newsfirstkannada.com

ಮ್ಯಾಟ್ರಿಮೋನಿಯಲ್ಲಿ ಪರಿಚಯ.. ಮದ್ವೆಯಾಗ್ತೀನಿ ಎಂದು ಲಕ್ಷ ಲಕ್ಷ ಪೀಕಿ ಎಸ್ಕೇಪ್​! ಯಾರು ಈ ಮನ್ಮಥ?

Share :

Published February 26, 2024 at 9:25am

    ಯುವತಿಗೆ ಸರಿಯಾಗಿ ಯಾಮಾರಿಸಿದ್ದ ಉಂಡೆ ನಾಮ ಹಾಕಿಕ

    ಪರಿಚಯವಾಗಿ 7 ತಿಂಗಳಲ್ಲೇ ಮದುವೆಯಾಗೋದಾಗಿ ನಂಬಿಸಿದ್ದ

    ಅಪ್ಪ-ಅಮ್ಮ ನಿವೃತ್ತ ಸರ್ಕಾರಿ ಉದ್ಯೋಗಿಗಳು ಎಂದು ಚೆನ್ನಾಗಿ ನಂಬಿಸಿದ್ದ

ವ್ಯಕ್ತಿಯೋರ್ವ ಯುವತಿಗೆ ಮದುವೆಯಾಗೋದಾಗಿ ನಂಬಿಸಿ ಬರೋಬ್ಬರಿ 10 ಲಕ್ಷ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಭಾರತ್ ತಮಿಳ್ ಮ್ಯಾಟ್ರಿಮೋನಿ ಪರಿಚಯವಾಗಿ ಯುವತಿಗೆ ಯಾಮಾರಿಸಿದ್ದಾನೆ. ಈ ವಂಚನೆ ಸಂಬಂಧ ಅಮೃತಹಳ್ಳಿ ಠಾಣೆಯಲ್ಲಿ ಯುವತಿ ದೂರು ನೀಡಿದ್ದಾಳೆ.

ಫ್ರಾನ್ಸಿನ್ ಕ್ರಿಸ್ಟೋಫರ್ ಎಂಬಾತ ಯುವತಿಗೆ ವಂಚಸಿದ್ದಾನೆ. ಪರಿಚಯವಾಗಿ 7 ತಿಂಗಳಲ್ಲೇ ಮದುವೆಯಾಗೋದಾಗಿ ನಂಬಿಸಿ ಲಕ್ಷ ಲಕ್ಷ ಪೀಕಿದ್ದಾನೆ. ಭಾರತ್ ತಮಿಳ್ ಮ್ಯಾಟ್ರಿಮೋನಿಯಲ್ಲಿ ಯುವತಿಗೆ ಪರಿಚಯವಾಗಿ ಕರ್ನಾಟಕ ಬ್ಯಾಂಕ್​ ಸೀನಿಯರ್ ಅಕೌಂಟೆಂಟ್ ಎಂದು ಮೋಸ ಮಾಡಿದ್ದಾನೆ. ಮೋಸ ಮಾಡೋದಕ್ಕೂ ಮುನ್ನ ತನ್ನದೇ ಆಡಿಟ್ ಕಚೇರಿ ಇದೆ ಎಂದಿದ್ದ ಆರೋಪಿ ಫ್ರಾನ್ಸಿನ್ ಯುವತಿಗೆ ನಂಬಿಸಿದ್ದಾನೆ.

ಫ್ರಾನ್ಸಿನ್ ಕ್ರಿಸ್ಟೋಫರ್

ಯುವತಿ ಬಳಿ ಫ್ರಾನ್ಸಿನ್ ತಂದೆ ನಿವೃತ್ತ ಆರ್ಮಿ ಆಫೀಸರ್, ತಾಯಿಯೂ ನಿವೃತ್ತ ಪ್ರಿನ್ಸಿಪಾಲ್ ಎಂದು ಹೇಳಿದ್ದಾನೆ. ಅವರು ಅಮೆರಿಕದಲ್ಲಿರೋ ತನ್ನ ಸೋದರನ ಮನೆಗೆ ಹೋಗಿದ್ದಾರೆ. ತಮಿಳುನಾಡಿಗೆ ವಾಪಸ್ಸಾಗ್ತಿದ್ದಂತೆ ಮಾತಾಡಿ ಎಂಗೇಜ್ಮೆಂಟ್ ಮತ್ತು ಮದುವೆಯಾಗೋಣ ಎಂದಿದ್ದಾನೆ. ಇವೆಲ್ಲವನ್ನು ಕೇಳಿ ಯುವತಿ ಓಕೆ ಎಂದಿದ್ದಾಳೆ. ಅದಾದ ಬಳಿಕ ವಂಚಕನ ಅಸಲಿ ಆಟ ಶುರುವಾಗಿದೆ. ತನಗೆ ಸ್ವಲ್ಪ ಐಟಿ ಪ್ರಾಬ್ಲಂ ಎದುರಾಗಿದೆ ಕ್ಲೀಯರ್ ಮಾಡಬೇಕು ಎಂದು ಹೇಳಿದ್ದಾನೆ. ಅದಕ್ಕೆ ಸ್ವಲ್ಪ ಹಣ ಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಹಂತ ಹಂತವಾಗಿ 10 ಲಕ್ಷ ರೂಪಾಯಿ ಪಡೆದು ವಂಚಸಿದ್ದಾನೆ.

ಇಷ್ಟೆಲ್ಲಾ ಆದ ಬಳಿಕ ಕೊನೆಗೆ ಮದ್ವೆಯಾಗೋದಕ್ಕೆ‌ ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಈ ವಂಚನೆ ಸಂಬಂಧ ಮೋಸ ಹೋದ ಯುವತಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಶುರು ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮ್ಯಾಟ್ರಿಮೋನಿಯಲ್ಲಿ ಪರಿಚಯ.. ಮದ್ವೆಯಾಗ್ತೀನಿ ಎಂದು ಲಕ್ಷ ಲಕ್ಷ ಪೀಕಿ ಎಸ್ಕೇಪ್​! ಯಾರು ಈ ಮನ್ಮಥ?

https://newsfirstlive.com/wp-content/uploads/2024/02/Bengaluru-2.jpg

Load More