/newsfirstlive-kannada/media/post_attachments/wp-content/uploads/2024/01/Money-11.jpg)
ನೀವು ಎಷ್ಟು ಬೇಕಾದ್ರೂ ದುಡಿಯಬಹುದು. ಲಕ್ಷ ಲಕ್ಷ ದುಡಿದ್ರೂ ಸೇವಿಂಗ್ಸ್ ಮಾಡಲಿಲ್ಲ ಎಂದರೆ ಏನು ಉಪಯೋಗ ಇಲ್ಲ. ಎಲ್ಲರೂ ರಿಟೈರ್ಮೆಂಟ್ ಲೈಫ್ಗೆ ಅಂತಲೇ ಅಷ್ಟೋ ಇಷ್ಟೋ ಸೇವಿಂಗ್ಸ್ ಇಟ್ಟುಕೊಳ್ಳಬೇಕು. ಸೇವಿಂಗ್ಸ್ ಎಂದರೆ ಥಟ್ ಅಂತಾ ನೆನಪಾಗೋದು ಫಿಕ್ಸಡ್ ಡೆಪಾಸಿಟ್. ಎಫ್ಡಿ ಮಾಡಲು ನಿಮಗೆ ಸೂಕ್ತವಾದ ಸ್ಥಳ ಪೋಸ್ಟ್ ಆಫೀಸ್.
ಕೇಂದ್ರ ಸರ್ಕಾರ ಎಲ್ಲಾ ವರ್ಗದ ಜನರಿಗೂ ಅಗತ್ಯವಾದ ವಿವಿಧ ರೀತಿಯ ಉಳಿತಾಯ ಸ್ಕೀಮ್ಸ್ ಶುರು ಮಾಡಿದೆ. ಅದರಲ್ಲೂ ಮಧ್ಯಮ ವರ್ಗದವರನ್ನು ಆಕರ್ಷಿಸೋದು ಈ ಒಂದು ಸ್ಕೀಮ್. ಅದು ಒಂದು ಸಣ್ಣ ಉಳಿತಾಯ ಪ್ರಮಾಣಪತ್ರ ಯೋಜನೆ. ನೀವು ಒಮ್ಮೆ ಹೂಡಿಕೆ ಮಾಡಿದ್ರೆ ಇದು ಡಬಲ್ ಆಗಲಿದೆ. ಅದೇ ಕಿಸಾನ್ ವಿಕಾಸ್ ಪತ್ರ ಯೋಜನೆ. ಈ ಯೋಜನೆಯಲ್ಲಿ ಠೇವಣಿ ತುಂಬಾ ಕಡಿಮೆ. ವಿಶೇಷ ಎಂದರೆ ಯಾರು ಬೇಕಾದ್ರೂ ಹೂಡಿಕೆ ಮಾಡಬಹುದು.
ಏನಿದು ಕಿಸಾನ್ ವಿಕಾಸ್ ಸ್ಕೀಮ್?
ಯಾರೇ ಆಗಲಿ ಈ ಯೋಜನೆಯಲ್ಲಿ ಕನಿಷ್ಠ ರೂ.1,000 ಹೂಡಿಕೆ ಮಾಡಬೇಕು. ಇದರ ಮೇಲೆ ಎಷ್ಟು ಹೂಡಿಕೆ ಮಾಡಿದ್ರೂ ನಿಮಗೆ ಆದಾಯ ಹೆಚ್ಚು. ಇದರ ಅವಧಿ 30 ತಿಂಗಳಿನಿಂದ 115 ತಿಂಗಳವರೆಗೂ ಇರಲಿದೆ. 9 ವರ್ಷಗಳು ಮತ್ತು 7 ತಿಂಗಳ ನಂತರ ಪಕ್ವವಾಗುತ್ತದೆ. ಯಾವುದೇ ಕಾರಣಕ್ಕೂ ಆರಂಭಿಕ ಹಿಂಪಡೆಯುವಿಕೆಗೆ ಅವಕಾಶ ಇಲ್ಲ.
ಮನಿ ಡಬಲ್
ಕಿಸಾನ್ ವಿಕಾಸ್ ಪತ್ರ ಯೋಜನೆ ಹೂಡಿಕೆ ಮಾಡಿದ ಹಣದ ಮೇಲೆ ಪ್ರತಿ ವರ್ಷ 7.5 ಶೇಕಡಾ ಬಡ್ಡಿ ಸಿಗಲಿದೆ. 9 ವರ್ಷ ಮತ್ತು 7 ತಿಂಗಳ ನಂತರ ಹೂಡಿಕೆ ಡಬಲ್ ಆಗಲಿದೆ. ನೀವು ಈಗ ಈ ಯೋಜನೆಯಲ್ಲಿ 5 ಲಕ್ಷ ಹೂಡಿಕೆ ಮಾಡಿದ್ರೆ 9 ವರ್ಷಗಳ ನಂತರ 10 ಲಕ್ಷ ಪಡೆಯುತ್ತೀರಿ.
18 ವರ್ಷ ಮೇಲ್ಪಟ್ಟ ಭಾರತೀಯರು ಮಾತ್ರ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ವಯಸ್ಕರು ತಮ್ಮ ಮಕ್ಕಳ ಹೆಸರಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ನೀವು ಎಷ್ಟು ಬೇಕಾದ್ರೂ ಹೂಡಿಕೆ ಮಾಡಬಹುದು ಅನ್ನೋದು ವಿಶೇಷ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ