ಅಮೆರಿಕಾ ಅಧ್ಯಕ್ಷೀಯ ಚುನಾವಣೆ; ಟ್ರಂಪ್​ಗೆ ಆರಂಭಿಕ ಮುನ್ನಡೆ; ಕಮಲ್​ ಹ್ಯಾರೀಸ್​ಗೆ ಎಷ್ಟು ಮತ?

author-image
Ganesh Nachikethu
Updated On
ಅಮೆರಿಕಾ ಅಧ್ಯಕ್ಷೀಯ ಚುನಾವಣೆ; ಟ್ರಂಪ್​ಗೆ ಆರಂಭಿಕ ಮುನ್ನಡೆ; ಕಮಲ್​ ಹ್ಯಾರೀಸ್​ಗೆ ಎಷ್ಟು ಮತ?
Advertisment
  • ಭಾರೀ ಕುತೂಹಲ ಮೂಡಿಸಿದ ಅಮೆರಿಕಾ ಚುನಾವಣೆ
  • ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ​ ಟ್ರಂಪ್​ಗೆ ಆರಂಭಿಕ ಮುನ್ನಡೆ
  • ಭಾರತೀಯ ಹಿನ್ನೆಲೆಯ ಕಮಲ್​ ಹ್ಯಾರೀಸ್​ಗೆ ಎಷ್ಟು ಮತ?

ವಾಶಿಂಗ್ಟನ್: ಇಡೀ ಜಗತ್ತೇ ಭಾರೀ ಕುತೂಹಲದಿಂದ ಕಾಯುತ್ತಿರೋ ಬಹುನಿರೀಕ್ಷಿತ 2024ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಮತ ಎಣಿಕೆ ಕಾರ್ಯ ಶುರುವಾಗಿದೆ. ಇಂದು ಬೆಳಗ್ಗೆಯಿಂದಲೇ ಮತ ಎಣಿಕೆ ಬಿರುಸಿನಿಂದ ನಡೆಯುತ್ತಿದ್ದು, ಆರಂಭಿಕ ಹಂತದಲ್ಲೇ ಮಾಜಿ ಅಧ್ಯಕ್ಷ ಮತ್ತು ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್​ ಅವರು ಮುನ್ನಡೆ ಸಾಧಿಸಿದ್ದಾರೆ.

ಇನ್ನು, ಒಂದೆಡೆ ಡೊನಾಲ್ಡ್‌ ಟ್ರಂಪ್​ ಮುನ್ನಡೆ ಸಾಧಿಸಿದ್ರೆ, ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರಿಗೆ ಭಾರೀ ಹಿನ್ನಡೆ ಆಗಿದೆ. ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಡೊನಾಲ್ಡ್​ ಟ್ರಂಪ್​​​ ಸುಮಾರು 9 ರಾಜ್ಯಗಳಲ್ಲಿ ಹಾಗೂ ಕಮಲಾ ಹ್ಯಾರಿಸ್‌ 5 ರಾಜ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಮತ ಎಣಿಕೆ ಕಾರ್ಯ ರಾತ್ರಿಗೆ ಮುಗಿಯಲಿದ್ದು, ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ. ಗೆಲ್ಲೋ ಅಭ್ಯರ್ಥಿ ಮುಂದಿನ 4 ವರ್ಷಗಳ ಕಾಲ ಅಮೆರಿಕಾ ಅಧ್ಯಕ್ಷರಾಗಲಿದ್ದಾರೆ. ಅಮೆರಿಕಾದ ಪ್ರತಿಷ್ಠಿತ ಶ್ವೇತಭವನದಲ್ಲಿ ಕೂತು ರೂಲ್​ ಮಾಡಲಿದ್ದಾರೆ.

ಆರಂಭದಿಂದಲೂ ಟ್ರಂಪ್​ ಮುನ್ನಡೆ

ಅಮೆರಿಕಾದಲ್ಲಿ ಒಟ್ಟು 538 ಎಲೆಕ್ಟ್ರೋಲ್‌ ಸ್ಥಾನಗಳಿಗೆ ಮತ ಎಣಿಕೆ ನಡೆಯುತ್ತಿದೆ. ಇದರಲ್ಲಿ 270 ಸಂಖ್ಯೆ ತಲುಪಿದವರು ಗೆಲುವು ಸಾಧಿಸಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಟ್ರಂಪ್‌ 248 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕಮಲಾ ಹ್ಯಾರಿಸ್‌ 214 ಸ್ಥಾನಗಳಲ್ಲಿ ಮುಂದಿದ್ದಾರೆ.

ಅಧ್ಯಕ್ಷರಾಗಲು ಎಷ್ಟು ಮತ ಬೇಕು?

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ವಿಂಗ್‌ ರಾಜ್ಯಗಳು ಪ್ರಮುಖ ಪಾತ್ರವಹಿಸುತ್ತವೆ. ಈ ರಾಜ್ಯಗಳಲ್ಲಿ ಡೆಮೋಕ್ರಾಟ್ ಮತ್ತು ರಿಪಬ್ಲಿಕನ್ ಎರಡಕ್ಕೂ ಅಪಾರವಾದ ಬೆಂಬಲ ಇದೆ. ಪೆನ್ಸಿಲ್ವೇನಿಯಾ 19, ಮಿಚಿಗನ್ (10), ಜಾರ್ಜಿಯಾ (16), ವಿಸ್ಕಾನ್ಸಿನ್ (10), ಉತ್ತರ ಕೆರೊಲಿನಾ (16), ನೆವಾಡಾ (6) ಮತ್ತು ಅರಿಜೋನಾ (11) ಮತ ಹೊಂದಿವೆ. ಅಮೆರಿಕಾ ಅಧ್ಯಕ್ಷರಾಗಲು ಒಟ್ಟು 270 ಎಲೆಕ್ಟ್ರೋಲ್ ಮತಗಳ ಅವಶ್ಯಕತೆ ಇದೆ. ಯಾರು ಯಾವ ರಾಜ್ಯ ಗೆದ್ದರೂ 270 ಮತ ಪಡೆದವ್ರು ಪ್ರೆಸಿಡೆಂಟ್​ ಆಗಲಿದ್ದಾರೆ.

ಇದನ್ನೂ ಓದಿ: ಟೀಮ್​ ಇಂಡಿಯಾಗೆ ಡೆಡ್ಲಿ ಆಲ್‌ರೌಂಡರ್ ಎಂಟ್ರಿ; ಹಾರ್ದಿಕ್ ಪಾಂಡ್ಯಗೆ ಶುರುವಾಯ್ತು ಭಾರೀ ಆತಂಕ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment