/newsfirstlive-kannada/media/post_attachments/wp-content/uploads/2025/02/Iphone-16e.jpg)
ಆ್ಯಪಲ್​​ ಕಂಪನಿಯಿಂದ ಎಂಟ್ರಿ-ಲೆವೆಲ್ ಮಾದರಿಯ ಐಫೋನ್ 16e ರಿಲೀಸ್​ ಮಾಡಲಾಗಿದೆ. ಇದು ಐಫೋನ್ 16 ಸೀರೀಸ್ ಆಗಿದ್ದು, ಇಂದಿನಿಂದ ಅಧಿಕೃತ ಮಾರಾಟ ಶುರುವಾಗಿದೆ. ಆ್ಯಪಲ್​ ಪ್ರಿಯರು ಆನ್​​ಲೈನ್​​ನಲ್ಲಿ ಬುಕ್​ ಮಾಡಬಹುದಾಗಿದೆ. ಅಮೇಜಾನ್, ಫ್ಲಿಪ್​ಕಾರ್ಟ್ ಇತ್ಯಾದಿ ಇಕಾಮರ್ಸ್ ಪ್ಲಾಟ್​​ಫಾರ್ಮ್​ಗಳಲ್ಲಿ ಬುಕ್​ ಮಾಡಿ ಖರೀದಿಸಬಹುದು.
ಐಫೋನ್ 16e ಬೆಲೆ ಎಷ್ಟು?
128GB ಸ್ಟೋರೇಜ್ ಹೊಂದಿರೋ ಐಫೋನ್ 16e ಬೇಸ್​ ಪ್ರೈಸ್​ 59,900 ರಿಂದ ಶುರುವಾಗುತ್ತದೆ. ಹ್ಯಾಂಡ್‌ಸೆಟ್ 256GB ಮತ್ತು 512GB ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ. ಇವುಗಳ ಬೆಲೆ ಕ್ರಮವಾಗಿ ರೂ. 69,900 ಮತ್ತು ರೂ. 89,900 ಇದೆ. ಫೆಬ್ರವರಿ 28 ರಿಂದ ಮಾರಾಟ ಶುರುವಾಗಲಿದೆ ಎಂದು ಆ್ಯಪಲ್ ಸಂಸ್ಥೆ ಹೇಳಿದೆ.
ಫೀಚರ್ಸ್ ಏನು?
ಇನ್ನು, ಐಫೋನ್ 16e ಡ್ಯುಯಲ್ ಸಿಮ್ (ನ್ಯಾನೋ+ಇಸಿಮ್) ಹ್ಯಾಂಡ್‌ಸೆಟ್ ಆಗಿದೆ. ಇದು ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿದೆ. iOS 18ನಲ್ಲಿ ಕಾರ್ಯನಿರ್ವಹಿಸುತ್ತದೆ. 6.1-ಇಂಚಿನ ಸೂಪರ್ ರೆಟಿನಾ XDR (1,170×2,532 ಪಿಕ್ಸೆಲ್‌ಗಳು) OLED ಡಿಸ್​ಪ್ಲೇ ಹೊಂದಿದೆ. 60Hz ರಿಫ್ರೆಶ್ ದರ ಮತ್ತು 800nits ಗರಿಷ್ಠ ಬ್ರೈಟ್​ನೆಸ್ ಇದೆ. 3nm A18 ಚಿಪ್ ಅಳವಡಿಸಿದ್ದು, 512GB ವರೆಗೂ ಸ್ಟೋರೇಜ್​ ಇದೆ. ಹಾಗೆಯೇ 8GB RAM ವರೆಗೂ ಇದೆ.
48-ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ ಮತ್ತು ಮುಂದೆ 12-ಮೆಗಾಪಿಕ್ಸೆಲ್ ಟ್ರೂಡೆಪ್ತ್ ಕ್ಯಾಮೆರಾ ಸಹ ಹೊಂದಿದೆ. ಟಚ್ ಐಡಿಯೊಂದಿಗೆ ಫೇಸ್ ಐಡಿ ಕೂಡ ನೀಡಲಾಗಿದೆ. 5G, 4G LTE, Wi-Fi 6, ಬ್ಲೂಟೂತ್ 5.3, NFC ಮತ್ತು GPS ಸಂಪರ್ಕ ನೀಡುತ್ತದೆ. 18W ವೈರ್ಡ್ ಚಾರ್ಜಿಂಗ್ ಮತ್ತು 7.5W ವೈರ್‌ಲೆಸ್ ಚಾರ್ಜಿಂಗ್​ ಬೆಂಬಲಿಸುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us