ಜನಪ್ರಿಯ ಆ್ಯಪಲ್ ಕಂಪನಿಯ ಐಫೋನ್ 16 ಪ್ರೊ
ಸೆ.20ರಿಂದ ಖರೀದಿದಾರರಿಗೆ ಸಿಗುತ್ತಿದೆ ನೂತನ ಐಫೋನ್
ಐಫೋನ್ 16 ಪ್ರೊ ಬಳಕೆದಾರರು ಎದುರಿಸುತ್ತಿರುವ ಸಮಸ್ಯೆ ಏನು?
ಇತ್ತೀಚೆಗೆ ಬಿಡುಗಡೆಗೊಂಡು ಮಾರುಕಟ್ಟೆಗೆ ಬಂದ ಜನಪ್ರಿಯ ಆ್ಯಪಲ್ ಐಫೋನ್ 16 ಪ್ರೊದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಖರೀದಿದಾರರು ಹೊಸ ಸಾಧನದಲ್ಲಿ ಸಮಸ್ಯೆಯೊಂದನ್ನ ಎದುರಿಸುತ್ತಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣ ಮತ್ತು ಆ್ಯಪಲ್ ಕಂಪನಿಗೆ ತಿಳಿಸಿದ್ದಾರೆ.
ಐಫೋನ್ 16 ಪ್ರೊದಲ್ಲಿ ಪರದೆ ಸಮಸ್ಯೆಯನ್ನು ಗ್ರಾಹಕರು ಎದುರಿಸುತ್ತಿದ್ದಾರೆ. ಡಿಸ್ಪ್ಲೇ ಪ್ರತಿಕ್ರಿಯೆ ವಿಳಂಬ ಮತ್ತು ಪರದೆಯಲ್ಲಿ ಟ್ಯಾಪ್ ಸರಿಯಾಗಿ ಆಗುತ್ತಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಆ್ಯಪಲ್ ಈ ಸಮಸ್ಯೆಯನ್ನು ಸರಿಯಾಗಿ ಪರಿಶೀಲಿಸಿ ಸರಿಪಡಿಸಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: iPhone 13: ಬರೀ ₹38 ಸಾವಿರ ರೂಪಾಯಿಗೆ ಐಫೋನ್ 13 ಖರೀದಿಸಿ.. ಈ ಆಫರ್ ಮಿಸ್ ಮಾಡಬೇಡಿ
ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ 120Hz ಪ್ರೊಮೋಷನ್ ಡಿಸ್ಪ್ಲೇಯನ್ನು ಹೊಂದಿದೆ. ಅಂದಹಾಗೆಯೇ ಇದು ಐಒಎಸ್ 18 ನವೀಕರಣವನ್ನು ಹೊರತಂದಿದೆ. ಮುಂದಿನ ಅಪ್ಡ್ಡೇಟ್ನೊಂದಿಗೆ ಈ ಸಮಸ್ಯೆ ಬಗೆಹರಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Airtel: ಮೂರು ಹೊಸ ಡೇಟಾ ಪ್ಲಾನ್ ಪರಿಚಯಿಸಿದ ಏರ್ಟೆಲ್.. ಗ್ರಾಹಕರಿಗೆ ಭಾರೀ ಲಾಭ
ಇನ್ನು ಆ್ಯಪಲ್ ಕಳೆದ ವರ್ಷ ಪ್ರೊ ಆವೃತ್ತಿಗೆ ಹೋಲಿಸಿದರೆ ಈ ಬಾರಿ ಭಾರತದಲ್ಲಿ ಐಫೋನ್ 16 ಸರಣಿಯ ಬೆಲೆ ಕಡಿತಗೊಳಿಸಿದೆ. ಸುಮಾರು 15 ಸಾವಿರದಷ್ಟು ಕಡಿತ ಮಾಡಿದೆ. ಜುಲೈನಲ್ಲಿ ನಡೆಯ ಯೂನಿಯನ್ ಬಜೆಟ್ ಸಮಯದಲ್ಲಿ ಕಸ್ಟಮ್ ಸುಂಕ ಕಡಿತವನ್ನು ಕಂಪನಿ ಗ್ರಾಹಕರಿಗೆ ವಹಿಸಿರುವ ಕಾರಣ ಕೊಂಚ ಕಡಿಮೆ ಬೆಲೆಗೆ ಸಿಗುತ್ತಿದೆ. ಅಂದಹಾಗೆಯೇ ಐಫೋನ್ 16 ಪ್ರೊ ಚೀನಾದಲ್ಲಿ ತಯಾರಿಸಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ