪೊಲೀಸರಿಗೆ ದೂರು ನೀಡಿದ್ದಾನೆ. ಜನವರಿ 3 ರಂದು ಅರ್ಜುನ್ ಶರ್ಮಾ ಅಪಾರ್ಟ್ ಮೆಂಟ್ ಶೋಧಿಸಿದಾಗ, ನಿಕಿತಾ ಗೋಡಿಶಾಲ ದೇಹದ ಮೇಲೆ ಗಾಯದ ಗುರುತುಗಳೊಂದಿಗೆ ಸತ್ತು ಬಿದ್ದಿರುವುದು ಗೊತ್ತಾಗಿದೆ. ಇನ್ನೂ ನಿಕಿತಾ ಮಿಸ್ಸಿಂಗ್ ಆಗಿದ್ದಾರೆ ಎಂದು ಪೊಲೀಸರಿಗೆ ದೂರು ಕೊಟ್ಟ ಜನವರಿ 2 ರಂದೇ ಅರ್ಜುನ್ ಶರ್ಮಾ , ಅಮೆರಿಕಾದ ತೊರೆದು ವಿಮಾನ ಹತ್ತಿ, ಭಾರತಕ್ಕೆ ಪ್ರಯಾಣಿಸಿದ್ದ. ಡಿಸೆಂಬರ್ 31ರ ಸಂಜೆ 7 ಗಂಟೆ ಸುಮಾರಿಗೆ ಅರ್ಜುನ್ ಶರ್ಮಾ, ನಿಕಿತಾ ಗೋಡಿಶಾಲಳನ್ನು ಹತ್ಯೆಗೈದಿದ್ದಿದಾನೆ. ಬಳಿಕ ಜನವರಿ 2 ರಂದು ನಿಕಿತಾ, ಮಿಸ್ಸಿಂಗ್ ಕೇಸ್ ದಾಖಲಿಸಿ ಅಮೆರಿಕಾ ಬಿಟ್ಟು ಇಂಡಿಯಾಗೆ ಪರಾರಿಯಾಗಿದ್ದಾನೆ.
ಆದರೇ, ಪೊಲೀಸರಿಗೆ ಈ ಹತ್ಯೆಗೆ ಕಾರಣವೇನೆಂದು ಗೊತ್ತಾಗಿಲ್ಲ. ಭಾರತದ ಅಧಿಕಾರಿಗಳಿಗೆ ಅರ್ಜುನ್ ಶರ್ಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾರತ ಮತ್ತು ಅಮೆರಿಕಾದ ನಡುವೆ ಗಂಭೀರ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿ ಗಡೀಪಾರು ಮಾಡಲಾಗುತ್ತೆ. ಆದರೇ, ಇದು ಕೆಲ ತಿಂಗಳ ಸಮಯ ತೆಗೆದುಕೊಳ್ಳಲಿದೆ.
/filters:format(webp)/newsfirstlive-kannada/media/media_files/2026/01/05/nikitha-godishala-murder-in-usa-2-2026-01-05-12-27-43.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us