/newsfirstlive-kannada/media/post_attachments/wp-content/uploads/2024/09/iPhone-16-3.jpg)
ಇತ್ತೀಚೆಗೆ ಬಿಡುಗಡೆಗೊಂಡು ಮಾರುಕಟ್ಟೆಗೆ ಬಂದ ಜನಪ್ರಿಯ ಆ್ಯಪಲ್​​ ಐಫೋನ್​ 16 ಪ್ರೊದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಖರೀದಿದಾರರು ಹೊಸ ಸಾಧನದಲ್ಲಿ ಸಮಸ್ಯೆಯೊಂದನ್ನ ಎದುರಿಸುತ್ತಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣ ಮತ್ತು ಆ್ಯಪಲ್​ ಕಂಪನಿಗೆ ತಿಳಿಸಿದ್ದಾರೆ.
ಐಫೋನ್​ 16 ಪ್ರೊದಲ್ಲಿ ಪರದೆ ಸಮಸ್ಯೆಯನ್ನು ಗ್ರಾಹಕರು ಎದುರಿಸುತ್ತಿದ್ದಾರೆ. ಡಿಸ್​​ಪ್ಲೇ ಪ್ರತಿಕ್ರಿಯೆ ವಿಳಂಬ ಮತ್ತು ಪರದೆಯಲ್ಲಿ ಟ್ಯಾಪ್​​ ಸರಿಯಾಗಿ ಆಗುತ್ತಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಆ್ಯಪಲ್​​ ಈ ಸಮಸ್ಯೆಯನ್ನು ಸರಿಯಾಗಿ ಪರಿಶೀಲಿಸಿ ಸರಿಪಡಿಸಲಿದೆ ಎಂದು ಹೇಳಲಾಗುತ್ತಿದೆ.
ಐಫೋನ್​ 16 ಪ್ರೊ ಮತ್ತು ಐಫೋನ್​ 16 ಪ್ರೊ ಮ್ಯಾಕ್ಸ್​​ 120Hz ಪ್ರೊಮೋಷನ್​ ಡಿಸ್​ಪ್ಲೇಯನ್ನು ಹೊಂದಿದೆ. ಅಂದಹಾಗೆಯೇ ಇದು ಐಒಎಸ್​​ 18 ನವೀಕರಣವನ್ನು ಹೊರತಂದಿದೆ. ಮುಂದಿನ ಅಪ್ಡ್​ಡೇಟ್​ನೊಂದಿಗೆ ಈ ಸಮಸ್ಯೆ ಬಗೆಹರಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಇನ್ನು ಆ್ಯಪಲ್​​ ಕಳೆದ ವರ್ಷ ಪ್ರೊ ಆವೃತ್ತಿಗೆ ಹೋಲಿಸಿದರೆ ಈ ಬಾರಿ ಭಾರತದಲ್ಲಿ ಐಫೋನ್​ 16 ಸರಣಿಯ ಬೆಲೆ ಕಡಿತಗೊಳಿಸಿದೆ. ಸುಮಾರು 15 ಸಾವಿರದಷ್ಟು ಕಡಿತ ಮಾಡಿದೆ. ಜುಲೈನಲ್ಲಿ ನಡೆಯ ಯೂನಿಯನ್​ ಬಜೆಟ್​​ ಸಮಯದಲ್ಲಿ ಕಸ್ಟಮ್​​ ಸುಂಕ ಕಡಿತವನ್ನು ಕಂಪನಿ ಗ್ರಾಹಕರಿಗೆ ವಹಿಸಿರುವ ಕಾರಣ ಕೊಂಚ ಕಡಿಮೆ ಬೆಲೆಗೆ ಸಿಗುತ್ತಿದೆ. ಅಂದಹಾಗೆಯೇ ಐಫೋನ್​ 16 ಪ್ರೊ ಚೀನಾದಲ್ಲಿ ತಯಾರಿಸಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ