/newsfirstlive-kannada/media/post_attachments/wp-content/uploads/2024/10/SLEEP-1.jpg)
ಅತಿಯಾದ ಉಪ್ಪು ಸೇವನೆಯಿಂದ ಆರೋಗ್ಯ ಸಮಸ್ಯೆಗಳು ಬರುತ್ತೆ ಅನ್ನೋದು ಗೊತ್ತಿರೋ ವಿಚಾರ. ಹೆಚ್ಚುವರಿ ಉಪ್ಪು ಬಿಪಿ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಅಯೋಡಿನ್ ಕೊರತೆಯು ಕಡಿಮೆ ಉಪ್ಪು ಸೇವನೆಯಿಂದ ಉಂಟಾಗುತ್ತದೆ. ದೇಹದಲ್ಲಿ ಕಂಡುಬರುವ ಕೆಲವು ರೋಗಲಕ್ಷಣಗಳ ಆಧಾರದ ಮೇಲೆ ಅಯೋಡಿನ್ ಕೊರತೆಯನ್ನು ನೀವು ಗುರುತಿಸಬಹುದು. ಪ್ರಪಂಚದಾದ್ಯಂತ ಸುಮಾರು ಎರಡು ಶತಕೋಟಿ ಜನರು ಅಯೋಡಿನ್ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ವರದಿಗಳು ಹೇಳುತ್ತವೆ. ವಿಶೇಷವಾಗಿ ಗರ್ಭಿಣಿಯರು ಮತ್ತು ಮಕ್ಕಳು ಆಯೋಡಿನ್ ಕೊರತೆಯಿಂದ ಬಳಲುತ್ತಾರೆ ಎಂದು ಅಂಕಿ-ಅಂಶಗಳು ಹೇಳುತ್ತವೆ.
ಇದನ್ನೂ ಓದಿ: ಕರ್ನಾಟಕ ಆರೋಗ್ಯ ಟ್ರಸ್ಟ್ನಲ್ಲಿ ಹಲವು ಹುದ್ದೆಗಳ ನೇಮಕಾತಿ.. ಅರ್ಜಿ ಆಹ್ವಾನ, ತಕ್ಷಣ ಅಪ್ಲೇ ಮಾಡಿ
ಲಕ್ಷಣಗಳು ಏನೇನು..?
- ನಿರಂತರ ಆಯಾಸ ಮತ್ತು ದೌರ್ಬಲ್ಯ ಸಮಸ್ಯೆ
- ಯಾವುದೇ ಕೆಲಸ ಮಾಡದಿದ್ದರೂ ಸುಸ್ತು
- ಕಾರಣವಿಲ್ಲದೆ ದೇಹದ ತೂಕದಲ್ಲಿ ಏರಿಕೆ
- ಹಸಿವಿನ ಕೊರತೆ, ಒಣ ಚರ್ಮ ಆಗುವುದು
- ಏಕಾಗ್ರತೆ ಮತ್ತು ಜ್ಞಾಪಕಶಕ್ತಿ ಕಡಿಮೆಯಾಗುವುದು
- ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳುವುದು
ಯಾರಲ್ಲಿ ಹೆಚ್ಚು ಸಮಸ್ಯೆ..?
ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮತ್ತು ಮಕ್ಕಳಲ್ಲಿ ಅಯೋಡಿನ್ ಕೊರತೆ ಹೆಚ್ಚಾಗಿ ಕಂಡುಬರುತ್ತದೆ. ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಅಯೋಡಿನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಆಯೋಡಿನ್ ಕೊರತೆಯು ಕೇವಲ ಉಪ್ಪು ತಿನ್ನೋದ್ರಿಂದ ಮಾತ್ರ ಪರಿಹಾರ ಆಗಲ್ಲ.
ಪರಿಹಾರ ಏನು..?
- ಅಯೋಡಿನ್ ಸಮೃದ್ಧವಾಗಿರುವ ಆಹಾರ ಸೇವನೆ
- ಸಮುದ್ರ ಮೀನು, ಸೀಗಡಿ, ಮೊಟ್ಟೆ, ಹಾಲು, ಚೀಸ್
- ಮೊಸರು ಮತ್ತು ಚಿಕನ್ ಮೂಲಕವೂ ಅಯೋಡಿನ್ ದೇಹಕ್ಕೆ ಲಭ್ಯವಿದೆ
- ಪ್ರತಿದಿನ ಆಹಾರದಲ್ಲಿ ಇವುಗಳು ಇರುವಂತೆ ನೋಡಿಕೊಳ್ಳಬೇಕು
- ಪ್ರತಿ ಆರು ತಿಂಗಳಿಗೊಮ್ಮೆ ಪರೀಕ್ಷೆಗೆ ಒಳಗಾಗದರೆ ಪರಿಹಾರ ಸುಲಭ
ಪರೀಕ್ಷೆ ಹೇಗೆ..?
ದೇಹದಲ್ಲಿ ಅಯೋಡಿನ್ ಮಟ್ಟವನ್ನು ನಿರ್ಧರಿಸಲು ಹಲವು ರೀತಿಯ ಪರೀಕ್ಷೆಗಳಿವೆ. ಅಯೋಡಿನ್ ಮಟ್ಟವನ್ನು ರಕ್ತ ಪರೀಕ್ಷೆಯಿಂದ ನಿರ್ಧರಿಸಬಹುದು. ವಿಶೇಷವಾಗಿ ಥೈರಾಯ್ಡ್ ಹಾರ್ಮೋನ್ ಮಟ್ಟವನ್ನು ಪರಿಶೀಲಿಸುವ ಮೂಲಕ. ಥೈರಾಯ್ಡ್ ಕಾರ್ಯವನ್ನು ನಿರ್ಣಯಿಸಬಹುದು. ಅಯೋಡಿನ್ ಕೊರತೆಯು ಥೈರಾಯ್ಡ್ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿರದೆ ಪುರುಷರಲ್ಲಿಯೂ ಕಾಣಿಸುತ್ತದೆ. ಅಯೋಡಿನ್ ಕೊರತೆಯು ಥೈರಾಯ್ಡ್ ಗ್ರಂಥಿಯು ಹಾರ್ಮೋನುಗಳನ್ನು ಉತ್ಪಾದಿಸಲು ವಿಫಲಗೊಳ್ಳುತ್ತದೆ. ಇದರಿಂದ ಗರ್ಭಾವಸ್ಥೆಗೆ ಬೇಕಾಗುವ ವೀರ್ಯದ ಪ್ರಮಾಣ ಕಡಿಮೆಯಾಗುತ್ತದೆ ಎನ್ನುತ್ತಾರೆ ವೈದ್ಯರು.
ಇದನ್ನೂ ಓದಿ: ಸ್ವೀಟ್, ಖಾರಕ್ಕಿಂತ ಹುಳಿನೇ ಸಖತ್ ಮಜಾ.. ನೆಲ್ಲಿಕಾಯಿಯಿಂದ ಆರೋಗ್ಯಕ್ಕೆ ಏನೆಲ್ಲಾ ಉಪಯೋಗ ಇದೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ