/newsfirstlive-kannada/media/post_attachments/wp-content/uploads/2024/01/Money-11.jpg)
ಜೀವನದಲ್ಲಿ ಯಾವಾಗ ಏನು ಬೇಕಾದ್ರೂ ಸಮಸ್ಯೆ ಆಗಬಹುದು. ಎಂಥಾ ಸಮಸ್ಯೆ ಎದುರಾಗಲಿದೆ ಎಂದು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ. ಹಾಗಾಗಿ ಸರಿಯಾದ ಆರ್ಥಿಕ ಯೋಜನೆ ಅನ್ನೋದು ಇರಲೇಬೇಕು. ಆಗ ಮಾತ್ರ ನಾವು ಕಷ್ಟಗಳ ವಿರುದ್ಧ ಈಜಲು ಸಾಧ್ಯ. ಅದಕ್ಕಾಗಿ ನಾವು ರಿಯಲ್ ಎಸ್ಟೇಟ್ ಆಗಲಿ, ಸ್ಟಾಕ್ ಮಾರ್ಕೆಟ್ ಆಗಲಿ, ಕ್ರಿಪ್ಟೋ ಕರೆನ್ಸಿ, ಗೋಲ್ಡ್ ಹೀಗೆ ಯಾವುದಾದ್ರೂ ಒಂದರ ಮೇಲೆ ಹೂಡಿಕೆ ಮಾಡಬೇಕು. ಇಷ್ಟೇ ಅಲ್ಲದೇ ಸೇವಿಂಗ್ಸ್ ಮಾಡಲು ಎಫ್‌ಡಿ ಅನ್ನೋ ಮತ್ತೊಂದು ಆಪ್ಷನ್ ಇದೆ.
ಇದನ್ನೂ ಓದಿ: ಸದ್ಗುರು ಜಗ್ಗಿ ವಾಸುದೇವ್‌ಗೆ ಬಿಗ್ ರಿಲೀಫ್.. ಗಂಭೀರ ಆರೋಪದಿಂದ ಮುಕ್ತಗೊಳಿಸಿದ ಸುಪ್ರೀಂಕೋರ್ಟ್!
ಎಫ್‌ಡಿ ಎಂದರೆ ಫಿಕ್ಸೆಡ್ ಡೆಪಾಸಿಟ್. ಫಿಕ್ಸೆಡ್ ಡೆಪಾಸಿಟ್ ಎಂದರೆ ಥಟ್ ಅಂತಾ ನೆನಪಾಗೋದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. SBI ನೀಡುವ ಅಮೃತ್ ಕಲಶ್ ಫಿಕ್ಸೆಡ್ ಡೆಪಾಸಿಟ್ (FD) ಸ್ಕೀಮ್ ಎಲ್ಲರಿಗೂ ಬೆಸ್ಟ್ ಪ್ಲಾನ್. ಈ ಸ್ಕೀಮ್ನಲ್ಲಿ ನೀವು ಹೂಡಿಕೆ ಮಾಡಿದ್ರೆ ಕೇವ 400 ದಿನಗಳ ಅವಧಿಯಲ್ಲಿ ಹೆಚ್ಚು ಆದಾಯ ಸಿಗಲಿದೆ. ಹಾಗಾಗಿ ಯಾರು ಬೇಕಾದ್ರೂ ಹೂಡಿಕೆ ಮಾಡಬಹುದು.
ಹೂಡಿಕೆ ಅವಧಿ ಎಷ್ಟು?
ಅಮೃತ್ ಕಲಾಶ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ 400 ದಿನಗಳ ಹೂಡಿಕೆ ಅವಧಿಯೊಂದಿಗೆ ಶುರು ಆಗುತ್ತದೆ. ಇದು ಅಲ್ಪಾವಧಿ ಆಯ್ಕೆಯಾಗಿದೆ. ದೀರ್ಘಕಾಲದವರೆಗೆ ಹಣ ಹೂಡಿಕೆ ಮಾಡಲು ಹಿಂದೇಟು ಹಾಕುವ, ಕಡಿಮೆ ಸಮಯದಲ್ಲಿ ಹೆಚ್ಚು ರಿಟರ್ನ್ಸ್ ನಿರೀಕ್ಷೆ ಮಾಡೋರಿಗೆ ಇದು ಸೂಕ್ತವಾದ ಸ್ಕೀಮ್.
ಬಡ್ಡಿ ದರ ಹೇಗೆ?
ಇನ್ನು, ಈ ಸ್ಕೀಮ್ನಲ್ಲಿ ಹೂಡಿಕೆ ಮಾಡೋ ಸಾಮಾನ್ಯ ನಾಗರಿಕರು 7.1% ಬಡ್ಡಿ ದರ ಪಡೆಯುತ್ತಾರೆ. ಹಿರಿಯ ನಾಗರಿಕರಿಗೆ ಇದಕ್ಕಿಂತಲೂ ಹೆಚ್ಚು ಎಂದರೆ 7.6% ಹೆಚ್ಚಿನ ಬಡ್ಡಿ ದರ ಸಿಗಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 1 ರಿಂದ 2 ವರ್ಷಗಳ ಅವಧಿಗೆ ಎಫ್‌ಡಿ ಮಾಡುವ ಸಾಮಾನ್ಯ ನಾಗರಿಕರು ಕೇವಲ 6.8% ಆದಾಯ ನೀಡುತ್ತದೆ. ಹಿರಿಯ ನಾಗರಿಕರಿಗೆ 7.3% ಬಡ್ಡಿ ಕೊಡುತ್ತದೆ.
ರಿಟರ್ನ್ಸ್ ಹೇಗಿದೆ?
ನೀವು 7.1% ಬಡ್ಡಿ ದರದಲ್ಲಿ 400 ದಿನಗಳವರೆಗೆ 2 ಲಕ್ಷ ಹೂಡಿಕೆ ಮಾಡಬಹುದು. ಆಗ ನೀವಿಟ್ಟ ಠೇವಣಿ ಮೇಲೆ 15,562 ಆದಾಯ ಸಿಗುತ್ತದೆ. ಅಂದರೆ 400 ದಿನಗಳ ಬಳಿಕ ನೀವು ಒಟ್ಟು ರೂ.2,15,562 ಪಡೆಯುತ್ತೀರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ