iPhone 17 Air ಬೆಲೆ ಈಗಲೇ ಲೀಕ್.. 2025ಕ್ಕೆ ಐಫೋನ್ 17ನಲ್ಲಿ 4 ಸಿರೀಸ್​​ಗಳು..!

author-image
Ganesh
Updated On
iPhone 17 Air ಬೆಲೆ ಈಗಲೇ ಲೀಕ್.. 2025ಕ್ಕೆ ಐಫೋನ್ 17ನಲ್ಲಿ 4 ಸಿರೀಸ್​​ಗಳು..!
Advertisment
  • ಭಾರತದಲ್ಲಿ iPhone 17 Air ಬೆಲೆ ಎಷ್ಟು ಗೊತ್ತಾ?
  • ಸೆಪ್ಟೆಂಬರ್ 2025ರಲ್ಲಿ iPhone 17 ಬಿಡುಗಡೆ ಆಗಲಿದೆ
  • ಐಫೋನ್ ಪ್ಲಸ್​​ ‘ಐಫೋನ್ ಏರ್’​​ ಆಗಿ ರೂಪಾಂತರ

2025ರಲ್ಲಿ ಬಿಡುಗಡೆ ಆಗುವ ಐಫೋನ್​​ 17 ಸಿರೀಸ್​ ಬಗ್ಗೆ ಕೆಲವು ವಿಚಾರಗಳು ಸೋರಿಕೆ ಆಗ್ತಿವೆ. ಇದೀಗ ಸಿಕ್ಕಿರುವ ಮಾಹಿತಿಗಳ ಪ್ರಕಾರ, ಮುಂದಿನ ವರ್ಷ ಐಫೋನ್ 17 ಸಿರೀಸ್​ನಲ್ಲಿ ಒಟ್ಟು ನಾಲ್ಕು ಮಾಡೆಲ್​​ಗಳು ಬಿಡುಗಡೆ ಆಗಲಿವೆ.

ಐಫೋನ್ 17 (iPhone 17), ಐಫೋನ್ 17 ಏರ್ (iPhone 17 Air), ಐಫೋನ್ 17 ಪ್ರೋ (iPhone 17 Pro) ಮತ್ತು ಐಫೋನ್ 17 ಪ್ರೋ ಮ್ಯಾಕ್ಸ್​ (iPhone 17 Pro Max) ಮಾರುಕಟ್ಟೆಗೆ ಪರಿಚಯಿಸಲು ನಿರ್ಧರಿಸಿದೆ. ಸೆಪ್ಟೆಂಬರ್ 2025ರಲ್ಲಿ ಇವು ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ. ಐಫೋನ್ ಪ್ಲಸ್​​ ಅನ್ನ ಐಫೋನ್ 17 ಏರ್​​ ಆಗಿ ರೂಪಾಂತರಗೊಳ್ಳುತ್ತಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಮತ್ತೆ ಜನಾಂಗೀಯ ನಿಂದನೆ! ಬುಮ್ರಾಗೆ ಕ್ಷಮೆ ಕೇಳಿದ ಇಶಾ ಗುಹಾ ಯಾರು..?

ಐಫೋನ್ 17 ಏರ್​ ಲೀಕ್​​

ಇದು ಕೇವಲ 5mm ನಿಂದ 6mm ಸ್ಲಿಮ್ ಇರಲಿದೆ. ದ ವಾಲ್​ ಸ್ಟ್ರೀಟ್ ಜರ್ನಲ್ ನೀಡಿರುವ ಮಾಹಿತಿ ಪ್ರಕಾರ, ಅತ್ಯಂತ ಸ್ಲಿಮೆಸ್ಟ್ ಐಫೋನ್ ಆಗಲಿದೆ. ಇದು ಪ್ರೋ ಮಾಡೆಲ್ಸ್​ಗಿಂದ ಕಡಿಮೆ ಬೆಲೆಗೆ ಸಿಗಲಿದ್ದು, ಭಾರತದಲ್ಲಿ ಇದರ ಬೆಲೆ ಸುಮಾರು 90 ಸಾವಿರ ರೂಪಾಯಿ ಆಗಿರಲಿದೆ. ಬ್ಲೂಮ್‌ಬರ್ಗ್‌ನ ಮಾರ್ಕ್ ಗುರ್ಮನ್ (Mark Gurman )ಅವರು ಐಫೋನ್ 17 ಏರ್ ಪ್ರಸ್ತುತ ಇರುವ ಐಫೋನ್ 16 ಪ್ರೊಗಿಂತ ಎರಡು ಮಿಲಿಮೀಟರ್ ತೆಳ್ಳಗಿರಬಹುದು ಎಂದು ತಿಳಿಸಿದ್ದಾರೆ. iPhone 16 Pro 8.25mm ದಪ್ಪವಾಗಿದೆ.

ಇದನ್ನೂ ಓದಿ:ಬೆಳ್ಳಂಬೆಳಗ್ಗೆ ವಾಹನ ಸವಾರರಿಗೆ ಆಘಾತ; ರಾಷ್ಟ್ರೀಯ ಹೆದ್ದಾರಿ 75ರಲ್ಲಿ ತಲೆ ಎತ್ತಿದ ನೂತನ ಟೋಲ್​ ಗೇಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment