newsfirstkannada.com

×

ಆ್ಯಪಲ್​ನ ಐಫೋನ್​ 16 ಸಿರೀಸ್ ಲಾಂಚ್​; ಭಾರತದಲ್ಲಿ ಅದರ ಬೆಲೆ ಎಷ್ಟು ಗೊತ್ತಾ?

Share :

Published September 10, 2024 at 7:45am

    ತನ್ನ ಐಫೋನ್ 16 ಸರಣಿ ಹ್ಯಾಂಡ್​ಸೆಟ್ ಲಾಂಚ್ ಮಾಡಿದ ಆ್ಯಪಲ್​

    ಭಾರತದಲ್ಲಿ ಈ ದುಬಾರಿ ಐಫೋನ್​ಗಳು ಯಾವ ಬೆಲೆಗೆ ಸಿಗಲಿವೆ ಗೊತ್ತಾ?

    ಐಫೋನ್ ಖರೀದಿದಾರರಿಗೆ ಆ್ಯಪಲ್ ನೀಡುತ್ತಿರುವ ಆಫರ್​ಗಳು ಏನೇನು?

ಆ್ಯಪಲ್ ತನ್ನ ನೂತನ ಐಫೋನ್ 16 ಸರಣಿಯನ್ನು ಲಾಂಚ್ ಮಾಡಿದೆ. ಐಫೋನ್ 16, ಐಫೋನ್ 16 ಪ್ಲಸ್, 16ಪ್ರೋ ಹಾಗೂ 16 ಪ್ರೋಮ್ಯಾಕ್ಸ್ ಹೀಗೆ ನಾಲ್ಕು ವಿವಿಧ ರೀತಿಯ ಐಫೋನ್​ ನಿನ್ನೆಯಷ್ಟೇ ಆ್ಯಪಲ್ ಕಂಪನಿ ಲಾಂಚ್ ಮಾಡಿಯಾಗಿದೆ. ಲಾಂಚ್ ಆದ ಬಳಿಕ ಎಲ್ಲರಲ್ಲೂ ಇದ್ದಿದ್ದು ಒಂದೇ ಕುತೂಹಲ ಭಾರತದಲ್ಲಿ ಐಫೋನ್ 16ನ ಬೆಲೆ ಏನು ಅನ್ನೋದು. ಈಗ ಅದು ಕೂಡ ರಿವೀಲ್​ ಆಗಿದೆ.

ಇದನ್ನೂ ಓದಿ: ಕೊನೆಗೂ ಮಾರುಕಟ್ಟೆಗೆ ಬಂತು iPhone 16: ರೇಟ್​ ಎಷ್ಟು? ಸ್ಪೆಷಲ್​ ಫೀಚರ್ಸ್​ ಏನು?

ಭಾರತದಲ್ಲಿ ಐಫೋನ್​ 16, ಐಫೋನ್​16ಪ್ಲಸ್ ಬೆಲೆ
ಭಾರತದ ರೂಪಾಯಿಗಳಲ್ಲಿ ಐಫೋನ್​ 16ನ ದರ 128ಜಿಬಿ ಮಾಡಲ್​ 79,900 ರೂಪಾಯಿಂದ ಶುರುವಾಗುತ್ತದೆ. ಇದೆ ಹ್ಯಾಂಡ್​ಸೆಟ್​ 256 ಜಿಬಿ ಹಾಗೂ 512ಜಿಬಿ ಮಾಡಲ್​ನಲ್ಲೂ ಕೂಡ ದೊರೆಯುತ್ತವೆ ಅವುಗಳ ಬೆಲೆ 89,900 ಹಾಗೂ 1,09,900 ​ರೂಪಾಯಿ.

ಇನ್ನು ಐಫೋನ್ 16 ಪ್ಲಸ್​ 128 ಜಿಬಿ ಮಾಡಲ್​ನ ಬೆಲೆ 89,900 ಒಂದು ವೇಳೆ ನೀವು 256ಜಿಬಿಯನ್ನು ಆಯ್ಕೆ ಮಾಡಿಕೊಂಡಲ್ಲಿ ಅದರ ಬೆಲೆ ಒಂದು ಲಕ್ಷಕ್ಕೆ ಜಸ್ಟ್ ನೂರು ರೂಪಾಯಿ ಕಡಿಮೆ ಅಂದ್ರೆ 99,900. ಇನ್ನು ಐಫೋನ್16ಪ್ಲಸ್​​ 512 ಜಿಬಿ ಸ್ಟೋರೆಜ್ ಹೊಂದಿರುವ ಮಾಡೆಲ್​ಗೆ 1,19,900 ರೂಪಾಯಿಯನ್ನು ನಿಗದಿ ಮಾಡಲಾಗಿದೆ.

ಐಫೋನ್16 ಪ್ರೊ ಹಾಗೂ ಪ್ರೊಮ್ಯಾಕ್ಸ್​​ನ ಬೆಲೆಯೆಷ್ಟು ? 
ಇನ್ನು ಭಾರತದ ರೂಪಾಯಿಗಳಲ್ಲಿ ಐಫೋನ್ ಪ್ರೊ ಹಾಗೂ ಪ್ರೊಮ್ಯಾಕ್ಸ್​ನ ಬೆಲೆಯನ್ನು ನೋಡುವುದಾದರೆ ಐಫೋನ್ 16 ಪ್ರೊ 128ಜಿಬಿ ಮಾಡಲ್​ನ ಬೆಲೆ 1,19,900. ಆದ್ರೆ ಗ್ರಾಹಕರು ಈ ಸರಣಿಯಲ್ಲೂ 256 ಜಿಬಿ,512 ಜಿಬಿ 1ಟಿಬಿ ಸ್ಟೋರೆಜ್ ಇರುವ ಹ್ಯಾಂಡ್​ಸೆಟ್​ನ್ನು ಆಯ್ಕೆ ಮಾಡಿಕೊಳ್ಳಬಹುದು ಅವುಗಳ ಬೆಲೆ 256 ಜಿಬಿ ಸ್ಟೋರೆಜ್​ನದ್ದು 1,29,990 ರೂಪಾಯಿ 512 ಜಿಬಿಯದ್ದು 1,49,900 ಹಾಗೂ 1 ಟೆರಾಬೈಟ್​ ಸ್ಟೋರೆಜ್ ಇರುವ ಹ್ಯಾಂಡ್​ಸೆಟ್​ನ ಬೆಲೆ 1,69,900 ರೂಪಾಯಿಗಳು.

ಇನ್ನು ಐಫೋನ್ ಪ್ರೊಮ್ಯಾಕ್ಸ್​ನ ಬೆಲೆಯನ್ನು ನೋಡಿದ್ರೆ ದಂಗಾಗಿ ಹೋಗ್ತೀರಾ. ಪ್ರೊಮ್ಯಾಕ್ಸ್​ನ 256ಜಿಬಿ ಸ್ಟೋರೆಜ್ ಇರುವ ಹ್ಯಾಂಡ್​ಸೆಟ್ ಬೆಲೆ 1,44,900 ರೂಪಾಯಿಗಳು. ಇದೇ ಐಫೋನ್​ 512 ಜಿಬಿ ಸ್ಟೋರೆಜ್​ನ ಸಾಮರ್ಥ್ಯವನ್ನು ಹೊಂದಿರುವ ಮಾಡೆಲ್ ಇದೆ. ಅದರ ಬೆಲೆ 1,64,900 ರೂಪಾಯಿಗಳು. ಅದೇ 1 ಟೆರಾ ಬೈಟ್​ ಸ್ಟೋರೆಜ್ ಸಾಮರ್ಥ್ಯವಿರುವ ಮಾಡೆಲ್​ನ ಬೆಲೆ 1,84,900 ರೂಪಾಯಿಗಳು.

ಇದನ್ನೂ ಓದಿ: ಸಂಚಲನ ಸೃಷ್ಟಿಸಿದ iPhone16 ಬಿಡುಗಡೆ; ಹೊಸ ಮಾಡೆಲ್‌ನ ಸ್ಪೆಷಲ್‌ ವಿಡಿಯೋ ಇಲ್ಲಿದೆ!

ಆ್ಯಪಲ್ ಕಂಪನಿ ಹೇಳುವ ಪ್ರಕಾರ ಐಫೋನ್ ಪ್ರೊ ಹಾಗೂ ಪ್ರೋಮ್ಯಾಕ್ಸ್ ಒಟ್ಟು ನಾಲ್ಕು ವಿವಿಧ ಬಣ್ಣಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ ಬ್ಲಾಕ್ ಟೈಟಾನಿಯಮ್, ಡೆಸರ್ಟ್​್ ಟೈಟಾನಿಯಮ್, ನ್ಯಾಚುರಲ್ ಟೈಟಾನಿಯಮ್ ಹಾಗೂ ವೈಟ್ ಟೈಟಾನಿಯಮ್ ಕಲರ್​ಗಳಲ್ಲಿ ಲಭ್ಯವಿವೆ.

ಅದರ ಜೊತೆಗೆ ಇನ್ನೂ ಒಂದು ಭರ್ಜರಿ ಆಫರ್​ ಆ್ಯಪಲ್ ನೀಡಿದೆ. ಆ್ಯಕ್ಸಿಸ್ ಹಾಗೂ ಐಸಿಐಸಿಐ ಕಾರ್ಡ್​​ನಿಂದ ಖರೀದಿ ಮಾಡಿದರೆ 5 ಸಾವಿರ ರೂಪಾಯಿ ಡಿಸ್ಕೌಂಟ್ ನಿಮಗೆ ಸಿಗಲಿದೆ ಅದರ ಜೊತೆಗೆ ಐಫೋನ್ ಖರೀದಿ ಮಾಡಿದ ನಂತರ 3 ರಿಂದ 6 ತಿಂಗಳುಗಳ ಕಾಲ ಯಾವುದೇ ಇಎಂಐ ಇರುವುದಿಲ್ಲ ಎಂದು ಹೇಳಿದೆ. ಇನ್ನೂ ಎಕ್ಸ್​ಚೆಂಜ್ ಆಫರ್​ನಲ್ಲಿ ನೀವು 67 ಸಾವಿರ ರೂಪಾಯಿವರೆಗೆ ಪಡೆಯಬಹುದು ಎಂದು ಕೂಡ ಆ್ಯಪಲ್ ಹೇಳಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆ್ಯಪಲ್​ನ ಐಫೋನ್​ 16 ಸಿರೀಸ್ ಲಾಂಚ್​; ಭಾರತದಲ್ಲಿ ಅದರ ಬೆಲೆ ಎಷ್ಟು ಗೊತ್ತಾ?

https://newsfirstlive.com/wp-content/uploads/2024/09/iPhone16-1.jpg

Load More