newsfirstkannada.com

ಸರ್ಕಾರಿ ಶಾಲಾ ಮಕ್ಕಳ ಆವಿಷ್ಕಾರ; ಅಪಘಾತಕ್ಕೆ ಪ್ರಾಣಿಗಳು ಬಲಿಯಾಗದಂತೆ PIN ಡಿಟೇಕ್ಟಿವ್ ಕಂಡು ಹಿಡಿದ 9ನೇ ತರಗತಿ ಮಕ್ಕಳು

Share :

Published March 5, 2024 at 7:00am

  ಎಸ್.ಆ‌ರ್. ಬೊಮ್ಮಾಯಿ ಸರ್ಕಾರಿ ಶಾಲೆಯ ಮಕ್ಕಳ ಸಾಧನೆ

  ಪ್ರಾಣಿಗಳನ್ನು 500 ಮೀಟರ್ ಮುಂಚಿತವಾಗೇ ಗುರುತಿಸುತ್ತೆ

  ಪ್ರಾಣಿಗಳ ಜೀವ ಉಳಿಸಲು ಸರ್ಕಾರಿ ಶಾಲಾ ಮಕ್ಕಳ ಆವಿಷ್ಕಾರ

ದಿನನಿತ್ಯ ರಸ್ತೆ ಅಪಘಾತಕ್ಕೆ ಸಾವಿರಾರು ಜನ ಪ್ರಾಣ ಕಳೆದುಕೊಳ್ತಿದ್ದಾರೆ. ಸಾಕಷ್ಟು ಪ್ರಾಣಿಗಳು ಸಾವಿಗಿಡಾಗ್ತಿವೆ. ಇದನ್ನೆಲ್ಲಾ ತಪ್ಪಿಸೋಕೆ ಹುಬ್ಬಳ್ಳಿಯ ಶಾಲಾ ವಿದ್ಯಾರ್ಥಿಗಳು ಪಿಐಎನ್ ಡಿಟೇಕ್ಟಿವ್ ಡಿವೈಸ್ ಕಂಡು ಹಿಡಿದಿದ್ದಾರೆ. ಹಾಗಾದ್ರೆ ಏನಿದು ಪಿಐಎನ್ ಡಿಟೇಕ್ಟಿವ್? ಹೇಗೆಲ್ಲಾ ಕೆಲಸ ಮಾಡುತ್ತೆ? ಇಲ್ಲಿದೆ ಡಿಟೇಲ್ಸ್‌.

ರಸ್ತೆ ಅಪಘಾತದಿಂದ ದಿನಕ್ಕೆ ಸಾವಿರಾರು ಜನ, ಪ್ರಾಣಿಗಳು ಜೀವ ಕಳೆದುಕೊಳ್ಳೋದು ಗಾಯವಾಗೋದು ಸಹಜವಾಗಿದೆ. ಇದಕ್ಕೆ ಏನಾದರೂ ಪರಿಹಾರ ಹುಡುಕಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ನಿಜಕ್ಕೂ ಸಾಧನೆಯೊಂದನ್ನ ಮಾಡಿದ್ದಾರೆ.

ಹುಬ್ಬಳ್ಳಿಯ ಎಸ್.ಆ‌ರ್.ಬೊಮ್ಮಾಯಿ ಸರ್ಕಾರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳಾದ ವಿರೇಶಗೌಡ ಪಾಟೀಲ್ ಮತ್ತು ಹನುಮಂತ ಹೊಸಮನಿ ಎಂಬ ವಿದ್ಯಾರ್ಥಿಗಳು ಹೊಸ ಆವಿಷ್ಕಾರ ಮಾಡಿದ್ದಾರೆ. ಪ್ರಾಣಿಗಳಿಗಿದೆ ಬದುಕುವ ಅಧಿಕಾರ, ಚಾಲಕರಿಗೆ ಬೇಕಾಗಿದೆ ತಂತ್ರಜ್ಞಾನ ಎಂಬ ಶೀರ್ಷಿಕೆಯಡಿ ಫ್ಯಾಸಿವ್ ಇನ್ಫ್ರಾರೆಡ್ ಮೋಶನ್ ಡಿಟೇಕ್ಟಿವ್ ಸೆನ್ಸಾ‌ರ್‌ನ ಸಂಶೋಧನೆ ಮಾಡಿದ್ದಾರೆ.

ಸೋಲಾರ್ ಮೂಲಕ ಕೆಲಸ ಮಾಡಬಲ್ಲ ಪಿಐಎನ್ ಡಿಟೇಕ್ಟಿವ್‌, ವಾಹನಗಳು ಚಲಿಸುವಾಗ ಎದುರಿಗೆ ಬರುವ ಪ್ರಾಣಿಗಳನ್ನ 500 ಮೀಟರ್ ಮುಂಚಿತವಾಗೇ ಗುರುತಿಸುತ್ತೆ.. ಅಲ್ಲದೇ ವಾಹನ ಸವಾರರಿಗೆ ಉಷ್ಣತೆಯನ್ನು ಪತ್ತೆ ಹಚ್ಚಿ ಪ್ರಾಣಿಗಳ ಚಲನವಲನಗಳ ಬಗ್ಗೆ ಮುನ್ಸೂಚನೆ ನೀಡುತ್ತೆ. ಅಂದ್ಹಾಗೆ ಸತತ ಆರು ತಿಂಗಳ ಪರಿಶ್ರಮದಿಂದ ಶಾಲೆಯ ಅಟಲ್ ಟಿಂಕರಿಂಗ್ ಪ್ರಯೋಗಾಲಯದಲ್ಲಿ ಪಿಐಎನ್ ಡಿಟೇಕ್ಟಿವ್ ತಯಾರಿಸಿದ್ದಾರೆ.

ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ 500 ಮೀಟರ್ ದೂರದಲ್ಲಿ ಪ್ರತಿ ನೂರು ಮೀಟರ್‌ಗೆ ಸೆನ್ಸಾರ್ ಅಳವಡಿಕೆ ಮಾಡಿ ಪ್ರಾಯೋಗಿಕ ಟೆಸ್ಟ್ ಮಾಡಲಾಯ್ತು. ವಿದ್ಯಾರ್ಥಿಗಳು ಈ ಪ್ರಯೋಗದಿಂದ ಪ್ರಾಣಿ ರಕ್ಷಣೆ ಹಾಗೂ ಅಪಘಾತ ತಡೆಯಲು ಸಾಧ್ಯವೆಂಬ ಅರಿವು ಮೂಡಿಸಿದ್ರು. ಈ ಸಂಶೋಧನೆಗೆ ಕಲಬುರ್ಗಿಯ ಸೇಡಂನಲ್ಲಿ 300 ಪ್ರಾಜೆಕ್ಟ್ ನಲ್ಲಿ ಪ್ರಥಮ ಸ್ಥಾನ ಪಡೆದು 15 ವರ್ಷದಿಂದ ಇದೇ ಮೊದಲ ಬಾರಿಗೆ ಧಾರವಾಡ ಜಿಲ್ಲೆಯ ಮಕ್ಕಳಿಗೆ ರಾಜ್ಯಮಟ್ಟದಲ್ಲಿ ಯುವ ವಿಜ್ಞಾನಿ ಪ್ರಶಸ್ತಿ ಒಲಿದು ಬಂದಿದೆ.

ಒಟ್ಟಾರೆ, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ನಾವ್ಯಾರಿಗೂ ಕಮ್ಮಿ ಇಲ್ಲಾ ಎಂಬಂತೆ ಈ ಇಬ್ಬರು ವಿದ್ಯಾರ್ಥಿಗಳು ಇಡೀ ರಾಜ್ಯಕ್ಕೆ ತೋರಿಸಿಕೊಟ್ಟಿದ್ದಾರೆ.. ಇನ್ನೂ ಹೆಚ್ಚಿನ ತಂತ್ರಜ್ಞಾನವನ್ನು ಅಳವಡಿಸಲು ಸರ್ಕಾರ, ಸಹಕಾರ ನೀಡಬೇಕು ಅನ್ನೋದು ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ ಕನಸಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರಿ ಶಾಲಾ ಮಕ್ಕಳ ಆವಿಷ್ಕಾರ; ಅಪಘಾತಕ್ಕೆ ಪ್ರಾಣಿಗಳು ಬಲಿಯಾಗದಂತೆ PIN ಡಿಟೇಕ್ಟಿವ್ ಕಂಡು ಹಿಡಿದ 9ನೇ ತರಗತಿ ಮಕ್ಕಳು

https://newsfirstlive.com/wp-content/uploads/2024/03/hbl.jpg

Load More