newsfirstkannada.com

ಲಕ್ಷಾಂತರ ಮಂದಿಯ ಹೃದಯ ಕದ್ದಿದ್ದ ‘ಚೀಮ್ಸ್’ ಇನ್ನಿಲ್ಲ.. ವಿಶ್ವವಿಖ್ಯಾತ ಮೀಮ್ಸ್‌ ಶ್ವಾನಕ್ಕೆ ಏನಾಯ್ತು?

Share :

Published August 21, 2023 at 12:03pm

Update August 21, 2023 at 12:15pm

    ಲಕ್ಷಾಂತರ ಮಂದಿಯನ್ನು ನಕ್ಕು ನಗಿಸಿದ್ದ ಮೀಮ್ಸ್ ಖ್ಯಾತಿಯ ಶ್ವಾನ

    ಭಯಾನಕ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಮೃತಪಟ್ಟ ಚೀಮ್ಸ್ ನಾಯಿ

    ಮೀಮ್ಸ್​ಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದ ಈ ಶ್ವಾನ ಸಖತ್ ಫೇಮಸ್

ನಿಷ್ಠೆ ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಶ್ವಾನ. ಸಾಕು ಪ್ರಾಣಿಗಳೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಬೆಕ್ಕು, ನಾಯಿ, ಮೊಲ, ಕುರಿ, ಹಸು ಹೀಗೆ ಹತ್ತು ಹಲವು ಪ್ರಾಣಿಗಳನ್ನು ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ತಮ್ಮ ಮನೆಯಲ್ಲಿ ಸಾಕುವುದುಂಟು. ಅದರಲ್ಲೂ ಸಾಕು ಪ್ರಾಣಿಗಳಲ್ಲಿ ಖ್ಯಾತಿ ಪಡೆದಿರೋ ಸಾಕು ನಾಯಿಗಳನ್ನು ಮನೆ ಮಾಲೀಕರು ಖರೀದಿ ಮಾಡುತ್ತಾರೆ. ಖರೀದಿ ಮಾಡಿ ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಮನೆಗೊಂದು ಮರ ಊರಿಗೊಂದು ವನ ಎಂಬ ಗಾದೆ ಮಾತಿನಂತೆ ಎಲ್ಲರ ಮನೆಯಲ್ಲೂ ನಾಯಿ. ಒಂದು ತುತ್ತು ಅನ್ನ ಹಾಕಿದರೆ ಸಾಕು ಇಡೀ ಜನ್ಮಪೂರ್ತಿ ನಮ್ಮ ಜೊತೆ ಇರೋ ಏಕೈಕ ಪ್ರಾಣಿ ಎಂದರೆ ಅದು ಶ್ವಾನ. ಇದೀಗ ಲಕ್ಷಾಂತರ ಜನರ ಗಮನ ಸೆಳೆದಿದ್ದ ನಾಯಿಯೊಂದು ಭಯಾನಕ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಮೃತಪಟ್ಟಿದೆ.

View this post on Instagram

A post shared by Cheems_Balltze (@balltze)

ಚೀಮ್ಸ್ ಎಂಬ ಹೆಸರಿನ ನಾಯಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿ ಮಾಡಿತ್ತು. ಬಾಲ್ಟ್ ಹೆಸರಿನ ನಾಯಿಯು 2017 ರಲ್ಲಿ ಮೀಮ್​ವೊಂದರ ಮೂಲಕ ಖ್ಯಾತಿ ಆಗಿ ‘ಚೀಮ್ಸ್’ ನಾಯಿಯು ಕ್ಯಾನ್ಸರ್​​ನಿಂದ 12 ನೇ ವಯಸ್ಸಿನಲ್ಲಿ ಮೃತಪಟ್ಟಿದೆ. ಈ ನಾಯಿಯು ಒಂದೊಂದು ಸನ್ನಿವೇಶಕ್ಕೆ ಭಿನ್ನ ವಿಭಿನ್ನವಾಗಿ ಫೋಟೋಗೆ ಪೋಸ್ ಕೊಡುತ್ತಿತ್ತು. ಹೀಗಾಗಿ ಸೋಷಿಯಲ್​ ಮಿಡಿಯಾದಲ್ಲಿ ಶರವೇಗದಲ್ಲಿ ಜನಪ್ರಿಯವಾಗಿತ್ತು. ಕೋವಿಡ್ ಸಮಯದಲ್ಲಿ ಈ ನಾಯಿಯ ಮೀಮ್ಸ್​ಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ಕಳೆದ ಕೆಲ ಸಮಯದಿಂದ ಚೀಮ್ಸ್​ಗೆ ಕ್ಯಾನ್ಸರ್ ಕಾಡಿತ್ತು. ಇದನ್ನು ಅದರ ಮಾಲೀಕ ಕ್ಯಾಥಿ ಅವರು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ವಿಷಯವನ್ನು ಫ್ಯಾನ್ಸ್​ಗಳಿಗೆ ತಿಳಿಸಿದರು. ಆದರೆ ಆ ಶ್ವಾನವು ಕ್ಯಾನ್ಸರ್​​ ಮೃತಪಟ್ಟಿದೆ. ಜನಪ್ರಿಯ ಶ್ವಾನವನ್ನು ಮೃತಪಟ್ಟ ವಿಷಯ ತಿಳಿದ ಕೂಡಲೆ ನೆಟ್ಟಿಗರು ಕಂಬನಿ ಮಿಡಿದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಕ್ಷಾಂತರ ಮಂದಿಯ ಹೃದಯ ಕದ್ದಿದ್ದ ‘ಚೀಮ್ಸ್’ ಇನ್ನಿಲ್ಲ.. ವಿಶ್ವವಿಖ್ಯಾತ ಮೀಮ್ಸ್‌ ಶ್ವಾನಕ್ಕೆ ಏನಾಯ್ತು?

https://newsfirstlive.com/wp-content/uploads/2023/08/dog-4.jpg

Load More