/newsfirstlive-kannada/media/post_attachments/wp-content/uploads/2025/02/INVEST-KARNATAK.jpg)
ಜಾಗತಿಕ ಬಂಡವಾಳ ಹೂಡಿಕೆದಾರರ 'ಇನ್ವೆಸ್ಟ್ ಕರ್ನಾಟಕ -2025' ಸಮಾವೇಶಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಸಮಾವೇಶವನ್ನ ಪ್ರಗತಿಯ ಮರುಕಲ್ಪನೆ ಶೀರ್ಷಿಕೆಯಡಿ ಚಾಲನೆ ನೀಡಲಾಯಿತು.. ಈ ಕಾರ್ಯಕ್ರಮಕ್ಕೆ ಕೇಂದ್ರ ರಕ್ಷಣಾ ಸಚಿವರು, ಸಿಎಂ, ಡಿಸಿಎಂ, ಹೆಸರಾಂತ ಉದ್ಯಮಿಗಳು ಸಾಕ್ಷಿಯಾಗಿದ್ದಾರೆ.. ಮೊದಲ ದಿನವೇ ರಾಜ್ಯಕ್ಕೆ 5 ಲಕ್ಷ ಕೋಟಿ ಬಂಡವಾಳ ಹೂಡಿಕೆ ಒಪ್ಪಂದ ಆಗಿದೆ.
ಐಟಿಬಿಟಿ ನಗರಿ ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಚಾಲನೆ ಸಿಕ್ಕಿದೆ. ಪ್ರಗತಿಯ ಮರುಕಲ್ಪನೆ ಶೀರ್ಷಿಕೆಯಡಿ ಇನ್ವೆಸ್ಟ್ ಕರ್ನಾಟಕ-2025ಕ್ಕೆ ಕರ್ನಾಟಕ ಆತಿಥ್ಯ ವಹಿಸಿದೆ.. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮಾವೇಶವನ್ನ ಉದ್ಘಾಟಿಸಿದ್ರೆ, ಇತ್ತ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಿದ್ದರು.. ಮೊದಲ ದಿನವೇ ದಾಖಲೆ ಮಟ್ಟದ ಬಂಡವಾಳ ಹರಿದು ಬಂದಿದೆ.
ಮೊದಲ ದಿನ ಹರಿದು ಬಂತು 5 ಲಕ್ಷ ಕೋಟಿ ರೂ. ಬಂಡವಾಳ!
60ಕ್ಕೂ ಹೆಚ್ಚು ಕಂಪನಿಗಳು ಮತ್ತು ನವೋದ್ಯಮಗಳು ತಯಾರಿಕೆ, ಸಂಚಾರ ಮತ್ತು ಶುದ್ಧ ಇಂಧನ ಕ್ಷೇತ್ರಗಳಲ್ಲಿ ಗಮನಾರ್ಹ ಬದಲಾವಣೆಗೆ ಕಾರಣವಾಗುವ ತಂತ್ರಜ್ಞಾನಗಳ ಪ್ರದರ್ಶನ ನಡೀತು.. ಇನ್ವೆಸ್ಟ್ ಕರ್ನಾಟಕ 2025- ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಮೊದಲ ದಿನವೇ ಭಾರೀ ಪ್ರಮಾಣದ ಹೂಡಿಕೆ ರಾಜ್ಯಕ್ಕೆ ಹರಿದು ಬಂದಿದೆ.
ಮೊದಲ ದಿನವೇ 5 ಲಕ್ಷ ಕೋಟಿ ರೂ. ಮೊತ್ತದ ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. 21 ಪ್ರಮುಖ ಹೂಡಿಕೆ ಯೋಜನೆಗಳು ಘೋಷಣೆ ಆಗಿದ್ದು, ಅವುಗಳಲ್ಲಿ ಸೌರ, ಪವನ ಶಕ್ತಿ, ನವೀಕರಿಸಬಹುದಾದ ಇಂಧನ, ಸಿಮೆಂಟ್ ಸೇರಿ ವಿವಿಧ ವಲಯಗಳ ಹೂಡಿಕೆ ಯೋಜನೆಗಳು ಸೇರಿವೆ.. ಮುಖ್ಯವಾಗಿದೆ.. ಜಿಎಸ್‌ಡಬ್ಲ್ಯು ನಿಯೊ ಎನರ್ಜಿ ಲಿ.ನಿಂದ 56,000 ಕೋಟಿ ರೂ. ಹೂಡಿಕೆಗೆ ಒಪ್ಪಂದ ಆಗಿದೆ. 50,000 ಕೋಟಿ ರೂ. ಮೊತ್ತದ ಹೂಡಿಕೆಯನ್ನ ಟಾಟಾ ಪವರ್ ರಿನ್ಯೂವೇಬಲ್ ಎನರ್ಜಿ ಲಿ. ಘೋಷಿಸಿದೆ. ಮಹೀಂದ್ರಾ ಸಸ್ಟೆನ್ ಪ್ರೈವೇಟ್ ಲಿ.ನಿಂದ 35,000 ಕೋಟಿ ರೂ. ಮೊತ್ತದ ಹೂಡಿಕೆ ಆಗಿದೆ.
ಇದನ್ನೂ ಓದಿ:ಗದಗ ಪೊಲೀಸರ ದಾಳಿ.. ಅಕ್ರಮ ಬಡ್ಡಿ ದಂಧೆಕೋರರಿಗೆ ಶಾಕ್: ಕೋಟಿ ಕೋಟಿ ಹಣ ಜಪ್ತಿ
ಬೆಂಗಳೂರಿನ ಅರಮನೆಯಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಹಲವು ಉದ್ಯಮಿಗಳು ಭಾಗವಹಿಸಿದ್ದಾರೆ. ಇದೇ ಮೊದಲ ಬಾರಿಗೆ ಇನ್ವೆಸ್ಟ್ ಕರ್ನಾಟಕ ಪ್ರಶಸ್ತಿ, ಎಸ್‌ಎಂಇ ಪ್ರಶಸ್ತಿ ಪ್ರದಾನ ಮಾಡಲಾಯ್ತು. ಸುಮಾರು 75ಕ್ಕೂ ಹೆಚ್ಚು ಗಣ್ಯ ಭಾಷಣಕಾರರು ಸಮಾವೇಶದಲ್ಲಿ ಭಾಗಿ ಆಗಿದ್ರು.. 25ಕ್ಕೂ ಹೆಚ್ಚು ತಾಂತ್ರಿಕ ಅಧಿವೇಶನಗಳು, 10ಕ್ಕೂ ಹೆಚ್ಚು ದೇಶಗಳ ಜೊತೆಗಿನ ಸಭೆ ಮತ್ತು ಎಂಎಸ್‌ಎಂಇ ಕನೆಕ್ಟ್‌ಗೆ ಸಂಬಂಧಿಸಿದ ಸಮಾಲೋಚನೆಗಳಿಗೆ ಈ ಹೂಡಿಕೆ ಶೃಂಗಸಭೆಯು ಸಾಕ್ಷಿಯಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ