/newsfirstlive-kannada/media/post_attachments/wp-content/uploads/2024/09/iphone-15-1.jpg)
ಬ್ಲ್ಯಾಕ್ಫ್ರೈಡೇ ಆಫರ್ಗಳು ಈಗ ದೊಡ್ಡ ಸದ್ದು ಮಾಡುತ್ತಿವೆ. ಸ್ಮಾರ್ಟ್ಫೋನ್, ಎಲೆಕ್ಟ್ರಾನಿಕ್ಸ್ ಗೂಡ್ಸ್ ಮೇಲೆ ಭರ್ಜರಿ ಆಫರ್ ನೀಡುತ್ತಿರುವ ಫ್ಲಿಪ್ಕಾರ್ಟ್ ಈಗ ಐಫೋನ್ 15 ಪ್ಲಸ್ ಪ್ರಿಯರಿಗೆ ಒಂದು ಗುಡ್ನ್ಯೂಸ್ ಕೊಟ್ಟಿದೆ. ಈ ಒಂದು ಐಫೋನ್ ಮೇಲೆ ಬರೋಬ್ಬರಿ 15 ಸಾವಿರ ರೂಪಾಯಿ ಡಿಸ್ಕೌಂಟ್ ನೀಡುತ್ತಿದ್ದು, ಜಸ್ಟ್ 65 ಸಾವಿರ ರೂಪಾಯಿಗೆ ಐಫೋನ್ 15 ಪ್ಲಸ್ ಗ್ರಾಹಕರಿಗೆ ಸಿಗಲಿದೆ.
ಬ್ಲ್ಯಾಕ್ ಫ್ರೈಡೇ ಸೇಲ್ನಲ್ಲಿ ಫ್ಲಿಪ್ಕಾರ್ಟ್ ಕಳೆದ ವರ್ಷದ ಐಫೋನ್ 15 ಪ್ಲಸ್ನ್ನು ಅತ್ಯಂತ ಕಡಿಮೆ ಬೆಲೆಗೆ ಅಂದ್ರೆ ₹64.999 ಗೆ ನೀಡುತ್ತಿದೆ. ಇದೇನು ಸಾಮಾನ್ಯ ಡಿಸ್ಕೌಂಟ್ ಅಲ್ಲ. ಈ ಒಂದು ಡೀಲ್ ಓರಿಜಿನಲ್ ಪ್ರೈಸ್ ಮೇಲೆ 1000 ರೂಪಾಯಿ ಬ್ಯಾಂಕ್ ಡಿಸ್ಕೌಂಟ್ ಇದೆ. ಇದೆಲ್ಲ ಕಳೆದ ಮಳೆ ಐಫೋನ್ನ ಬೆಲೆ 65,999ರಷ್ಟು ಆಗುತ್ತದೆ. ಇದಾದ ಮೇಲೆಯೂ ಕೆಲವು ಡಿಸ್ಕೌಂಟ್ಗಳನ್ನು ಫ್ಲಿಪ್ಕಾರ್ಟ್ ನೀಡಿದೆ. ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ 1,500 ಹೆಚ್ಡಿಎಫ್ಸಿ ಕ್ರೆಡಿಟ್ ಕಾರ್ಡ್ನವರಿಗೆ 1 ಸಾವಿರ ರೂಪಾಯಿ ಕಡಿತವಿದೆ. ಈ ಒಂದು ಕ್ರೆಡಿಟ್ ಕಾರ್ಡ್ನವರು ಈ ಒಂದು ಆಫರ್ನ್ನು ಸದುಪಯೋಗಪಡಿಸಿಕೊಳ್ಳಬಹುದು.
ಇದನ್ನೂ ಓದಿ:ಐಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್.. ಭಾರತದಲ್ಲಿ ಅಮೆಜಾನ್ ಮೊದಲ ಬ್ಲ್ಯಾಕ್ ಫ್ರೈಡೇ ಸೇಲ್; ಏನೆಲ್ಲಾ ಆಫರ್?
2023ರಲ್ಲಿ ಲಾಂಚ್ ಆದ ಐಫೋನ್ 15, 6.7 ಇಂಚ್ನಷ್ಟು ದೊಡ್ಡದಿದ್ದು. ಸೂಪರ್ ರೆಟಿನಾ ಎಕ್ಆರ್ಡಿ ಓಲೆಡ್ ಡಿಸ್ಪ್ಲೇ ಹೊಂದಿದೆ. ಇದು ಹೆಚ್ಡಿಆರ್10ಗೆ ಸಪೋರ್ಟ್ ಮಾಡುತ್ತದೆ. ಡೊಬ್ಲಿ ವಿಷನ್ ಮತ್ತು 2ಸಾವಿರ ನಿಟ್ಸ್ ಪೀಕ್ನ ಬ್ರೈಟ್ನೆಸ್ ಹೊಂದಿದೆ. ಐಫೋನ್ ಪ್ಲಸ್ 6ಜಿಬಿ ಱಮ್ ಮತ್ತು 512ಜಿಬಿ ಸ್ಟೋರೆಜ್ ಕೆಪ್ಯಾಸಿಟಿಯನ್ನು ಹೊಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ