/newsfirstlive-kannada/media/post_attachments/wp-content/uploads/2025/02/RUDRAMURTHI-1.jpg)
ಕೇಂದ್ರ ಸರ್ಕಾರ ಆದಾಯ ತೆರಿಗೆ ಪಾವತಿ ವಿಚಾರದಲ್ಲಿ ಮಹತ್ವದ ಘೋಷಣೆ ಮಾಡಿದ್ದು, ಮಧ್ಯಮ ವರ್ಗಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. 12 ಲಕ್ಷದವರೆಗೂ ಸಂಬಳ ಪಡೆಯುವ ಯಾವುದೇ ಉದ್ಯೋಗಿ ಇನ್ಮುಂದೆ ಟ್ಯಾಕ್ಸ್ (Tax) ಕಟ್ಟುವಂತಿಲ್ಲ.
ತೆರಿಗೆದಾರರಿಗೆ ಸಹಾಯವಾಗುವಂತೆ ಸ್ಲ್ಯಾಬ್ನಲ್ಲಿ ಭಾರೀ ಬದಲಾವಣೆ ಮಾಡಿದೆ. ಅದರ ಲಾಭವನ್ನು ಮಧ್ಯಮ ವರ್ಗ ಪಡಯಲಿದೆ. ಇಷ್ಟು ದಿನ 7 ಲಕ್ಷ ರೂಪಾಯಿ ವರೆಗೆ ತೆರಿಗೆಯಲ್ಲಿ ವಿನಾಯಿತಿ ಇತ್ತು. ಇದೀಗ ಬರೋಬ್ಬರಿ 12 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದೇ ವಿಚಾರದ ಬಗ್ಗೆ ಹೂಡಿಕೆ ತಜ್ಞ ರುದ್ರಮೂರ್ತಿ ಶಾಸ್ತ್ರಿ ಮಾತನಾಡಿದ್ದಾರೆ.
ಹೂಡಿಕೆ ತಜ್ಞರ ಅಭಿಪ್ರಾಯ ಏನು..?
ಕೇಂದ್ರ ಸಚಿವರ ಈ ನಿರ್ಧಾರದ ಬಗ್ಗೆ ಯಾರೂ ಕೂಡ ಊಹೆ ಮಾಡಿರಲಿಲ್ಲ. ಅಬ್ಬಬ್ಬಾ ಅಂದರೆ 10 ಲಕ್ಷದವರೆಗೆ ತೆರಿಗೆ ವಿನಾಯತಿ ನೀಡಬಹುದು ಎಂಬ ನಿರೀಕ್ಷೆಯಲ್ಲಿ ಜನರಿದ್ದರು. ಕೊನೆಗೂ ನಿರ್ಮಲಾ ಸೀತಾರಾಮನ್ ಸರ್ಪ್ರೈಸಿಂಗ್ ಗುಡ್ನ್ಯೂಸ್ ನೀಡಿದ್ದಾರೆ. ಇದರಿಂದದ ಸ್ಯಾಲರಿ ಹೊಂದಿರುವ ಮಿಡಲ್ ಕ್ಲಾಸ್ ಜನರಿಗೆ ಖರ್ಚು ಮಾಡಲು ಜಾಸ್ತಿ ಹಣ ಉಳಿಯಲಿದೆ.
ಇದನ್ನೂ ಓದಿ: ನೀವು ಚಿನ್ನದ ಮೇಲೆ ಹೂಡಿಕೆ ಶುರು ಮಾಡಿದ್ದಲ್ಲಿ ಹಿಂದೆ ಪಡೆದ ಲಾಭ ಈಗ ಸಿಗುವುದಿಲ್ಲ; ಯಾಕೆ ಗೊತ್ತಾ?
ಮಧ್ಯಮವರ್ಗದ ಜನರಲ್ಲಿ ಹೆಚ್ಚು ಹಣ ಉಳಿಯಲಿದೆ. ಅವರ ಖರ್ಚು, ವೆಚ್ಚಗಳು ಕೂಡ ಜಾಸ್ತಿ ಆಗಲಿದೆ. ತೆರಿಗೆಯಿಂದ ಉಳಿತಾಯವಾಗಿರುವ ಹಣದಿಂದ ಸೇವಿಂಗ್ಸ್ ಮಾಡಬಹುದು. ಬೇರೆ, ಬೇರೆ ರೀತಿಯಲ್ಲಿ ಹೂಡಿಕೆ ಮಾಡಬಹುದು. ಸರ್ಕಾರದ ಈ ನಿರ್ಧಾರ ಧನಾತ್ಮಕ ಪರಿಣಾಮ ಬೀರಲಿದೆ ಎಂದಿದ್ದಾರೆ.
ಇದು ಒಂದೇ ಅಲ್ಲ. ಈ ಬಜೆಟ್ನಲ್ಲಿ ಟ್ಯಾಕ್ಸ್ಗೆ ಸಂಬಂಧಿ ಅನೇಕ ನಿಯಮಗಳು ಬದಲಾಗಿದೆ. ಇದರಿಂದ ಜನರಿಗೆ ಹೆಚ್ಚು ಲಾಭ ಸಿಗದೆ. ಸರ್ಕಾರ ಟ್ಯಾಕ್ಸ್ ಹರಾಸ್ಮೆಂಟ್ಗಳ ಬಗ್ಗೆಯೂ ಗಮನ ನೀಡಿದೆ. ಎರಡು ಲಕ್ಷವರೆಗೆ ಎಕ್ಸ್ಟೆಂಟ್ ಟ್ಯಾಕ್ಸ್ ಅನ್ನು ನಾಲ್ಕು ಲಕ್ಷದವರೆಗೆ ಮಾಡಿದ್ದಾರೆ. ಹಿರಿಯ ನಾಗರಿಕರಿಗೆ ಇದ್ದ ಟಿಡಿಎಸ್ 50 ಸಾವಿರ ರೂಪಾಯಿ ಅನ್ನು ಒಂದು ಲಕ್ಷಕ್ಕೆ ಮಾಡಿದ್ದಾರೆ. ಈ ಮೂಲಕ ಸರ್ಕಾರ ಪ್ರಾಮಾಣಿಕವಾಗಿ ಟ್ಯಾಕ್ಸ್ ಕಟ್ಟುವ ಜನರಿಗೆ ರಿಲೀಫ್ ನೀಡುವ ಮೂಲಕ ಭಾರತ ಸರ್ಕಾರ ಜಿಡಿಪಿಯಲ್ಲಿ ಬೆಳವಣಿಗೆ ತರಲು ಮುಂದಾಗಿದೆ ಎಂಬ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಚಿನ್ನಾಭರಣ ಕೊಳ್ಳುವವರಿಗೆ ಶಾಕಿಂಗ್ ನ್ಯೂಸ್.. ಬಜೆಟ್ 2025 ಬೆನ್ನಲ್ಲೇ ಬಂಗಾರದ ಬೆಲೆ ಏರಿಕೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ