/newsfirstlive-kannada/media/post_attachments/wp-content/uploads/2024/04/Iphone-16-pro-max.jpg)
ಕುಪರ್ಟಿನೋ ಮೂಲದ ಜನಪ್ರಿಯ ಕಂಪನಿ ಆ್ಯಪಲ್​ ಐಫೋನ್​ 16 ಮಾದರಿಗಳ ತಯಾರಿಕೆಯಲ್ಲಿದೆ. ಸದ್ಯದಲ್ಲೇ ನೂತನ ಐಫೋನ್​ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಯೋಚನೆಯಲ್ಲಿದೆ ಎಂದು ಹೇಳಲಾಗುತ್ತಿದೆ. ಆದರೆ ಅದಕ್ಕೂ ಮುನ್ನವೇ ಐಫೋನ್​ 16 ಪ್ರೊ ಮ್ಯಾಕ್ಸ್​ ಕುರಿತ ಕುತೂಹಲಕಾರಿ ಸಂಗತಿಗಳು ಆನ್​ಲೈನ್​ನಲ್ಲಿ ಲೀಕ್​ ಆಗಿದೆ.
ದೊಡ್ಡ ಡಿಸ್​ಪ್ಲೇ: ಸದ್ಯ ಲೀಕ್​ ಆರಿರುವ ಮಾಹಿತಿ ಪ್ರಕಾರ, ನೂತನ ಐಫೊನ್​ 16 ಪ್ರೊ ಮ್ಯಾಕ್ಸ್​ 6.85 ಇಂಚಿನ ಡಿಸ್​ಪ್ಲೇಯಲ್ಲಿ ಬರಲಿದೆ ಎನ್ನಲಾಗುತ್ತಿದೆ. ಸದ್ಯ ಐಫೊನ್​ 6.7 ಇಂಚಿನ ಡಿಸ್​ಪ್ಲೇಯನ್ನು ಹೊಂದಿದೆ.
ಕ್ಯಾಮೆರಾ ಹೇಗಿದೆ?: 48 ಮೆಗಾಫಿಕ್ಸೆಲ್​ ಅಲ್ಟ್ರಾ ವೈಡ್​​ ಕ್ಯಾಮೆರಾದ ಜೊತೆಗೆ ನೂತನ ಐಫೋನ್​ ಬರಲಿದೆ ಎನ್ನಲಾಗುತ್ತಿದೆ. ಗ್ರಾಹಕರನ್ನು ಸೆಳೆಯುವ ದೃಷ್ಠಿಯಿಂದ ಹೊಸ ಫೀಚರ್​ ಕೂಡ ಇದರಲ್ಲಿದೆ ಎನ್ನಲಾಗುತ್ತಿದೆ. ಇದಲ್ಲದೆ, 5 ಎಕ್ಸ್​ ಟೆಲಿಫೋಟೋ ಲೆನ್ಸ್​ ಕೂಡ ನೂತನ ಫೋನ್​ ಐಫೋನ್​ ಅಳವಡಿಸಿಕೊಂಡಿದೆ ಎಂಬ ಮಾಹಿತಿ ಹರಿದಾಡುತ್ತಿದೆ.
ಪೆರಿಸ್ಕೋಪ್​ ಕ್ಯಾಮೆರಾ: ಸೂಪರ್​​ ಟೆಲಿಫೋಟೋ ಕ್ಲಿಕ್ಕಿಸಲೆಂದು ಪೆರಿಸ್ಕೋಪ್​ ಕ್ಯಾಮೆರಾದ ಜೊತೆಗೆ ನೂತನ ಐಫೊನ್​ ಬರಲಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಆಪ್ಟಿಕಲ್​ ಜೂಮ್​ ಆಯ್ಕೆಯನ್ನು ಹೊಂದಿರಲಿದೆ ಎನ್ನಲಾಗುತ್ತಿದೆ.
/newsfirstlive-kannada/media/post_attachments/wp-content/uploads/2024/04/Iphone-16.jpg)
ಎ18 ಬಯೋನಿಕ್ ಚಿಪ್​: ಐಫೋನ್​ 16 ಪ್ರೋ ಮ್ಯಾಕ್ಸ್​ ಅಂದಾಜಿನಂತೆ ನೆಕ್ಸ್ಟ್​​ ಜನರೇಷನ್​ ಎ18 ಬಯೋನಿಕ್​ ಪ್ರೊ ವೇರಿಯಂಟ್​ ಚಿಪ್​ ಅಳವಡಿಸಿಕೊಂಡು ಗ್ರಾಹಕರತ್ತ ಬರಲಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ ಪವರ್​ ಎಫೀಶಿಯಂಟ್​ ಡಿಸ್​​ಪ್ಲೇ ಜೊತೆಗೆ ಸ್ಯಾಮ್​ಸಂಗ್​ ಡಿಸ್​ಪ್ಲೇ ನ್ಯೂ ಎಮ್​14 ಮೆಟಿರಿಯಲ್​ ಸೆಟ್​ ಅಳವಡಸಿಕೊಂಡು ಬರಲಿದೆ ಎಂದು ಅಂದಾಜಿಸಲಾಗಿದೆ.
ಅದ್ಭುತ ಅನುಭವ: ಇದಲ್ಲದೆ ಈ ಬಾರಿ ಮೈಕ್ರೋಫೋನ್​ ಅನ್ನು ಅಭಿವೃದ್ಧಿಪಡಿಸಿದೆ. ಜೊತೆಗೆ ಸಿಂಗಲ್​ ನಾಯ್ಸ್​​ ರೇಶಿಯೋದ ಜೊತೆಗೆ ಸಿರಿಯ ಅದ್ಭುತ ಅನುಭವವನ್ನು ನೂತನ ಐಫೋನ್​ ಕೊಡಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:
ಇವಿಷ್ಟು ನೂತನ ಐಫೋನ್​ 16 ಪ್ರೊ ಮ್ಯಾಕ್ಸ್​ ಕುರಿತ ಮಾಹಿತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದರೆ ನೂತನ ಫೋನ್​ ಹೇಗಿರಲಿದೆ? ಅದರ ವಿಶೇಷತೆ ಹೇಗಿದೆ? ಅದರ ಬೆಲೆ ಎಷಷ್ಟಿರಲಿದೆ? ಇವೆಲ್ಲದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಬಿಡುಗಡೆಗೊಂಡ ಬಳಿಕವೇ ತಿಳಿದುಬರಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us